ವಾಟರ್ ಫಿಲ್ಟರ್ ನೀರನ್ನು ಹೀಗ್ ಕುಡಿದ್ರೆ ಟೆನ್ಷನ್ ಹೆಚ್ಚಾಗುತ್ತೆ !

Published : Feb 06, 2025, 12:44 PM ISTUpdated : Feb 06, 2025, 01:01 PM IST
 ವಾಟರ್ ಫಿಲ್ಟರ್ ನೀರನ್ನು ಹೀಗ್ ಕುಡಿದ್ರೆ ಟೆನ್ಷನ್ ಹೆಚ್ಚಾಗುತ್ತೆ !

ಸಾರಾಂಶ

ವಾಸ್ತು ಪ್ರಕಾರ,  ವಾಟರ್ ಫಿಲ್ಟರ್‌ನಿಂದ ನೇರ ನೀರು ಕುಡಿಯದೆ, ಪಾತ್ರೆಗೆ ಹಾಕಿ ಸೇವಿಸಿ. ಫಿಲ್ಟರ್ ಅಡುಗೆಮನೆಯ ದಕ್ಷಿಣ ಅಥವಾ ಉತ್ತರ ದಿಕ್ಕಿನಲ್ಲಿರಲಿ. ಆಗ್ನೇಯ ಅಥವಾ ಪಶ್ಚಿಮ ದಿಕ್ಕುಗಳಲ್ಲಿ ಇಡಬಾರದು. ನೀರಿನ ಸರಿಯಾದ ನಿರ್ವಹಣೆ ಮಾನಸಿಕ, ದೈಹಿಕ ಆರೋಗ್ಯಕ್ಕೆ ಮತ್ತು ಜೀವನದ ಪ್ರಗತಿಗೆ ಸಹಕಾರಿ.

ವಾಸ್ತುಶಾಸ್ತ್ರದಲ್ಲಿ ಪ್ರತಿಯೊಂದು ದಿಕ್ಕಿ (Direction)ಗೂ ತನ್ನದೇ ಮಹತ್ವ ಹಾಗೂ ಶಕ್ತಿ (strength) ಇದೆ. ಹಾಗೆಯೇ ದಿಕ್ಕುಗಳಿಗೆ ತಕ್ಕಂತೆ ವಸ್ತುಗಳನ್ನು ನಾವು ಹೊಂದಿಸಿಡ್ಬೇಕು. ವಿರುದ್ಧ ದಿಕ್ಕಿನಲ್ಲಿ ವಸ್ತುಗಳಿದ್ದಾಗ ಮನೆಯಲ್ಲಿ ನಕಾರಾತ್ಮಕ ಶಕ್ತಿಯ (negative energy) ಉತ್ಪಾದನೆಯಾಗುತ್ತೆ. ನಾನಾ ಸಮಸ್ಯೆಗಳು ನಮ್ಮನ್ನು ಕಾಡಲು ಶುರುವಾಗುತ್ವೆ. ಮನುಷ್ಯನ ಆರೋಗ್ಯಕ್ಕೆ ಅತ್ಯಗತ್ಯವಾದದ್ದು ಜೀವಜಲ. ನೀರು ನಮ್ಮ ದೈಹಿಕ ಆರೋಗ್ಯ ಮಾತ್ರವಲ್ಲ ಮಾನಸಿಕ ಆರೋಗ್ಯದ ಜೊತೆಗೂ ಸಂಬಂಧ ಹೊಂದಿದೆ. ಮಾನಸಿಕ ಸಂತೋಷ, ನೆಮ್ಮದಿಗಾಗಿ ನಾವು ಮನೆಯಲ್ಲಿ ಯಾವ ದಿಕ್ಕಿನಲ್ಲಿ ವಾಟರ್ ಫಿಲ್ಟರ್ ಇಡಬೇಕು, ನೀರನ್ನು ಹೇಗೆ ಸೇವನೆ ಮಾಡ್ಬೇಕು ಎಂಬುದನ್ನು ತಿಳಿದುಕೊಳ್ಬೇಕು. 

