ನಿಮ್ಮ ಮನೆ ಹೇಗಿಟ್ಕೊಂಡಿದೀರಿ? ಫ್ಯಾಮಿಲಿ ಆರೋಗ್ಯ ಚೆನ್ನಾಗಿರ್ಬೇಕು ಅಂದ್ರೆ ಈ ವಾಸ್ತು ಅನುಸರಿಸಿ

By Suvarna News  |  First Published Sep 3, 2023, 5:17 PM IST

ಮನೆಯಲ್ಲಿ ವಸ್ತುಗಳ ಹೊಂದಾಣಿಕೆ ಸರಿಯಾಗಿಲ್ಲದೇ ಇದ್ದಾಗ, ಅನಗತ್ಯ ವಸ್ತುಗಳು ಮನೆಯನ್ನು ತುಂಬಿರುವಾಗ, ಹಾಳಾದ, ಧೂಳು ಹಿಡಿದ ವಸ್ತುಗಳನ್ನು ಇಟ್ಟುಕೊಳ್ಳುವುದು ಉತ್ತಮವಲ್ಲ. ವಾಸ್ತು ಪ್ರಕಾರ, ಇದರಿಂದ ಮನೆಯ ಜನರ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುತ್ತದೆ.
 


ಕಚೇರಿಯಿಂದ ಮನೆಗೆ ಬಂದಾಕ್ಷಣ ಇಡೀ ಮನೆ ಅಸ್ತವ್ಯಸ್ತವಾಗಿದ್ದರೆ ಏನನ್ನಿಸುತ್ತದೆ? ಇನ್ನೂ ಹೆಚ್ಚು ಸುಸ್ತಾದಂತೆ ಆತಂಕವಾಗುತ್ತದೆ. ಹಾಗೆಯೇ, ಸ್ವಚ್ಛತೆಯಿಲ್ಲದ ಮನೆಯಲ್ಲೂ ಕಿರಿಕಿರಿ ಹೆಚ್ಚು. ನಮ್ಮ ಅರಿವಿಗೆ ಬಾರದೇ ಮನೆಯಲ್ಲಿನ ವಾತಾವರಣ ನಮ್ಮ ಮೇಲೆ ಪ್ರಭಾವ ಬೀರುತ್ತಿರುತ್ತದೆ. ನಾವೇ ಪೇರಿಸಿಟ್ಟ ವಸ್ತುಗಳ ಹೊಂದಾಣಿಕೆ ಸರಿಯಾಗಿಲ್ಲದಿದ್ದರೆ ಆರೋಗ್ಯದ ಮೇಲೂ ಪರಿಣಾಮ ಉಂಟಾಗುತ್ತದೆ. ಭಾರತದ ಪುರಾತನ ವಾಸ್ತುಶಾಸ್ತ್ರದ ಪ್ರಕಾರ, ನಾವು ವಾಸಿಸುವ ಸ್ಥಳದಲ್ಲಿ ಎನರ್ಜಿಯ ಹರಿವಿಗೆ ಸೂಕ್ತ ಸ್ಥಳಾವಕಾಶ ಇರಬೇಕು. ಇಲ್ಲವಾದರೆ, ಅದರಿಂದಲೂ ಭಾರೀ ಪರಿಣಾಮ ಉಂಟಾಗುತ್ತದೆ.  ಮನೆಯಲ್ಲಿ ಕೆಲವು ವಸ್ತುಗಳನ್ನು ಸೂಕ್ತ ರೀತಿಯಲ್ಲಿ ಇಟ್ಟಿಲ್ಲವೆಂದಾದರೆ ಮನೆಯ ಸದಸ್ಯರ ಆರೋಗ್ಯದ ಮೇಲೆ ಅಧಿಕ ಪ್ರಭಾವವುಂಟಾಗುತ್ತದೆ. ವಾಸ್ತು ಪ್ರಕಾರ, ಕೆಲವು ವಸ್ತುಗಳು ಮನೆಯ ಧನಾತ್ಮಕ ಹರಿವಿಗೆ ತೊಂದರೆ ಒಡ್ಡುತ್ತವೆ, ಕೆಲವು ವಸ್ತುಗಳನ್ನು ಮನೆಯಲ್ಲಿ ಇರಿಸಿಕೊಳ್ಳುವುದರಿಂದಲೂ ಹಾನಿಯಾಗುತ್ತದೆ. ಅಂಥವುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವ ಅಭ್ಯಾಸ ಇದ್ದರೆ ಆ ಮನೆಯ ಜನರ ಆರೋಗ್ಯ ಹದಗೆಡುವುದು ಸಾಮಾನ್ಯ. ಇಂತಹ ಚಿಕ್ಕಪುಟ್ಟ ಸುಧಾರಣೆಗಳನ್ನು ಮನೆಯಲ್ಲಿ ಮಾಡಿಕೊಳ್ಳುವುದರಿಂದ ಕೆಲವೊಮ್ಮೆ ಭಾರೀ ಬದಲಾವಣೆ ಸಾಧ್ಯವಾಗುತ್ತದೆ. 

