Vastu Tips: ಮನೆಯಲ್ಲಿ ಕಳ್ಳತನ ತಪ್ಪಿಸಲು ಹೀಗೆ ಮಾಡಿ

Published : Jun 08, 2022, 02:21 PM IST
Vastu Tips: ಮನೆಯಲ್ಲಿ ಕಳ್ಳತನ ತಪ್ಪಿಸಲು ಹೀಗೆ ಮಾಡಿ

ಸಾರಾಂಶ

ವಾಸ್ತು ದೋಷಗಳು ಹೆಚ್ಚಿದ್ದಾಗ ಮನೆಯಲ್ಲಿ ಕಳ್ಳತನವಾಗಬಹುದು. ಅದರಲ್ಲೂ ಮುಖ್ಯ ದ್ವಾರದ ವಾಸ್ತು ದೋಷವು ಈ ಸಮಸ್ಯೆಗೆ ಆಹ್ವಾನ ನೀಡುತ್ತದೆ. ಮನೆಯಲ್ಲಿ ಕಳ್ಳತನವಾಗದಂತೆ ನೋಡಿಕೊಳ್ಳಲು ವಾಸ್ತು ಟಿಪ್ಸ್ ಇಲ್ಲಿವೆ.

ಮನೆಯನ್ನು ಸುರಕ್ಷತೆಯ ತಾಣವಾಗಿಸಬೇಕೆಂದರೆ ಕೆಲವೊಂದು ವಾಸ್ತು ದೋಷಗಳನ್ನು ಸರಿಪಡಿಸಬೇಕಾಗುತ್ತದೆ. ಮನೆಯ ಮುಖ್ಯ ದ್ವಾರ, ಮನೆಯಲ್ಲಿರುವ ದ್ವಾರಗಳ ಸಂಖ್ಯೆ, ಬಾಗಿಲುಗಳ ಗಾತ್ರ, ಆಕಾರ- ಎಲ್ಲವೂ ಕಳ್ಳತನಕ್ಕೆ ಆಹ್ವಾನ ನೀಡಬಹುದು. ವಾಸ್ತು ಪ್ರಕಾರ, ಮನೆಯಿದ್ದಾಗ ಮನೆಯ ಬಾಗಿಲೆಲ್ಲಿರಬೇಕು, ಅದರ ಗಾತ್ರ ಎಷ್ಟಿರಬೇಕು, ಎಷ್ಟು ಸಂಖ್ಯೆಯ ಬಾಗಿಲಿರಬೇಕು ಎಲ್ಲವನ್ನೂ ಹೇಳಲಾಗುತ್ತದೆ. ಬಾಗಿಲುಗಳ ಕಡೆ ಕೊಡುವ ಈ ವಿಶೇಷ ಗಮನವು ಮನೆಯನ್ನು ಹೆಚ್ಚು ಸುರಕ್ಷಿತ ತಾಣವಾಗಿಸುತ್ತದೆ. 
ಹಾಗಾದರೆ ಮನೆಯ ಸುರಕ್ಷತೆ ಹೆಚ್ಚಿಸಲು, ಕಳ್ಳತನಗಳಾಗದಂತೆ ತಡೆಯಲು ವಾಸ್ತುವಿನ ಈ ನಿಯಮಗಳನ್ನು ಪಾಲಿಸಿ. 

  • ನಿಮ್ಮ ಬೆಲೆ ಬಾಳುವ ವಸ್ತುಗಳನ್ನು ಮತ್ತು ಹಣವನ್ನು ಮನೆಯ ವಾಯುವ್ಯ(North-west) ಮೂಲೆಯಲ್ಲಿ ಇಡಬೇಡಿ. ಅದು ದರೋಡೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.
  • ನಿಮ್ಮ ಸೇವಕರಿಗೆ ಮನೆಯ ನೈಋತ್ಯ(South-west) ಪ್ರದೇಶವನ್ನು ಬಳಸಲು, ಓಡಾಡಲು ನೀಡಬೇಡಿ. ಏಕೆಂದರೆ ಇದು ಮನೆ ಕೆಲಸದವರಲ್ಲಿ ದರೋಡೆ ಮಾಡುವ ಪ್ರವೃತ್ತಿಯನ್ನು ಹೆಚ್ಚಿಸಿ ಆಪಾಯಕ್ಕೆ ಕಾರಣವಾಗುತ್ತದೆ. 
  • ಪ್ರವೇಶ ದ್ವಾರ ಅಥವಾ ಮುಖ್ಯ ಬಾಗಿಲು(main door) ಮನೆಯ ಇತರ ಬಾಗಿಲುಗಳಿಗಿಂತ ದೊಡ್ಡದಾಗಿರಬೇಕು.

