Vastu Tips: ಬಾಳೆ ಮರದಿಂದ ಬಾಳೇ ಬಂಗಾರವಾಗುತ್ತೆ!

By Suvarna NewsFirst Published Jun 17, 2022, 3:47 PM IST
Highlights

ಮನೆಯಲ್ಲಿ ಬಾಳೆಗಿಡವನ್ನು ನೆಡಬೇಡಿ, ಅದು ಅಶುಭ ಎಂದು ಅನೇಕರು ಹೇಳುವುದನ್ನು ನೀವು ಕೇಳಿರಬಹುದು. ಆದರೆ, ಸರಿಯಾದ ವಾಸ್ತು ನಿಯಮ ಅನುಸರಿಸಿ ಬಾಳೆ ಮರ ಬೆಳೆಸಿದ್ರೆ ನಿಮ್ಮ ಬಾಳೇ ಬಂಗಾರವಾಗುವುದು. 

ಬಾಳೆ ಮರ(Banana tree) ಬಹುರೂಪಿ ಪ್ರಯೋಜನಕಾರಿ. ಅದರ ಎಲೆಗಳು ತಟ್ಟೆಯಾಗುತ್ತವೆ, ಕೊಟ್ಟೆ ಕಡುಬಿಗೆ ಪರಿಮಳ ನೀಡುತ್ತವೆ, ಹಣ್ಣಂತೂ ರುಚಿಯ ಎರಡು ಪಟ್ಟು ಆರೋಗ್ಯಕ್ಕೆ ಒಳ್ಳೆಯದು. ಬಾಳೆಂದಿಂಡು, ಬಾಳೆಕಾಯಿಯಿಂದಲೂ ಸಾಕಷ್ಟು ರೀತಿಯ ತಿನಿಸು ಮಾಡಬಹುದು. ಬಾಳೆ ಮರ ಚೆನ್ನಾಗಿ ನೆರಳು ಕೂಡಾ ಕೊಡುತ್ತದೆ. ಈ ರೀತಿ ಬಹಳಷ್ಟು ಪ್ರಯೋಜನ ಹೊಂದಿರುವ ಬಾಳೆ ಮರವನ್ನು ಜ್ಯೋತಿಷ್ಯ(Astrology)ದಲ್ಲಿ ಪೂಜ್ಯವೆಂದು ಪರಿಗಣಿಸಿದ್ದು, ಬಾಳೆ ಮರದಲ್ಲಿ ನಾರಾಯಣ ನೆಲೆಸಿದ್ದಾನೆ ಎಂದು ನಂಬಲಾಗಿದೆ. ಹಾಗಾಗಿಯೇ ಜನರು ಗುರುವಾರ(Thursday) ಬಾಳೆ ಮರವನ್ನು ಪೂಜಿಸುತ್ತಾರೆ.  ಹಾಗಿದ್ದೂ, ಜನರು ಮನೆಯಲ್ಲಿ ಬಾಳೆ ಮರವನ್ನು ನೆಡುವುದಿಲ್ಲ. ಮನೆಯಲ್ಲಿ ಬಾಳೆ ಮರ ನೆಡುವುದು ಅಶುಭ ಎಂಬ ನಂಬಿಕೆ ಇದೆ. ಆದರೆ ನಿಜವಾದ ಅರ್ಥದಲ್ಲಿ ಬಾಳೆಗಿಡವನ್ನು ವಾಸ್ತುವಿಗೆ ಅನುಸಾರ ನೆಟ್ಟಾಗ ತೊಂದರೆಗಿಂತಲೂ ಹೆಚ್ಚು ಶುಭ ಫಲಿತಾಂಶ ಕಾಣಬಹುದಾಗಿದೆ. ಹೀಗೆ ಸರಿಯಾದ ರೀತಿಯಲ್ಲಿ ನೆಟ್ಟ ಬಾಳೆ ಮರ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ನೆಮ್ಮದಿಯನ್ನು ತರುತ್ತದೆ. ಬಾಳೆ ಮರ ಬೆಳೆಸುವಾಗ ನೀವು ನೆನಪಿಡಬೇಕಾದ ಸಂಗತಿಗಳು ಇಲ್ಲಿವೆ. 

ಯಾವ ದಿಕ್ಕಿನಲ್ಲಿ?(Direction)
ಪೂಜೆಗೆ ಉತ್ತಮವಾದ ದಿಕ್ಕನ್ನು ಈಶಾನ್ಯ(north-east) ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ, ಬಾಳೆಮರಕ್ಕೆ ಕೂಡಾ ಈಶಾನ್ಯ ದಿಕ್ಕು ಅತ್ಯುತ್ತಮವಾಗಿದೆ. ಇದಲ್ಲದೆ ಪೂರ್ವದಲ್ಲಿ ಕೂಡಾ ಬಾಳೆ ಮರ ನೆಡಬಹುದು. ದಕ್ಷಿಣ ಮತ್ತು ಪಶ್ಚಿಮದಲ್ಲಿ ಎಂದಿಗೂ ಬಾಳೆ ಗಿಡ ನೆಡಬೇಡಿ. 

