Vastu Tips: ಶಬ್ಧ ಹಾಗೂ ಸುಗಂಧದಿಂದ ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸಿ

By Suvarna NewsFirst Published Mar 13, 2022, 1:06 PM IST
Highlights

ಮನೆಯಲ್ಲಿ ಶಬ್ದ ತರಂಗಗಳು ಹಾಗೂ ಸುಗಂಧದ ಮೂಲಕ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುವುದು ಹೇಗೆ ಎಂಬುದನ್ನು ತಿಳಿಯಿರಿ.

ಮನೆ ಸಂತೋಷದಿಂದ ತುಂಬಿರಲು ಮತ್ತು ಅದರ ನಿವಾಸಿಗಳಿಗೆ ಯಶಸ್ಸನ್ನು ತರಲು ಧನಾತ್ಮಕ ಶಕ್ತಿ(positive energy)ಯ ಅಗತ್ಯವಿದೆ. ಇದನ್ನು ಸರಿಯಾಗಿ ನಿಭಾಯಿಸದಾಗ, ಕಾಲಾನಂತರದಲ್ಲಿ ಧನಾತ್ಮಕ ಶಕ್ತಿಯು ನಿಶ್ಚಲವಾಗಬಹುದು ಮತ್ತು ನಕಾರಾತ್ಮಕ ಶಕ್ತಿ(negative energy)ಯನ್ನು ಆಕರ್ಷಿಸಬಹುದು. ಆದರೆ, ಮನೆ ಕಳೆಕಳೆಯಾಗಿರಬೇಕೆಂದರೆ ಅದಕ್ಕಾಗಿ ನಿರಂತರ ಪ್ರಯತ್ನಗಳನ್ನು ಮಾಡುತ್ತಿರಬೇಕು. ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಸದಾ ನೆಲೆಸುವಂತೆ ಮಾಡಲು, ಈ ಅರೋಮಾ ಹಾಗೂ ಸೌಂಡ್ ಎನರ್ಜಿ ಸಹಾಯಕವಾಗುತ್ತದೆ. ಅದಕ್ಕಾಗಿ ಈ ಕ್ರಮಗಳನ್ನು ಪಾಲಿಸಿ. 

ಗಾಳಿ ಬೆಳಕು
ಮನೆಯಲ್ಲಿ ಸಣ್ಣ ಮಕ್ಕಳು(children) ನಗುತ್ತಾ ಓಡಾಡುತ್ತಿದ್ದರೆ, ಅವರ ಚೈತನ್ಯವೇ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ. ಆದರೆ, ಮನೆಯ ತುಂಬಾ ದೊಡ್ಡವರೇ ತುಂಬಿದ್ದರೆ, ಎಲ್ಲರೂ ಉದ್ಯೋಗದಲ್ಲಿದ್ದರೆ ಇಡೀ ದಿನ ಕೆಲಸ ಮಾಡುತ್ತಾ ಇರುವವರ ನಡುವೆ ಎನರ್ಜಿ ನಿಂತ ನೀರಾಗುತ್ತದೆ. ಇಂಥ ಸಂದರ್ಭದಲ್ಲಿ ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬಲು ಮನೆಯ ಸಾಧ್ಯವಿರುವ ಎಲ್ಲ ಕಿಟಕಿ ಬಾಗಿಲು(doors and windows)ಗಳನ್ನು ತೆರೆದಡಿ. ಸಾಧ್ಯವಾದಷ್ಟು ಸೂರ್ಯ ರಶ್ಮಿ ಹಾಗೂ ಬೆಳಕು, ಗಾಳಿ ಮನೆಯೊಳಗೆ ಓಡಾಡಲು ಬಿಡಿ. ಇದರಿಂದ ಮನೆಯ ಎನರ್ಜಿ ಬದಲಾಗುವುದನ್ನು ನೀವೇ ಸ್ವತಃ ಅನುಭವಿಸುವಿರಿ. 

ಶಬ್ದದ ಶಕ್ತಿ
ಮನೆಯಲ್ಲಿ ಕಾಯಿಲೆ ತರುವಂಥ ಎನರ್ಜಿ(illness energy) ಇದ್ದಾಗ, ಮನೆಯ ಸದಸ್ಯರು ಒಂದಿಲ್ಲೊಂದು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಾರೆ. ಇದರಿಂದ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ. ಇದನ್ನು ಹೋಗಿಸಿ, ಉತ್ತಮ ಶಕ್ತಿ ತರಲು ಸಿಂಗಿಂಗ್ ಬೌಲ್ ಬಳಸಿ. ಇದರಿಂದ ಮನೆಯಲ್ಲಿ ಕಾಯಿಲೆ ಬೀಳುವುದು ಕಡಿಮೆಯಾಗುತ್ತದೆ. ದೇವರ ಕೋಣೆಯಲ್ಲಿ ಬಳಸುವ ಜಾಗಂಟೆ, ಗಂಟೆಗಳನ್ನು ಸದ್ದು ಮಾಡುತ್ತಾ ಮನೆಯ ಎಲ್ಲ ಕಡೆ ಓಡಾಡಿ. ಹಾಗೆ ಬಾರಿಸುವಾಗ ಗಡಿಯಾರದ ರೀತಿಯಲ್ಲಿ ಸುತ್ತು ಬರಿಸುತ್ತಾ ಬಾರಿಸಿ. ಇದರಿಂದ ಮನೆಯ ನಕಾರಾತ್ಮಕ ಶಕ್ತಿ ಹೋರ ಹೋಗುವುದು. ಶಂಖ ಊದುವುದು ಕೂಡಾ ಉತ್ತಮವಾಗಿದೆ. ಇದಲ್ಲದೆ, ಗಾಳಿ ಬಂದಾಗಲೆಲ್ಲ ಇಂಪಾದ ಸದ್ದು ಹೊರಡಿಸುವ ವಿಂಡ್ ಚೈಮ್(metal wind chimes) ಬಳಸಿ. ಈ ಶಬ್ಧಗಳ ತರಂಗಗಳು ಕಾಯಿಲೆ ತರುವ ಶಕ್ತಿಯನ್ನು ಹೊರಗೋಡಿಸುತ್ತವೆ. 

