ದೀಪಾವಳಿಯಲ್ಲಿ ಜೇಡಿಮಣ್ಣಿನ ಈ ವಸ್ತುಗಳನ್ನು ಮನೆಗೆ ತನ್ನಿ, ಅದೃಷ್ಟವಂತರಾಗಿ...!

By Adarsha A  |  First Published Nov 4, 2021, 5:00 AM IST

ದೀಪಾವಳಿ ಹಬ್ಬ ಬಂದಿದೆ, ತಯಾರಿ ಜೋರಾಗಿಯೇ ನಡೆದಿದೆ. ಆದರೆ, ಪುರಾತನ ಆಚರಣೆಯನ್ನು ಮರೆತಿದ್ದೇವೆ. ಅದರಲ್ಲೂ ಮಣ್ಣಿನಿಂದ ಮಾಡಿದ ವಸ್ತುಗಳನ್ನು ಮನೆಗೇ ಸೇರಿಸುವುದಿಲ್ಲ. ಆದರೆ, ವಾಸ್ತು ಪ್ರಕಾರ ಜೇಡಿಮಣ್ಣಿನಿಂದ ಮಾಡಿದ ಈ ವಸ್ತುಗಳನ್ನು ಮನೆಗೆ ತಂದರೆ ಅದೃಷ್ಟ ಒಲಿಯಲಿದೆ ಎಂದು ಹೇಳಲಾಗುತ್ತದೆ. ಹಾಗಾದರೆ, ಅವು ಯಾವುವು ಎಂಬ ಬಗ್ಗೆ ನೋಡೋಣ


ಹಿಂದಿನ ದಿನಗಳಲ್ಲಿ ನಮ್ಮ ಪೂರ್ವಜರು ಜೇಡಿಮಣ್ಣಿನಿಂದ (clay)  ಮಾಡಿದ ಪಾತ್ರೆಗಳನ್ನು (utensils) ಬಳಸುತ್ತಿದ್ದರು. ದಿನ ನಿತ್ಯ ಬಳಕೆಗೆ ಬೇಕಾಗುವ ಎಲ್ಲ ಅಗತ್ಯತೆಗಳಿಗೆ ಈ ಮಣ್ಣಿನ ಪಾತ್ರೆಗಳು ಬಳಕೆಗೆ ಬರುತ್ತಿತ್ತು. ಆದರೆ, ಆಧುನಿಕ (Modern) ಕಾಲದ ಭರಾಟೆಗೆ ಸಿಲುಕಿ ಮಣ್ಣಿನ ಮಡಕೆಗಳು ಮತ್ತು ಪಾತ್ರೆಗಳು ಮಾಯವಾದವು. ಅದರ ಜಾಗಕ್ಕೆ ಲೋಹ ಮತ್ತು ಪ್ಲಾಸ್ಟಿಕ್ (Metal and plastic) ಪಾತ್ರೆಗಳು ಬಂದವು. ನಮಗೆ ಜೇಡಿಮಣ್ಣಿನಿಂದ ಮಾಡಿದ ವಸ್ತುಗಳ ಮಹತ್ವವೂ ತಿಳಿಯದಾದವು.

