ಇಲ್ಲಿ ನೀಡಿರುವ 10 ಸುಲಭ ಮತ್ತು ತ್ವರಿತ ಫೆಂಗ್‌ಶುಯ್ ತತ್ವಗಳನ್ನು ಬಳಸಿಕೊಂಡು ನಿಮ್ಮ ಜೀವನವನ್ನು ಸುಧಾರಿಸಿಕೊಳ್ಳಿ.
ನಿಮ್ಮ ಮನೆಯಲ್ಲಿ ಕೆಲವೊಂದು ಫೆಂಗ್ ಶುಯ್(Feng Shui) ನಿಯಮಗಳನ್ನು ಅನುಸರಿಸುವುದರಿಂದ ಮಂಗಳಕರ ಸಕಾರಾತ್ಮಕ ಶಕ್ತಿಯ ಮನೆಯ ತುಂಬಾ ಹರಡಿರುತ್ತದೆ. ಧನಾತ್ಮಕ ಶಕ್ತಿಯು ಅವಕಾಶಗಳು, ಸಂಪತ್ತು, ಆರೋಗ್ಯ ಮತ್ತು ಸಮೃದ್ಧಿ ನಿಮ್ಮ ಮನೆಗೆ ಪ್ರವೇಶಿಸಲು ಅನುಮತಿಸುತ್ತದೆ. ಹೆಚ್ಚಿನ ಫೆಂಗ್ ಶೂಯಿ ಸಲಹೆಗಳು ಸಾಧಿಸಲು ಹಣವನ್ನು ವೆಚ್ಚ ಮಾಡಬೇಕಾಗಿಲ್ಲ. ಹೆಚ್ಚಿನ ಪರಿಹಾರಗಳು ನಿಮ್ಮ ಕಡೆಯಿಂದ ಸಮಯ ಮತ್ತು ದೈಹಿಕ ಶ್ರಮವನ್ನು ಮಾತ್ರ ಕೇಳುತ್ತವೆ.
1. ಮನೆಯನ್ನು ಡಿಕ್ಲಟರ್ ಮಾಡಿ(Declutter Your Home)
ಮನೆ ಅಸ್ತವ್ಯಸ್ತವಾದಾಗಲೆಲ್ಲಾ ಚಿ ಶಕ್ತಿ(chi energy)ಯು ನಿಶ್ಚಲವಾಗುತ್ತದೆ. ವಾರ್ಡ್ರೋಬ್ ತುಂಬಾ ರಾಶಿ ಬಿದ್ದ ಬಟ್ಟೆಗಳು, ಎಲ್ಲೆಂದರಲ್ಲಿ ಹರಡಿದ ಪುಸ್ತಕದ ರಾಶಿ, ಹಾಸಿಗೆಯ ತುಂಬಾ ವಸ್ತುಗಳು, ಎಲ್ಲೆಡೆ ಧೂಳು, ಚಪ್ಪಲಿಯ ರಾಶಿ ಇತ್ಯಾದಿ ಇತ್ಯಾದಿ ತುಂಬಿ ಹರಿಯುತ್ತಿದ್ದರೆ ಅವು ನಿಮ್ಮ ಜೀವನವನ್ನು ಸಮಸ್ಯೆಯ ಸುಳಿಯಲ್ಲಿ ಸಿಕ್ಕಿಸುತ್ತವೆ. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಈ ಸಿಕ್ಕಿಬಿದ್ದ ಶಕ್ತಿಯನ್ನು ತೆಗೆದು ಹಾಕಲು ನೀವು ಎಲ್ಲವನ್ನೂ ಜೋಡಿಸಿಡುವ ಜೊತೆಗೆ, ಬೇಡದ್ದನ್ನೆಲ್ಲ ಮನೆಯಿಂದ ಹೊರ ಹಾಕಿ. ಧೂಳು ಹೊಡೆದು ಸ್ವಚ್ಛವಾಗಿಟ್ಟುಕೊಳ್ಳಿ. ಕೊಳಕು ಪಾತ್ರೆಗಳು ಸಿಂಕ್‌ನಲ್ಲಿ ಉಳಿದಿರದಂತೆ ನೋಡಿಕೊಳ್ಳಿ ಹಾಗೂ ಕಸವನ್ನು ಪ್ರತಿದಿನ ವಿಲೇವಾರಿ ಮಾಡಿ.