Vastu Remedies: ಕೆಂಪುಚಂದನದ ಈ ಪರಿಹಾರಗಳು ಎಷ್ಟೆಲ್ಲ ಸಮಸ್ಯೆ ನೀಗಿಸುತ್ತವೆ ಗೊತ್ತಾ?

ನಾಯಿಗಳ ಶಕ್ತಿ
ಫೆಂಗ್ ಶುಯ್ ಪ್ರಕಾರ, ಮನೆಯಲ್ಲಿ ಸಂತೋಷವಾಗಿ ಓಡಾಡಿಕೊಂಡಿರುವ ಸಾಕುಪ್ರಾಣಿಗಳು(happy pets) ಮನೆಯಲ್ಲಿ ಧನಾತ್ಮಕ ಎನರ್ಜಿ ಹರಿದಾಡುವಂತೆ ಮಾಡುತ್ತವೆ. ನಾಯಿ ಅಥವಾ ಬೇರಾವುದೇ ಚೈತನ್ಯ ಭರಿತ ಪ್ರಾಣಿಯನ್ನು ಸಾಕುವುದರಿಂದ ಮನೆ ಸದಾ ಕಳೆಕಳೆಯಾಗಿ ಇರುತ್ತದೆ. 

ಸುಗಂಧ(Aroma)
ಮನೆಯಲ್ಲಿ ಧೂಪ ಹಚ್ಚಿಡುವುದು, ಅಗರ್‌ಬತ್ತಿ ಸೇರಿದಂತೆ ಸುಗಂಧ ಬೀರುವ ಉತ್ತಮ ವಸ್ತುಗಳನ್ನು ಹಚ್ಚಿಡುವುದರಿಂದ ಅವು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ಪರಿಮಳಯುಕ್ತ ಕ್ಯಾಂಡಲ್ ಹಾಗೂ ಅರೋಮಾ ಆಯಿಲ್‌ಗಳ ಬಳಕೆಯು ಕೆಟ್ಟ ಶಕ್ತಿಗಳನ್ನು ಓಡಿಸಿ, ಉತ್ತಮ ಶಕ್ತಿಯನ್ನು ಮನೆಗೆ ತರುತ್ತವೆ. ಸಂಜೆಯ ಹೊತ್ತಲ್ಲಿ ಕರ್ಪೂರ ಹಚ್ಚಿಡುವುದು ಕೂಡಾ ಮನೆಯ ಎಲ್ಲರ ಮೂಡನ್ನು ಚೆನ್ನಾಗಿರಿಸುತ್ತದೆ. ಇದಲ್ಲದೆ, ಗಂಧ, ಲ್ಯಾವೆಂಡರ್ ಪರಿಮಳವು ಆರೋಗ್ಯಕ್ಕೆ ಕೂಡಾ ಒಳ್ಳೆಯದಾಗಿದೆ. 

Holi 2022: ಹಿರಣ್ಯಕಶಿಪು ಹಾಗೂ ಪ್ರಹ್ಲಾದನ ಕತೆಗೂ ಹೋಳಿಗೂ ಸಂಬಂಧವುಂಟು!

ಮ್ಯೂಸಿಕ್(music)
ಮನೆಯು ಇಡೀ ದಿನ ಮೌನವಾಗಿರುತ್ತದೆ ಎಂದರೆ, ದಿನದಲ್ಲಿ ಕನಿಷ್ಠ ಒಮ್ಮೆಯಾದರೂ ಉತ್ತಮ ಸಂಗೀತವನ್ನು ಪ್ಲೇ ಮಾಡಿ. ಇದರಿಂದ ಮನೆಯಲ್ಲಿ ನಿಂತ ಎನರ್ಜಿಯನ್ನು ಸಂಗೀತ ತರಂಗಗಳು ಹೊರಗೋಡಿಸುತ್ತವೆ. 

ಕಾರಂಜಿ(fountain)
ನೀರಿನ ಕಾರಂಜಿ ಮನೆಯೊಳಗಿದ್ದರೆ ಅದರಿಂದ ಉತ್ತಮ ಶಕ್ತಿ ಸೃಷ್ಟಿಯಾಗುತ್ತದೆ. ನೀರು ಬೀಳುವ ಶಬ್ದವು ಮನಸ್ಸಿಗೆ ವಿಶ್ರಾಂತ ಅನುಭವ ನೀಡುತ್ತದೆ. ಅದಿಷ್ಟೇ ಅಲ್ಲ, ನೀರು, ಮನೆಯ ಸದಸ್ಯರಿಗೆ ಉದ್ಯೋಗದಲ್ಲಿ ಯಶಸ್ಸನ್ನು ನೀಡುತ್ತದೆ. 

ಕಸದ ತೊಟ್ಟಿ
ಮನೆಯೊಳಗಿನ ಕಸ ಸಂಗ್ರಹದ ಬಗ್ಗೆ ಅರಿವಿರಲಿ. ಅದು ಸಂಗ್ರಹ ಹೆಚ್ಚಾದಷ್ಟೂ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಪ್ರತಿ ದಿನ ತ್ಯಾಜ್ಯವನ್ನು ಮನೆಯಿಂದ ಹೊರಗೆ ಹಾಕಿ. 

click me!