ಜ್ಯೋತಿಷ್ಯ ಶಾಸ್ತ್ರದಲ್ಲಿ ವಸ್ತುಗಳು ಪದೇ ಪದೇ ಕೆಳಗೆ ಬೀಳುವುದು ಅಶುಭ ಸಂಕೇತವಾಗಿರುತ್ತದೆ. ಇದು ಮುಂದೆ ವ್ಯಕ್ತಿಯ ಜೀವನದಲ್ಲಿ ತುಂಬಾ ಕೆಡುಕು ಎದುರಾಗುತ್ತದೆ ಎಂಬುದರ ಸೂಚನೆ ಆಗಿರುತ್ತದೆ. ಹಾಗಾಗಿ ಆ ವಸ್ತುಗಳು ಯಾವುದು ಎಂಬುದನ್ನು ತಿಳಿಯೋಣ
ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಭವಿಷ್ಯದ ಆಗು ಹೋಗುಗಳ ಬಗ್ಗೆ ತಿಳಿಯಬಹುದಾಗಿದೆ. ಕೇವಲ ಜಾತಕದಿಂದ ಅಷ್ಟೇ ಅಲ್ಲದೇ ಇನ್ನೂ ಅನೇಕ ವಿಚಾರಗಳಿಂದ ವ್ಯಕ್ತಿಯ ಜೀವನದಲ್ಲಿ ನಡೆಯುವ ಘಟನೆಗಳ ಬಗ್ಗೆ ತಿಳಿಯಬಹುದಾಗಿದೆ. ಹಲ್ಲಿ ಶಕುನ, ತುಳಸಿ ಗಿಡ ಬಾಡುವುದು, ಹೀಗೆ ಅನೇಕ ವಿಚಾರಗಳು ಮುಂದಿನ ದಿನಗಳಲ್ಲಿ ಬರುವ ಸುಖ ಮತ್ತು ಕಷ್ಟಗಳ ಬಗ್ಗೆ ತಿಳಿಸುತ್ತದೆ. ಹಾಗೆಯೇ ಕೆಲವು ವಸ್ತುಗಳು ಕೈಯಿಂದ ಜಾರಿ ಬಿದ್ದರೆ ಅದು ಅಪಶಕುನದ (Bad sign) ಸಂಕೇತವೆಂದು ಹೇಳಲಾಗುತ್ತದೆ. ಹಾಗಾದರೆ ಆ ವಸ್ತುಗಳು ಯಾವುವು ಎಂಬುದನ್ನು ತಿಳಿಯೋಣ...
ಶಾಸ್ತ್ರದ ಪ್ರಕಾರ ಕೆಲವು ವಸ್ತುಗಳು ಕೈಯಿಂದ ಜಾರಿ ನೆಲಕ್ಕೆ ಬಿದ್ದರೆ ಅದನ್ನು ಅತ್ಯಂತ ಕೆಟ್ಟದ್ದೆಂದು ಭಾವಿಸಲಾಗುತ್ತದೆ. ಈ ರೀತಿ ಆಗುವುದು ವ್ಯಕ್ತಿಯ ಕೆಲಸವು ಕೈಗೂಡುವುದಿಲ್ಲ, ಎಲ್ಲ ಕಾರ್ಯಗಳಲ್ಲೂ ಅಸಫಲತೆ ಉಂಟಾಗುತ್ತದೆ, ನಷ್ಟ ಸಂಭವಿಸುತ್ತದೆ ಎಂಬುದರ ಸಂಕೇತವಾಗಿರುತ್ತದೆ. ಹಾಗಾಗಿ ಆ ವಸ್ತುಗಳು ಯಾವುವು ಎಂಬುದನ್ನು ತಿಳಿಯುವುದು ಅತ್ಯಂತ ಮುಖ್ಯವಾಗಿರುತ್ತದೆ. ಅವುಗಳ ಬಗ್ಗೆ ತಿಳಿಯೋಣ...