undefined
2. ಪೀಠೋಪಕರಣಗಳು(Furnitures)
ಚಿ ಶಕ್ತಿಯು ನಿಮ್ಮ ಮನೆಯ ಸುತ್ತಲೂ ಮುಕ್ತವಾಗಿ ಚಲಿಸಲು ಸಹಾಯ ಮಾಡಲು ಪೀಠೋಪಕರಣಗಳನ್ನು ಮರುಹೊಂದಿಸಿ. ಧನಾತ್ಮಕ ಶಕ್ತಿಯನ್ನು ನಿಮ್ಮ ಮನೆಗೆ ಪ್ರವೇಶಿಸಲು ಮತ್ತು ಕೋಣೆಯಿಂದ ಕೋಣೆಗೆ ಮುಕ್ತವಾಗಿ ಹರಿಯಲು ಸಾಧ್ಯವಾಗುವಂತೆ ಪೀಠೋಪಕರಣಗಳನ್ನು ಜೋಡಿಸಿ. ಎಲ್ಲಿಯೂ ಮನೆಯಲ್ಲಿ ಓಡಾಡುವ ಸ್ಥಳಕ್ಕೆ ಪೀಠೋಪಕರಣ ಅಡ್ಡಿಯಾಗಬಾರದ. ಒಂದರಿಂದ ಮತ್ತೊಂದು ಪೀಠೋಪಕರಣಗಳ ನಡುವೆ ಸಾಕಷ್ಟು ಜಾಗವನ್ನು ಬಿಡಿ. ಬೇಡದ ಫರ್ನಿಚರ್ಸ್ ತೆಗೆದು ಹಾಕಿ. ಫೆಂಗ್ ಶುಯ್ ಪ್ರಕಾರ, ಪೀಠೋಪಕರಣಗಳನ್ನು ಅವು ಈಗಿರುವುದಕ್ಕಿಂತ 18 ಇಂಚುಗಳಷ್ಟು ಚಲಿಸಿದರೂ ತಕ್ಷಣವೇ ಕೊಠಡಿ ಮತ್ತು ನಿಮ್ಮ ಜೀವನ ಸಕ್ರಿಯವಾಗುತ್ತದೆ.
3. ಸ್ವಚ್ಛತೆ(Cleanliness)
ಪ್ರತಿ ದಿನ ಅಂಗಳವನ್ನು ಸ್ವಚ್ಛಗೊಳಿಸಿ. ಹಿತ್ತಲು, ಅಂಗಳ, ಮನೆಯ ಬಾಲ್ಕನಿ, ಟೆರೇಸ್ ಸೇರಿದಂತೆ ಮನೆಯ ಸುತ್ತಮುತ್ತ ಎಲೆಗಳು ಮತ್ತು ಇತರ ಕಸವನ್ನು ವಿಲೇವಾರಿ ಮಾಡಿ. ಮುಂಭಾಗದ ಬಾಗಿಲಿನ ಹಾದಿಗಳು ಮತ್ತು ಕಾಲುದಾರಿಗಳು ಸ್ವಚ್ಛವಾಗಿರಬೇಕು. ಮಿತಿಮೀರಿ ಬೆಳೆದ ಪೊದೆಸಸ್ಯಗಳನ್ನು ಟ್ರಿಮ್ ಮಾಡಿ. ಮರವು ನೇರವಾಗಿ ಬಾಗಿಲಿನ ಮುಂಭಾಗದಲ್ಲಿದ್ದರೆ, ಅದಕ್ಕೆ ಎದುರಾಗಿ ವಿಂಡ್ ಚೈಮ್ ನೇತು ಹಾಕಿ.
