Vaastu Tips for Health: ತಪ್ಪದ ಅನಾರೋಗ್ಯ, ಉದ್ಗೇಗಕ್ಕೆ ಇಲ್ಲಿವೆ ಪರಿಹಾರ

By Suvarna News  |  First Published Nov 23, 2021, 4:43 PM IST

ಒಂದಲ್ಲಾ ಒಂದು ರೀತಿಯಲ್ಲಿ ಆರೋಗ್ಯ ಸಮಸ್ಯೆ ಕಾಡುತ್ತಿದೆ ಎಂದಾದರೆ ಅದಕ್ಕೆ ಹಲವು ಕಾರಣಗಳು ಇರುತ್ತವೆ. ಅವುಗಳಲ್ಲಿ ವಾಸ್ತು ದೋಷವೂ ಒಂದಾಗಿರುತ್ತವೆ. ನೀವು ಮನೆಯಲ್ಲಿ ಮಾಡುವ ಕೆಲವು ತಪ್ಪುಗಳು ಇದಕ್ಕೆ ಕಾರಣ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅವುಗಳ ಬಗ್ಗೆ ನೋಡೋಣ.


ಆರೋಗ್ಯವೇ (Health) ಭಾಗ್ಯ ಎಂಬ ನಾಣ್ಣುಡಿಯಂತೆ ಆರೋಗ್ಯವೊಂದಿದ್ದರೆ ಸಾಕು ಏನನ್ನು ಬೇಕಾದರೂ ಪಡೆಯಬಹುದು. ಹಣವಿದ್ದರೆ (Money) ಏನನ್ನೂ ಪಡೆಯಬಹುದು ಎಂದು ಹೇಳಬಹುದು, ಆದರೆ ಆರೋಗ್ಯವನ್ನಲ್ಲ. ಸದೃಢ ದೇಹವನ್ನು (Body) ಹೊಂದಿ ಆರೋಗ್ಯಕರ ಜೀವನ (Life) ನಡೆಸುತ್ತಿದ್ದಾರೆಂದರೆ ಅದನ್ನು ನೆಮ್ಮದಿಯ ಬದುಕು ಎಂದು ಹೇಳಬಹುದು. ಆದರೆ, ಆರೋಗ್ಯವೇ ಉತ್ತಮವಾಗಿಲ್ಲದಿದ್ದರೆ..? ಏನಿದ್ದರೂ ಏನು ಪ್ರಯೋಜನ ಅನ್ನುವಂತಾಗಿಬಿಡುತ್ತದೆ. ಇರುವುದನ್ನು ಅನುಭವಿಸಲಾದರೂ ಆರೋಗ್ಯ ಉತ್ತಮವಾಗಿರಬೇಕಲ್ಲವೇ..? ಅನಾರೋಗ್ಯ (Illness), ಕೆಲಸ (Job), ಹಣ ನಷ್ಟ (Loss of money), ಒತ್ತಡ (Stress) ಇತ್ಯಾದಿಗಳಿಂದ ಬಳಲುವವರು ಹಲವರಿದ್ದಾರೆ. ಇನ್ನು ಈ ಆರೋಗ್ಯಕ್ಕೂ ನಮ್ಮ ಆಹಾರ (Food) ಮತ್ತು ದೈನಂದಿನ ದಿನಚರಿಗೂ ನೇರವಾದ ಸಂಬಂಧವಿದೆ. ಕೆಲವರು ಆಹಾರ ಹಾಗೂ ಶ್ರಮದ ಮೂಲಕ ತಮ್ಮ ದೇಹ ಮತ್ತು ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ (Care) ಮತ್ತು ಮುಂಜಾಗ್ರತೆಯನ್ನು (Precaution) ವಹಿಸುತ್ತಾರೆ. ಇವರಿಗೆ ಸಮತೋಲಿತ (Balanced) ಆಹಾರ ಮತ್ತು ನಿಯಮಿತ ವ್ಯಾಯಾಮದ (Exercise) ನಡುವೆಯೂ ಆರೋಗ್ಯವು ಹದಗೆಡಲು ಪ್ರಾರಂಭಿಸುತ್ತದೆ. ಇನ್ನು ಎಷ್ಟೇ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದರೂ ರೋಗವು ವಾಸಿಯಾಗುವುದಿಲ್ಲ. ಕುಟುಂಬದ (Family) ಯಾರಾದರೂ ಒಬ್ಬರಿಗೆ ಸದಾ ಇಂಥ ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ಸಮಯಕ್ಕೆ ಸರಿಯಾಗಿ ಔಷಧಿಗಳನ್ನು (Medicine) ತೆಗೆದುಕೊಂಡರೂ ಆರೋಗ್ಯದಲ್ಲಿ ಮಾತ್ರ ಸುಧಾರಣೆ ಕಾಣಿಸುವುದಿಲ್ಲ. ಇದರ ಹಿಂದೆ ಇನ್ನೂ ಅನೇಕ ಕಾರಣಗಳಿರಬಹುದು. ಜಾತಕ (Kundali) ದೋಷ ಸೇರಿದಂತೆ ಇನ್ನಿತರ ಸಮಸ್ಯೆಗಳೂ ಇದ್ದಿರಬಹುದು. ಆದರೆ, ವಾಸ್ತುದೋಷ ಸಹ ಅನಾರೋಗ್ಯಗಳಿಗೆ ಕಾರಣವಾಗುತ್ತವೆ. ಹೀಗಾಗಿ ನಮ್ಮ ಮನೆಯ ಸುತ್ತಮುತ್ತ ಸ್ವಲ್ಪ ಗಮನಹರಿಸಿ, ಕೆಲವು ಬದಲಾವಣೆಗಳನ್ನು (Changes) ತಂದುಕೊಳ್ಳಿ, ನಿಮ್ಮ ಆರೋಗ್ಯವನ್ನು ಸುರಕ್ಷಿತವಾಗಿಟ್ಟುಕೊಳ್ಳಿ. ಹಾಗಾದರೆ ಏನು ಮಾಡಬೇಕು ಎಂಬ ಬಗ್ಗೆ ನೋಡೋಣ ಬನ್ನಿ... 