ಜಾತಕದಲ್ಲಿ ಗೃಹ ಮೈತ್ರಿತ್ವ ಚೆನ್ನಾಗಿದ್ದರೆ ಮಾತ್ರ ಮದುವೆ ಮಾತು ಮುಂದುವರೆಯಲಿ!
ಉಪ್ಪು ಬೀಳುವುದು (Salt)
ಅಡುಗೆ ಮನೆಯ ಕೆಲಸವೆಂದರೆ ಸುಲಭವಲ್ಲ, ತುಂಬಾ ಗಡಿಬಿಡಿಯಿಂದ ಎಲ್ಲವನ್ನೂ ಮುಗಿಸಬೇಕಾಗಿರುತ್ತದೆ. ಹಾಗಾಗಿ ವಸ್ತುಗಳು ಕೈಜಾರಿ ಬೀಳುವುದು ಸರ್ವೇ ಸಾಮಾನ್ಯವೆಂದು ಅನ್ನಿಸುವುದು ಸಹಜ. ಹಾಗಂತ ಪದೇ ಪದೇ ಹಾಗೇ ಆಗುತ್ತಿದ್ದರೆ ಮಾತ್ರ ಅದು ಸಹಜವಾಗಿರುವುದಿಲ್ಲ. ಅದು ಬೇರೆ ಯಾವುದೋ ಅಶುಭದ ಸಂಕೇತವಾಗಿರುತ್ತದೆ. ಹಾಗೆಯೇ ಅಡುಗೆ ಮಾಡುವಾಗ ಉಪ್ಪು ಕೈ ಜಾರಿ ನೆಲ್ಲಕ್ಕೊ ಅಥವಾ ಟೇಬಲ್ ಮೇಲೋ ಬಿದ್ದರೆ ಅದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಇದು ಶುಕ್ರ ಗ್ರಹ (Venus) ಮತ್ತು ಚಂದ್ರ (Moon) ಗ್ರಹದ ಸ್ಥಿತಿಯನ್ನು ಸಂಕೇತಿಸುತ್ತದೆ. ಶುಕ್ರ ಮತ್ತು ಚಂದ್ರ ಗ್ರಹಗಳು ನೀಚ ಸ್ಥಿತಿಯಲ್ಲಿದ್ದಾಗ ಈ ರೀತಿ ಆಗುವುದಲ್ಲದೇ, ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಮೂಡುತ್ತವೆ.
ಎಣ್ಣೆ ಬೀಳುವುದು (Oil)
ಪದೇಪದೆ ಕೈಯಿಂದ ಎಣ್ಣೆ ಜಾರಿ ಕೆಳಗೆ ಬೀಳುತ್ತಿದೆ ಎಂದಾದರೆ ಅದು ಚಿಂತೆ ಮಾಡುವ ವಿಷಯವೇ ಆಗಿದೆ. ಇದು ಜೀವನದಲ್ಲಿ ಮುಂದೆ ಏನೋ ದೊಡ್ಡ ಸಮಸ್ಯೆ ಎದುರಾಗಲಿದೆ ಎಂಬುದರ ಮುನ್ಸೂಚನೆ ಆಗಿರುತ್ತದೆ. ಅಷ್ಟೇ ಅಲ್ಲದೆ ಸಾಲ ಪಡೆದುಕೊಳ್ಳುವಂತಹ ಪರಿಸ್ಥಿತಿ ಎದುರಾಗುತ್ತದೆ ಎಂಬುದನ್ನು ಸಹ ಇದು ಸೂಚಿಸುತ್ತದೆ. ಈ ರೀತಿ ಪದೇ ಪದೇ (Often) ಆಗುತ್ತಿದ್ದರೆ ಅದು ಹೆಚ್ಚಿನ ಸಮಸ್ಯೆಯನ್ನು ತಂದೊಡ್ಡುತ್ತವೆ.
