Vastu Tips: ಅನಾರೋಗ್ಯ ದೂರವಾಗ್ಬೇಕೆಂದ್ರೆ ಮನೆಯ ಈ ಭಾಗದಲ್ಲಿ ಪಿರಮಿಡ್ ಇಟ್ನೋಡಿ

By Suvarna NewsFirst Published Jun 9, 2022, 4:26 PM IST
Highlights

ಆರೋಗ್ಯ, ಆಯಸ್ಸು, ಐಶ್ವರ್ಯ ಇದು ಪ್ರತಿಯೊಬ್ಬ ಬಯಸುವಂತಹದ್ದು. ಇದೆಲ್ಲವನ್ನೂ ನೀಡುವ ಶಕ್ತಿ ಮನೆಯಲ್ಲಿರುವ ಒಂದು ವಸ್ತುವಿಗಿದೆ. ಅದನ್ನು ಸರಿಯಾದ ದಿಕ್ಕಿನಲ್ಲಿಟ್ಟರೆ ನಿಮ್ಮ ಬಯಕೆ ಈಡೇರುತ್ತದೆ.
 

ಮನೆ (Home)ಯ ವಾಸ್ತು (Vastu) ಸರಿ ಇದ್ರೆ ಜೀವನ ಸುಖಮಯವಾಗಿರುತ್ತದೆ. ಮನೆ ವಾಸ್ತು ಎಂಬ ವಿಷ್ಯ ಬಂದಾಗ ಮನೆಯ ದಿಕ್ಕು (Direction), ಅಡುಗೆ ಮನೆ (Kitchen) ಹಾಗೂ ದೇವರ ಮನೆ ದಿಕ್ಕನ್ನು ಮಾತ್ರ ಅನೇಕರು ಪರಿಗಣಿಸ್ತಾರೆ. ಆದ್ರೆ ಅದು ಸರಿಯಲ್ಲ. ವಾಸ್ತು ಎಂಬ ವಿಷ್ಯ ಬಂದಾಗ ಮನೆಯ ದಿಕ್ಕು ಮಾತ್ರವಲ್ಲ ಮನೆಯಲ್ಲಿರುವ ಪ್ರತಿಯೊಂದು ವಸ್ತುವೂ ವಾಸ್ತುವಿನಲ್ಲಿ ಬರುತ್ತದೆ. ಮನೆಯಲ್ಲಿ ಯಾವ ವಸ್ತು ಎಲ್ಲಿರಬೇಕು ಹಾಗೆ ಹೇಗಿರಬೇಕು ಎಂಬ ನಿಯಮವಿದೆ. ಮನೆ ಹೊರಗೆ ಇರುವ ಚಪ್ಪಲಿಯಿಂದ ಹಿಡಿದು ಬೆಡ್ ರೂಮಿನಲ್ಲಿರುವ ಬೆಡ್ ವರೆಗೆ ಎಲ್ಲವೂ ವಾಸ್ತುವಿನ ಅಡಿ ಬರುತ್ತದೆ. ಇದ್ರಲ್ಲಿ ಸಣ್ಣಪುಟ್ಟ ಏರುಪೇರಾದ್ರೂ ಕೆಲವೊಮ್ಮೆ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ. 

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದರೆ, ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಸರಣ ಕಡಿಮೆಯಾಗುತ್ತದೆ. ಹಾಗೆಯೇ ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ. ಅನೇಕರು ಮನೆಯಲ್ಲಿ ಅಲಂಕಾರಿಕ ವಸ್ತುಗಳನ್ನು ಇಡ್ತಾರೆ. ಹಾಗೆಯೇ ಪಿರಮಿಡ್ ಗಳನ್ನು ಇಡ್ತಾರೆ. ಮನೆಯಲ್ಲಿ ಅದು ಇರಬೇಕು, ಕುಟುಂಬಸ್ಥರ ಸಂತೋಷಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ಮನೆಯ್ಲಿ ಪಿರಮಿಡ್ ಇಡ್ತಾರೆ. ಆದ್ರೆ ಪಿರಮಿಡ್ ಎಲ್ಲಿಡಬೇಕು ಎಂಬುದು ಅವರಿಗೆ ತಿಳಿದಿರೋದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಪಿರಮಿಡ್ ಅನ್ನು ಮನೆಯಲ್ಲಿ ಇಡುವುದರಿಂದ ಆಗುವ ಪ್ರಯೋಜನಗಳು ಮತ್ತು ಅದನ್ನು ಇಡಲು ಸರಿಯಾದ ದಿಕ್ಕು ಯಾವುದು ಎಂಬುದನ್ನು ನಾವಿಂದು ಹೇಳ್ತೇವೆ.

ಮನೆಯಲ್ಲಿ ಪಿರಮಿಡ್‌ ಗಳಿದ್ದರೆ ಆಗುವು ಪ್ರಯೋಜನಗಳು :  

ಪ್ರಗತಿಗೆ ಪಿರಮಿಡ್ : ಮನೆಯಲ್ಲಿ ಪಿರಮಿಡ್ ಇಡುವುದರಿಂದ ವ್ಯಕ್ತಿಯ ಜೀವನದ ಮೇಲೆ ಉತ್ತಮ ಪರಿಣಾಮವುಂಟಾಗುತ್ತದೆ. ವ್ಯಕ್ತಿಯು ವ್ಯಾಪಾರ, ಉದ್ಯೋಗ ಮತ್ತು ವೃತ್ತಿಯಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಲು ಮನೆಯಲ್ಲಿರುವ ಪಿರಮಿಡ್ ಸಹಕಾರಿ. 

