Vaastu Tips: ಈ ವಸ್ತುಗಳನ್ನು ಪರ್ಸ್‌ನಲ್ಲಿಟ್ಟುಕೊಂಡಿದ್ದರೆ ಕಾಡುವುದು ಸಮಸ್ಯೆ!

By Suvarna News  |  First Published Dec 18, 2021, 2:31 PM IST

ಪರ್ಸ್‌ನಲ್ಲಿ ಯಾವ ವಸ್ತುಗಳನ್ನಿಟ್ಟುಕೊಂಡರೆ, ಯಾವುದು ಅಶುಭ ಎಂಬ ಬಗ್ಗೆ ವಾಸ್ತು ಶಾಸ್ತ್ರ ಹೇಳುತ್ತದೆ. 


ಹಣದಿಂದ ಹಿಡಿದು ಹಳೆಯ ಬಿಲ್‌ಗಳವರೆಗೆ, ಪೆನ್ನಿನಿಂದ ಹಿಡಿದು ಕುಟುಂಬದ ಫೋಟೋಗಳವರೆಗೆ ಪುಟ್ಟ ವ್ಯಾಲೆಟ್‌ನಲ್ಲಿ ಎಷ್ಟೆಲ್ಲವನ್ನು ಇಟ್ಟುಕೊಳ್ಳುತ್ತೇವೆ ಎಂಬುದನ್ನು ಯೋಚಿಸಿದರೇ ಸೋಜಿಗವೆನಿಸುತ್ತದೆ. ಆದರೆ, ಲಕ್ಷ್ಮೀಯನ್ನು ಇಟ್ಟುಕೊಳ್ಳುವ ಈ ಪರ್ಸ್‌ನಲ್ಲಿ ಕೆಲ ವಸ್ತುಗಳನ್ನು ಇಟ್ಟುಕೊಂಡರೆ ಕಷ್ಟಗಳು ಸುತ್ತಿಕೊಳ್ಳುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ವಸ್ತುಗಳು ಅಶುಭಕ್ಕೆ ಕಾರಣವಾಗುತ್ತವೆ, ಹಣದ ಸಮಸ್ಯೆಯಲ್ಲಿ ಸಿಲುಕಿಸುತ್ತವೆ. ಇಂಥ ವಸ್ತುಗಳು ನಿಮ್ಮ ಪರ್ಸ್‌ನಲ್ಲಿಯೂ ಇವೆಯಾ ನೋಡಿ.

ದೇವರ ಫೋಟೋ(God’s Image)
ದೇವರ ಫೋಟೋ ಪರ್ಸ್‌ನಲ್ಲಿದ್ದರೆ ಒಳ್ಳೆಯದು ಎಂದು ಹಲವರು ಭಾವಿಸುತ್ತಾರೆ. ಆದರೆ, ವಾಸ್ತುಶಾಸ್ತ್ರದ ಪ್ರಕಾರ, ದೇವರ ಫೋಟೋವನ್ನು ಪರ್ಸ್‌ನಲ್ಲಿಡಬಾರದು. ಇದರಿಂದ ಸಾಲ(debts) ಹೆಚ್ಚುವುದಲ್ಲದೆ, ಜೀವನದಲ್ಲಿ ಹಲವು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಪರ್ಸ್‌ನ ಗಾತ್ರಕ್ಕೆ ಹೊಂದಿಸುವ ಸಲುವಾಗಿ ಕೆಲವರು ದೇವರ ಫೋಟೋವನ್ನು ಕಟ್ ಮಾಡಿಟ್ಟುಕೊಳ್ಳುತ್ತಾರೆ. ಇದೂ ಕೂಡಾ ಒಳ್ಳೆಯ ಅಭ್ಯಾಸವಲ್ಲ. ದೇವರು ಹೀಗೆ ಬಚ್ಚಿ ಕೂತುಕೊಳ್ಳಲು ಇಷ್ಟ ಪಡುವುದಿಲ್ಲ.

