ಅಂದುಕೊಂಡಿದ್ದು ನೆರವೇರುತ್ತಿಲ್ಲ, ಯಾವ ಕೆಲಸವೂ ಕೈಹಿಡಿಯುತ್ತಿಲ್ಲ, ಹಣೆಬರಹವೇ ಹೀಗೆ ಎಂದೆಲ್ಲ ಅಂದುಕೊಂಡು ಸುತ್ತಿದ ದೇವಸ್ಥಾನಗಳಿಲ್ಲ, ಸಂದಿಸಿದ ಜ್ಯೋತಿಷಿಗಳಿಲ್ಲ ಎಂದೆಲ್ಲ ಕೆಲವರು ಬೇಸರಿಸಿಕೊಳ್ಳುವುದು ಉಂಟು. ಆದರೆ, ಇದಕ್ಕೆ ಪರಿಹಾರವೇ ಇಲ್ಲವೇ ಎಂದು ಕೆಲವರು ಅಂದುಕೊಳ್ಳುವುದುಂಟು. ವಿಷ್ಣುಸಹಸ್ರನಾಮವೇ ಇದಕ್ಕೆ ಉತ್ತರ ಎಂದು ಹಲವರು ಕಂಡುಕೊಂಡಿದ್ದಾರೆ.

ಜೀವನದಲ್ಲಿ ಒಂದು ದೃಢ ಸಂಕಲ್ಪದಿಂದ ಇದನ್ನು ಪಠಿಸುತ್ತೀರೆಂದರೆ ಬೇರೆ ಯಾವುದೇ ಪರಿಹಾರೋಪಾಯಗಳ ಅವಶ್ಯಕತೆಯೇ ಇಲ್ಲ. ಅತ್ಯಂತ ಪ್ರಭಾವಶಾಲಿ ಜಪ ಇದಾಗಿದ್ದು, ಇದನ್ನು ದಿನವೂ ಪಠಿಸಿದರೆ ಒಳ್ಳೆಯದಾಗಲಿದೆ. ಹಾಗಾದರೆ ಇದರ ಬಗ್ಗೆ ಒಂದು ದೃಷ್ಟಿಹರಿಸೋಣ.

ಬಾಣದ ಹಾಸಿಗೆ ಮೇಲೆ ಮಲಗಿದ್ದ ಭೀಷ್ಮನ ಬಳಿ ಬಂದು ಧರ್ಮರಾಜ ಹೀಗೆ ಕೇಳುತ್ತಾನೆ, ಎಲ್ಲರಿಗೂ ಸರ್ವೋಚ್ಛ ಆಶ್ರಯ ಕೊಡುವವನು ಯಾರು? ಅವನಿಂತ ಶಾಂತಿ ಸಿಗಬೇಕು. ಎಲ್ಲ ಭವಸಾಗರದ ಕಷ್ಟಗಳಿಂದ ಮುಕ್ತಿ ಸಿಗಲು ಯಾರ ಮೊರೆಹೋಗಬೇಕು? ಎಂಬ ಬಗ್ಗೆ ಹೇಳಿ ಎಂದು ಕೇಳಿತ್ತಾನೆ. ಆಗ ಭೀಷ್ಮ ಹೀಗೆ ಹೇಳುತ್ತಾರೆ, ಇದಕ್ಕೆಲ್ಲ ಪರಿಹಾರವೆಂದರೆ ವಿಷ್ಣು. ಹೀಗಾಗಿ ವಿಷ್ಣುಸಹಸ್ರನಾಮ ಜಪಿಸಿದರೆ ಎಲ್ಲ ಸಂಕಷ್ಟಗಳೂ ದೂರವಾಗಿ ನೆಮ್ಮದಿ-ಜಯ ಲಭಿಸುತ್ತದೆ ಎಂದು ಹೇಳುತ್ತಾರೆ.

