ಅಡುಗೆ ಮನೆಗೆ ವಾಸ್ತು : ನಾರಿಯ ಸುಖಕ್ಕೆ ಅಸ್ತು

By Web DeskFirst Published Mar 10, 2019, 3:42 PM IST
Highlights

ಹೆಣ್ಣು ಅಡುಗೆ ಮನೆಯಲ್ಲಿಯೇ ತನ್ನ ಜೀವನದ ಬಹು ಭಾಗವನ್ನು ಕಳೆಯುತ್ತಾಳೆ. ಸಂಸಾರದ ಕಣ್ಣಾಗಿರುವ ಆಕೆ ಖುಷ್ ಖುಷಿಯಾಗಿದ್ದರೆ ಎಲ್ಲರೂ ಸುಖಿಗಳು. ಆಕೆ ಕಳೆಯುವ ಈ ಅಡುಗೆ ಮನೆಗೆ ವಾಸ್ತು ಟಿಪ್ಸ್ ಇವು...

ಕಿಚನ್ ಮನೆಯ ಒಂದು ಪ್ರಮುಖವಾದ ಭಾಗ. ಅಡುಗೆ ಮನೆಯಲ್ಲಿ ವಾಸ್ತು ದೋಷ ಕಾಣಿಸಿಕೊಂಡರೆ, ಮನೆಯ ಸದಸ್ಯರು ಹಾಗೂ ಮನೆಯ ಮೇಲೂ ಪರಿಣಾಮ ಬೀರುತ್ತದೆ. ಆದುದರಿಂದ ಕಿಚನ್‌ಗೆ ಸಂಬಂಧಿಸಿದ ವಾಸ್ತು ಬಗ್ಗೆ ಗಮನಿಸಬೇಕು. ಏನವು?

  • ವಾಸ್ತು ಶಾಸ್ತ್ರದ ಅನುಸಾರ ಈಶಾನ್ಯ ದಿಕ್ಕನ್ನು ಹೊರತುಪಡಿಸಿ, ಅಡುಗೆ ಮನೆಯನ್ನು ಬೇರಿ ದಿಕ್ಕಿನಲ್ಲಿರುವಂತೆ ನೋಡಿಕೊಳ್ಳಬೇಕು.
  • ಅಡುಗೆ ಕೊನೆಯಲ್ಲಿ ಕಪ್ಪು ಬಣ್ಣದ ಗ್ರ್ಯಾನೈಟ್ ಬಳಸಬೇಡಿ. ಇದು ನೆಗೆಟಿವ್ ಎನರ್ಜಿ ಸೃಷ್ಟಿಸುತ್ತದೆ. ಪರಿವಾರದ ಜೊತೆ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ. 
  • ಅಡುಗೆ ಕೋಣೆ ಮನೆ ಮಧ್ಯ ಭಾಗದಲ್ಲಿ ಇರಬಾರದು. ಅದು ಮೂಲೆಯಲ್ಲಿ ಇದ್ದರೆ ಉತ್ತಮ. ಅಡುಗೆ ಕೋಣೆ ಬಳಿ ಸ್ವಲ್ಪ ಖಾಲಿ ಜಾಗ ಇರಬೇಕು. 
  • ಕಿಚನ್‌ನಲ್ಲಿ ಕಿಟಕಿ ಇರಲೇಬೇಕು. ಅಲ್ಲಿಂದ ಸೂರ್ಯನ ಬೆಳಕು ಸರಿಯಾಗಿ ಬೀಳುವಂತಿರಬೇಕು. ಒಂದು ವೇಳೆ ಬೆಳಗಿನ ಸಮಯದಲ್ಲಿ ಸೂರ್ಯನ ಕಿರಣ ಅಡುಗೆ ಮನೆಯೊಳಗೆ ಬಂದರೆ ಮನೆಯವರ ಅರೋಗ್ಯ ಉತ್ತಮವಾಗಿರುತ್ತದೆ. 

  • ಅಡುಗೆ ಮನೆಯನ್ನು ಮೆಟ್ಟಿಲುಗಳ ಕೆಳಗೆ ಇರದಂತೆ ನೋಡಿಕೊಳ್ಳಿ. 
  • ಅಡುಗೆ ಮನೆ ಶೌಚಾಲಯದ ಹತ್ತಿರವಿರದಂತೆ ನೋಡಿಕೊಳ್ಳಿ. ಜೊತೆಗೆ ಅಡುಗೆ ಕೋಣೆ ಮತ್ತು ಶೌಚಾಲಯದ ಬಾಗಿಲೂ ಎದರು ಬದುರು ಇರಬಾರದು. ಇದರಿಂದ ನಿರಾಶಾವಾದಿ, ನಕಾರಾತ್ಮಕ ಶಕ್ತಿ ಮನೆಯವರ ಮೇಲೆ ಉಂಟಾಗುತ್ತದೆ. ಇದರಿಂದ ಮಹಿಳೆಯರ ಮೇಲೆ ನಕಾರಾತ್ಮಕ ಪ್ರಭಾವ ಕೂಡ ಹೆಚ್ಚಾಗಿ ಬೀರುತ್ತದೆ. 
click me!