ಈಶಾನ್ಯದಲ್ಲಿದೆ ಕಂಟಕ (Northeast)
ಮನೆಯ ಈಶಾನ್ಯ ದಿಕ್ಕಿನಲ್ಲಿ ವಾಷ್ ರೂಂ (Washroom ) ನಿರ್ಮಿಸಬಾರದು. ಒಂದು ವೇಳೆ ಈ ಭಾಗದಲ್ಲಿ ವಾಷ್ ರೂಂ ಇದೆ ಎಂದಾದರೆ, ಮನೆಯ ಸದಸ್ಯರು ಒಂದಲ್ಲಾ ಒಂದು ರೋಗಗಳಿಗೆ ತುತ್ತಾಗುತ್ತಾರೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಇನ್ನು ಈಶಾನ್ಯ ಭಾಗದಲ್ಲಿ ಮೆಟ್ಟಿಲುಗಳು (Steps) ಸಹ ಇರಬಾರದು. ಈ ಭಾಗದಲ್ಲಿ ಮೆಟ್ಟಿಲುಗಳಿದ್ದರೆ ಅದು ಅಶುಭ ಎಂದು ಪರಿಗಣಿಸಲಾಗಿದೆ. ಇಂತಹ ಮನೆಯಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವುದಲ್ಲದೆ, ಹಣವೂ (Money) ಸಹ ಅಷ್ಟೇ ಖರ್ಚಾಗುತ್ತದೆ. ನಿಮ್ಮ ಮನೆಯಲ್ಲಿ ಇಂತಹ ವಾಸ್ತು ದೋಷವಿದ್ದರೆ ಕೂಡಲೇ ಸಂಬಂಧಪಟ್ಟ ತಜ್ಞರನ್ನು ಸಂಪರ್ಕಿಸಿ ವಾಸ್ತು ದೋಷವನ್ನು ನಿವಾರಿಸಿಕೊಳ್ಳುವುದು ಒಳಿತು. 

ಮನೆ ಬಾಗಿಲ ಮುಂದೆ ಮಣ್ಣಿನ ಗುಂಡಿ (mud pit) ಇರಬಾರದು
ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಮನೆಯ ಮುಖ್ಯ ಬಾಗಿಲಿನ ಮುಂದೆ ಗುಂಡಿ ಅಥವಾ ಮಣ್ಣಿನ ರಾಶಿ ಇದ್ದರೆ, ಕುಟುಂಬದ ಸದಸ್ಯರ ಮಾನಸಿಕ ಆರೋಗ್ಯದ (Mental Health) ಮೇಲೆ ಭಾರೀ ಪರಿಣಾಮವನ್ನು (Effect) ಬೀರಲಿದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಇದರಿಂದ ಕುಟುಂಬದ ಸದಸ್ಯರಿಗೆ ಒತ್ತಡ ಅಥವಾ ಇನ್ನಾವುದೋ ಮಾನಸಿಕ ಕಾಯಿಲೆ ಬರಬಹುದು ಎಂದು ಹೇಳಲಾಗುತ್ತದೆ. ಹೀಗಾಗಿ ಮನೆಯ ಮುಖ್ಯದ್ವಾರದ ಮುಂದೆ ಅಪ್ಪಿತಪ್ಪಿಯೂ ಗುಂಡಿಗಳು ಇರದಂತೆ ನೋಡಿಕೊಳ್ಳಿ, ಮಣ್ಣಿನ ರಾಶಿ ಇದ್ದರೆ ಅದನ್ನೂ ಸರಿಪಡಿಸುವುದು ಉತ್ತಮ. 

