ವಾಸ್ತ ಶಾಸ್ತ್ರದ ನಿಯಮ ಪಾಲಿಸುವುದರಿಂದ ಜೀವನದಲ್ಲಿ ಸುಖ ಮತ್ತು ಸಮೃದ್ಧಿಯನ್ನು ಕಾಣಬಹುದಾಗಿದೆ. ಜೀವನದ ಪ್ರತಿ ಹಂತದಲ್ಲಿ ಬರುವ ಸಮಸ್ಯೆಗಳಿಗೆ ವಾಸ್ತು ಶಾಸ್ತ್ರದಲ್ಲಿ ಪರಿಹಾರವಿದೆ. ವಾಸ್ತು ಶಾಸ್ತ್ರದಲ್ಲಿ ಶನಿ ದೋಷದಿಂದ ಮುಕ್ತಿ ಪಡೆಯಲು ಕೆಲವು ಪರಿಹಾರಗಳನ್ನು ತಿಳಿಸಿದ್ದಾರೆ. ಆ ಪರಿಹಾರಗಳ ಬಗ್ಗೆ ತಿಳಿಯೋಣ.
ಗ್ರಹಗಳ ಪ್ರಭಾವ ಎಲ್ಲ ರಾಶಿಚಕ್ರಗಳ ಮೇಲೆ ಇದ್ದೇ ಇರುತ್ತದೆ. ಪ್ರತಿ ವ್ಯಕ್ತಿಯ ಜಾತಕದಲ್ಲಿ ಗ್ರಹಗಳು ಉಚ್ಛ ಸ್ಥಿತಿಯಲ್ಲಿದ್ದಾಗ ಉತ್ತಮ ಪರಿಣಾಮಗಳನ್ನು ಮತ್ತು ನೀಚ ಸ್ಥಿತಿಯಲ್ಲಿದ್ದಾಗ ಕಷ್ಟದ ಸ್ಥಿತಿಯನ್ನು ಅನುಭವಿಸಬೇಕಾಗುತ್ತದೆ. ಒಂಭತ್ತು ಗ್ರಹಗಳ ಸ್ಥಿತಿಯು ವ್ಯಕ್ತಿಯ ಜೀವನದ ಮೇಲೆ ಪರಿಣಾಮವನ್ನು ಬೀರುತ್ತದೆ. ಒಟ್ಟು ಗ್ರಹಗಳಲ್ಲಿ ಶನಿ ಗ್ರಹವೆಂದರೆ ಸರ್ವರಿಗೂ ಭಯ ಮತ್ತು ಭಕ್ತಿ ಹೆಚ್ಚಾಗಿರುತ್ತದೆ.
ಶನಿ ಗ್ರಹವು ಕರ್ಮಕ್ಕೆ ತಕ್ಕ ಫಲವನ್ನು ನೀಡುವಾತ. ಶನಿ ಗ್ರಹವು ನೀಚ ಸ್ಥಿತಿಯಲ್ಲಿದ್ದರೆ ಹೆಚ್ಚು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ಶನಿ ದೋಷವಿದ್ದರೆ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯುವುದಿಲ್ಲ, ಅಡೆ-ತಡೆಗಳು ಎದುರಾಗುವುದೇ ಹೆಚ್ಚು. ಹಾಗಾಗಿ ಜಾತಕದಲ್ಲಿ ಶನಿ ದೋಷವಿದ್ದರೆ ಪರಿಹಾರಗಳನ್ನು ಕಂಡುಕೊಳ್ಳುತ್ತಾರೆ. ವಾಸ್ತು ಶಾಸ್ತ್ರದಲ್ಲಿ ಕೆಲವು ವಾಸ್ತು ನಿಯಮಗಳನ್ನು ಸರಿಯಾದ ರೀತಿಯಲ್ಲಿ ಪಾಲಿಸುವುದರಿಂದ ಶನಿ ದೋಷ ನಿವಾರಣೆಯಾಗುತ್ತವೆ.
ಇದನ್ನು ಓದಿ: ಈ ಮೂರು ರಾಶಿ ಹುಡುಗರು ಕೇರಿಂಗ್ –ರೊಮ್ಯಾಂಟಿಕ್!
