ಈ ಗಿಡ ನಿಮ್ಮ ಮನೆಯಲ್ಲಿದ್ದರೆ ಎಲ್ಲಾ ವಾಸ್ತು ದೋಷ ದೂರ!

Suvarna News   | Asianet News
Published : Aug 05, 2021, 06:42 PM IST
ಈ ಗಿಡ ನಿಮ್ಮ ಮನೆಯಲ್ಲಿದ್ದರೆ ಎಲ್ಲಾ ವಾಸ್ತು ದೋಷ ದೂರ!

ಸಾರಾಂಶ

ಬಿಳಿ ಎಕ್ಕ ಮನೆಯಲ್ಲಿದ್ದರೆ ಅದು ವಾಸ್ತು ದೋಷಗಳನ್ನು ನಿವಾರಣೆ ಮಾಡುತ್ತದೆ. ಈ ಗಿಡದ ಆರೋಗ್ಯ ಪ್ರಯೋಜನಗಳೂ ನೂರೆಂಟು.  

ಸಾಮಾನ್ಯವಾಗಿ ಬಿಳಿ ಎಕ್ಕ ಗಿಡ ಪ್ರತಿಯೊಬ್ಬರಿಗೂ ಪರಿಚಯವಿರುತ್ತದೆ. ಮನೆಯ ವಾಸ್ತು ದೋಷವನ್ನು ನಿವಾರಿಸುವ ಜೊತೆಗೆ ಹಲವು ದೈಹಿಕ, ಆರೋಗ್ಯ ಸಮಸ್ಯೆಗೂ ಪರಿಹಾರವನ್ನು ಒದಗಿಸುತ್ತದೆ ಈ ಬಿಳಿ ಎಕ್ಕ.
ಪೂರ್ವಜರು ಹೇಳುವ ಹಾಗೆ ಬಿಳಿ ಎಕ್ಕದ ಗಿಡವೊಂದು ಮನೆಯಲ್ಲಿ ಇದ್ದರೆ ಸಕಲ ಐಶ್ವರ್ಯ, ಆರೋಗ್ಯ ಮತ್ತು ಅಂತಸ್ತು ವೃದ್ಧಿಯಾಗುತ್ತದೆ, ಹಣಕಾಸಿನ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ. ಮನೆಯಲ್ಲಿ ಶಾಂತಿ, ನೆಮ್ಮದಿ, ಹಣಕಾಸಿನ ವ್ಯವಹಾರಗಳು ಇಂಥ ಎಲ್ಲಾ ತೊಂದರೆಗಳಿಗೆ ಬಿಳಿ ಎಕ್ಕದ ಗಿಡ ರಾಮಬಾಣ ಎಂದೇ ಹೇಳಬಹುದು. ಆನೇಕ ಜನರು ತಮ್ಮ ವ್ಯವಹಾರ, ವಹಿವಾಟುಗಳಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ. ಜೊತೆಗೆ ಹಣಕಾಸಿನ ವಿಚಾರಗಳಲ್ಲಿ ಹಿನ್ನಡೆಯನ್ನು ಅನುಭವಿಸುತ್ತ ಸಾಲಭಾದೆಯಲ್ಲಿ ಸಿಲುಕಿ ಕಷ್ಟದ ಪರಿಸ್ಥಿತಿಯಲ್ಲಿ ಇರುತ್ತಾರೆ. ಅಂಥವರಿಗೆ ಈ ಬಿಳಿ ಎಕ್ಕದ ಗಿಡ ಅದೃಷ್ಟ ತರಲಿದೆ.  

ನಿಮ್ಮ ರಾಶಿಗೆ ಯಾವುದರಿಂದ ಮೃತ್ಯುಭಯ? ಪರಿಹಾರವೇನು?

ಬಿಳಿ ಎಕ್ಕದ ಗಿಡ ನಮಗೆ ಸುಲಭವಾಗಿ ಸಿಗುತ್ತದೆ. ಎಲ್ಲಾ ಪ್ರದೇಶಗಳಲ್ಲಿಯೂ ಲಭಿಸುವಂತ ಗಿಡ. ಬಿಳಿ ಎಕ್ಕದ ಗಿಡ 5ರಿಂದ 6 ಅಡಿ ಎತ್ತರಕ್ಕೆ ಬೆಳೆಯುತ್ತದೆ ಹಾಗೂ ಬಿಳಿ, ನೀಲಿ ಮಿಶ್ರಿತವಾದ ಬಣ್ಣದಲ್ಲಿ ಹೂವನ್ನು ಅರಳಿಸುತ್ತದೆ. 
 