ಇದನ್ನೂ ಓದಿ: ವಿವಾಹವಾಗಲು ಚೆನ್ನಾಗಿರಬೇಕು ಈ ಮೂರು ಗ್ರಹಗಳು!

ಶಂಕರಾಚಾರ್ಯರೂ ಹೇಳಿದ್ದಾರೆ
ವಿಷ್ಣುಸಹಸ್ರನಾಮದಲ್ಲಿ ಅದರ ಉಪಯೋಗ ಬಗ್ಗೆ ಶಂಕರಾಚಾರ್ಯರು ಇದರ ಸ್ವಯಂ ಉಪಯೋಗ ಪಡೆದು ಟಿಪ್ಪಣಿಯನ್ನೂ ಬರೆದಿದ್ದಾರೆ. ಹಲವಾರು ವಿದ್ವಾಂಸರು ಸಹ ಈ ಬಗ್ಗೆ ಹೇಳಿಕೊಂಡಿದ್ದು, ಕಲಿಯುಗದಲ್ಲಿ ವಿಷ್ಣುಸಹಸ್ರನಾಮವನ್ನು ಏಕಾಗ್ರತೆಯಿಂದ ಓದಿದವರಿಗೆ ಎಲ್ಲ ಕಷ್ಟಗಳನ್ನೂ ನಿವಾರಿಸುವ ಶಕ್ತಿ ಇದೆ. ಯಾವುದೇ ಕಾರಣಕ್ಕೂ ಪರಿಹಾರಕ್ಕಾಗಿ ಬೇರೆಡೆ ಅಲೆಯುವ ಪ್ರಮೇಯ ಬರುವುದಿಲ್ಲ. ಇದಕ್ಕಾಗಿ ಮನೆಯಲ್ಲಿ ಅಲ್ಪ ಸಮಯ ಮೀಸಲಿಟ್ಟು ಓದಬೇಕಷ್ಟೇ ಎಂಬ ಸಲಹೆಗಳನ್ನು ನೀಡಿದ್ದಾರೆ.  

ಏಕಾಗಿ ಈ ಜಪ ಪಠಿಸಬೇಕು?
ಇದನ್ನು ಮನೆ-ಮನದಲ್ಲಿ ಶಾಂತಿಯನ್ನು ನೆಲೆಸುತ್ತದೆ, ಸುಖಸಮೃದ್ಧಿಯನ್ನು ತಂದುಕೊಡುತ್ತದೆ. ಮೋಕ್ಷ ಮಾರ್ಗವನ್ನೂ ಕರುಣಿಸುತ್ತದೆ. ಇದರಲ್ಲಿ ವಿಷ್ಣುವಿನ ಸಾವಿರ ಹೆಸರು ಇರುತ್ತದೆ. ಜೀವನದಲ್ಲಿ ನಿಮಗೆ ಕಷ್ಟಗಳೇ ಬೆಳೆಯುತ್ತಿದೆ ಎಂತಿದ್ದರೆ, ಸಂಸಾರ ನಡೆಸಲು ಕಷ್ಟವಾಗುತ್ತದೆ ಎಂದಿದ್ದರೆ, ಆರ್ಥಿಕ ಸಮಸ್ಯೆ ಕಾಣಿಸಿಕೊಂಡರೆ, ನಿಮ್ಮ ಮೇಲೆ ಯಾರಾದರೂ ವಾಮಾಚಾರದ ಪ್ರಯೋಗ ಮಾಡಿದ್ದರೆ, ನಿಮ್ಮ ಕುಟುಂಬಕ್ಕೆ ಯಾರದ್ದಾದರೂ ಕೆಟ್ಟ ದೃಷ್ಟಿ ಬಿದ್ದಿದ್ದರೆ ಅಂಥವರು ವಿಷ್ಣುಸಹಸ್ರನಾಮವನ್ನು ಅವಶ್ಯಕವಾಗಿ ಜಪಿಸಲೇಬೇಕು.

