Vastu For Relationship: ಮೋಸ ಮಾಡುವ ಸಂಗಾತಿ ತಡೆಯೋದಕ್ಕೂ ವಾಸ್ತು ಇದೆ ಗೊತ್ತಾ!?

By Suvarna News  |  First Published Aug 25, 2023, 9:46 AM IST

ದಾಂಪತ್ಯ ದ್ರೋಹವನ್ನು (infidelity) ತಡೆಗಟ್ಟಲು ಮತ್ತು ದಂಪತಿಯ ನಡುವಿನ ಬಾಂಧವ್ಯವನ್ನು ಹೆಚ್ಚಿಸಲು ವಾಸ್ತು ತಜ್ಞರು ಕೆಲವು ಮಾರ್ಗಸೂಚಿಗಳನ್ನು (Vaastu tips) ಹೇಳುತ್ತಾರೆ.


ದಾಂಪತ್ಯ ದ್ರೋಹ (infidelity) ಅಥವಾ ವಿವಾಹಬಾಹಿರ ಸಂಬಂಧ (Illicit relationshop), ದಾಂಪತ್ಯವನ್ನು ವಿ(Marriage) ಚ್ಛಿದ್ರಗೊಳಿಸುವಂಥದು. ಅತ್ಯಂತ ನೋವಿನ ಅನುಭವಗಳಲ್ಲಿ ಒಂದು. ಇದು ನೀವು ಮತ್ತು ನಿಮ್ಮ ಸಂಗಾತಿ ವರ್ಷಗಳಿಂದ ನಿರ್ಮಿಸಿದ ವಿಶ್ವಾಸ, ಅನ್ಯೋನ್ಯತೆ ಮತ್ತು ಸಂತೋಷವನ್ನು ಛಿದ್ರಗೊಳಿಸುತ್ತದೆ. ಘರ್ಷಣೆ, ಪ್ರತ್ಯೇಕತೆ ಅಥವಾ ವಿಚ್ಛೇದನಕ್ಕೂ ಕಾರಣವಾಗಬಹುದು. ದಾಂಪತ್ಯ ದ್ರೋಹವನ್ನು ತಡೆಗಟ್ಟಲು ಮತ್ತು ದಂಪತಿಯ ನಡುವಿನ ಬಾಂಧವ್ಯವನ್ನು ಹೆಚ್ಚಿಸಲು ವಾಸ್ತು ತಜ್ಞರು ಕೆಲವು ಮಾರ್ಗಸೂಚಿಗಳನ್ನು (Vaastu tips) ಹೇಳುತ್ತಾರೆ. ಈ ಸಲಹೆಗಳು ವಾಸ್ತು ಶಾಸ್ತ್ರದ ತತ್ವಗಳನ್ನು ಆಧರಿಸಿವೆ. ಪ್ರಕೃತಿಯ ಐದು ಅಂಶಗಳನ್ನು (ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶ) ಹಾಗೂ ನಿಮ್ಮ ವಾಸಿಸುವ ಜಾಗದಲ್ಲಿ ಕಾಸ್ಮಿಕ್ ಶಕ್ತಿಯನ್ನು ಸಮತೋಲನಗೊಳಿಸುವ ಗುರಿಯನ್ನು ಹೊಂದಿದೆ.

ಹಾಸಿಗೆಯ ದಿಕ್ಕು: ನಿಮ್ಮ ಹಾಸಿಗೆಯ ದಿಕ್ಕು ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಹಾಸಿಗೆಯ ಸರಿಯಾದ ದಿಕ್ಕು ಎಂದರೆ ನಿಮ್ಮ ಮನೆಯ ನೈಋತ್ಯ ಪ್ರದೇಶ. ಈ ದಿಕ್ಕು ಸ್ಥಿರತೆ, ಭದ್ರತೆ ಮತ್ತು ನಿಷ್ಠೆಯೊಂದಿಗೆ ಸಂಬಂಧಿಸಿದೆ. ಇದು ನಿಮಗೆ ಉತ್ತಮ ನಿದ್ರೆ ಮತ್ತು ನಿಮ್ಮ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮರದ ಹಾಸಿಗೆಗೆ ಆದ್ಯತೆ ನೀಡಿ. ಕಬ್ಬಿಣದ ಹಾಸಿಗೆ ಬೇಡ. ನಿಮ್ಮ ಅಪಾರ್ಟ್ಮೆಂಟ್‌ನ ಈಶಾನ್ಯ ಅಥವಾ ಆಗ್ನೇಯ ಮೂಲೆಯಲ್ಲಿ ಹಾಸಿಗೆಯನ್ನು ಇರಿಸುವುದನ್ನು ತಪ್ಪಿಸಿ. ಇದು ಅಸ್ಥಿರತೆ, ಆತಂಕ ಮತ್ತು ಸಂಘರ್ಷ ತರುತ್ತದೆ. ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ನಿದ್ರೆಗೆ ತೊಂದರೆ ತರಬಹುದು.

