ದೀಪ ಎಂದರೆ ಜ್ಞಾನದ ಸಂಕೇತ. ಕತ್ತಲನ್ನು ಕಳೆವ ಶಕ್ತಿ ದೀಪಕ್ಕಿರುವಂತೆ ಅಂಧಕಾರ ಕಳೆಯುವ ಶಕ್ತಿ ಜ್ಞಾನಕ್ಕಿರುತ್ತದೆ. ಹಿಂದೂಗಳ ಮನೆಯಲ್ಲಿ ಪ್ರತಿದಿನ ದೇವರಿಗೆ ದೀಪ ಹಚ್ಚುವ ಅಭ್ಯಾಸ ಬೆಳೆದು ಬಂದಿದೆ. ಕೆಲವರು ವಿಶೇಷ ಅನುಗ್ರಹಕ್ಕಾಗಿ ತುಪ್ಪದ ದೀಪ ಹಚ್ಚುತ್ತಾರೆ. ಹೀಗೆ ತುಪ್ಪದ ದೀಪ ಹಚ್ಚುವ ಮುನ್ನ ತಿಳಿದಿರಬೇಕಾದ ವಿಷಯಗಳಿವು.
ಶಾಸ್ತ್ರಗಳಲ್ಲಿ ದೀಪ(Diya)ವನ್ನು ಹಚ್ಚುವುದರ ಮಹತ್ವವನ್ನು ಉಲ್ಲೇಖಿಸಲಾಗಿದೆ. ಋಗ್ವೇದದ ಪ್ರಕಾರ ದೀಪದಲ್ಲಿ ದೇವತೆಗಳ ಬೆಳಕು ನೆಲೆಸಿರುತ್ತದೆ. ಪೂಜೆ-ಪಾಠವಿರಲಿ, ಸಾಂಸ್ಕೃತಿಕ ಹಬ್ಬವಾಗಲಿ, ಹಬ್ಬ ಹರಿದಿನಗಳಾಗಲಿ ಎಲ್ಲವೂ ದೀಪ ಬೆಳಗುವ ಮೂಲಕವೇ ಆರಂಭವಾಗುವುದು ಇದೇ ಕಾರಣಕ್ಕೆ. ದೀಪ ಅಥವಾ ದೀಪದ ಬೆಳಕನ್ನು ಜ್ಞಾನ(Knowledge)ದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ, ಇದು ಕತ್ತಲೆಯಿಂದ ಬೆಳಕಿ(light)ನೆಡೆಗೆ ಕೊಂಡೊಯ್ಯುತ್ತದೆ. ಈ ಕಾರಣಕ್ಕಾಗಿ, ಬೆಳಿಗ್ಗೆ ಮತ್ತು ಸಂಜೆ ಮನೆಯಲ್ಲಿ ದೀಪವನ್ನು ಬೆಳಗಿಸಲು ಧರ್ಮಗ್ರಂಥಗಳು ಸಲಹೆ ನೀಡುತ್ತವೆ. ಹೀಗೆ ಮಾಡುವುದರಿಂದ ಸಮಸ್ಯೆಗಳು ನಿವಾರಣೆಯಾಗುತ್ತದೆ. ಮನೆಗೆ ಧನಾತ್ಮಕ ಶಕ್ತಿ ಬರುತ್ತದೆ ಮತ್ತು ಮನಸ್ಸಿಗೆ ನೆಮ್ಮದಿಯೂ ಸಿಗುತ್ತದೆ. ಅದೇ ದೀಪವನ್ನು ಹಚ್ಚುವಾಗ ನೀವು ಕೆಲ ತಪ್ಪುಗಳನ್ನು ಮಾಡುತ್ತಿದ್ದರೆ ಅದರಿಂದ ಮನೆಯಲ್ಲಿ ಸಮಸ್ಯೆಗಳು ಎದುರಾಗುತ್ತವೆ.
ವಾಸ್ತು ಶಾಸ್ತ್ರ(Vastu Shastra)ವು ದೀಪವನ್ನು ಎಲ್ಲಿಡಬೇಕು, ಹೇಗಿಡಬೇಕು, ತುಪ್ಪದ ದೀಪ ಹಚ್ಚುವಾಗ ಕೈಗೊಳ್ಳಬೇಕಾದ ಎಚ್ಚರಿಕೆ ಏನು ಎಲ್ಲವನ್ನೂ ತಿಳಿಸುತ್ತದೆ. ಆದ್ದರಿಂದ ದೀಪವನ್ನು ಬೆಳಗಿಸುವಾಗ ನಾವು ಕೆಲವು ಅಗತ್ಯ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ದೀಪವನ್ನು ಬೆಳಗಿಸುವಾಗ ಈ ನಿಯಮಗಳನ್ನು ಅನುಸರಿಸಿ.
undefined
ದೀಪವನ್ನು ಎಲ್ಲಿ ಇಡಬೇಕು?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪೂಜೆಯ ಸಮಯದಲ್ಲಿ ದೀಪವನ್ನು ಹಚ್ಚಿದರೆ ಸಾಕಾಗುವುದಿಲ್ಲ, ಆದರೆ ಅದನ್ನು ಎಲ್ಲಿ ಇಡಬೇಕು ಎಂದು ತಿಳಿಯುವುದು ಸಹ ಅಗತ್ಯವಾಗಿದೆ. ಹಾಗಾಗಿ ದೀಪವನ್ನು ಯಾವಾಗಲೂ ದೇವರ ಫೋಟೋದ ಮುಂದೆ ಇಡಬೇಕು. ಇದಲ್ಲದೆ, ತುಪ್ಪದ ದೀಪವನ್ನು ಬೆಳಗಿಸಿದರೆ, ಅದನ್ನು ನಿಮ್ಮ ಬಲ(right)ಕ್ಕೆ ಇರಿಸಿ ಮತ್ತು ಎಣ್ಣೆಯ ದೀಪವನ್ನು ಬೆಳಗಿಸಿದರೆ, ಅದನ್ನು ನಿಮ್ಮ ಎಡ(left)ಕ್ಕೆ ಇರಿಸಿ.
