ಮನೆಯಲ್ಲೇ ಕಚೇರಿ ಕೆಲಸ ನಿರ್ವಹಿಸುವಾಗ ವಾಸ್ತುವಿನ ಈ ಸಂಗತಿಗಳ ಮೇಲೆ ಗಮನ ಹರಿಸಿದರೆ ಉತ್ಪಾದಕತೆ ಹೆಚ್ಚುವುದಷ್ಟೇ ಅಲ್ಲ, ಒತ್ತಡ ತಗ್ಗುತ್ತದೆ.
ಕೋವಿಡ್ ಸಾಂಕ್ರಾಮಿಕ ರೋಗ ಜಗತ್ತನ್ನು ಆವರಿಸಿದ ಮೇಲೆ ವರ್ಕ್ ಫ್ರಂ ಹೋಂ ಅಥವಾ ವರ್ಕ್ ಫ್ರಂ ಎನಿವೇರ್ ಎನ್ನೋದು ಬಹಳ ಸಾಮಾನ್ಯ ವಿಷಯವಾಗಿದೆ. ಹೀಗೆ ಇರುವಲ್ಲಿಂದಲೇ ಉದ್ಯೋಗ ನಿರ್ವಹಿಸುವುದರಿಂದ ಒಂದಿಷ್ಟು ವಿಷಯ ಸುಲಭವಾದರೆ, ಮತ್ತೊಂದಷ್ಟು ಕಷ್ಟಗಳೂ ಇವೆ.
ತಿರುಗಾಟವಿಲ್ಲ, ಟ್ರಾಫಿಕ್ ಕಿರಿಕಿರಿ ಇಲ್ಲ, ಮನೆಯೂಟ ತಿನ್ನಬಹುದು, ಮನೆಯವರ ಮುಖ ನೋಡಲಾದರೂ ಸಿಗುತ್ತದೆ, ಮೆಟ್ರೋ ಸಿಟಿಗಳೇ ಅಲ್ಲದೆ ಹಳ್ಳಿಯ ಮನೆಯಲ್ಲೇ ಕೂತು ಕೆಲಸ ಮಾಡಬಹುದು ಎಂಬುದೆಲ್ಲ ಒಳ್ಳೆಯ ಸಂಗತಿಗಳೇ. ಆದರೆ, ಕೇವಲ ಕೆಲಸದ ವಿಷಯವಲ್ಲ ಮನೆಯ ಎಲ್ಲ ಸಂಗತಿಗಳು ಸದಾ ಗಿಜಿಗುಡುತ್ತಿರುವ ಮಧ್ಯೆ ಕೆಲಸದಲ್ಲಿ ಏಕಾಗ್ರತೆ ಸಾಧಿಸುವುದು ಬಹಳ ಕಷ್ಟದ ವಿಷಯ. ಮಕ್ಕಳು ಮನೆಯಲ್ಲಿದ್ದವರ ಪಾಡಂತೂ ಕೇಳುವುದೇ ಬೇಡ. ಹೀಗಾಗಿ, ಮನೆಯಿಂದಲೇ ಕೆಲಸ ಮಾಡುವ ಜನರಿಗೆ ಉದ್ಯೋಗದಲ್ಲಿ ಮುಂಚಿನ ಪ್ರಾಡಕ್ಟಿವಿಟಿ ಸಾಧಿಸುವುದು ಕಷ್ಟವಾಗುತ್ತಿದೆ. ಎಲ್ಲವನ್ನೂ ಬೇಕೆಂದಂತೆ ಬದಲಿಸುವುದು ಸಾಧ್ಯವಿಲ್ಲವಾದರೂ, ವಾಸ್ತುವಿನ ಈ ಟಿಪ್ಸ್‌ಗಳು ನಿಮ್ಮ ಏಕಾಗ್ರತೆ ಹಾಗೂ ಉತ್ಪಾದಕತೆ ಹೆಚ್ಚಿಸಲು ಸಹಾಯ ಮಾಡುವುದಂತೂ ಸುಳ್ಳಲ್ಲ.