ಜಾತಕದಲ್ಲಿ ಶನಿ ಗ್ರಹವು ಯಾವ ಮನೆಯಲ್ಲಿರುತ್ತದೋ ಅಲ್ಲಿಂದ ಸಮಸ್ಯೆಗಳು ಆರಂಭವಾಗುತ್ತದೆ ಎಂದು ಹೇಳಲಾಗುತ್ತದೆ. ಶನಿಯ ಪ್ರಭಾವ ಕೆಟ್ಟದಾಗಿದ್ದರೆ ಎಷ್ಟೇ ಶ್ರೀಮಂತರಾದರೂ ಎಲ್ಲವನ್ನೂ ಕಳೆದುಕೊಳ್ಳಬಹುದಾಗಿರುತ್ತದೆ. ಅಷ್ಟೇ ಅಲ್ಲದೆ ಸಂಪತ್ತಿನೊಂದಿಗೆ ಗೌರವ ಮತ್ತು ಪ್ರತಿಷ್ಠೆಯು ಸಹ ನಾಶವಾಗುತ್ತದೆ. ಶನಿ ದೋಷದಿಂದ ಮುಕ್ತಿ ಪಡೆಯಲು ಅನೇಕ ಪ್ರಯತ್ನಗಳನ್ನು ಮಾಡಲಾಗುತ್ತದೆ. ಶಾಂತಿ ಮತ್ತು ಹೋಮ-ಹವನಗಳನ್ನು ಮಾಡಿಸುವುದಲ್ಲದೆ, ಶನಿ ದೇವಸ್ಥಾನಕ್ಕೆ ಹೋಗಿ ಅನೇಕ ಧಾರ್ಮಿಕ ಕಾರ್ಯಗಳನ್ನು ಮಾಡಿದರೂ ಸಹ ಕೆಲವು ಬಾರಿ ಶನಿ ದೋಷ ನಿವಾರಣೆಯಾಗುವುದಿಲ್ಲ. ಶನಿ ದೋಷ ನಿವಾರಣೆಗೆ ವಾಸ್ತು ಶಾಸ್ತ್ರದಲ್ಲಿ ಕೆಲವು ಉಪಾಯಗಳನ್ನು ತಿಳಿಸಿದ್ದಾರೆ. ಅವುಗಳನ್ನು ಪಾಲಿಸಿದಲ್ಲಿ ಶನಿ ದೋಷದಿಂದ ಉಂಟಾಗುವ ಕಷ್ಟಗಳಿಂದ ಪಾರಾಗಬಹುದಾಗಿದೆ.
ಇದನ್ನು ಓದಿ: ಮಾಂಗಲ್ಯಧಾರಣೆ ಮಹತ್ವ, ಪ್ರಯೋಜನಗಳು!
ಮುಳ್ಳಿನ ಗಿಡಗಳು ಮನೆಯಿಂದ ದೂರದಲ್ಲಿದ್ದರೆ ಉತ್ತಮ
ನುರಿತ ವಾಸ್ತು ತಜ್ಞರ ಪ್ರಕಾರ ಶನಿ ದೋಷವನ್ನು ಹೊಂದಿದವರು ಮನೆಯ ಹತ್ತಿರದಲ್ಲಿ ಮುಳ್ಳಿನ ಗಿಡಗಳನ್ನು ಹಾಕದಿರುವುದೇ ಉತ್ತಮವೆಂದು ಹೇಳುತ್ತಾರೆ. ಈ ಗಿಡಗಳು ನಕಾರಾತ್ಮಕ ಪರಿಣಾಮವನ್ನು ಬೀರುತ್ತವೆ. ಮುಳ್ಳಿನ ಗಿಡಗಳ ಪ್ರಭಾವದಿಂದ ಶನಿಯು ಕ್ರೂರತನ, ಹಿಂಸಾತ್ಮಕ ಮತ್ತು ಪ್ರಬಲನಾಗುತ್ತಾನೆಂದು ಹೇಳಲಾಗುತ್ತದೆ.
ವಸ್ತ್ರ ಖರೀದಿ ಈ ದಿನ ಬೇಡ
ವಾಸ್ತು ಶಾಸ್ತ್ರದಲ್ಲಿ ತಿಳಿಸಿರುವಂತೆ ಶನಿ ದೋಷವಿರುವವರು ಶನಿವಾರದಂದು ಹೊಸ ವಸ್ತ್ರವನ್ನು ಖರೀದಿಸುವುದು ಉತ್ತಮವಲ್ಲ. ಶನಿವಾರದಂದು ಹೊಸ ಬಟ್ಟೆಯನ್ನು ಖರೀದಿಸುವುದು ಶುಭವಲ್ಲವೆಂದು ಹೇಳಲಾಗುತ್ತದೆ.