    ಬ್ರಾಹ್ಮೀ ಮುಹೂರ್ತದಲ್ಲಿ ಎದ್ದರೆ ಹೆಚ್ಚುತ್ತೆ ಏಕಾಗ್ರತೆ.. ಕಾರಣ ಇಲ್ಲಿದೆ
     
  • ಮನೆಯ ಒಟ್ಟು ಬಾಗಿಲುಗಳ ಸಂಖ್ಯೆ 2, 4, 6, 8 ಮತ್ತು 12 ಹೀಗೆ ಸಮ ಸಂಖ್ಯೆಯಲ್ಲಿ ಇರಬೇಕು. ಆದರೆ ಹತ್ತು ಬಾಗಿಲುಗಳನ್ನು ತಪ್ಪಿಸಿ, ಏಕೆಂದರೆ ಹತ್ತು ಬಾಗಿಲುಗಳು ಅಶುಭ.
  • ಮುಖ್ಯ ಬಾಗಿಲು ಎರಡು ತೆರೆಯುವ ಶಟರ್‌ಗಳನ್ನು ಹೊಂದಿರಬೇಕು.
  • ಪೂರ್ವ ಅಥವಾ ಉತ್ತರದಲ್ಲಿ ಒಂದೇ ಬಾಗಿಲು ಒಳ್ಳೆಯದು ಮತ್ತು ಮತ್ತು ದಕ್ಷಿಣದಲ್ಲಿ ಒಂದೇ ಬಾಗಿಲಿರುವುದು ಅಶುಭವಾಗಿರುತ್ತದೆ.
  • ಬಾಗಿಲುಗಳು ನೇರ ಸಾಲಿನಲ್ಲಿರಬಾರದು.
  • ಪವಿತ್ರ ಚಿಹ್ನೆ ಓಂ, ಸ್ವಸ್ತಿಕ್, ಲಕ್ಷ್ಮಿ ಮತ್ತು ಗಣೇಶನ ಚಿತ್ರಗಳು ಅಥವಾ ಅಲಂಕಾರಿಕ ತುಣುಕುಗಳನ್ನು ಮುಖ್ಯ ದ್ವಾರದ ಮೇಲೆ ಇರಿಸಿ.
  • ನೀವು ಒಳಗೆ ಪ್ರವೇಶಿಸಿದಾಗ ಗಣೇಶ ಮೂರ್ತಿ(Ganesh idol)ಯನ್ನು ನೋಡುವ ರೀತಿಯಲ್ಲಿ ಗಣೇಶ ಮೂರ್ತಿಯನ್ನು ಹೊರಗಿನ ಬಾಗಿಲಲ್ಲಿ ಇಡುವುದನ್ನು ತಪ್ಪಿಸಿ. ಬದಲಿಗೆ ಒಳಭಾಗದಲ್ಲಿ ಇರಿಸಿ. ಅಂದರೆ ನೀವು ಮುಖ್ಯ ಬಾಗಿಲಿನಿಂದ ಹೊರಗೆ ಹೋಗುವಾಗ ಗಣೇಶ ಮೂರ್ತಿಯನ್ನು ಕಾಣುವಂತಿರಬೇಕು.
  • ಮುಂಭಾಗ/ಮುಖ್ಯ ದ್ವಾರದಲ್ಲಿ ಯಾವುದೇ ಅಡಚಣೆ(obstruction)ಯಾಗದಂತೆ ನೋಡಿಕೊಳ್ಳಿ.
  • ಓರೆಯಾದ, ವೃತ್ತಾಕಾರದ ಅಥವಾ ಸ್ಲೈಡಿಂಗ್ ಗೇಟ್ ಅನ್ನು ತಪ್ಪಿಸಿ.
  • ಭವಿಷ್ಯದಲ್ಲಿ ಯಾವುದೇ ಅಪಾಯವಾಗದಂತೆ ಬಾಗಿಲುಗಳನ್ನು ಸರಿಯಾದ ದಿಕ್ಕಿನಲ್ಲಿ ಇರಿಸಬೇಕು. ಯಾವುದೇ ಬಾಗಿಲನ್ನು ವಿಶೇಷವಾಗಿ ಮುಖ್ಯ ದ್ವಾರವನ್ನು ತಪ್ಪು ದಿಕ್ಕಿನಲ್ಲಿ ಇರಿಸಿದರೆ, ಒಬ್ಬ ವ್ಯಕ್ತಿಯು ಆಗಾಗ್ಗೆ ಕೆಲವು ತೊಡಕುಗಳನ್ನು ಅನುಭವಿಸಬೇಕಾಗುತ್ತದೆ - ಉದಾಹರಣೆಗೆ ದರೋಡೆ, ದ್ವೇಷ, ರೋಗಗಳು, ಅವನತಿ, ಹಣದ ನಷ್ಟ ಮತ್ತು ಸಂತಾನ ನಷ್ಟ ಇತ್ಯಾದಿ.
  • ಮನೆಯಲ್ಲಿ ಯಾವುದೇ ಕ್ರೂರವೆನಿಸೋ ಚಿತ್ರಗಳನ್ನು ನೇತು ಹಾಕಬೇಡಿ. 