ಬಿಳಿ ಎಕ್ಕದ ಗಿಡದ ಮುಂದೆ ಸೂರ್ಯ ದೇವರಿಗೆ ನಮಸ್ಕರಿಸಿ ಅದರ ಎಲೆಯಿಂದ ರವಿ ಗ್ರಹಕ್ಕೆ ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಸೂರ್ಯ ದೋಷಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ನೀವು ಪೂಜೆ ಮಾಡುವಾಗ ಲಕ್ಷ್ಮಿ, ಆಂಜನೇಯ, ಗಣಪತಿ, ಶನಿ ಮಹಾತ್ಮರಿಗೆ ಬಿಳಿ ಎಕ್ಕದ ಹೂವನ್ನು ಇಟ್ಟು ಪೂಜೆ ಸಲ್ಲಿಸಿದರೆ ಹಲವು ದೋಷಗಳಿಂದ ಮುಕ್ತರಾಗುತ್ತೀರಿ. ಶನಿ ದೋಷವಿದ್ದರೆ ಪ್ರತಿ ಮಂಗಳವಾರ ಮತ್ತು ಶನಿವಾರ ಬಿಳಿ ಎಕ್ಕದ ಹೂವಿನಿಂದ ಹಾರವನ್ನು ತಯಾರಿಸಿ ಅದನ್ನು ಆಂಜನೇಯ ಅಥವಾ ಶನಿದೇವರಿಗೆ ಅರ್ಪಿಸಿ, ಇದು ಬಹಳ ಒಳ್ಳೆಯದು. ಬಿಳಿ ಎಕ್ಕದ ಗಿಡ ವಿನಾಯಕ ದೇವರಿಗೆ ಬಹಳ ಪ್ರಿಯವಾದದ್ದು. 
ಎಕ್ಕದ ಗಿಡವನ್ನು ನಿಮ್ಮ ಮನೆಯಲ್ಲಿ ಬೆಳೆಸಿದರೆ ಯಾವುದೇ ರೀತಿಯ ಮಾಟ, ಮಂತ್ರ, ತಂತ್ರಗಳು ಸುಳಿಯುವುದಿಲ್ಲ. ಅದರಲ್ಲೂ ಮನೆಯ ಬಲ ಭಾಗದಲ್ಲಿ ಬೆಳೆಸಿದರೆ ವಾಸ್ತು ದೋಷ ನಿವಾರಣೆಯಾಗುತ್ತದೆ. ಬಿಳಿ ಎಕ್ಕದ ಗಿಡವನ್ನು ನಿಮ್ಮ ಮನೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ಹಲವು ದೋಷಗಳು ನಿವಾರಣೆಯಾಗಿ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ಸರಿಯಾಗುತ್ತದೆ. ಎಕ್ಕದ ಹೂವನ್ನು ಮನೆಯ ಬಾಗಿಲಿಗೆ ಅಥವಾ ದೇವರ ಮನೆ ಬಾಗಿಲಿಗೆ ತೋರಣ ಕಟ್ಟಿದರೆ ವಾಸ್ತು ದೋಷ ನಿವಾರಣೆಯಾಗುತ್ತದೆ. 

ಯುಗಯುಗಾಂತರಗಳಷ್ಟು ಹಿರಿಯಾಕೆಯನ್ನು ಬಲರಾಮ ಮದುವೆಯಾಗಿದ್ದೇಕೆ?

ಆರೋಗ್ಯ ಪ್ರಯೋಜನಗಳು
ಬಿಳಿ ಎಕ್ಕದ ಗಿಡದ ಪ್ರತಿಯೊಂದು ಭಾಗವೂ ಔಷಧ ಗುಣಗಳನ್ನು ಹೊಂದಿದೆ. ಬಿಳಿ ಎಕ್ಕದ ಗಿಡದ ಹಾಲು ವಿಷಪೂರಿತವಾದದ್ದು, ಅದನ್ನು ಹೊರೆತುಪಡಿಸಿದರೆ ಎಕ್ಕದ ಗಿಡ ಸರಿ ಸುಮಾರು 64 ಔಷಧೀಯ ಗುಣಗಳನ್ನು ಒಳಗೊಂಡಿರುತ್ತದೆ.
ಎಕ್ಕದ ಬೇರನ್ನು ಅರಿಶಿಣದಲ್ಲಿ ತೇಯ್ದು ನೀರಿನಲ್ಲಿ ಸೇವಿಸಿದರೆ ದೇಹದಲ್ಲಿ ಇರುವ ವಿಷದ ಅಂಶ ನಿರ್ಮೂಲನೆಗೊಳ್ಳುವುದು. ಕಾಲುಗಳಲ್ಲಿ ಮುಳ್ಳು ಚುಚ್ಚಿದ್ದರೆ ಮುಳ್ಳು ಒಳಭಾಗದಲ್ಲಿದ್ದು ವಿಪರೀತ ನೋವನ್ನು ಕೊಡುತ್ತಿದ್ದರೆ, ಇದರ ಹಾಲನ್ನು ಆ ಜಾಗಕ್ಕೆ ಹಾಕಿದರೆ ನೆಟ್ಟಿರುವಂತ ಮುಳ್ಳು ಮೇಲಕ್ಕೆ ಬಂದು ನೋವು ಕಡಿಮೆಯಾಗುತ್ತದೆ. ಅತಿಯಾಗಿ ಬೆನ್ನು ನೋವು ಅಥವಾ ಮಂಡಿ ನೋವು ಸಮಸ್ಯೆ ಕಾಡುತ್ತಿದ್ದರೆ, ಎಕ್ಕ ಗಿಡದ ಎಲೆಗಳನ್ನು ಬೆಂಕಿ ಕೆಂಡ ಸೋಕಿಸಿ ನೋವು ಇರುವ ಜಾಗಕ್ಕೆ ಶಾಖ ಕೊಟ್ಟರೆ ಕೆಲವೇ ದಿನಗಳಲ್ಲಿ ನೋವು ಇಲ್ಲದಂತಾಗುವುದು.

ಶ್ರೀಕೃಷ್ಣನನ್ನು ಕೊಂದ ಬೇಡ ನಿಜಕ್ಕೂ ಯಾರು?

PREV
click me!

Recommended Stories

Vastu for Wealth: ಈ 5 ವಸ್ತು ನಿಮ್ಮ ಮನೆಯಲ್ಲಿದ್ದರೆ ಸದಾ ತಿಜೋರಿ ತುಂಬಿರುತ್ತೆ
Vastu Tips: ಇವನ್ನೆಲ್ಲಾ ಫ್ರಿಡ್ಜ್ ಮೇಲಿಟ್ಟರೆ ನಿಮ್ಮ ಪರ್ಸ್ ಖಾಲಿಯಾಗೋದು ಗ್ಯಾರಂಟಿ, ಹುಷಾರು