ಅಖಂಡವಾಗಿ ಪ್ರೀತಿಸಲು, ನಿರಂತರವಾಗಿ ಪ್ರೀತಿಯನ್ನೇ ನೀಡಲು, ಬದುಕಿನ ಅಡೆತಡೆಗಳು, ಸಂಗಾತಿಯ ಸ್ವಭಾವ ಯಾವುದಕ್ಕೂ ಲೆಕ್ಕಿಸದೆ ಪ್ರೀತಿಸುವುದು ಸ್ವಲ್ಪ ಕಷ್ಟ. ಅದು ಎಲ್ಲರಿಂದಲೂ ಸಾಧ್ಯವಿಲ್ಲ. ಆದರೆ, ಕೆಲವು ರಾಶಿಗಳ ಜನರಿಗೆ ಇದು ಸುಲಭ. ಏಕೆಂದರೆ, ಅವರು ಏನೊಂದು ಕೊಂಕಿಲ್ಲದೆ ಸಂಗಾತಿಯನ್ನು ಪ್ರೀತಿಸಬಲ್ಲರು ಹಾಗೂ ತಾವೂ ಪ್ರೀತಿಪಾತ್ರರಾಗಬಲ್ಲರು.
ಪ್ರೀತಿಸೋದು (Love) ಯಾರಿಗೆ ಇಷ್ಟವಿಲ್ಲ? ಎಲ್ಲರಿಗೂ ಪ್ರೀತಿಸಿಕೊಳ್ಳುವಾಸೆ, ಪ್ರೀತಿ ಮಾಡುವಾಸೆ. ಆದರೆ, ಇಂದಿನ ದಿನಗಳಲ್ಲಿ ನೈಜವಾದ ಪ್ರೀತಿ ಸಿಗೋದೇ ಡೌಟು. ಇತ್ತೀಚಿನ ದಿನಗಳಲ್ಲಂತೂ ಸಂಬಂಧಗಳು (Relashion) ಕೇವಲ ಡ್ರಾಮಾ (Drama), ಅಭದ್ರತೆ (Insecurity), ಅಪನಂಬಿಕೆ, ಮೋಸ (Cheat) ಹಾಗೂ ಅನುಮಾನ (Doubt)ಗಳಿಂದಲೇ ತುಂಬಿಹೋಗಿರುವುದು ನಿಜ. ಆದರೂ ಜೀವನದಲ್ಲಿ ಯಾವಾಗಲಾದರೂ ಅಪರೂಪದ ಪ್ರೀತಿ ಸಿಗುತ್ತದೆ. ಉತ್ತಮ ಸಂಗಾತಿ (Partner) ದೊರೆಯುತ್ತಾರೆ. ಅವರ ಒಡನಾಟ ಚಿರಕಾಲ ನೆನಪಿರುವಂಥದ್ದಾಗುತ್ತದೆ. ಆದರೆ, ಅಂತಹ ಪ್ರೀತಿ ನೀಡಲು ಎಲ್ಲ ವ್ಯಕ್ತಿಗಳಿಂದಲೂ ಸಾಧ್ಯವಾಗುವುದಿಲ್ಲ. ಕೆಲವೇ ರಾಶಿಗಳ ಜನರು ಮಾತ್ರ ಸುಲಭವಾಗಿ ಪ್ರೀತಿಸಲು ಸಿಗುತ್ತಾರೆ ಹಾಗೂ ಅವರ ಪ್ರೀತಿ ಪಡೆದವರೇ ಧನ್ಯರಾಗುತ್ತಾರೆ. ಈ ವ್ಯಕ್ತಿಗಳು ಸಂಬಂಧವನ್ನು ಆನಂದಮಯ (Blissful)ವಾಗಿಸುತ್ತಾರೆ. ಸಂಗಾತಿಯ ಓರೆಕೋರೆಗಳನ್ನೂ ಮೀರಿ ಅವರು ಪ್ರೀತಿಸಬಲ್ಲರು. ಸಂಗಾತಿಯ ದೌರ್ಬಲ್ಯಗಳ ಕಡೆಗೆ ಗಮನ ನೀಡದೆ ಅವರನ್ನು ಪ್ರೀತಿಯಿಂದ ನೋಡುತ್ತಾರೆ. ಆ ನಾಲ್ಕು ರಾಶಿಗಳು ಯಾವುವು ನೋಡಿಕೊಳ್ಳಿ.