ಜೇಡಿಮಣ್ಣಿನ ಕಲಾಕೃತಿಗಳಿಗೆ ವಾಸ್ತು ಶಾಸ್ತ್ರದಲ್ಲಿ (Vastu Shastra) ಮಹತ್ವದ ಸ್ಥಾನವಿದೆ. ಇದು ಮಣ್ಣಿನ ಮಡಕೆಗಳನ್ನು ಬಳಸುವುದರ ಹಿಂದಿರುವ ಮಹತ್ವವನ್ನು ವಿವರಿಸುತ್ತದೆ. ಜೇಡಿಮಣ್ಣಿನಿಂದ ಮಾಡಿದ ವಸ್ತುಗಳು ಸಮೃದ್ಧಿ ಮತ್ತು ಅದೃಷ್ಟದ ಸಂಕೇತ (Prosperity and Good Luck) ಎಂದು ಹೇಳಲಾಗಿದೆ. ಬಣ್ಣಗಳ ಹಬ್ಬ ದೀಪಾವಳಿ (Diwali), ಇದು ಬೆಳಕಿನ ಹಬ್ಬ (Festival), ಎಲ್ಲರಿಗೂ ಬೆಳಕನ್ನು ನೀಡುವ ಹಬ್ಬ, ಎಲ್ಲರ ಬಾಳಲ್ಲಿ ಬೆಳಕನ್ನು ತರುವ ಹಬ್ಬ. ಈ ಹಬ್ಬದಂದು ನೀವು ನಿಮ್ಮ ಮನೆಗೆ ಅದೃಷ್ಟವನ್ನು (Fortune) ಹೊತ್ತೊಯ್ಯಬಹುದು. ಇದಕ್ಕೆ ನೀವು ತೀರಾ ಏನೂ ಮಾಡಬೇಕಿಲ್ಲ. ವಾಸ್ತು ಶಾಸ್ತ್ರದ ಈ ಸಿಂಪಲ್ ಟ್ರಿಕ್ಸ್ (Tricks) ಅನ್ನು ಬಳಸಿದರೆ ಸಾಕು.. ಮನೆಯಲ್ಲಿ ಸಮೃದ್ಧಿ ನೆಲಸಲು ಮತ್ತು ಅದೃಷ್ಟಕ್ಕಾಗಿ ಜೇಡಿಮಣ್ಣಿನಿಂದ ತಯಾರಿಸಿದ ಈ ವಸ್ತುಗಳನ್ನು ಮನೆಗೆ ತನ್ನಿ (Bring home). ಅವುಗಳು ಯಾವುವು ಎಂಬುದನ್ನು ನೋಡೋಣ ಬನ್ನಿ...

ಇದನ್ನು ಓದಿ: ದೀಪಾವಳಿ ನಂತ್ರ ಅದೃಷ್ಟ ಖುಲಾಯಿಸ್ಬೇಕಿದ್ರೆ, ವಾಸ್ತುಪ್ರಕಾರ ಹೀಗೆ ಮಾಡಿ...

Tap to resize

Latest Videos

ಮಣ್ಣಿನ ಹೂಜಿ (ಕ್ಲೇ ಪಿಚ್ಚರ್ - Clay Pitcher)
ಮಣ್ಣಿನ ಮಡಕೆಯ ಅಥವಾ ಹೂಜಿಯ ನೀರು ಎಂದರೆ ಬಲು ತಂಪು ಮತ್ತು ರುಚಿ. ಇದನ್ನು ಬಡವರ ರೆಫ್ರಿಜಿರೇಟರ್ ಅಂತಲೂ ಕರೆಯುತ್ತಾರೆ. ಈ ಹಿಂದೆ ನಮ್ಮ ಹಿಂದಿನವರು ಮಣ್ಣಿನ ಮಗ್‌ನಲ್ಲಿಟ್ಟು ಕುಡಿಯುತ್ತಿದ್ದರು. ಆದರೆ, ಆಧುನಿಕ ಕಾಲಘಟ್ಟದಲ್ಲಿ (Modern time) ದಿನ ಕಳೆದಂತೆ ತಂತ್ರಜ್ಞಾನಗಳ (Technology) ಬಳಕೆ ಹೆಚ್ಚಾಯಿತು. ರೆಫ್ರಿಜರೇಟರ್ (Refrigerator) ಬಳಕೆ ಜಾಸ್ತಿಯಾಗಿ ಇವುಗಳೆಲ್ಲ ಕಾಣೆಯಾದವು. ಜೇಡಿಮಣ್ಣಿನ ಹೂಜಿಯಲ್ಲಿ ನೀರು ಬಳಸಿದರೆ ಆರೋಗ್ಯಕ್ಕೂ (Health) ಉತ್ತಮ ಎಂಬ ಮಾತಿದೆ. ಇನ್ನು ವಾಸ್ತು ಪ್ರಕಾರವಾಗಿ ಇದನ್ನು ನೋಡುವುದಾದರೆ, ಮಣ್ಣಿನ ಹೂಜಿಯನ್ನು ಮನೆಯಲ್ಲಿ ತಂದಿಟ್ಟುಕೊಂಡರೆ ಜೀವನದಲ್ಲಿ ಸಂತೋಷ (Happiness) ಮತ್ತು ಸಮೃದ್ಧಿಯನ್ನು (Prosperity) ಕಾಣಬಹುದು.  ವಾಸ್ತುವಿನ ಅನುಸಾರ ಮಣ್ಣಿನ ಹೂಜಿಯನ್ನು ಮನೆಯ ಉತ್ತರ ದಿಕ್ಕಿನಲ್ಲಿ ಇಡಬೇಕು. ಅದರಲ್ಲಿ ಸದಾ ನೀರು (Water) ತುಂಬಿರಬೇಕು ಎಂಬುದು ಮುಖ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶ. ಹೀಗೆ ಮಾಡುವುದರಿಂದ ನಕಾರಾತ್ಮಕತೆ (Negativity) ದೂರವಾಗಲಿದೆ. 

