Vasu Tips 2022: ಹೊಸ ವರ್ಷ ಸಂತೋಷವಾಗಿರಬೇಕೆಂದರೆ ಮನೆಯಿಂದ ಈ ವಸ್ತುಗಳನ್ನು ಆಚೆ ಹಾಕಿ..

By Suvarna NewsFirst Published Dec 26, 2021, 3:28 PM IST
Highlights

ಮನೆಯಿಂದ ಈ ವಸ್ತುಗಳನ್ನು ಹೊರ ಹಾಕಿದರೆ, ಹೊಸ ವರ್ಷ ಸಂತೋಷಮಯವಾಗಿರಲಿದೆ. 

ಹಳೆ ವರ್ಷ ಹೇಗೇ ಕಳೆದು ಹೋಗಲಿ, ಹೊಸ ವರ್ಷ ಬರುತ್ತಿದೆ ಎಂದರೆ ನಿರೀಕ್ಷೆಗಳು ಹೆಚ್ಚುತ್ತವೆ. 2022ಕ್ಕೂ ಅಷ್ಟೇ, ಜನ ಧನಾತ್ಮಕತೆಯನ್ನು ಬಯಸುತ್ತಾರೆ. ತಮ್ಮ ಕನಸುಗಳು ಈ ವರ್ಷವಾದರೂ ಈಡೇರುತ್ತದೆ ಎಂದುಕೊಳ್ಳುತ್ತಾರೆ. ಆದರೆ, ಸುತ್ತಮುತ್ತಲ ಪರಿಸರ ನೆಗೆಟಿವ್ ಆಗಿದ್ದರೆ, ಯಾವೊಂದೂ ಅಂದುಕೊಂಡಂತೆ ಆಗುವುದಿಲ್ಲ. ಎಲ್ಲ ಕೆಲಸಗಳೂ ನಕಾರಾತ್ಮಕ ಫಲಿತಾಂಶವನ್ನೇ ಕೊಡುತ್ತವೆ. ನಿಮ್ಮ ಮನೆಯಲ್ಲಿರುವ ಈ ವಸ್ತುಗಳನ್ನು ಹೊರ ಹಾಕುವ ಮುಖಾಂತರ ನೆಗೆಟಿವಿಟಿಯನ್ನು ದೂರ ಇಡಬಹುದು. ಹಾಗಿದ್ದರೆ ಯಾವುದನ್ನು ಹೊರ ಹಾಕಬೇಕು ನೋಡಿ. 

ಈ ಚಿತ್ರಗಳನ್ನು ತೆಗೆಯಿರಿ
ಮನೆಯಲ್ಲಿರುವ ನಕಾರಾತ್ಮಕ ವಸ್ತುಗಳು ನಮ್ಮ ಪರಿಶ್ರಮವನ್ನು ಹಾಳು ಮಾಡಬಹುದು. ಹಲವರ ಮನೆಯಲ್ಲಿ ಅಲಂಕಾರಕ್ಕೋ ಅಥವಾ ಇಷ್ಟಕ್ಕೋ ಹಾಕಿಕೊಂಡ ಫೋಟೋಗಳು, ಪೇಂಟಿಂಗ್‌ಗಳು ನೆಗೆಟಿವಿಟಿ(negativity)ಗೆ ಆಹ್ವಾನ ನೀಡುತ್ತಿರಬಹುದು. ಎಲೆಗಳೆಲ್ಲ ಉದುರಿ ಬಿದ್ದ ಒಣ ಮರದ ಫೋಟೋವಿದ್ದರೆ ಕೂಡಲೇ ಹೊರಗೆಸೆಯಿರಿ. ಅದರಿಂದ ಬದುಕಿನಲ್ಲಿ ದುಃಖ ಹೆಚ್ಚುತ್ತದೆ. 
ಪೌರಾಣಿಕವಾದದ್ದಾದರೂ ಸರಿ, ಯುದ್ಧ ಚಿತ್ರಣ ಹೊಂದಿರುವ ಚಿತ್ರವು ಸಂಬಂಧಗಳ ಮಧ್ಯೆ ಜಗಳ, ಮುನಿಸಿಗೆ ಕಾರಣವಾಗುತ್ತದೆ. ಅಂಥದ್ದನ್ನೂ ಹೊರ ಹಾಕಿ. 
ಕ್ರೂರ ಪ್ರಾಣಿಗಳ ಫೋಟೋಗಳು ಅಥವಾ ದುಃಖದ ಮುಖದ ಚಿತ್ರಗಳು, ಮಗು ಅಳುತ್ತಿರುವ ಚಿತ್ರ ಬದುಕಿನಲ್ಲಿ ಜಗಳ, ಕ್ರೂರತೆ, ಬೇಜಾರು, ನೋವನ್ನು ಹೆಚ್ಚಿಸುತ್ತವೆ. ದೊಡ್ಡ ಅಲೆಗಳೇಳುತ್ತಿರುವ ನೀರಿನ ಚಿತ್ರ ಹಾಕಲೇಕೂಡದು.