Tap to resize

Latest Videos

ಸತ್ತವರ ಫೋಟೋ(Photos of the deceased)
ಬಹುತೇಕರಿಗೆ ತಮ್ಮ ಮನಸ್ಸಿಗೆ ಹತ್ತಿರವಾದವರ ಫೋಟೋವನ್ನು ಪರ್ಸ್‌ನಲ್ಲಿಟ್ಟುಕೊಳ್ಳುವುದು ಅಭ್ಯಾಸ. ಆದರೆ, ಎಷ್ಟೇ ಹತ್ತಿರದವರಿರಲಿ, ಆಪ್ತರಿರಲಿ, ತೀರಿಕೊಂಡವರ ಫೋಟೋಗಳನ್ನು ನಮ್ಮ ಪರ್ಸ್‌ನಲ್ಲಿಟ್ಟುಕೊಂಡು ತಿರುಗಬಾರದು. ವಾಸ್ತು ಶಾಸ್ತ್ರದ ಪ್ರಕಾರ ಇದು ಅಶುಭ. ಇದರಿಂದ ಹಣದ ಕೊರತೆ ಸದಾ ಕೂಡುತ್ತದೆ ಎನ್ನಲಾಗುತ್ತದೆ. 

Foreplay tips: ನಿಮ್ಮ ರಾಶಿಗೆ ಯಾವ ಮುನ್ನಲಿವು ಹೆಚ್ಚು ಆನಂದ ತರುವುದು ಗೊತ್ತಾ..

ಬೀಗ(Keys)
ಸಾಮಾನ್ಯವಾಗಿ ಜನರಿಗೆ ಮನೆಯಿಂದ ಹೊರಡುವಾಗ ಕೀಗಳನ್ನು ಪರ್ಸ್‌ನಲ್ಲಿ ಹಾಕಿಕೊಳ್ಳುವ ಅಭ್ಯಾಸ. ಆದರೆ, ಕೀಗಳನ್ನು ಪರ್ಸ್‌ನಲ್ಲಿಟ್ಟುಕೊಳ್ಳುವುದರಿಂದ ಬದುಕಿಗೆ ನಕಾರಾತ್ಮಕತೆ ಎಳೆದುಕೊಂಡಂತಾಗುತ್ತದೆ. ಇದರಿಂದ ಕೂಡಾ ಆರ್ಥಿಕ ಸಮಸ್ಯೆಗಳು ಏಳುತ್ತವೆ. ಕೀಯೊಂದೇ ಅಲ್ಲ, ಯಾವುದೇ ರೀತಿಯ ಮೆಟಲ್ ವಸ್ತುಗಳನ್ನು ಪರ್ಸ್‌ನಲ್ಲಿಡಬಾರದು. 

undefined

ಹಳೆಯ ಬಿಲ್‌ಗಳು(Old Bills)
ಹೊರಗೆ ಹೋದಾಗ ಏನೇ ವಸ್ತುಗಳನ್ನು ಖರೀದಿಸಿದರೂ ಅದರ ಬಿಲ್ಲನ್ನು ಪರ್ಸ್‌ನಲ್ಲಿಟ್ಟುಕೊಳ್ಳುತ್ತೇವೆ. ನಂತರ ಬೇಕೋ, ಬೇಡವೋ ಎಂದು ನೋಡುವುದೂ ಇಲ್ಲ. ಅದು ಅಲ್ಲೇ ಜಾಗ ಮಾಡಿಕೊಂಡು ಕುಳಿತು ಬಿಡುತ್ತದೆ. ಆದರೆ, ಹಳೆಯ ಬಿಲ್‌ಗಳನ್ನು ಪರ್ಸ್‌ನಲ್ಲಿಡುವುದು ಅಶುಭ. ಲಕ್ಷ್ಮೀ ಇವರಿಂದ ದೂರ ಹೋಗುತ್ತಾಳೆ.

Vaastu for Couple Bedroom: ದಾಂಪತ್ಯ ಸುಖ ಸದಾ ಇರಬೇಕೆಂದ್ರೆ ನವವಿವಾಹಿತರ ಕೋಣೆ ಹೀಗಿರಲಿ

ಎಟಿಎಂ ಕಾರ್ಡ್(ATM card)
ಎಟಿಎಂ ಕಾರ್ಡ್‌ಗೆ ಪರ್ಸ್‌ಗಳಲ್ಲಿ ವಿಶೇಷ ಸ್ಥಳಾವಕಾಶವಿರುತ್ತದೆ. ಹಾಗಂಥ ಅದರಲ್ಲಿ ಕಾರ್ಡ್ ಇಟ್ಟುಕೊಳ್ಳುವುದನ್ನು ವಾಸ್ತು ಶಾಸ್ತ್ರ ಒಪ್ಪುವುದಿಲ್ಲ. ಕಾರ್ಡ್ ಪರ್ಸ್‌ನಲ್ಲಿದ್ದರೆ ಹಣದ ವೃಥಾ ಖರ್ಚು ಹೆಚ್ಚುತ್ತದೆ. ಸಿನಿಮಾ ಟಿಕೆಟ್ ಕೂಡಾ ವ್ಯಾಲೆಟ್‌ನಲ್ಲಿಡಬಾರದು. 