ಯಾವ ಆಹಾರ ನೈವೇದ್ಯ ಮಾಡಿದರೆ ದೇವರು ಬೇಗ ಒಲಿಯುತ್ತಾನೆ?
4. ಸೋರುವ ನಲ್ಲಿಗಳು ಮತ್ತು ಶೌಚಾಲಯಗಳು(Leaking taps and toilet)
ಸೋರುವ ನಲ್ಲಿ ಹಾಗೂ ಸರಿಯಿಲ್ಲದ ಶೌಚಾಲಯ ನಿಮ್ಮ ಹಣಕಾಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಹಾಗಾಗಿ ಮೊದಲು ಸೋರುತ್ತಿರುವ ನಲ್ಲಿಗಳನ್ನು ಸರಿಪಡಿಸಿ. ಶೌಚಾಲಯಗಳು ಸದಾ ಸ್ವಚ್ಛವಾಗಿದ್ದು, ಅಲ್ಲಿನ ನಲ್ಲಿ, ಚರಂಡಿ ಎಲ್ಲವೂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಖಚಿತಪಡಿಸಿಕೊಳ್ಳಿ.
5. ನೀರಿನ ಕಾರಂಜಿ ಅಥವಾ ಅಕ್ವೇರಿಯಂ(Water fountain or Aquarium)
ನಿಮ್ಮ ಹಣಕಾಸು ಅಥವಾ ವೃತ್ತಿಜೀವನಕ್ಕಾಗಿ ಚಿ ಶಕ್ತಿಯನ್ನು ಉತ್ತೇಜಿಸುವ ಅತ್ಯುತ್ತಮ ಮಾರ್ಗವೆಂದರೆ ನಿಮ್ಮ ಹೋಮ್ ಆಫೀಸ್ ಅಥವಾ ನಿಮ್ಮ ಮನೆಯ ಪ್ರವೇಶದ್ವಾರದಲ್ಲಿ ನೀರಿನ ಕಾರಂಜಿ ಇಡುವುದು. ಕಾರಂಜಿಯ ನೀರು ನಿಮ್ಮ ಮನೆ ಅಥವಾ ಕಛೇರಿಗೆ ಒಳಮುಖವಾಗಿ ಹರಿಯುತ್ತದೆ ಮತ್ತು ಬಾಗಿಲಿನ ಕಡೆಗೆ ಹರಿಯುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ. ನೀವು ಬಯಸಿದಲ್ಲಿ ನೀವು ಅಕ್ವೇರಿಯಂ ಅನ್ನು ಕೂಡಾ ಆಯ್ಕೆ ಮಾಡಬಹುದು. ವೃತ್ತಿ ವಲಯವನ್ನು ಉತ್ತೇಜಿಸಲು ನಿಮ್ಮ ಮನೆ ಅಥವಾ ಕಚೇರಿಯ ಉತ್ತರ ವಲಯದಲ್ಲಿ ಅಥವಾ ಸಂಪತ್ತಿನ ವಲಯವನ್ನು ಸಕ್ರಿಯಗೊಳಿಸಲು ಆಗ್ನೇಯದಲ್ಲಿ ಇರಿಸಿ. ಮಂಗಳಕರ ಚಿ ಶಕ್ತಿಯನ್ನು ಆಕರ್ಷಿಸಲು ಕನಿಷ್ಠ 8 ಕೆಂಪು ಮೀನು ಮತ್ತು 1 ಕಪ್ಪು ಮೀನನ್ನು ಅಕ್ವೇರಿಯಂನಲ್ಲಿರಿಸಿ.