Baba Vanga predictions: 2022ರಲ್ಲಿ ಮತ್ತೊಂದು ವೈರಸ್ ದಾಳಿ, ಬಾಬಾ ವಾಂಗಾ ಭವಿಷ್ಯ

ಇವೆಲ್ಲದರ ಬದಲಿಗೆ ಎಲ್ಲರೂ ಸಂತೋಷದಲ್ಲಿರುವ ಕೌಟುಂಬಿಕ ಫೋಟೋ, ಜಲಪಾತ, ಓಡು ಕುದುರೆಗಳ ಫೋಟೋ ಪಾಸಿಟಿವ್(Positive) ಆಗಿರುತ್ತದೆ. ಮನೆಯ ಉತ್ತರ ದಿಕ್ಕಿನಲ್ಲಿ ಲಕ್ಷ್ಮೀ ಹಾಗೂ ಗಣೇಶನ ಫೋಟೋ ಹಾಕಿ. ಇದು ಕುಬೇರನ ದಿಕ್ಕಾದ್ದರಿಂದ ಹಣದ ಹರಿವನ್ನು ಹೆಚ್ಚಿಸುತ್ತದೆ. ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಪರ್ವತಗಳ ಫೋಟೋ ಹಾಕಿ. 

ಬೊನ್ಸಾಯ್ ಮರ(bonsai trees)
ಬೋನ್ಸಾಯ್ ಮರಗಳು ನೋಡಲು ಕ್ಯೂಟ್ ಅನಿಸಬಹುದು, ಮನೆಗ ಝೆನ್(Zen) ಲುಕ್ ಕೊಡಬಹುದು. ಆದರೆ, ಅವು ಬೆಳವಣಿಗೆ ಕುಂಠಿತವನ್ನು ಸೂಚಿಸುತ್ತವೆ. ತನ್ನ ಪೂರ್ತಿ ಬೆಳವಣಿಗೆಯ ಸಾಮರ್ಥ್ಯವನ್ನು ತಲುಪಲಾಗದ ಅಸಹಾಯಕತೆಯನ್ನು ಸೂಚಿಸುತ್ತದೆ. ಹಾಗಾಗಿ, ಮನೆಯಲ್ಲಿ ಬೋನ್ಸಾಯ್ ಮರಗಳಿದ್ದರೆ ಕೂಡಲೇ ಅದನ್ನು ಹೊರಗೆಸೆಯಿರಿ. ಅದರ ಬದಲು ಎತ್ತರವಾದ ಅಥವಾ ಇತರೆ ಒಳಾಂಗಣ ಮರಗಳನ್ನು ಮನೆಯೊಳಗಿಡಬಹುದು. 

ಹಾಳಾದ ಪಾತ್ರೆಗಳು(damaged kitchenware)
ಅಡುಗೆ ಮನೆಯಲ್ಲಿ ಬಹಳಷ್ಟು ಪಾತ್ರೆಗಳು ನಗ್ಗಿ ಹೋಗಿರಬಹುದು, ಚಮಚ, ಸೌಟಿನ ಹಿಡಿ ಮುರಿದು ಹೋಗಿರಬಹುದು. ಕಾವಲಿ ಹಾಳಾಗಿ ಬಳಕೆಯೇ ಇಲ್ಲದಿದ್ದರೂ ಮೂಲೆಯಲ್ಲಿ ಕೂತಿರಬಹುದು. ಲೋಟಗಳ ಹಿಡಿಕೆ ಕಿತ್ತುಕೊಂಡಿರಬಹುದು. ಮತ್ತೆ ಕೆಲ ತಟ್ಟೆಗಳು ಬದಿಯಲ್ಲಿ ಬಾಯಿ ಬಿಟ್ಟುಕೊಂಡಿರಬಹುದು. ಇವೆಲ್ಲ ಮನೆಗೆ ನಕಾರಾತ್ಮಕತೆ ತರುತ್ತವೆ. ಕೂಡಲೇ ಇಂಥ ಒಡೆದ, ತುಂಡಾದ ಪಾತ್ರೆಗಳನ್ನು ಮನೆಯಿಂದ ಹೊರಗೆಸೆಯಿರಿ. 

