ಹ್ಯಾಂಡ್‍ಬ್ಯಾಗ್ ಬಣ್ಣದಲ್ಲಿದೆ ನಿಮ್ಮ ಲಕ್, ಖರೀದಿಸುವಾಗ ನೆನಪಿರಲಿ ಜನ್ಮ ಸಂಖ್ಯೆ

By Suvarna NewsFirst Published Dec 18, 2019, 2:40 PM IST
Highlights

ಬ್ಯಾಗ್ ಪ್ರಿಯ ಯುವತಿಯರು ಬಣ್ಣ ಬಣ್ಣದ ಹ್ಯಾಂಡ್‍ಬ್ಯಾಗ್‍ಗಳನ್ನು ಖರೀದಿಸಿ ಖುಷಿಪಡುತ್ತಾರೆ. ಆದರೆ, ನಿಮ್ಮ ವ್ಯಕ್ತಿತ್ವಕ್ಕೆ ಸರಿ ಹೊಂದುವ, ಅದೃಷ್ಟ ತರುವ ಬಣ್ಣ ಯಾವುದು ಎಂಬುದು ನಿಮಗೆ ತಿಳಿದಿದೆಯೇ? 

ಸ್ಟೈಲಿಷ್ ಆಗಿರುವ ಹ್ಯಾಂಡ್ ಬ್ಯಾಗ್‍ಗಳನ್ನು ಕಂಡರೆ ಯಾವ ಹೆಣ್ಣು ತಾನೇ ಮನಸೋಲಲ್ಲ ಹೇಳಿ? ಹುಡುಗಿಯರು ಶಾಪಿಂಗ್‍ಗೆ ಹೊರಟಾಗ ಡ್ರೆಸ್, ಚಪ್ಪಲಿಗಳಷ್ಟೇ ಅವರನ್ನು ಆಕರ್ಷಿಸುವ ವಸ್ತುವೆಂದರೆ ಅದು ಹ್ಯಾಂಡ್‍ಬ್ಯಾಗ್. ಇಂದು ಮಾರುಕಟ್ಟೆಯಲ್ಲಿ ನಾನಾ ವಿನ್ಯಾಸದ, ಬಣ್ಣದ ಬ್ಯಾಗ್‍ಗಳು ಮಹಿಳೆಯರನ್ನು ಕೈಬೀಸಿ ಕರೆಯುತ್ತವೆ. ನೀವು ಬಳಸುವ ಹ್ಯಾಂಡ್‍ಬ್ಯಾಗ್ ಅಥವಾ ಪರ್ಸ್ ನಿಮ್ಮ ಪರ್ಸ್‍ನಾಲಿಟಿಯನ್ನು ಕೂಡ ಬಿಂಬಿಸುತ್ತದೆ. ಹೀಗಾಗಿ ಬ್ಯಾಗ್ ಆಯ್ಕೆ ಮಾಡುವಾಗ ನಿಮ್ಮ ಪರ್ಸ್‍ನಾಲಿಟಿಯನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯ. ಇನ್ನು ಬ್ಯಾಗ್‍ನ ಬಣ್ಣದ ವಿಷಯಕ್ಕೆ ಬಂದರೆ ನೀವೇನು ಮಾಡುತ್ತೀರಿ? ನಿಮಗಿಷ್ಟವಾದ ಬಣ್ಣದ ಬ್ಯಾಗ್ ಆರಿಸಿಕೊಳ್ಳುತ್ತೀರಿ ಅಲ್ಲವೆ? ಹೌದು ಎಂದಾದರೆ, ಇನ್ನು ಮೇಲೆ ಬ್ಯಾಗ್ ಆರಿಸುವಾಗ ಆ ಬಣ್ಣ ನಿಮ್ಮ ಹುಟ್ಟಿದ ದಿನಾಂಕದ ಸಂಖ್ಯೆಗೆ ಸರಿಹೊಂದುತ್ತದೋ ಇಲ್ಲವೋ ಎಂಬುದನ್ನು ಪರಿಶೀಲಿಸಿ, ಆಯ್ಕೆ ಮಾಡಿ. ಅರೇ, ಹುಟ್ಟಿದ ದಿನಕ್ಕೂ ಹ್ಯಾಂಡ್‍ಬ್ಯಾಗ್‍ನ ಕಲರ್‍ಗೂ ಏನ್ ಸಂಬಂಧ ಎಂದು ಯೋಚಿಸುತ್ತಿದ್ದೀರಾ? ಸಂಖ್ಯಾಶಾಸ್ತ್ರದ ಪ್ರಕಾರ ನೀವು ಜನ್ಮ ಸಂಖ್ಯೆಗೆ ಸರಿಹೊಂದುವ ಬಣ್ಣದ ಹ್ಯಾಂಡ್‍ಬ್ಯಾಗ್ ಅಥವಾ ಪರ್ಸ್ ಬಳಸುವುದರಿಂದ ಅದೃಷ್ಟ ನಿಮಗೊಲಿಯುತ್ತದೆ.