•    ಮಲಗುವ ಕೋಣೆಯಲ್ಲಿ ಕನ್ನಡಿ (Mirror)
ಮಲಗುವ ಕೋಣೆಯಲ್ಲಿ (Bedroom) ಕನ್ನಡಿ ಇರಿಸುವುದರಿಂದ ಆ ಸ್ಥಳದ ಸಾಮರಸ್ಯಕ್ಕೆ (Harmony) ಧಕ್ಕೆಯಾಗುತ್ತದೆ. ಕನ್ನಡಿಗಳು ಎನರ್ಜಿಯನ್ನು ಪ್ರತಿಬಿಂಬಿಸುತ್ತವೆ. ಹಾಸಿಗೆಗೆ ಅಭಿಮುಖವಾಗಿ ಕನ್ನಡಿ ಇರಿಸುವುದರಿಂದ ನಿದ್ರಾಭಂಗ ಉಂಟಾಗುತ್ತದೆ. ನಿದ್ರೆಗೆ (Sleep) ಸಂಬಂಧಿಸಿದ ಸಮಸ್ಯೆಗಳು ತೋರುತ್ತವೆ. ಒಂದೊಮ್ಮೆ ರೂಮಿನಲ್ಲಿ ಕನ್ನಡಿ ಇದ್ದರೂ ಮಲಗುವ ನೇರಕ್ಕೆ ಸರಿಯಾಗಿ ಇಲ್ಲದಂತೆ ನೋಡಿಕೊಳ್ಳಿ.

Latest Videos

Vastu For Relationship: ಮೋಸ ಮಾಡುವ ಸಂಗಾತಿ ತಡೆಯೋದಕ್ಕೂ ವಾಸ್ತು ಇದೆ ಗೊತ್ತಾ!?

•    ಚೆಲ್ಲಾಪಿಲ್ಲಿ, ಧೂಳು (Dust)
ವಾಸ್ತು ಪ್ರಕಾರ, ವಸ್ತುಗಳು ಚೆಲ್ಲಾಪಿಲ್ಲಿಯಾಗಿರುವ ಹಾಗೂ ಧೂಳಿನಿಂದ ಕೂಡಿರುವ ಮನೆ ನೆಗೆಟಿವ್ (Negative) ಶಕ್ತಿಯನ್ನು ಆಕರ್ಷಿಸುತ್ತದೆ. ನಾವು ಇರುವ ಸ್ಥಳ ಸ್ವಚ್ಛವಾಗಿರಬೇಕು, ಹಾಗೂ ವಸ್ತುಗಳನ್ನು ನೀಟಾಗಿ ಇಡಬೇಕು. 

•    ಒಡೆದ (Broken), ಬಳಕೆಯಾಗದ ಎಲೆಕ್ಟ್ರಾನಿಕ್ಸ್ ವಸ್ತುಗಳು (Things)
ಹಳೆಯ, ಕೆಲಸಕ್ಕೆ ಬಾರದ ವಸ್ತುಗಳನ್ನು ಮನೆಯ ಯಾವುದೋ ಮೂಲೆಯಲ್ಲಿ ಸೇರಿಸಿಡುವುದು ಹಲವರಿಗೆ ಭಾರೀ ಇಷ್ಟದ ಕೆಲಸ. ಯಾವುದನ್ನು ಎಸೆಯಲೂ ಅವರಿಗೆ ಮನಸ್ಸು ಬಾರದು. ಆದರೆ, ಇಂತಹ ವಸ್ತುಗಳ ಮೇಲೆ ಧೂಳು ನಿಂತು ಎನರ್ಜಿಯ ಹರಿವು ಸಾಧ್ಯವಾಗುವುದಿಲ್ಲ. ಹಾಳಾದ ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ಕುಟುಂಬದ ಆರೋಗ್ಯದ (Health) ಮೇಲೆ ಪರಿಣಾಮ ಉಂಟಾಗುತ್ತದೆ.