Weekly Horoscope: ಈ ವಾರ ಮಕರಕ್ಕೆ ಅದೃಷ್ಟ ಖುಲಾಯಿಸಲಿದೆ, ಉಳಿದ ರಾಶಿಗಳ ಫಲವೇನಿದೆ ಗೊತ್ತಾ?

ಬೇಡದ ಡ್ರಾಗಳು
ಮನೆಯಲ್ಲಿ ಏನೇ ಬೇಡದ ವಸ್ತುಗಳು, ಹಳೆಯ ಬಿಲ್‌ಗಳು, ಎಂದಿಗೂ ಉಪಯೋಗಕ್ಕೆ ಬಾರದ ಬೀಗ ಮತ್ತಿತರೆ ಸಣ್ಣ ಸಣ್ಣ ವಸ್ತುಗಳನ್ನೆಲ್ಲ ಎಸೆಯುವ ಬದಲಿಗೆ ಖಾಲಿ ಸಿಕ್ಕ ಡ್ರಾಗಳಲ್ಲಿ ಹಾಕಿಡುವ ಅಭ್ಯಾಸ ಹಲವರಿಗೆ. ಆದರೆ, ಅನಗತ್ಯ ವಸ್ತುಗಳೆಲ್ಲವೂ ನಕಾರಾತ್ಮಕ ಪರಿಣಾಮ ಬೀರುತ್ತವೆ. ಹಾಗಾಗಿ, ಮೊದಲು ಇಂಥ ಎಲ್ಲ ಡ್ರಾಗಳನ್ನು ಖಾಲಿ ಮಾಡಿ ಅಲ್ಲಿ ಗಾಳಿಯಾಡಲು ಸ್ಥಳಾವಕಾಶ ನೀಡಿ. 

ಹಳೆಯ ಬಟ್ಟೆಗಳು(old clothes)
ಎಲ್ಲರ ಕಪಾಟಿನಲ್ಲೂ ಒಂದಿಷ್ಟು ಬಟ್ಟೆಗಳು ಎಂದಿಗೂ ತೊಡದೆ ಕುಳಿತಿರುತ್ತವೆ. ಅಂಥ ಬಟ್ಟೆಗಳು ಬಳಸಲು ಯೋಗ್ಯವಾಗಿದ್ದರೆ ಅಗತ್ಯ ಇರುವವರಿಗೆ ನೀಡಿ. ಸುಮ್ಮನೆ ಮನೆಯಲ್ಲಿ ತುಂಬಿಕೊಂಡು ಮನೆಯ ನಕಾರಾತ್ಮಕ ಲಕ್ಷಣ ಹೆಚ್ಚಿಸಬೇಡಿ. 

ಎಕ್ಸ್‌ಪೈರ್ ಆದ ಔಷಧಗಳು(drugs)
ಮನೆಯಲ್ಲಿ ಔಷಧಿ, ಮಾತ್ರೆಗಳು ಅವಧಿ ಮುಗಿದಿವೆಯೇ ಎಂದು ಚೆಕ್ ಮಾಡಿ, ಮುಗಿದಿದ್ದನ್ನು ಕೂಡಲೇ ಮನೆಯಿಂದ ಹೊರ ಹಾಕಿ. ಇದರೊಂದಿಗೆ ಮುರಿದ ವಸ್ತುಗಳು, ಆಟಿಕೆಗಳು ಯಾವುದೇ ಇದ್ದರೂ ಅವನ್ನು ಕೂಡಲೇ ಹೊರ ಹಾಕಿ. ರಿಪೇರಿಗೆ ಬಂದ ವಸ್ತುಗಳನ್ನು ಕೂಡಲೇ ರಿಪೇರಿ ಮಾಡಿಸಿ. 
 

click me!