ಅದು ಹೇಗೆ ಇರಬೇಕು?
ಅನೇಕ ಜನರು ಪ್ರತಿಯೊಂದು ವಿಧದ ದೀಪ ಹಚ್ಚಲು ಒಂದೇ ವಿಧದ ದೀಪವನ್ನು ಬಳಸುತ್ತಾರೆ. ಆದರೆ ತುಪ್ಪ ಮತ್ತು ಎಣ್ಣೆಯ ದೀಪವು ವಿಭಿನ್ನವಾಗಿರಬೇಕು. ನೀವು ತುಪ್ಪದ ದೀಪವನ್ನು ಹಚ್ಚಿದರೆ, ದೀಪದಲ್ಲಿ ಹತ್ತಿ ಬತ್ತಿಯನ್ನು ಇರಿಸಿ. ಆದರೆ ನೀವು ಎಣ್ಣೆಯ ದೀಪವನ್ನು ಬೆಳಗಿಸಿದರೆ, ಅದರಲ್ಲಿ ಕೆಂಪು ದಾರ(red thread)ವನ್ನು ಹಾಕಿ. ಹೀಗೆ ಮಾಡುವುದನ್ನು ಮಂಗಳಕರ ಎನ್ನಲಾಗುತ್ತದೆ.
ನಿಮ್ಮ ರಾಶಿಗೆ ಯಾವ ವೃತ್ತಿ ಬೆಸ್ಟ್?
ಯಾವುದೇ ದಿಕ್ಕಿನಲ್ಲಿ ದೀಪವನ್ನು ಬೆಳಗಿಸಿ
ಅನೇಕ ಜನರು ಮನೆಯ ಮೂಲೆಯಲ್ಲಿ ದೀಪವನ್ನು ಬೆಳಗಿಸುತ್ತಾರೆ, ಆದರೆ ದೀಪವನ್ನು ಪಶ್ಚಿಮ(west) ಭಾಗದಲ್ಲಿ ಇಡದಂತೆ ಎಚ್ಚರ ವಹಿಸಿ. ಹಾಗೆ ಮಾಡುವುದರಿಂದ ಆರ್ಥಿಕ ತೊಂದರೆಗಳು ಉಂಟಾಗಬಹುದು. ಅದೇ ಸಮಯದಲ್ಲಿ, ದೀಪವನ್ನು ಅದರ ಬೆಳಕು ದಕ್ಷಿಣ ಭಾಗದಲ್ಲಿ ಬೀಳುವಂತೆ ಇಡಬೇಡಿ. ಸಂಜೆ ಮನೆಯ ಮುಖ್ಯ ದ್ವಾರದ ಮೇಲೆ ದೀಪವನ್ನು ಹಚ್ಚುವುದು ಶುಭ.
ದೀಪವನ್ನು ಯಾವಾಗ ಬೆಳಗಿಸಬೇಕು?
ಇಷ್ಟ ಬಂದಾಗ ದೇವರ ಪೂಜೆ ಮಾಡಿ ಅಥವಾ ದೀಪ ಹಚ್ಚುವುದರಿಂದ ಹಾನಿಯಾಗಬಹುದು. ಹಾಗಾಗಿ ಬೆಳಗಿನ ಜಾವ 5 ರಿಂದ 10 ಗಂಟೆಯವರೆಗೆ ಮತ್ತು ಸಂಜೆ 5 ರಿಂದ 7ರ ನಡುವೆ ಮಾತ್ರ ದೀಪವನ್ನು ಹಚ್ಚಿ.
Vastu Tips: ಪೊರಕೆ ಹೀಗಿಟ್ರೆ ದಾರಿದ್ರ್ಯ ಒಕ್ಕರಿಸುತ್ತೆ, ಎಚ್ಚರ!
ದೀಪ ಹೇಗಿರಬೇಕು?
ನೆನಪಿನಲ್ಲಿಡಿ, ನೀವು ಪೂಜೆಯಲ್ಲಿ ಬಳಸುತ್ತಿರುವ ದೀಪವು ಒಡೆದಿರಬಾರದು. ಒಡೆದ ದೀಪವನ್ನು ಹಚ್ಚುವುದರಿಂದ ಲಕ್ಷ್ಮಿ ದೇವಿಗೆ ಅಪಚಾರವಾಗುತ್ತದೆ. ಹಾಗೆಯೇ ದೀಪವನ್ನು ಪ್ರತಿದಿನ ಚೆನ್ನಾಗಿ ಸ್ವಚ್ಛಗೊಳಿಸಿ. ಪೂಜೆಯ ವೇಳೆ ಯಾವುದೋ ಕಾರಣಕ್ಕೆ ದೀಪ ಆರಿ ಹೋದರೆ ತಕ್ಷಣ ಮತ್ತೆ ಹಚ್ಚಿ ದೇವರಲ್ಲಿ ಕ್ಷಮೆ ಕೇಳಬೇಕು.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.