ಆರತಿ ತಟ್ಟೆ ಕೆಳಗೆ ಬೀಳುವುದು (Arati)
ಪೂಜೆಗೆಂದು ಎತ್ತಿಟ್ಟಿರುವ ಪಾತ್ರೆ ಕೆಳಗೆ ಬೀಳುವುದು ಅಥವಾ ಆರತಿ ಮಾಡುತ್ತಿರುವಾಗ ಅದು ನೆಲಕ್ಕೆ ಬೀಳುವುದು ಇದು ಸಹ ಅಪಶಕುನವೇ ಆಗಿರುತ್ತದೆ. ದೇವರ ಕೃಪೆ ನಿಮ್ಮ ಮೇಲಿಲ್ಲ ಎನ್ನುವುದರ ಸಂಕೇತ ಇದಾಗಿರುತ್ತದೆ. ಅಷ್ಟೇ ಅಲ್ಲದೆ ಜೀವನದಲ್ಲಿ ಮುಂದೆ ಅತ್ಯಂತ ಕಠಿಣ ಸಮಯವು (Difficult time) ಎದುರಾಗುತ್ತದೆ ಎಂಬುದನ್ನು ಇದು ಸೂಚಿಸುತ್ತದೆ. ದೊಡ್ಡ ಅಶುಭದ ಸೂಚನೆ ಇದಾಗಿರುತ್ತದೆ.
ರಾಹು ಗ್ರಹ ಪರಿವರ್ತನೆ - ಈ 3 ರಾಶಿಯವರಿಗೆ ಈ ವರ್ಷವಿಡೀ ಭಾರಿ ಧನಲಾಭ!
ಆಹಾರ ಕೆಳಗೆ ಬೀಳುವುದು (Falling food item)
ಊಟ ಮಾಡುತ್ತಿರುವಾಗ ಅಥವಾ ಬಡಿಸುತ್ತಿರುವಾಗ ಪದೇಪದೆ ಆಹಾರ ಕೆಳಗೆ ಬೀಳುತ್ತಿದೆ ಎಂದಾದರೆ ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳಿರುತ್ತವೆ. ಮನೆಯಲ್ಲಿ ನಕಾರಾತ್ಮಕತೆಯ (Negative) ಹರಿವು ಹೆಚ್ಚಾಗಿದೆ ಎಂಬುದನ್ನು ಇದು ಸೂಚಿಸುತ್ತದೆ. ಅಷ್ಟೇ ಅಲ್ಲದೆ ಮನೆಗೆ ದಾರಿದ್ರ್ಯ ಬರುವ ಸೂಚನೆಯನ್ನು ಇದು ತೋರಿಸುತ್ತದೆ. ಪದೇಪದೆ ಆಹಾರ ಕೆಳಗೆ ಬಿಡುತ್ತಿರುವುದಕ್ಕೆ ವಾಸ್ತುದೋಷವೂ ಸಹ ಒಂದು ಕಾರಣವಾಗಿರುತ್ತದೆ. ಈ ರೀತಿ ಆದರೆ ಅದು ಮನೆಗೆ ಅತಿಥಿಗಳು ಬರುವ ಸೂಚನೆ ಎಂದು ಸಹ ಹೇಳಲಾಗುತ್ತದೆ.
ಹಾಲು ಕೆಳಗೆ ಬೀಳುವುದು (Falling milk)
ಹಾಲಿನ ಪಾತ್ರೆ ನೆಲಕ್ಕೆ ಬೀಳುವುದು ಅಥವಾ ಹಾಲು ಕಾಯಿಸುವಾಗ ಕೆಳಗೆ ಬಿದ್ದರೆ ಇದು ಅಶುಭದ ಸಂಕೇತ ಎಂದು ಹೇಳಲಾಗುತ್ತದೆ. ಹಾಲನ್ನು ಚಂದ್ರಗ್ರಹ ಕಾರಕವೆಂದು ಹೇಳಲಾಗುತ್ತದೆ. ಇದು ಆರ್ಥಿಕ ಸಂಕಷ್ಟದ (Economic difficulty) ಸೂಚನೆ ಸಹ ಆಗಿರುತ್ತದೆ.