*ಕೆಂಪು ಬಣ್ಣ: ನೀವು ಒಂದನೇ ತಾರೀಕು ಜನಿಸಿದವರಾಗಿದ್ದರೆ ಅಥವಾ ನಿಮ್ಮ ಜನ್ಮ ದಿನಾಂಕದ ಸಂಖ್ಯೆ ಒಂದು ಆಗಿದ್ದರೆ ಕೆಂಪು ಬಣ್ಣದ ಹ್ಯಾಂಡ್‍ಬ್ಯಾಗ್ ನಿಮ್ಮ ವ್ಯಕ್ತಿತ್ವಕ್ಕೆ ಸರಿ ಹೊಂದುತ್ತದೆ. ಈ ಬಣ್ಣ ನಿಮಗೆ ಅದೃಷ್ಟದ ಸಂಕೇತ ಕೂಡ ಆಗಿದೆ. ಕೆಂಪು ಬಣ್ಣ ಆತ್ಮವಿಶ್ವಾಸ, ಮಹತ್ವಾಕಾಂಕ್ಷೆ ಹಾಗೂ ಶಕ್ತಿಯ ಪ್ರತೀಕವಾಗಿದೆ.

ಮನೆ ಶಿಫ್ಟಿಂಗ್ ಪ್ಲ್ಯಾನ್ ಹೀಗಿರಲಿ

*ಬಿಳಿ ಬಣ್ಣ: ಹುಟ್ಟು ಸಂಖ್ಯೆ 2 ಆಗಿರುವವರಿಗೆ ಬಿಳಿ ಅದೃಷ್ಟದ ಬಣ್ಣ. ನೀವು ಹ್ಯಾಂಡ್‍ಬ್ಯಾಗ್ ಖರೀದಿಸುವಾಗ ಬಿಳಿ ಬಣ್ಣವನ್ನೇ ಆರಿಸಿಕೊಳ್ಳಲು ಮರೆಯಬೇಡಿ. ಬಿಳಿ ಶುಭ್ರತೆ ಹಾಗೂ ಸರಳತೆಯ ಪ್ರತೀಕವಾಗಿದೆ. ಬಿಳಿ ಬಣ್ಣ ಬಳಸುವವರು ಆತ್ಮವಿಶ್ವಾಸವುಳ್ಳ ವ್ಯಕ್ತಿತ್ವದವರಾಗಿರುತ್ತಾರೆ.

*ಹಳದಿ ಬಣ್ಣ: ಜನ್ಮಸಂಖ್ಯೆ 3 ಆಗಿರುವವರು ಹಳದಿ ಬಣ್ಣದ ಪರ್ಸ್ ಅಥವಾ ಹ್ಯಾಂಡ್‍ಬ್ಯಾಗ್ ಬಳಸುವುದು ಸೂಕ್ತ. ಹಳದಿ ಬಣ್ಣ ಇಷ್ಟಪಡುವ ವ್ಯಕ್ತಿಗಳು ಎಲ್ಲ ಕಾರ್ಯಗಳಲ್ಲೂ ಪರಿಪೂರ್ಣತೆಯನ್ನು ಬಯಸುವ ಜತೆಗೆ ಕನಸುಗಾರರಾಗಿರುತ್ತಾರೆ. 

*ಕಂದು ಬಣ್ಣ: ಈ ಬಣ್ಣದ ಹ್ಯಾಂಡ್‍ಬ್ಯಾಗ್ ಅನ್ನು 4 ಜನ್ಮಸಂಖ್ಯೆ ಹೊಂದಿರುವವರು ಬಳಸುವುದರಿಂದ ಅವರಿಗೆ ಒಳಿತಾಗುತ್ತದೆ. ಕಂದು ಬಣ್ಣ ಸರಳತೆ ಹಾಗೂ ಸಂತಸದ ಪ್ರತೀಕ.