• ಕರ್ಕಾಟಕ (Cancer):
ಜಲ (Water) ರಾಶಿ ಎಂದೇ ಈ ರಾಶಿಯನ್ನು ಗುರುತಿಸಲಾಗುತ್ತದೆ. ಕರ್ಕಾಟಕ ರಾಶಿಯ ಜನರು ಕೆಲವು ಬಾರಿ ತಮ್ಮಷ್ಟಕ್ಕೆ ತಾವು ಭಾರೀ ಅಭದ್ರತೆ ಎದುರಿಸುತ್ತಾರೆ. ಆದರೆ, ತಮ್ಮ ಸಂಗಾತಿಯನ್ನು ಎಷ್ಟು ಖುಷಿಯಾಗಿರಿಸಲು ಯತ್ನಿಸುತ್ತಾರೆ ಎಂದರೆ ಅದನ್ನು ವರ್ಣಿಸಲು ಸಾಧ್ಯವಿಲ್ಲ. ಸಂಗಾತಿಯನ್ನು ಅತಿಯಾಗಿ ಮುದ್ದು ಮಾಡುತ್ತಾರೆ. ಕಟಕದಿಂದ ಬ್ರೇಕ್ ಆಗುವ ಕುರಿತು ಸಂಗಾತಿ ಯಾವತ್ತೂ ಯೋಚನೆಯನ್ನೇ ಮಾಡಬಾರದು ಎಂಬಂತೆ ವರ್ತಿಸುತ್ತಾರೆ. ಸಂಗಾತಿಯನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತಾರೆ. ಆಗಾಗ ಅಡುಗೆ ಮಾಡಿ ಬಡಿಸುತ್ತಾರೆ, ಚಿಂತನೆಗೆ ಹಚ್ಚುವಂತಹ ಉತ್ತಮ ಗಿಫ್ಟ್ (Gift) ನೀಡುತ್ತಾರೆ, ನೀವು ಎಷ್ಟು ಸ್ಪೆಷಲ್ (Special) ಎನ್ನುವ ಬಗ್ಗೆ ಮೆಸೇಜ್ ಗಳನ್ನು ಕಳಿಸುತ್ತಿರುತ್ತಾರೆ. ಈ ಗುಣ ಅವರನ್ನು ಮೆಚ್ಚುವಂತಹ ಸಂಗಾತಿಯನ್ನಾಗಿ ರೂಪಿಸುತ್ತದೆ.
undefined
ಇದನ್ನೂ ಓದಿ: ಸೂರ್ಯ ಗೋಚಾರ ಜೂನ್ 2022: ಹೊಳೆಯಲಿದೆ ಈ ನಾಲ್ಕು ರಾಶಿಗಳ ವೃತ್ತಿಜೀವನ
• ಮಕರ (Capricorn):
ಮಕರ ರಾಶಿಯವರು ಒಂದು ಸಣ್ಣ ನೊಣವನ್ನು ಸಹ ನೋಯಿಸಲು ಇಷ್ಟಪಡುವುದಿಲ್ಲ. ಬದುಕು (Life) ಅವರಿಗೆ ಎಷ್ಟೇ ಕಷ್ಟವನ್ನು ಒಡ್ಡಿದರೂ ತಮ್ಮ ಸುತ್ತ ಹತಾಶೆಯಲ್ಲಿ ಇರುವವರಿಗೆ ಬಿರುಸಾಗಿ ಮಾತನಾಡಲು ಅವರಿಂದ ಸಾಧ್ಯವಾಗುವುದಿಲ್ಲ. ಒತ್ತಡಗಳನ್ನು ತಮ್ಮಲ್ಲಿ ಅಂತರ್ಗತಗೊಳಿಸಿಕೊಳ್ಳುತ್ತಾರೆ. ಎಷ್ಟೇ ಬಿಕ್ಕಟ್ಟುಗಳಿದ್ದರೂ ತಮ್ಮ ಸಂಗಾತಿ ಉತ್ತಮ ಬದುಕನ್ನು ಬಾಳಬೇಕು ಎನ್ನುವ ಆಶಯ ಹೊಂದಿರುತ್ತಾರೆ. ಅದಕ್ಕೆ ತಕ್ಕಂತೆ ಕಷ್ಟಪಡುತ್ತಾರೆ. ಎಲ್ಲ ಹಂತದಲ್ಲೂ ಬೆಂಬಲ ನೀಡುತ್ತಾರೆ. ಈ ಗುಣವೇ ಅವರನ್ನು ಉತ್ತಮ ಸಂಗಾತಿಯನ್ನಾಗಿಸುತ್ತದೆ.
