40ರ ಮೇಲೂ ರೋಚಕ ಸೆಕ್ಸ್ ಬದುಕು ನಿಮ್ಮದಾಗಿರಬೇಕೆ? ಹಾಗಿದ್ದರೆ ಮನೆ ವಾಸ್ತು ಹೀಗಿರಲಿ!

By Suvarna NewsFirst Published Aug 20, 2023, 5:43 PM IST
Highlights

ತುಸು ವಯಸ್ಸಾದ ಮೇಲೆ ಸೆಕ್ಸ್ ಮೇಲೆ ಆಸಕ್ತಿ ಕುಂದುವುದು ಸಹಜ. ಆದರೆ 40 ವಯಸ್ಸಿನ ಬಳಿಕವೂ ಕುಂದದ ಸೆಕ್ಸ್ ಆಸಕ್ತಿ ನಿಮ್ಮದಾಗಬೇಕಿದ್ದರೆ ಈ ಕೆಳಗಿನ ವಾಸ್ತು ಸಲಹೆಗಳನ್ನು ಪಾಲಿಸಿ.

ನಿಮ್ಮ ಮನೆಯೇ ನಿಮ್ಮ ಆನಂದದ ಮೂಲ. ಹಣ ಗಳಿಸುವಿಕೆಯಿಂದ ಹಿಡಿದು ದಾಂಪತ್ಯದಲ್ಲಿನ ಲೈಂಗಿಕ ಆನಂದದ ವರೆಗೆ ಎಲ್ಲವೂ ನಿಮ್ಮ ಮನೆಯ ವಾಸ್ತುವನ್ನು ಅವಲಂಬಿಸಿರುತ್ತದೆ. ಹಾಲ್ ಮತ್ತು ಬೆಡ್ ರೂಮ್ ವಿನ್ಯಾಸಗಳು, ಅಲ್ಲಿರುವ ವಸ್ತುಗಳು ವಾಸ್ತುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬೆಡ್ ಇಡುವುದರಿಂದ ಹಿಡಿದು ಯಾವ ದಿಕ್ಕಿಗೆ ತಲೆ ಹಾಕಿ ಮಲಗುತ್ತೀರಿ, ಏನೇನು ವಸ್ತುಗಳು ಅಲ್ಲಿವೆ ಎಂಬುದೆಲ್ಲಾ ಒಟ್ಟಾರೆ ಜೀವನದ ಮೇಲೆ ಪ್ರಭಾವ ಬೀರುತ್ತದೆ. ತುಸು ವಯಸ್ಸಾದ ಮೇಲೆ ಸೆಕ್ಸ್ ಮೇಲೆ ಆಸಕ್ತಿ ಕುಂದುವುದು ಸಹಜ. ಆದರೆ ೪೦ ವಯಸ್ಸಿನ ಬಳಿಕವೂ ಕುಂದದ ಸೆಕ್ಸ್ ಆಸಕ್ತಿ ನಿಮ್ಮದಾಗಬೇಕಿದ್ದರೆ ಈ ಕೆಳಗಿನ ವಾಸ್ತು ಸಲಹೆಗಳನ್ನು ಪಾಲಿಸಿ. 

- ಬೇರೆ ಕೋಣೆಗಳ ಲೈಟ್ ಅಥವಾ ಸೌಂಡ್ ಮಲಗುವ ಕೋಣೆಗೆ ಕಿರಿಕಿರಿ ಮಾಡುವಂತೆ ಇರಕೂಡದು. ಬೀದಿಯ, ರಸ್ತೆಯ ಪಕ್ಕದಲ್ಲಿ ಬೆಡ್‌ರೂಂ ಸಲ್ಲದು.

- ವಾಸ್ತು ತಜ್ಞರ ಪ್ರಕಾರ ಮಾಸ್ಟರ್ ಬೆಡ್ ರೂಮ್ ಯಾವಾಗಲೂ ಮನೆಯ ನೈರುತ್ಯ ಭಾಗದಲ್ಲಿರಬೇಕು. ಈ ಭಾಗ ಭೂಮಿಯನ್ನು ಪ್ರತಿನಿಧಿಸುವುದರಿಂದ ಸುಖ, ಸಂತೋಷ ನಿಮ್ಮದಾಗುತ್ತದೆ. ಮಕ್ಕಳ ಮಲಗುವ ಕೋಣೆಯು ಈಶಾನ್ಯ ದಿಕ್ಕಿನಲ್ಲಿದ್ದರೆ ಬೆಸ್ಟ್‌.

- ಮಲಗುವ ಕೋಣೆಗೆ ಯಾವಾಗಲೂ ಆಹ್ಲಾದಕರ ಬಣ್ಣಗಳನ್ನು ಬಳಸಬೇಕು. ಏಕೆಂದರೆ ಅದು ಸಂಬಂಧದಲ್ಲಿ ಸಾಮರಸ್ಯ, ಪ್ರೀತಿ ಮತ್ತು ಶಾಂತತೆಯನ್ನು ಪ್ರತಿನಿಧಿಸುತ್ತದೆ. ಮಲಗುವ ಕೋಣೆಗೆ ಡಾರ್ಕ್ ಮೆರೂನ್ ಅಥವಾ ಕೆಂಪು, ನೇರಳೆ ಬಣ್ಣದ ಆಯ್ಕೆಯನ್ನು ತಪ್ಪಿಸಿ. ಏಕೆಂದರೆ ಅವು ಒತ್ತಡವನ್ನು ಉಂಟುಮಾಡಬಹುದು.