ತಲೆ ಯಾವ ದಿಕ್ಕಿಗೆ?: ನಿದ್ರಿಸುವಾಗ ನಿಮ್ಮ ತಲೆಯನ್ನು ದಕ್ಷಿಣ ಅಥವಾ ಪೂರ್ವ ದಿಕ್ಕಿಗೆ ಇಡುವುದು ಮತ್ತೊಂದು ಪ್ರಮುಖ ಸಲಹೆ. ಇದು ಧನಾತ್ಮಕ ಶಕ್ತಿ ಮತ್ತು ಸಮೃದ್ಧಿಯನ್ನು ಆಕರ್ಷಿಸಲು ನಿಮಗೆ ಸಹಾಯ ಮಾಡುತ್ತದೆ. ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗುವುದನ್ನು ತಪ್ಪಿಸಬೇಕು. ಇದು ಚಡಪಡಿಕೆ ಮತ್ತು ನಿದ್ರಾಹೀನತೆಗೆ ಕಾರಣವಾಗಬಹುದು.

ನೈಋತ್ಯ ವಲಯದಲ್ಲಿ ಕನ್ನಡಿ ಬೇಡ: ಕನ್ನಡಿಗಳನ್ನು ಹೆಚ್ಚಾಗಿ ಮಲಗುವ ಕೋಣೆಗಳಲ್ಲಿ ಅಲಂಕಾರಿಕವಾಗಿ ಬಳಸಲಾಗುತ್ತದೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಮಲಗುವ ಕೋಣೆಯ ದಕ್ಷಿಣ-ಪಶ್ಚಿಮ ವಲಯದಲ್ಲಿ ಕನ್ನಡಿ ಇಡುವುದನ್ನು ತಪ್ಪಿಸಿ. ಕನ್ನಡಿಗಳು ನಕಾರಾತ್ಮಕ ಶಕ್ತಿಯನ್ನು ಪ್ರತಿಬಿಂಬಿಸಬಹುದು ಮತ್ತು ನಿಮ್ಮ ಮತ್ತು ಸಂಗಾತಿಯ ನಡುವೆ ಸಮಸ್ಯೆ ಉಂಟುಮಾಡಬಹುದು. ನಿಮ್ಮ ಮನಸ್ಸಿನಲ್ಲಿ ಭ್ರಮೆ ಮತ್ತು ಅನುಮಾನ ಉಂಟುಮಾಡಬಹುದು.

40ರ ಮೇಲೂ ರೋಚಕ ಸೆಕ್ಸ್ ಬದುಕು ನಿಮ್ಮದಾಗಿರಬೇಕೆ? ಹಾಗಿದ್ದರೆ ಮನೆ ವಾಸ್ತು ಹೀಗಿರಲಿ!

Latest Videos

undefined

ಮಲಗುವ ಕೋಣೆಯಲ್ಲಿ ನೀವು ಹಾಸಿಗೆಯನ್ನು ಪ್ರತಿಬಿಂಬಿಸುವ ಕನ್ನಡಿಗಳನ್ನು ಹೊಂದಿದ್ದರೆ, ಅದನ್ನು ತೆಗೆದುಹಾಕಬೇಕು ಅಥವಾ ರಾತ್ರಿಯಲ್ಲಿ ಪರದೆ ಅಥವಾ ಬಟ್ಟೆಯಿಂದ ಮುಚ್ಚಬೇಕು. ನಿಮ್ಮ ಹಾಸಿಗೆಯ ಎದುರು ಅಥವಾ ಪಕ್ಕದಲ್ಲಿ ಕನ್ನಡಿ ಇರಿಸುವುದನ್ನು ಸಹ ತಪ್ಪಿಸಬೇಕು. ಇದು ನಿಮ್ಮ ನಿದ್ರೆಗೆ ಭಂಗ ತರಬಹುದು ಮತ್ತು ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರಬಹುದು.