ಮಣ್ಣಿನ ಪ್ರತಿಮೆಗಳು ಅಥವಾ ವಿಗ್ರಹಗಳು (Clay Statues or Idols)
ವಾಸ್ತು ಶಾಸ್ತ್ರದ ಪ್ರಕಾರ ಈಶಾನ್ಯ (North East) ಮತ್ತು ನೈಋತ್ಯ ದಿಕ್ಕುಗಳು (South West) ಭೂ (Earth) ಧಾತುವಿನ ಸಂಪರ್ಕವನ್ನು (Connected) ಹೊಂದಿವೆ. ಜೇಡಿಮಣ್ಣಿನಿಂದ ಮಾಡಿದ ಕಲಾಕೃತಿಗಳನ್ನು ಅಲಂಕಾರಕ್ಕಾಗಿ ಈ ಎರಡೂ ದಿಕ್ಕುಗಳಲ್ಲಿ ಇಡಬಹುದು. ಮಣ್ಣಿನ ಪ್ರತಿಮೆಗಳು ಅಥವಾ ವಿಗ್ರಹಗಳನ್ನು ಈ ದಿಕ್ಕಿನಲ್ಲಿ (Direction) ಇಟ್ಟರೆ ಒಳ್ಳೆಯದಾಗುತ್ತದೆ ಎಂದು ಹೇಳಲಾಗುತ್ತದೆ. ಇನ್ನು ದೇವರಕೋಣೆಯಲ್ಲಿ ಸಹ ಮಣ್ಣಿನ ಮೂರ್ತಿಗಳನ್ನು (statues or idols) ಇಟ್ಟರೆ ಒಳ್ಳೆಯದು. 

ಇದನ್ನು ಓದಿ: ಕನಸಲ್ಲಿ ಈ ವಸ್ತುಗಳ ಕಂಡರೆ ಸೌಭಾಗ್ಯ...!!!

ಮಣ್ಣಿನ ದೀಪ (Earthen Lamp)
ಪಾರಂಪರಿಕ (Traditional) ಆಚರಣೆಯಲ್ಲಿ (Ritual) ಸಾಕಷ್ಟು ಅರ್ಥಗಳಿರುತ್ತವೆ. ಆದರೆ, ಈಗಿನ ಆಧುನಿಕತೆಯ ಮೋಹದಲ್ಲಿ ಹೆಚ್ಚಿನ ಮಂದಿ ಅವುಗಳನ್ನು ಮರೆತಿದ್ದಾರೆ. ಮನೆಯಲ್ಲಿನ ದೇವರ (God) ಕೋಣೆಯಲ್ಲಿ ಲೋಹದಿಂದ ಮಾಡಿದ ದೀಪಗಳನ್ನು ಬಳಕೆ (Use) ಮಾಡಲಾಗುತ್ತಿದೆ. ವಾಸ್ತು ಶಾಸ್ತ್ರದ ಪ್ರಕಾರ ಮಣ್ಣಿನ ದೀಪವನ್ನು (Light) ಬೆಳಗಿಸುವುದು ಶುಭವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಮನೆಗೆ ಸಂತೋಷ ಮತ್ತು ಸಮೃದ್ಧಿಯು ನೆಲೆಸುತ್ತದೆ ಎಂದು ಹೇಳಲಾಗುತ್ತದೆ.

click me!