ಡೆಸ್ಕ್ ದಿಕ್ಕು(direction)
ಕೆಲಸ ನಿರ್ವಹಿಸಲು ಕೂರುವಾಗ ನಿಮ್ಮ ಉದ್ಯೋಗಕ್ಕೆ ತಕ್ಕ ದಿಕ್ಕನ್ನು ಆರಿಸಿಕೊಳ್ಳಿ. ಬರವಣಿಗೆ ಕ್ಷೇತ್ರ, ಬ್ಯಾಂಕ್, ಬಿಸ್ನೆಸ್ ಮ್ಯಾನೇಜ್ಮೆಂಟ್ ಅಥವಾ ಅಕೌಂಟ್ಸ್ ವೃತ್ತಿಯಲ್ಲಿರುವವರು ಉತ್ತರ(North) ದಿಕ್ಕಿನಲ್ಲಿ ಕೂರಬೇಕು. ಅದೇ ನಿಮ್ಮ ವೃತ್ತಿ ಕಂಪ್ಯೂಟರ್ ಪ್ರೋಗ್ರಾಮಿಂಗ್, ಶಿಕ್ಷಣ, ಗ್ರಾಹಕ ಸೇವೆ, ತಾಂತ್ರಿಕ ಸೇವೆ, ಕಾನೂನು ಅಥವಾ ವೈದ್ಯಕೀಯಕ್ಕೆ ಸಂಬಂಧಿಸಿದ್ದರೆ ನೀವು ಪೂರ್ವ(East) ದಿಕ್ಕಿನಲ್ಲಿ ಕುಳಿತುಕೊಳ್ಳಬೇಕು. ಆಗ ಎನರ್ಜಿ ಮಟ್ಟ ಜಾಸ್ತಿಯಾಗಿರುತ್ತದೆ. ನಿಮ್ಮ ಮನಸ್ಸು ಕೆಲಸದಲ್ಲಿ ಹೆಚ್ಚು ಏಕಾಗ್ರತೆ ಸಾಧಿಸುತ್ತದೆ.
Morning Routine: ಬೆಳಗ್ಗೆದ್ದ ಕೂಡ್ಲೇ ಇದ್ಯಾವ್ದನ್ನೂ ನೋಡ್ಬೇಡಿ, ದುರದೃಷ್ಟ ಬೆನ್ನು ಹತ್ತಬಹುದು
undefined
ಟೇಬಲ್- ಚೇರ್ ಜೋಡಣೆ
ಯಾವಾಗಲೂ ಕೆಲಸ ನಿರ್ವಹಿಸಲು ಕೂರುವ ಕುರ್ಚಿಯ ಹಿಂದೆ ಗೋಡೆಯಿರಬೇಕು. ಕುರ್ಚಿಯ ಹಿಂದೆ ಯಾವುದೇ ಬಾಗಿಲು ಅಥವಾ ಕಿಟಕಿ ಇರಕೂಡದು. ಟೇಬಲ್‌ನ ನೇರಕ್ಕೆ ಮೇಲೆ ದೀಪ ಇರಬಾರದು. ಇದರಿಂದ ಆರ್ಥಿಕ ನಷ್ಟ(financial loss)ವಾಗುವುದು.
ವಾಸ್ತು ಶಾಸ್ತ್ರದ ಪ್ರಕಾರ, ಫೈಲ್‌ಗಳು, ಪೇಪರ್‌ಗಳು, ಅಥವಾ ಮನೆಯ ಇತರೆ ವಸ್ತುಗಳು ಟೇಬಲ್‌ನಲ್ಲಿ ತುಂಬಿರಬಾರದು. ಇದು ನೆಗೆಟಿವ್ ಎನರ್ಜಿ ಸೆಳೆದು ಕೆಲಸದ ಗುಣಮಟ್ಟ ಹಾಳು ಮಾಡುತ್ತದೆ. ಹೀಗೆ ಸಂತೆ ಹೆಚ್ಚಾದಷ್ಟೂ ಒತ್ತಡ ಹೆಚ್ಚುತ್ತದೆ. ಯಾವ ಕೆಲಸವನ್ನೂ ಸಮಯಕ್ಕೆ ಸರಿಯಾಗಿ ಮುಗಿಸಲಾಗುವುದಿಲ್ಲ. ಟೇಬಲ್(table) ಯಾವಾಗಲೂ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ.
ಗ್ಲಾಸ್ ಟಾಪ್ ಇರುವ ಟೇಬಲ್‌ಗಳನ್ನು ಕೆಲಸ ಮಾಡಲು ಬಳಸಬೇಡಿ. ಇದೂ ಕೂಡಾ ಕೆಲಸಕ್ಕೆ ಮಂದಗತಿ ತರುತ್ತದೆ. ಒಂದು ವೇಳೆ ಇದೇ ಟೇಬಲ್ ನಿಮ್ಮ ಬಳಿ ಇರುವುದಾದರೆ ಅದನ್ನು ಬಿಳಿ ಅಥವಾ ಹಸಿರು ಬಣ್ಣದ ಬಟ್ಟೆಯಿಂದ ಮುಚ್ಚಿ. ನೀವು ಅಂತಾರಾಷ್ಟ್ರೀಯ ಮಟ್ಟದ ಅವಕಾಶಕ್ಕಾಗಿ ಕಾಯುತ್ತಿದ್ದರೆ ಟೇಬಲ್‌ನ ವಾಯುವ್ಯ(North-West) ದಿಕ್ಕಿನಲ್ಲಿ ಗ್ಲೋಬ್ ಇಟ್ಟುಕೊಳ್ಳಿ.