ಇದನ್ನು ಓದಿ: A, K, P, R ನಿಂದ ಶುರುವಾಗೋ ಹೆಸರಿನ ಹುಡುಗರು ತುಂಬಾ ಕೇರಿಂಗ್..!

ಹಾಸಿಗೆ (Bed) ಮುಂದೆ ಬೇಡ ಕನ್ನಡಿ (Mirror)
ಮಲಗುವ (Sleep) ಕೋಣೆಯಲ್ಲಿ (Room) ಅಪ್ಪಿತಪ್ಪಿಯೂ ಮೈ-ಮುಖ (Body – Face) ಕಾಣುವಂತೆ ಕನ್ನಡಿಯನ್ನು ಅಳವಡಿಸಿಕೊಳ್ಳಬೇಡಿ. ಅಂದರೆ ಕೋಣೆಯ ಬಾಗಿಲಿನ ಮುಂದೆ ಕನ್ನಡಿಯನ್ನು ಅಳವಡಿಸಬಾರದು. ಮಲಗುವಾಗ ದೇಹದ ಯಾವುದೇ ಭಾಗವೂ ಸಹ ಕನ್ನಡಿಯಲ್ಲಿ ಕಾಣಿಸಿಕೊಳ್ಳಬಾರದು. ಹೀಗೆ ಕಾಣಿಸಿಕೊಂಡರೆ ಅಂಥವರು ರೋಗಗಳಿಗೆ ತುತ್ತಾಗುತ್ತಾರೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಹಾಗಾಗಿ ಹಾಸಿಗೆ ಮುಂದೂ ಸಹ ಕನ್ನಡಿ ಇರಬಾರದು. ಇದರಿಂದ ಮಾನಸಿಕ ಆರೋಗ್ಯ (Mental Health) ಹದಗೆಡುವ ಸಾಧ್ಯತೆ ದಟ್ಟವಾಗಿರಲಿದೆ. ಜೊತೆಗೆ ಗಂಡ-ಹೆಂಡತಿಯ (Husband and Wife) ನಡುವೆ ಬಿರುಕು ಉಂಟು ಮಾಡುವ ಸಂಭವವೂ ಹೆಚ್ಚಿರುತ್ತದೆ. ಇನ್ನು ಮಲಗುವ ಕೋಣೆಯಲ್ಲಿ ದೇವರ (God) ಗುಡಿಯನ್ನು ಇಟ್ಟುಕೊಳ್ಳಬಾರದು. 

ಇದನ್ನು ಓದಿ: ಈ ದಿನ ಹುಟ್ಟಿದ ಹುಡುಗಿಯರಿಂದ ಗಂಡಂದಿರಿಗೆ ಅದೃಷ್ಟ..!

ಪೂರ್ವ ದಿಕ್ಕಿನಲ್ಲಿ (East Direction) ಬೇಡ ಎತ್ತರ (No Height) 
6ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಪೂರ್ವ ಭಾಗ ಎತ್ತರವಾಗಿದ್ದರೆ ಅಂತಹ ಮನೆಯಲ್ಲಿರುವ ಕುಟುಂಬ ಸದಸ್ಯರು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬಹುದು. ಅಂತೆಯೇ ಮಕ್ಕಳ ಆರೋಗ್ಯ ಸಮಸ್ಯೆಗಳೂ ಕಾಡಬಹುದು. ಇದರ ಜೊತೆಗೆ  ಪೂರ್ವ ದಿಕ್ಕಿನ ಉನ್ನತ ಸ್ಥಾನವು ಆರ್ಥಿಕ ಸಮಸ್ಯೆಗಳ ಜೊತೆಗೆ ಮಾನಸಿಕ ಸಮಸ್ಯೆಗಳನ್ನು ಉಂಟುಮಾಡಬಹುದು.

click me!