*ಹಸಿರು ಬಣ್ಣ: ಹಸಿರು ಸಮೃದ್ಧಿಯ ಸಂಕೇತ. 5 ಜನ್ಮಸಂಖ್ಯೆ ಹೊಂದಿರುವವರಿಗೆ ಹಸಿರು ಬಣ್ಣದ ಹ್ಯಾಂಡ್‍ಬ್ಯಾಗ್ ಎಲ್ಲ ವಿಧದ ಸಮೃದ್ದಿಯನ್ನು ಒದಗಿಸಬಲ್ಲದು.

ಒತ್ತಡ ಕಳೆಯೋಕೆ ಬೆಸ್ಟ್ ಟಿಪ್ಸ್

*ಗುಲಾಬಿ ಬಣ್ಣ: ಜನ್ಮಸಂಖ್ಯೆ 6 ಆಗಿರುವವರಿಗೆ ಗುಲಾಬಿ ಅಥವಾ ಯಾವುದೇ ತಿಳಿ ಬಣ್ಣದ ಹ್ಯಾಂಡ್‍ಬ್ಯಾಗ್ ಸೂಕ್ತವಾದದ್ದು. ಗುಲಾಬಿ ರೊಮ್ಯಾಂಟಿಕ್ ಬಣ್ಣ ಎಂದೇ ಖ್ಯಾತಿ ಪಡೆದಿದೆ. ನಿಮ್ಮೊಳಗಿನ ರೊಮ್ಯಾಂಟಿಕ್ ಪರ್ಸ್‍ನಾಲಿಟಿಯನ್ನು ಇದು ತೋರಿಸುತ್ತದೆ.    

*ಬಹುಬಣ್ಣ: ಜನ್ಮಸಂಖ್ಯೆ 7 ಹೊಂದಿರುವವರು ಒಂದಕ್ಕಿಂತ ಹೆಚ್ಚು ಬಣ್ಣಗಳುಳ್ಳ ಹ್ಯಾಂಡ್ ಬ್ಯಾಗ್ ಬಳಸಬಹುದು. ಇದು ನಿಮ್ಮ ಕಲರ್‍ಫುಲ್ ವ್ಯಕ್ತಿತ್ವದ ದ್ಯೋತಕವಾಗಿದೆ. ಅಷ್ಟೇ ಅಲ್ಲ, ಇಂಥ ಹ್ಯಾಂಡ್‍ಬ್ಯಾಗ್ ಎಲ್ಲರ ಗಮನವನ್ನು ನಿಮ್ಮೆಡೆಗೆ ಸೆಳೆಯುತ್ತದೆ. 

*ನೀಲಿ ಬಣ್ಣ: 8 ಅನ್ನು ಜನ್ಮಸಂಖ್ಯೆಯಾಗಿ ಹೊಂದಿರುವವರ ವ್ಯಕ್ತಿತ್ವಕ್ಕೆ ನೀಲಿ ಬಣ್ಣ ಮ್ಯಾಚ್ ಆಗುತ್ತದೆ. ಹೀಗಾಗಿ ನೀಲಿ ಬಣ್ಣದ ಹ್ಯಾಂಡ್‍ಬ್ಯಾಗ್ ಬಳಸುವುದು ಸೂಕ್ತ. ಪ್ರಶಾಂತತೆ ಹಾಗೂ ನಂಬಿಕಾರ್ಹತೆಯನ್ನು ನೀಲಿ ಬಣ್ಣ ಸೂಚಿಸುತ್ತದೆ. ಇದು ವಿಧೇಯತೆಯ ಸಂಕೇತವೂ ಹೌದು.

*ಕಿತ್ತಳೆ ಬಣ್ಣ: ನಿಮ್ಮ ಜನ್ಮಸಂಖ್ಯೆ 9 ಆಗಿದ್ದರೆ ಕಿತ್ತಳೆ ಬಣ್ಣದ ಹ್ಯಾಂಡ್ ಬ್ಯಾಗ್ ಆರಿಸಿಕೊಳ್ಳಿ. ಕಿತ್ತಳೆ ಬಣ್ಣ ಉತ್ಸಾಹ, ಶಕ್ತಿಯ ಸಂಕೇತವಾಗಿದೆ. 

ಕೆಟ್ಟ ಕನಸು ತಡೆಯಲು ಹೀಗ್ ಮಾಡಿ

click me!