ಇದನ್ನೂ ಓದಿ: ವೃತ್ತಿಯಲ್ಲಿ ಏಳು-ಬೀಳಿಗೆ ಜಾತಕದ ಈ ಗ್ರಹಗಳೇ ಕಾರಣ!

ಅನುಕೂಲಗಳೇನು?
-    ವಿಷ್ಣುಸಹಸ್ರನಾಮ ಓದುತ್ತಿರುವವರ ಜಾತಕದ ಮೇಲೆ ಭಗವಂತನಾದ ವಿಷ್ಣು ಹಾಗೂ ಶಿವ ಇಬ್ಬರ ವಿಶೇಷ ಕೃಪೆಯೂ ಇರುತ್ತದೆ.
-    ಇದು ಜಾತಕದಲ್ಲಿ ಒಳ್ಳೇ ಪ್ರಭಾವ ಬೀರಿ ಮತ್ತಷ್ಟು ಶಕ್ತಿಯುತವನ್ನಾಗಿ ಮಾಡುತ್ತದೆ. 
-    ಯೋಜನೆಗಳನ್ನು ಹಾಕಿಕೊಂಡಿದ್ದರೆ ಅದು ಕೈಗೂಡಲು ಸಹಾಯಕ ಮಾಡುತ್ತದೆ.
-    ನಿಮ್ಮ ಮೇಲೆ ಯಾರದ್ದಾದರೂ ಕೆಟ್ಟ ದೃಷ್ಟಿ ಬಿದ್ದಿದ್ದರೆ, ಅದರಿಂದ ರಕ್ಷಣೆ ಮಾಡುತ್ತದೆ.
-    ನಿಮ್ಮನ್ನು ಯಾವಾಗಲೂ ರಕ್ಷಿಸುತ್ತಲೇ ಇರುವ ಈ ಜಪನಾಮ, ರಕ್ಷಾಕವಚವಾಗಿ ಕೆಲಸ ಮಾಡಲಿದೆ.
-    ಭಗವಾನ್ ವಿಷ್ಣುವನ್ನು ಪಾಲಕ ಎಂದು ಕರೆಯಲಾಗುತ್ತದೆ. ವಿಷ್ಣುಸಹಸ್ರನಾಮವನ್ನು ಪಠಿಸುವುದರಿಂದ ಸಂಸಾರದಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ.
-    ವಿವಾಹಿತ ಸ್ತ್ರೀ ವಿಷ್ಣುಸಹಸ್ರನಾಮ ಜಪಿಸಿದರೆ ಸಂತಾನ ಪ್ರಾಪ್ತಿಯಾಗುತ್ತದೆ, ಪರಿವಾರದಲ್ಲಿ ಕಲಹಗಳಿದ್ದರೆ ನಿವಾರಣೆಯಾಗುತ್ತದೆ. ಸುಖ-ಶಾಂತಿ ವೃದ್ಧಿಯಾಗುತ್ತದೆ

ಇದನ್ನೂ ಓದಿ: ನೋಡ್ರಪ್ಪಾ, ಯಾವ ರಾಶಿಯವರು ಹೇಗೆ ಹಣ ಕೂಡಿಡುತ್ತಾರೆಂದು?
ಯಾವಾಗಲೂ ನಮ್ಮ ಕುಲದೇವರನ್ನು ಪ್ರಾರ್ಥನೆ ಮಾಡಲೇಬೇಕು. ಬಳಿಕ ವಿಷ್ಣುಸಹಸ್ರನಾಮದ ನಿಯಮಿತ ಜಪ ಮಾಡುವುದು ಸೂಕ್ತ. ಆಗ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂಬುದು ಅನೇಕ ಜ್ಯೋತಿಷಿಗಳ ಸಹಿತ ಅನೇಕ ವಿದ್ವಾಂಸರು ಹೇಳಿದ್ದಾರೆ.