ಎಡ ಜೇಬು(left pocket)
ಪರ್ಸ್‌ನ್ನು ಯಾವತ್ತೂ ಪ್ಯಾಂಟ್‌ನ ಬಲ ಜೇಬಲ್ಲಿಟ್ಟುಕೊಳ್ಳಬಾರದು. ಇದರಿಂದ ಧನ ನಷ್ಟವಾಗುತ್ತದೆ. ಎಡಜೇಬಿನಲ್ಲಿಡುವುದರಿಂದ ಹಣ ಉಳಿತಾಯವಾಗುತ್ತದೆ. ಅಲ್ಲದೆ, ನೋಟುಗಳನ್ನು ಮಡಚಿ ಇಟ್ಟುಕೊಳ್ಳಬಾರದು. ಇಷ್ಟೇ ಅಲ್ಲ, ಮಲಗುವಾಗ ತಲೆ ಮೇಲೆ ಪರ್ಸ್ ಇಟ್ಟುಕೊಳ್ಳಬಾರದು. ಬದಲಿಗೆ ಸುರಕ್ಷಿತವಾಗಿ ಬೀರಿನೊಳಗೆ ಇಡಬೇಕು. 

ಹರಿದ ನೋಟುಗಳು(torn notes)
ಹರಿದ ನೋಟುಗಳಿದ್ದರೆ ಅವನ್ನು ಪರ್ಸ್‌ನಲ್ಲಿಟ್ಟುಕೊಳ್ಳಬಾರದು. ಉಪಯೋಗಕ್ಕೇ ಬಾರದ ಈ ನೋಟುಗಳನ್ನಿಟ್ಟುಕೊಂಡು ಪ್ರಯೋಜನವಾದರೂ ಏನು? ಸುಮ್ಮನೆ ಲಕ್ಷ್ಮೀಯನ್ನು ಅವಮಾನಿಸಿದಂತೆ. ಪರ್ಸ್ ಕೂಡಾ ಗಲೀಜಾಗರಬಾರದು. ಹಾಗೊಂದು ವೇಳೆ ಕೊಳಕಾಗಿದ್ದರೆ ತೊಳೆದು ಉಪಯೋಗಿಸಿ, ಇಲ್ಲವೇ ಪರ್ಸ್ ಹರಿದಿದ್ದರೆ ಹೊಸತನ್ನು ಖರೀದಿಸಿ. ಲಕ್ಷ್ಮೀ ನೆಲೆಸುವ ಸ್ಥಳ ಯಾವತ್ತೂ ಸ್ವಚ್ಛವಾಗಿರಬೇಕು. 

ನಾಣ್ಯ(coins)
ನಾಣ್ಯದ ಸದ್ದಿದ್ದಲ್ಲಿ ಲಕ್ಷ್ಮೀ ಇರುವುದಿಲ್ಲ ಎನ್ನಲಾಗುತ್ತದೆ. ಹಾಗಾಗಿ, ನಾಣ್ಯಗಳು ಹಾಗೂ ನೋಟನ್ನು ಒಟ್ಟಿಗೇ ಪರ್ಸ್‌ನಲ್ಲಿಡಬಾರದು. 

ಇವೇ ಅಲ್ಲದೆ, ಚೂಪಾದ ವಸ್ತುಗಳಾದ ಬ್ಲೇಡ್, ಚಾಕು, ಸೂಜಿ ಮುಂತಾದವನ್ನು ಕೂಡಾ ಪರ್ಸ್‌ನಲ್ಲಿಡಬಾರದು. ಇದರಿಂದ ಹಣದ ಹರಿವು ಹೆಚ್ಚುತ್ತದೆ. ವೃಥಾ ಖರ್ಚು ಮಾಡುವ ಅಭ್ಯಾಸ ಶುರುವಾಗುತ್ತದೆ. ವಾಸ್ತುಶಾಸ್ತ್ರದ ಪ್ರಕಾರ, ನೋಟುಗಳ ಹೊರತಾಗಿ ಅಕ್ಕಿಕಾಳನ್ನು ಪರ್ಸ್‌ನಲ್ಲಿಟ್ಟುಕೊಳ್ಳುವುದರಿಂದ ಹಣ ಉಳಿತಾಯವಾಗುವ ಜೊತೆಗೆ, ಲಕ್ಷ್ಮೀ ಜೊತೆಗೇ ಇರುತ್ತಾಳೆ. 

click me!