•    ಒಳಾಂಗಣ ಮುಳ್ಳಿನ ಗಿಡಗಳು (Thorny Plants)
ಒಳಾಂಗಣ ಗಿಡಗಳನ್ನು ಆರಿಸುವಾಗ ಎಚ್ಚರವಿರಲಿ. ಒಳಾಂಗಣ ಸಸ್ಯಗಳು ಗಾಳಿಯನ್ನು ಶುದ್ಧಗೊಳಿಸುತ್ತವೆಯಾದರೂ ಮುಳ್ಳಿನಿಂದ ಕೂಡಿರುವ ಗಿಡಗಳನ್ನು ಇಟ್ಟುಕೊಳ್ಳಬಾರದು. ವಾಸ್ತು ಪ್ರಕಾರ, ಇಂತಹ ಗಿಡಗಳಿಂದ ನೆಗೆಟಿವ್ ಎನರ್ಜಿ (Energy) ಹೊಮ್ಮುತ್ತವೆ ಹಾಗೂ ಮನೆಯಲ್ಲಿ ಸಂಘರ್ಷ, ಅನಾರೋಗ್ಯ ಹೆಚ್ಚುತ್ತವೆ.

•    ನೀರು ಸೋರಿಕೆ (Leaky Tap)
ವಾಸ್ತು ಪ್ರಕಾರ, ನೀರು ಸೋರಿಕೆಯಾಗುವುದು ಹಣಕಾಸು (Financial Loss) ನಷ್ಟಕ್ಕೆ ಕಾರಣವಾಗುತ್ತದೆ. ಹಾಗೆಯೇ, ಇದು ಮನೆಯ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ತೇವದ ಜಾಗದಲ್ಲಿ ಕೀಟಾಣು ಹೆಚ್ಚಾಗಿ ಉಸಿರಾಟ, ಅಲರ್ಜಿಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು.

ಕೋಪ ಬರುತ್ತದೆಯೇ? ಕೋಪ ನಿಯಂತ್ರಿಸಿಕೊಳ್ಳೋಕೆ ಕೆಲ ವಾಸ್ತು ಟಿಪ್ಸ್ ಫಾಲೋ ಮಾಡಿ

•    ಹಾಸಿಗೆಯ ಕೆಳಗೆ ಬಳಕೆಯಾಗದ ಶೂಗಳು
ಮಂಚದ ಕೆಳಗೆ ಬಳಕೆಯಾಗದ ಶೂಗಳನ್ನು ಸೇರಿಸಿ ಇಟ್ಟಿದ್ದರೆ ತೆಗೆದುಬಿಡಿ. ಇದರಿಂದ ಬಾಹ್ಯ ಪ್ರಪಂಚದ ನೆಗೆಟಿವ್ ಎನರ್ಜಿ ಸೆಳೆಯಲ್ಪಡುತ್ತದೆ.

•    ಒಡೆದ ಗಡಿಯಾರ, ಹಳೆಯ ಔಷಧ, ಪಾತ್ರೆ
ಗಡಿಯಾರ (Clock) ಅಥವಾ ವಾಚ್ ಹಾಳಾಗಿದ್ದರೆ ಅವುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಮನೆಯ ಪ್ರಗತಿ ವಿಳಂಬವಾಗುತ್ತದೆ. ಧನಾತ್ಮಕ (Positive) ಹರಿವು ಹೆಚ್ಚಲು ಅವುಗಳನ್ನು ರಿಪೇರಿ ಮಾಡಿ ಅಥವಾ ಬದಲಿಸಿ. ಹಾಗೆಯೇ, ಬಳಕೆಯಾಗದ, ಎಕ್ಸ್ ಪೈರಿ ದಿನಾಂಕ ಮುಗಿದುಹೋದ ಔಷಧಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಜತೆಗೆ, ಬಿರುಕು ಬಂದ ಅಥವಾ ಯಾವುದೇ ರೀತಿಯಲ್ಲಿ ಹಾನಿಗೊಳಗಾದ ಪಾತ್ರೆಗಳನ್ನು ಬಳಸುವುದರಿಂದ ಕೆಟ್ಟ ಅದೃಷ್ಟ (Bad Luck) ಹುಡುಕಿ ಬರುತ್ತದೆ. 

•    ಚೂಪಾದ ಪೀಠೋಪಕರಣ (Furniture)
ಚೂಪಾದ ತುದಿಗಳನ್ನು ಹೊಂದಿದ ಪೀಠೋಪಕರಣದಿಂದ ನೆಗೆಟಿವ್ ಎನರ್ಜಿ ಹುಟ್ಟುತ್ತದೆ ಎನ್ನಲಾಗುತ್ತದೆ. ಹೀಗಾಗಿ, ದುಂಡನೆಯ, ಬಾಗಿದ ತುದಿಯುಳ್ಳ ಸಲಕರಣೆಗಳನ್ನೇ ಬಳಸಬೇಕು.

click me!