ಗೋಡೆಗಳಿಗೆ ತಟಸ್ಥ ಬಣ್ಣ ಇರಲಿ: ನಿಮ್ಮ ಗೋಡೆಗಳ ಬಣ್ಣ ನಿಮ್ಮ ಮಲಗುವ ಕೋಣೆಯ ಮನಸ್ಥಿತಿ ಮತ್ತು ವಾತಾವರಣದ ಮೇಲೂ ಪರಿಣಾಮ ಬೀರಬಹುದು. ವಾಸ್ತು ಶಾಸ್ತ್ರದ ಪ್ರಕಾರ, ಗೋಡೆಗಳಿಗೆ ಬಿಳಿ ಅಥವಾ ಕೆನೆ ಮುಂತಾದ ತಟಸ್ಥ ಬಣ್ಣಗಳನ್ನು ನೀವು ಆರಿಸಬೇಕು. ಈ ಬಣ್ಣಗಳು ನಿಮ್ಮ ಮಲಗುವ ಕೋಣೆಯಲ್ಲಿ ಶಾಂತ, ಹಿತವಾದ ಮತ್ತು ಸೊಗಸಾದ ವಾತಾವರಣ ಉಂಟುಮಾಡುವವು. ಮಲಗುವ ಕೋಣೆಯಲ್ಲಿ ಧನಾತ್ಮಕ ಶಕ್ತಿ ಮತ್ತು ಬೆಳಕನ್ನು ಹೆಚ್ಚಿಸುತ್ತದೆ.

ಗೋಡೆಗಳಿಗೆ ಕೆಂಪು, ಗುಲಾಬಿ ಅಥವಾ ಕಿತ್ತಳೆಯಂತಹ ಗಾಢವಾದ ಬಣ್ಣಗಳನ್ನು ತಪ್ಪಿಸಿ. ಇವು ಮಲಗುವ ಕೋಣೆಯಲ್ಲಿ ಆಕ್ರಮಣಕಾರಿ ವಾತಾವರಣ ಉಂಟುಮಾಡುತ್ತವೆ. ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಹೆಚ್ಚಿನ ವಾದ, ಜಗಳ ಮತ್ತು ಘರ್ಷಣೆಗಳಿಗೆ ಕಾರಣವಾಗಬಹುದು.

ಕೋಪ ಬರುತ್ತದೆಯೇ? ಕೋಪ ನಿಯಂತ್ರಿಸಿಕೊಳ್ಳೋಕೆ ಕೆಲ ವಾಸ್ತು ಟಿಪ್ಸ್ ಫಾಲೋ ಮಾಡಿ

ಗೋಡೆ ಮೇಲೆ ಧನಾತ್ಮಕ ಚಿತ್ರ: ಮಲಗುವ ಕೋಣೆ ಮೇಲೆ ಹಾಕುವ ಚಿತ್ರಗಳು ನಿಮ್ಮ ಸಂಗಾತಿಯೊಂದಿಗಿನ ಸಂಬಂಧದ ಮೇಲೆ ಪ್ರಭಾವ ಬೀರಬಹುದು. ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಗೋಡೆಗಳ ಮೇಲೆ ಪ್ರೀತಿ, ಸಂತೋಷ, ಪ್ರಣಯ ಅಥವಾ ಪ್ರಕೃತಿಯನ್ನು ಬಿಂಬಿಸುವ ಧನಾತ್ಮಕ ಚಿತ್ರಗಳನ್ನು ಹಾಕಬೇಕು. ಈ ಚಿತ್ರಗಳು ನೀವು ಒಬ್ಬರನ್ನೊಬ್ಬರು ಪ್ರೀತಿಸಲು ಮತ್ತು ಒಟ್ಟಿಗೆ ಜೀವನವನ್ನು ಆನಂದಿಸಲು ಪ್ರೇರೇಪಿಸಬಹುದು.

ಗೋಡೆಗಳ ಮೇಲೆ ಹಿಂಸೆ, ದುಃಖ, ಒಂಟಿತನ, ಕೋಪ ಅಥವಾ ಭಯವನ್ನು ಬಿಂಬಿಸುವ ನಕಾರಾತ್ಮಕ ಚಿತ್ರಗಳನ್ನು ತಪ್ಪಿಸಬೇಕು. ಈ ಚಿತ್ರಗಳು ನಿಮ್ಮನ್ನು ಮತ್ತು ಸಂಗಾತಿಯನ್ನು ಖಿನ್ನತೆಗೆ ಒಳಪಡಿಸಬಹುದು ಮತ್ತು ನಿಮ್ಮ ಮಲಗುವ ಕೋಣೆಯಲ್ಲಿ ಪ್ರತಿಕೂಲ ವಾತಾವರಣ ಸೃಷ್ಟಿಸಬಹುದು. ನಕಾರಾತ್ಮಕ ಶಕ್ತಿ ಮತ್ತು ದುರದೃಷ್ಟವನ್ನು ಸಹ ಆಕರ್ಷಿಸಬಹುದು.

click me!