    Aquarius to Capricorn: ಈ ನಾಲ್ಕು ರಾಶಿಯವರು ಆನ್‌ಲೈನ್ ಫೇಕ್ ಪ್ರೊಫೈಲ್ ವೀರರು!
     
  • ಬಾಗಿಲುಗಳ ಮೇಲೆ ಕಮಲದ ಹೂವಿನ ಮೇಲೆ ಕುಳಿತಿರುವ ಲಕ್ಷ್ಮಿಯ ಚಿತ್ರವಿದ್ದರೆ ಒಳ್ಳೆಯದು.
  • ಮನೆ ಮತ್ತು ಅಂಗಡಿಯಲ್ಲಿ ಎಲ್ಲಿ ಹಣ ಇಡುತ್ತೀರೋ ಆ ಜಾಗದಲ್ಲಿ ನೀರು ಮತ್ತು ನೀರಿಗೆ ಸಂಬಂಧಿಸಿದ ವಸ್ತುಗಳನ್ನಿಡಬೇಡಿ. 
  • ಹಣವನ್ನಿಡಲು ಕಂದು ಬಣ್ಣದ ಅಲಮಾರಿ ಉತ್ತಮ. ನೀಲಿ ಬಣ್ಣ ಬೇಡ. ಏಕೆಂದರೆ ಇದು ನೀರಿನ ಬಣ್ಣ. ಇದರಲ್ಲಿ ಹಣ ಸರಿಯಾಗಿ ಉಳಿಯೋದಿಲ್ಲ. 

    ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

PREV
click me!

Recommended Stories

Vastu for Wealth: ಈ 5 ವಸ್ತು ನಿಮ್ಮ ಮನೆಯಲ್ಲಿದ್ದರೆ ಸದಾ ತಿಜೋರಿ ತುಂಬಿರುತ್ತೆ
Vastu Tips: ಇವನ್ನೆಲ್ಲಾ ಫ್ರಿಡ್ಜ್ ಮೇಲಿಟ್ಟರೆ ನಿಮ್ಮ ಪರ್ಸ್ ಖಾಲಿಯಾಗೋದು ಗ್ಯಾರಂಟಿ, ಹುಷಾರು