ಮಿಥುನದವರು ಪಚ್ಚೆ ಧರಿಸಿದರೆ ಪಸಂದಾಗುವುದು ಭವಿಷ್ಯ!

ಆಯಾಸ ದೂರ : ಪಿರಮಿಡ್‌ನಲ್ಲಿ ಧನಾತ್ಮಕ ಶಕ್ತಿಯ ಪ್ರಮಾಣ ಹೆಚ್ಚಾಗಿರುತ್ತದೆ. ಇದು ಒತ್ತಡ ಅಥವಾ ದಣಿದ ವ್ಯಕ್ತಿಗೆ ನೆರವಾಗುತ್ತದೆ. ಪಿರಮಿಡ್ ಶಕ್ತಿ ಹರ್ತಿರವಾಗ್ತಿದ್ದಂತೆ ದಣಿದ ವ್ಯಕ್ತಿ ಮನಸ್ಸು ಶಾಂತವಾಗುತ್ತದೆ ಮತ್ತು ವ್ಯಕ್ತಿಯ ಆಯಾಸವು ದೂರವಾಗುತ್ತದೆ.

ಮಕ್ಕಳ ಏಕಾಗ್ರತೆ : ಮಕ್ಕಳ ಕೋಣೆಯಲ್ಲಿಯೂ ನೀವು ಪಿರಮಿಡ್ ಇಡಬಹುದು. ಇದು ಏಕಾಗ್ರತೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಮಕ್ಕಳ ಕೋಣೆಯಲ್ಲಿ ಪಿರಮಿಡ್ ಇಡಲು ಬಯಸಿದ್ದರೆ ಸ್ಫಟಿಕದ ಪಿರಮಿಡ್ ಇಡಿ. ಅದನ್ನು ಮಕ್ಕಳ ಅಧ್ಯಯನದ ಮೇಜಿನ ಮೇಲೆ ಇಡಿ.

ಪಿರಮಿಡ್ ಇಡಲು ಸರಿಯಾದ ದಿಕ್ಕು ಯಾವುದು ಗೊತ್ತಾ?: 

ಯಶಸ್ಸಿಗೆ ದಾರಿ : ಮನೆಯ ಪ್ರತಿಯೊಬ್ಬ ಸದಸ್ಯನಿಗೆ ಯಶಸ್ಸು ಸಿಗಲು ಪಿರಮಿಡ್ ಅನ್ನು ಯಾವಾಗಲೂ ಈಶಾನ್ಯದಲ್ಲಿ ಇಡಬೇಕೆಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. 

Numerology Today: ಇವರಿಗೆ ಅತಿ ಭಾವುಕತೆಯಿಂದ ಸಮಸ್ಯೆ

ನಿದ್ರೆ ಸಮಸ್ಯೆಗೆ ಪಿರಮಿಡ್ : ಮನೆಯಲ್ಲಿ ಯಾವುದೇ ವ್ಯಕ್ತಿಗೆ ನಿದ್ರೆಯ ಸಮಸ್ಯೆ ಕಾಡ್ತಿದ್ದರೆ ಮನೆಯಲ್ಲಿರುವ ಪಿರಮಿಡನ್ನು ನೈಋತ್ಯ ದಿಕ್ಕಿನಲ್ಲಿ ಇಡಿ. ಇದ್ರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಹಾಗೆಯೇ ನಿದ್ರೆ ಸರಿಯಾಗಿ ಆಗುತ್ತದೆ. 

ಆದಾಯ ಹೆಚ್ಚಳ : ಯಶಸ್ಸು ಬೇಕೆನ್ನುವವರು, ವ್ಯಾಪಾರದಲ್ಲಿ ನಿರಂತರ ಬೆಳವಣಿಗೆ ಬಯಸುವವರು ಕಚೇರಿ ಕ್ಯಾಬಿನ್‌ನಲ್ಲಿ ನೈಋತ್ಯ ದಿಕ್ಕಿನಲ್ಲಿ ಪಿರಮಿಡ್ ಇಡಬೇಕು.

ಆರೋಗ್ಯಕ್ಕೆ ಪಿರಮಿಡ್ : ಅನಾರೋಗ್ಯ ವ್ಯಕ್ತಿ ಹಾಸಿಗೆ ಮೇಲೆ ಪಿರಮಿಡ್ ಇಟ್ಟರೆ ಕೆಲವೇ ದಿನಗಳಲ್ಲಿ ನೀವು ಚೇತರಿಕೆ ಕಾಡಣಬಹುದು. 

ಧನಾತ್ಮಕ ಶಕ್ತಿ : ಸಕಾರಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳಲು ಪಿರಮಿಡನ್ನು ದಕ್ಷಿಣ-ಪೂರ್ಣ ದಿಕ್ಕಿನಲ್ಲಿ ಇಡುವುದು ಉತ್ತಮ.

ಮುಖ್ಯ ದ್ವಾರ : ಮನೆಯ ಮುಖ್ಯ ದ್ವಾರದಲ್ಲಿಯೂ ನೀವು ಪಿರಮಿಡ್ ಇಡಬಹುದು. ಆದ್ರೆ ಮುಖ್ಯದ್ವಾರ ದಕ್ಷಿಣ ದಿಕ್ಕಿನಲ್ಲಿದ್ದಾಗ ಮಾತ್ರ ಪಿರಮಿಡ್ ಅನ್ನು ನೇತುಹಾಕುವುದು ಮಂಗಳಕರವೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.
 

click me!