Garuda Purana : ಹೆಂಡತಿಗೆ ವಂಚಿಸೋರು, ಸುಳ್ಳು ಹೇಳೋರು ಮುಂದಿನ ಜನ್ಮದಲ್ಲೇನಾಗುತ್ತಾರೆ?

ಮನೆಯ ಹಿಂಭಾಗ(Backyard)
ಮನೆಯ ಮುಂಭಾಗದಲ್ಲಿ ಬಾಳೆಗಿಡವನ್ನು ಎಂದಿಗೂ ನೆಡಬಾರದು, ಅದನ್ನು ಹಿಂಭಾಗದಲ್ಲಿ ಮಾತ್ರ ನೆಡಬೇಕು ಮತ್ತು ನೆಟ್ಟ ನಂತರ ಪ್ರತಿ ದಿನ ನೀರು ಕೊಡಬೇಕು.

ಬಾಳೆಮರದ ಜೊತೆ ತುಳಸಿ ಗಿಡ(Tulsi plant) ಇರಿಸಿ
ಬಾಳೆ ಮರವನ್ನು ವಿಷ್ಣುವಿನ ವಾಸಸ್ಥಾನವೆಂದು ನಂಬಲಾಗಿದೆ ಮತ್ತು ತುಳಸಿಯನ್ನು ಲಕ್ಷ್ಮಿ ದೇವಿಯ ವಾಸಸ್ಥಾನವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಬಾಳೆ ಮರದ ಬಳಿ ತುಳಸಿ ಗಿಡವನ್ನು ಇಡುವುದು ತುಂಬಾ ಮಂಗಳಕರವಾಗಿದೆ. ಇದರಿಂದ ನಾರಾಯಣ ಮತ್ತು ತಾಯಿ ಲಕ್ಷ್ಮಿ ಇಬ್ಬರ ಆಶೀರ್ವಾದವೂ ದೊರೆಯುತ್ತದೆ. ಗುರುವಾರದಂದು ಬಾಳೆಗಿಡಕ್ಕೆ ಅರಿಶಿನದ ತಿಲಕವಿಟ್ಟು ಪೂಜಿಸಿ ದೀಪವನ್ನು ಹಚ್ಚಿದರೆ ಸೂಕ್ತ ಲಾಭವಾಗುತ್ತದೆ.

ಶುದ್ಧ ನೀರು(clean water)
ಬಾಳೆಗಿಡಕ್ಕೆ ಯಾವಾಗಲೂ ಶುದ್ಧವಾದ ನೀರನ್ನು ಸುರಿಯಿರಿ. ಗಲೀಜಾದ, ಬೇರೇನಕ್ಕೋ ಬಳಸಿದ ಅಥವಾ ಎಂಜಲಾದ ನೀರು ಬೇಡ. ಇದನ್ನು ಹೊರತುಪಡಿಸಿ, ಈ ಮರದ ಯಾವುದೇ ಎಲೆಯು ಒಣಗಿದರೆ, ಅದನ್ನು ತಕ್ಷಣವೇ ತೆಗೆದು ಎಸೆಯಬೇಕು.

ಚಿರಂಜೀವಿಯಾಗುವ ಶಾಪ ಪಡೆದ ಅಶ್ವತ್ಥಾಮ ಮಾಡಿದ ತಪ್ಪೇನು?

ಬಾಳೆ ಮರ ನೆಡುವುದರಿಂದ ಆಗುವ ಪ್ರಯೋಜನಗಳು(benefits):
ಜ್ಯೋತಿಷ್ಯ ನಿಯಮಗಳ ಪ್ರಕಾರ ಬಾಳೆ ಮರವನ್ನು ನೆಟ್ಟರೆ, ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿಯೊಂದಿಗೆ ಸಂತೋಷವು ಬರುತ್ತದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ದಾಂಪತ್ಯದಲ್ಲಿ ಅಡೆತಡೆಗಳನ್ನು ಎದುರಿಸುತ್ತಿರುವವರ ಎಲ್ಲಾ ಅಡೆತಡೆಗಳು ದೂರವಾಗುತ್ತವೆ, ಜಾತಕದಲ್ಲಿ ಗುರುವಿನ ಸ್ಥಾನವು ಬಲವಾಗಿರುತ್ತದೆ. ಹಣದ ಸಮಸ್ಯೆಯೂ ದೂರವಾಗುತ್ತದೆ.

click me!