6. ಡೈನಿಂಗ್ ರೂಮ್‌ನಲ್ಲಿ ಕನ್ನಡಿ(mirror)
ಹಣಕಾಸಿಗೆ ಹಳೆಯ ಫೆಂಗ್ ಶೂಯಿ ಪರಿಹಾರವೆಂದರೆ ಊಟದ ಕೋಣೆಯಲ್ಲಿ ಕನ್ನಡಿಯನ್ನು ಇಡುವುದು. ಅದು ಡೈನಿಂಗ್ ಟೇಬಲ್ ಅನ್ನು ಪ್ರತಿಬಿಂಬಿಸಬೇಕು. ಊಟದ ಮೇಜು ಕುಟುಂಬದ ಸಮೃದ್ಧಿಯ ಸಂಕೇತವಾಗಿದೆ. ಏಕೆಂದರೆ ಕುಟುಂಬವನ್ನು ಪೋಷಿಸಲು ಮತ್ತು ಬೆಂಬಲಿಸಲು ಇಲ್ಲಿ ಊಟವನ್ನು ನೀಡಲಾಗುತ್ತದೆ. ಕನ್ನಡಿಯು ಸಮೃದ್ಧಿಯನ್ನು ದ್ವಿಗುಣಗೊಳಿಸುತ್ತದೆ. ಕನ್ನಡಿಯು ಬಾಹ್ಯ ಬಾಗಿಲು ಅಥವಾ ಖಾಲಿ ಜಾಗವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ.
ಈ ಐದು ರಾಶಿಗಳೊಂದಿಗೆ ವಾದಿಸಿ, ಜಗಳ ಮಾಡಿ ಗೆಲ್ಲೋದು ಸುಲಭವಲ್ಲ!
7. ಮಲಗುವ ಕೋಣೆಯಲ್ಲಿ ಕನ್ನಡಿ
ನೀವು ಮಲಗುವ ಕೋಣೆಯಲ್ಲಿ ಕನ್ನಡಿಗಳನ್ನು ಹೊಂದಿದ್ದರೆ, ಅವು ಹಾಸಿಗೆಯನ್ನು ತೋರಿಸುತ್ತಿದ್ದರೆ ಅವನ್ನು ಅಲ್ಲಿಂದ ತೆಗೆಯಿರಿ. ಫೆಂಗ್ ಶುಯ್ ಪ್ರಕಾರ, ಹಾಸಿಗೆಯನ್ನು ತೋರುವ ಕನ್ನಡಿಗಳು ದಾಂಪತ್ಯದ ನಡುವೆ ಮೂರನೇ ವ್ಯಕ್ತಿಯನ್ನು ಆಹ್ವಾನಿಸಿ ಸಂಬಂಧ(relationship) ಹಾಳು ಮಾಡುತ್ತವೆ. ಅಲ್ಲದೆ ಅವು ಮಲಗುವ ಕೋಣೆಯಲ್ಲಿ ಚಡಪಡಿಕೆ ಮತ್ತು ಅನಾರೋಗ್ಯವನ್ನು ಉಂಟುಮಾಡುತ್ತದೆ. ಒಂದು ವೇಳೆ ಕನ್ನಡಿ ತೆಗೆಯಲಾಗದಿದ್ದರೆ ಅದನ್ನು ಬಟ್ಟೆಯಿಂದ ಮುಚ್ಚಿ.