Good Luck : ಹೊಸ ವರ್ಷದಂದು ಈ ವಸ್ತುಗಳನ್ನು ಮನೆಗೆ ತಂದರೆ ಸದಾ ಸಂತೋಷ
ಬೆಳಕು
ನೀವು ವೃತ್ತಿ ಮಾಡುವ ಕೋಣೆಯ ಲೈಟಿಂಗ್ ಬಗ್ಗೆಯೂ ಸಾಕಷ್ಟು ಗಮನ ವಹಿಸಬೇಕು. ಇದೂ ಕೂಡಾ ನಿಮ್ಮ ಕೆಲಸ ಹಾಗೂ ಮೂಡ್ ಮೇಲೆ ಪರಿಣಾಮ ಬೀರುತ್ತದೆ. ತುಂಬಾ ಬ್ರೈಟಾದ ಅಥವಾ ತುಂಬಾ ಕಡಿಮೆ ಬೆಳಕನ್ನು ಇಟ್ಟುಕೊಳ್ಳುವುದು ಒಳ್ಳೆಯದಲ್ಲ. ಇದರಿಂದ ಕೋಣೆಯಲ್ಲಿ ನೆಗೆಟಿವ್ ಎನರ್ಜಿ ಹೆಚ್ಚುತ್ತದೆ. ಇದರಿಂದ ಅಭಿವೃದ್ಧಿ ಕ್ಷೀಣಿಸುತ್ತದೆ.
ಸಸ್ಯಗಳು(plants)
ಒಳಾಂಗಣ ಸಸ್ಯಗಳು ವರ್ಕ್‌ಸ್ಟೇಶನ್‌ನ ಸೌಂದರ್ಯ ಹೆಚ್ಚಿಸುವುದಷ್ಟೇ ಅಲ್ಲ, ಅದನ್ನು ಪಾಸಿಟಿವ್ವಾಗಿಯೂ ಇಡುತ್ತವೆ. ಹಸಿರು ಬಣ್ಣವು ಸಮೃದ್ಧಿ ಹಾಗೂ ಶಾಂತಿಯ ಪ್ರತೀಕವಾಗಿದೆ. ಇದು ಮನಸ್ಸಿಗೆ ನೆಮ್ಮದಿ ತರುತ್ತದೆ. ಮನಿ ಪ್ಲ್ಯಾಂಟ್, ಬ್ಯಾಂಬೂ ಬಂಚ್, ವೈಟ್ ಲಿಲ್ಲಿ, ರಬ್ಬರ್ ಪ್ಲ್ಯಾಂಟ್‌ಗಳನ್ನು ಕೋಣೆಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿಡುವುದರಿಂದ ಲಾಭವಿದೆ. ಆದರೆ, ಪ್ಲ್ಯಾಸ್ಟಿಕ್ ಗಿಡಗಳನ್ನಾಗಲೀ, ಬೋನ್ಸಾಯ್(bonsai) ಗಿಡಗಳನ್ನಾಗಲೀ ಇಡಬೇಡಿ. ಇವು ಕೆಲಸದ ಒತ್ತಡಕ್ಕೆ ಕಾರಣವಾಗುತ್ತವೆ.
ಚಿತ್ರಗಳು
ಕೋಣೆಯ ಉತ್ತರ ದಿಕ್ಕಿನಲ್ಲಿ ಹಸಿರು ಕಾಡಿನ ಚಿತ್ರ ಹಾಕಿಕೊಳ್ಳುವುದರಿಂದ ನಿಮ್ಮ ಪರಿಶ್ರಮಕ್ಕೆ ತಕ್ಕ ಬೆಲೆ ಸಿಗುತ್ತದೆ. ಪರ್ವತಗಳ ಚಿತ್ರವಾದರೆ ದಕ್ಷಿಣ ಹಾಗೂ ಪಶ್ಚಿಮ ದಿಕ್ಕು ಒಳ್ಳೆಯದು. ಪೂರ್ವ ದಿಕ್ಕಿನಲ್ಲಾದರೆ ಓಡುವ ಕುದುರೆಗಳು, ಮರಗಳು, ಹಾರುವ ಹಕ್ಕಿಗಳು, ಉದಯಿಸುವ ಸೂರ್ಯನ ಚಿತ್ರಗಳನ್ನು ಹಾಕಿಕೊಳ್ಳಬಹುದು.
ಹೂವುಗಳು(Flowers)
ಪ್ರತಿದಿನ ಟೇಬಲ್ ಮೇಲೆ ಕುಂಡದಲ್ಲಿ ತಾಜಾ ಹೂವುಗಳನ್ನಿರಿಸುವುದರಿಂದ ಮನಸ್ಸು ಕೂಡಾ ತಾಜಾ ಆಗಿರುತ್ತದೆ. ಕೆಲಸದಿಂದ ಹೆಚ್ಚು ಸುಸ್ತೆನಿಸುವುದಿಲ್ಲ. ಒಣಗಿದ ಹೂಗಳನ್ನು ಕೂಡಲೇ ತೆಗೆಯಬೇಕು.