• ತುಲಾ (Libra):
ಈ ರಾಶಿಯ ಬಹಳಷ್ಟು ಜನರು ಅತ್ಯಂತ ಸಣ್ಣ ಆತ್ಮೀಯ ವಲಯವನ್ನಷ್ಟೇ ಹೊಂದಿರುತ್ತಾರೆ. ತಮ್ಮ ಹೃದಯಕ್ಕೆ ಹತ್ತಿರವಾದರಿಗಾಗಿ ಏನು ಬೇಕಿದ್ದರೂ ಮಾಡುತ್ತಾರೆ. ಅವರು ಕಷ್ಟದಲ್ಲಿದ್ದರೆ, ಆರೋಗ್ಯ (Health) ಸರಿಯಾಗಿಲ್ಲದಿದ್ದರೆ, ಹಣಕಾಸಿನ ಸಮಸ್ಯೆಯಲ್ಲಿದ್ದರೆ ಎಲ್ಲವನ್ನೂ ನೋಡಿಕೊಳ್ಳುತ್ತಾರೆ. ಸಂಗಾತಿಯನ್ನು ಖುಷಿಯಾಗಿಡಲು ಯತ್ನಿಸುತ್ತಾರೆ. ಕೆಟ್ಟ ದಿನಗಳಲ್ಲೂ ಜತೆಗಿದ್ದು ಬೆಂಬಲ ನೀಡುತ್ತಾರೆ. ಸಂಗಾತಿಯ ತಪ್ಪುಗಳಿದ್ದ ಸಮಯದಲ್ಲೂ ಅವರು ದೂಷಿಸುವುದಿಲ್ಲ. ಈ ರಾಶಿಯ ಕೆಲವು ಜನರು ಅಂತರ್ಮುಖಿಗಳಾಗಿರುತ್ತಾರೆ. ನಿಮಗೆ ತುಲಾ ರಾಶಿಯ ಸಂಗಾತಿಯಿದ್ದರೆ ನೀವು ಅದೃಷ್ಟವಂತರು.
ಇದನ್ನೂ ಓದಿ: ವಾಸ್ತು ದೋಷ ನಿವಾರಣೆಗೆ ವಿಘ್ನನಿವಾರಕನ ಸರಳ ಪರಿಹಾರ!
• ವೃಷಭ (Taurus):
ಭೂಮಿ (Earth) ಗುಣದ ವೃಷಭ ರಾಶಿಯವರು ನಿಷ್ಠೆಗೆ ಮತ್ತೊಂದು ಹೆಸರು. ಹೀಗಾಗಿ, ಅವರನ್ನು ಕಣ್ಣುಮುಚ್ಚಿಕೊಂಡು ನಂಬಿಬಿಡಬಹುದು (Trust). ಯಾವುದೇ ಸನ್ನಿವೇಶದಲ್ಲೂ ಅವರು ತಮ್ಮ ಸಂಗಾತಿಗೆ ಮೋಸ ಮಾಡುವುದಿಲ್ಲ. ಸಂಗಾತಿಗೆ ಪ್ರೋತ್ಸಾಹದಾಯಕ ಮಾತುಗಳನ್ನಾಡುತ್ತಾರೆ, ಅವರಿಗೆ ದುಬಾರಿ ಹಾಗೂ ವಿಭಿನ್ನ ಉಡುಗೊರೆಗಳನ್ನು ನೀಡಲು ಇಷ್ಟಪಡುತ್ತಾರೆ. ತಮ್ಮ ಸಂಗಾತಿಯಿಂದ ಯಾವತ್ತೂ ದೂರವಾಗದ ವೃಷಭ ರಾಶಿಯವರು ಸುಲಭವಾಗಿ ಪ್ರೀತಿಗೆ ದಕ್ಕುತ್ತಾರೆ. ಹಾಗೆಯೇ ಸಂಗಾತಿ ತಮ್ಮನ್ನು ಗೌರವದಿಂದ ಕಾಣಬೇಕು ಎಂದು ಬಯಸುತ್ತಾರೆ.