8. ಸ್ನಾನಗೃಹ ಮತ್ತು ಶೌಚಾಲಯದ ಬಾಗಿಲು(door)
ಮನೆಯಿಂದ ತ್ಯಾಜ್ಯ ನೀರು (ಕೊಳಕು ನೀರು) ಸಾಗಿಸಲು ಸ್ನಾನಗೃಹವನ್ನು ಇಡಲಾಗಿದೆ. ಶೌಚಾಲಯ ಮತ್ತು ಟಾಯ್ಲೆಟ್ ಬಾಗಿಲು ಉಪಯೋಗದಲ್ಲಿಲ್ಲದಾಗ ಸದಾ ಮುಚ್ಚಿರಬೇಕು. ವಿಶೇಷವಾಗಿ ಶೌಚಾಲಯವನ್ನು ಫ್ಲಶ್ ಮಾಡುವಾಗ ಶೌಚಾಲಯದ ಮುಚ್ಚಳವನ್ನು ಮುಚ್ಚಿಡಿ. ಬಳಕೆಯಲ್ಲಿಲ್ಲದಾಗಲೂ ಮುಚ್ಚಿಡಿ. ಹೀಗೆ ಮಾಡುವುದು ಕುಟುಂಬದ ಸಂಪತ್ತು ಮತ್ತು ಹಣಕಾಸು ಮನೆಯಿಂದ ಹೊರ ಹೋಗುವುದನ್ನು ತಡೆಯುತ್ತದೆ.
9. ಡೆಸ್ಕ್ ಅನ್ನು ಕಮಾಂಡ್ ಸ್ಥಾನಕ್ಕೆ ಸರಿಸಿ
ಕೆಲಸ ಮತ್ತು ಹಣಕಾಸು ಸುಧಾರಿಸಲು ಉತ್ತಮ ಮಾರ್ಗವೆಂದರೆ ನಿಮ್ಮ ಡೆಸ್ಕ್ ಅನ್ನು ಕೋಣೆಯ ಕಮಾಂಡ್ ಸ್ಥಾನಕ್ಕೆ ಸರಿಸುವುದಾಗಿದೆ. ನೀವು ಕೆಲಸ ಮಾಡಲು ಕುಳಿತಾಗ ನಿಮ್ಮ ಹಿಂದೆ ಗೋಡೆ ಇರಬೇಕು. ಮುಂದೆ ಟೇಬಲ್ ಇರಬೇಕು.
ಈ ವಾರ ನಿಮ್ಮ ಭವಿಷ್ಯದಲ್ಲೇನಿದೆ? ಟ್ಯಾರೋ ಕಾರ್ಡ್ ಸೂಚಿಸೋದೇನು?
10. ಆಗ್ನೇಯದ ಸಂಪತ್ತಿನ ವಲಯ
ಆಗ್ನೇಯ ವಲಯವು ಸಂಪತ್ತಿನ ವಲಯವಾಗಿದೆ. ಅದೃಷ್ಟದ ಮೋಡಿ ಮತ್ತು ಫೆಂಗ್ ಶೂಯಿ ಚಿಕಿತ್ಸೆಗಳಿಂದ ಅದನ್ನು ಸಕ್ರಿಯಗೊಳಿಸಬಹುದು. ಜೇಡ್ ಸಸ್ಯದಂತಹ ಮರದ ಅಂಶವನ್ನು ಈ ದಿಕ್ಕಿನಲ್ಲಿ ಸೇರಿಸುವ ಮೂಲಕ ಅಥವಾ ಸಂಪತ್ತಿನ ಸಂಕೇತವಾದ ಮೂರು ಚೀನೀ ನಾಣ್ಯಗಳನ್ನು ಕೆಂಪು ರಿಬ್ಬನ್‌ನೊಂದಿಗೆ ಜೋಡಿಸಿ ಅದನ್ನು ಉತ್ತೇಜಿಸಿ. ಬಾಯಿಯಲ್ಲಿ ಚೈನೀಸ್ ನಾಣ್ಯವನ್ನು ಹೊಂದಿರುವ ಮೂರು ಕಾಲಿನ ಟೋಡ್ ಕೂಡ ಸಂಪತ್ತಿನ ಮಂಗಳಕರ ಸಂಕೇತವಾಗಿದೆ. ನೀರಿನ ವೈಶಿಷ್ಟ್ಯವು ಮರದ ಅಂಶವನ್ನು ಪೋಷಿಸುತ್ತದೆ ಮತ್ತು ಸಂಪತ್ತಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.