ವಸ್ತ್ರದಾನ ಶನಿದೋಷಕ್ಕೊಂದು ಉಪಾಯ
undefined
ವಾಸ್ತು ಶಾಸ್ತ್ರದ ಪ್ರಕಾರ ಅಗತ್ಯವಿರುವವರಿಗೆ ಅಥವಾ ಬಡವರಿಗೆ ವಸ್ತ್ರಗಳನ್ನು ದಾನವಾಗಿ ನೀಡುವುದರಿಂದ ಶನಿಯ ಕೃಪೆ ಪಡೆಯಬಹುದಾಗಿದೆ. ಅಷ್ಟೇ ಅಲ್ಲದೆ ಉಪಯೋಗಿಸದಿರುವ ಬಟ್ಟೆಗಳನ್ನು ನಿರ್ಗತಿಕರಿಗೆ ದಾನವಾಗಿ ನೀಡುವುದರಿಂದ ಶನಿ ದೋಷ ತಗ್ಗುತ್ತದೆ. ಮನೆಯಲ್ಲಿ ಅಗತ್ಯವಿಲ್ಲದ ಹೆಚ್ಚು ವಸ್ತ್ರಗಳನ್ನು, ಉಪಕರಣಗಳನ್ನು ಇಟ್ಟುಕೊಳ್ಳುವುದು ಸಹ ಶನಿ ದೋಷಕ್ಕೆ ಕಾರಣವಾಗುತ್ತದೆ. ಶನಿಯ ಕೆಟ್ಟ ಪ್ರಭಾವದಿಂದ ತಪ್ಪಿಸಿಕೊಳ್ಳಲು ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಅನಗತ್ಯ ವಸ್ತುಗಳನ್ನು ಮನೆಯಿಂದ ಹೊರಹಾಕಬೇಕು.
ಇದನ್ನು ಓದಿ: ನಿಮ್ಮ ಹಸ್ತ ರೇಖೆ ಹೀಗಿದ್ದರೆ, ಖಿನ್ನತೆ-ಅಪರಾಧ ಕೃತ್ಯಕ್ಕೆ ಕಾರಣವಾಗತ್ತೆ..!
ತುಳಸಿ
ತುಳಸಿ ಮನೆಯ ಮುಂದೆ ಇರುವುದರಿಂದ ಸಕಾರಾತ್ಮಕ ಶಕ್ತಿಯು ಹೆಚ್ಚುತ್ತದೆ. ಅಷ್ಟೇ ಅಲ್ಲದೆ ನಕಾರಾತ್ಮಕ ಶಕ್ತಿಯನ್ನು ತಡೆಯುತ್ತದೆ. ಶನಿಯ ಕೆಟ್ಟ ಪ್ರಭಾವಗಳಿಂದ ರಕ್ಷಣೆ ಪಡೆಯಲು ತುಳಸಿ ಸಸ್ಯ ಉತ್ತಮ ಪರಿಹಾರವಾಗಿದೆ. ಮನೆಯ ಮುಖ್ಯ ದ್ವಾರ ಅಥವಾ ಈಶಾನ್ಯ ದಿಕ್ಕಿನಲ್ಲಿ ತುಳಸಿಯನ್ನು ನೆಡುವುದು ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಔಷಧೀಯ ಗುಣವುಳ್ಳ ತುಳಸಿಯಿಂದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಮನೆಯಲ್ಲಿ ಸುಖ-ಸಮೃದ್ಧಿ ಸದಾ ನೆಲೆಸಿರುತ್ತದೆ. ಹೀಗಾಗಿ ತುಳಸಿ ಗಿಡವನ್ನು ಮನೆಯ ಮುಂದೆ ನೆಡುವುದರಿಂದ ಶನಿ ದೋಷದಿಂದ ಸ್ವಲ್ಪ ಮಟ್ಟಿಗೆ ಪರಿಹಾರ ಸಿಗುತ್ತದೆ.