- ಮಲಗುವ ಕೋಣೆಯಲ್ಲಿ ಪೂರ್ವಜರ ಅಥವಾ ಹಿರಿಯರ ಪೋಟೋವನ್ನು ಹಾಕಬೇಡಿ. ಇದು ದುರದೃಷ್ಟ ತರುತ್ತದೆ. ನಿಮ್ಮ ಮಲಗುವ ಕೋಣೆಯ ಮುಂದೆ ಕನ್ನಡಿಯೊಂದಿಗೆ ಡ್ರೆಸ್ಸಿಂಗ್ ಟೇಬಲ್ ಅನ್ನು ಎಂದಿಗೂ ಇಡಬೇಡಿ. ಏಕೆಂದರೆ ಅದು ಸಂಬಂಧಗಳಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು.

ಎಷ್ಟೇ ಸುಂದರಿಯಾಗಿದ್ದರೂ ಇಂಥ ಹುಡುಗಿಯರನ್ನು ಮದುವೆಯಾಗಲೇಬಾರದು: ಚಾಣಕ್ಯ ನೀತಿ!

- ನೀವು ಮಲಗುವ ಕೋಣೆಯಲ್ಲಿ ರಾಧಾ ಕೃಷ್ಣ ಭಾವಚಿತ್ರವನ್ನು ಹಾಕಿಕೊಳ್ಳಬಹುದು. ಏಕೆಂದರೆ ಇದು ಸಂಗಾತಿಗಳ ಪ್ರೀತಿಗೆ ಸಾಕ್ಷಿ. ಆದರೆ ಬೆಡ್‌ ರೂಮ್‌ನಲ್ಲಿ ಇತರ ದೇವರ ಭಾವಚಿತ್ರ ಬೇಡ.

- ಮಲಗುವಾಗ ನಿಮ್ಮ ತಲೆಯನ್ನು ಯಾವಾಗಲೂ ದಕ್ಷಿಣ ಅಥವಾ ಪೂರ್ವ ದಿಕ್ಕಿಗೆ ಇರಿಸಬೇಕು ಮತ್ತು ಕಾಲುಗಳು ಪಶ್ಚಿಮ ಅಥವಾ ಉತ್ತರ ದಿಕ್ಕಿನ ಕಡೆಗೆ ಇರಬೇಕು ಎಂಬುದನ್ನು ಗಮನಿಸಿ ಮಲಗಿ. ಕೊಠಡಿಯಲ್ಲಿ ದಕ್ಷಿಣ ಅಥವಾ ಪಶ್ಚಿಮ ಭಾಗದ ಗೋಡೆಯತ್ತ ಬೆಡ್ ಹಾಕಬೇಕು. ಬೆಡ್ ಗೋಡೆಯಿಂದ ಕನಿಷ್ಠ ನಾಲ್ಕು ಇಂಚು ಅಂತರದಲ್ಲಿರಬೇಕು.

- ಕಡು ನೀಲಿ ಅಥವಾ ಕಪ್ಪು ಬಣ್ಣದ ಬೆಡ್‌ಶೀಟ್‌ಗಳನ್ನು  ಬಳಸಬೇಡಿ. ಬೆಡ್‌ ಶೀಟ್‌ಗಳು ಬಿಳಿ, ಬೇಬಿ ಪಿಂಕ್, ಪೀಚ್, ಹಳದಿ, ಆಕಾಶ ನೀಲಿ ಬಣ್ಣಗಳಂತಹ ಆಹ್ಲಾದಕರ ಬಣ್ಣಗಳ ರೀತಿ ಹಿತವಾಗಿರಬೇಕು. ಗಾಢ ಬಣ್ಣಗಳು ನಕಾರಾತ್ಮಕ ಭಾವನೆಗಳನ್ನು ತರಬಹುದು ಎಂಬ ನಂಬಿಕೆ ಇದೆ. ಹೀಗಾಗಿ ಗಾಢವಾದ ಬಣ್ಣಗಳ ಬಳಕೆಯನ್ನು ತಪ್ಪಿಸಿ.

- ಸ್ಮಶಾನ ಇರುವ ಚಿತ್ರವಾಗಲಿ ಅಥವಾ ಶೋ ಪೀಸ್‌ ಆಗಲಿ ಬೆಡ್‌ ರೂಮ್‌ಲ್ಲಿ ಮಾತ್ರವಲ್ಲದೇ ಮನೆಯಲ್ಲೂ ಎಲ್ಲೂ ಇಡಬೇಡಿ. ಇದು ನಕಾರಾತ್ಮಕ. ಮಲಗುವಾಗ ಇಲ್ಲವೇ ಕುಳಿತುಕೊಳ್ಳುವಾಗ ಬೆಡ್ ಯಾವ ಕಾರಣಕ್ಕೂ ಶಬ್ಧ ಮಾಡಬಾರದು.

ರಾತ್ರಿ ದಿಂಬಿನ ಬಳಿ ಈ ವಸ್ತು ಇಡಿ; ಉತ್ತಮ ನಿದ್ರೆ, ಸಂಪತ್ತು ಪಡೆಯಿರಿ...
 

click me!