ವಾಟರ್ ಫಿಲ್ಟರ್ (water filter) ನೀರನ್ನು ಹೀಗೆ ಸೇವನೆ ಮಾಡಿ : ಹಿಂದೆ ಮನೆಯ ಮುಂದೆ ಅಥವಾ ಹಿಂದೆ ಬಾವಿಗಳು ಇರ್ತಾ ಇದ್ವು. ಬಾವಿಯಿಂದ ನೀರು ಸೇದಿ ಅದನ್ನು ಬಿಂದಿಗೆಯಲ್ಲಿ ಇಲ್ಲವೆ ದೊಡ್ಡ ಡ್ರಮ್ ನಲ್ಲಿ ಇಡಲಾಗ್ತಿತ್ತು. ಅಗತ್ಯಬಿದ್ದಾಗ ನೀರನ್ನು ಲೋಟಕ್ಕೆ ಹಾಕಿಕೊಂಡು ಕುಡಿತಾ ಇದ್ರು. ಈಗ ಹಾಗಲ್ಲ, ಬಹುತೇಕರ ಮನೆಯಲ್ಲಿ ವಾಟರ್ ಫಿಲ್ಟರ್ ಬಳಕೆ ಮಾಡ್ತಾರೆ. ವಾಟರ್ ಫಿಲ್ಟರ್ ನೀರನ್ನು ನೇರವಾಗಿ ಗ್ಲಾಸ್ ಗೆ ಹಾಕಿ ಕುಡಿಯುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ನೀವು ವಾಟರ್ ಫಿಲ್ಟರ್ ನಲ್ಲಿ ಸಂಗ್ರಹವಾಗಿರುವ ನೀರನ್ನು ನೇರವಾಗಿ ಕುಡಿಯೋದು ತಪ್ಪು. ಫಿಲ್ಟರ್ ನೀರನ್ನು ಒಂದು ಪಾತ್ರೆಗೆ ಹಾಕಿಡಿ. ನಂತ್ರ ಜಲದ ತತ್ವಗಳು ಸ್ಥಿರವಾಗಲು ಬಿಡಿ. ಆಮೇಲೆ ನೀರನ್ನು ಕುಡಿಯಿರಿ. ನೀವು ಸತತ 40 ದಿನಗಳ ಕಾಲ ಈ ನಿಯಮ ಪಾಲನೆ ಮಾಡಿದ್ರೆ ನಿಮ್ಮ ಮಾನಸಿಕ ಸ್ಥಿತಿಯಲ್ಲಿ ಸುಧಾರಣೆ ಕಾಣಬಹುದು. ಒತ್ತಡ, ಕೋಪ ನಿಯಂತ್ರಣಕ್ಕೆ ಬರುತ್ತದೆ. 

ಬೆಳಗ್ಗೆ ಅಥವಾ ರಾತ್ರಿ, ದೇಹದ ತೂಕ ಚೆಕ್ ಮಾಡುವ ಬೆಸ್ಟ್ ಸಮಯ ಯಾವುದು?

ಮನೆಯ  ಯಾವ ದಿಕ್ಕಿನಲ್ಲಿ ವಾಟರ್ ಫಿಲ್ಟರ್ ಇರ್ಬೇಕು? : ವಾಸ್ತು ಶಾಸ್ತ್ರಜ್ಞರ ಪ್ರಕಾರ, ನೀರಿಗೆ ಉತ್ತರ ದಿಕ್ಕು ಅತ್ಯುತ್ತಮ. ಆದ್ರೆ ವಾಟರ್ ಫಿಲ್ಟರ್ ವಿದ್ಯುತ್ ಯಂತ್ರವಾಗಿರುವ ಕಾರಣ, ಅಡುಗೆ ಮನೆಯ ದಕ್ಷಿಣ ಅಥವಾ ಉತ್ತರ ದಿಕ್ಕಿನಲ್ಲಿ ವಾಟರ್ ಫಿಲ್ಟರ್ ಅಳವಡಿಸಬೇಕು. ವಿದ್ಯುತ್ ಉಪಕರಣಗಳಿಗೆ ದಕ್ಷಿಣ ದಿಕ್ಕು ಶುಭ. ದಕ್ಷಿಣ ದಿಕ್ಕಿನಲ್ಲಿ ಅಗ್ನಿಯ ಅಂಶ ಇರುತ್ತದೆ.  ದೊಡ್ಡ ವಾಟರ್ ಫಿಲ್ಟರ್ ಇದ್ರೆ ಆದಷ್ಟು ದಕ್ಷಿಣ ದಿಕ್ಕಿಗೆ ಇಡಲು ಪ್ರಯತ್ನಿಸಿ. ಒಂದ್ವೇಳೆ ದಕ್ಷಿಣ ದಿಕ್ಕಿಗೆ ಸಾಧ್ಯವಿಲ್ಲ ಎಂದಾದ್ರೆ ನೀವು ಉತ್ತರ ದಿಕ್ಕಿಗೆ ಇಡಬಹುದು. ನೀರಿನ ಅಂಶ ಉತ್ತರ ದಿಕ್ಕಿಗೆ ಪ್ರಾಬಲ್ಯ ಹೊಂದಿರುವ ಕಾರಣ ನೀವು ಈ ದಿಕ್ಕಿನಲ್ಲಿ ವಾಟರ್ ಫಿಲ್ಟರ್ ಅಳವಡಿಸಿದ್ರೆ ಸಮಸ್ಯೆ ಆಗೋದಿಲ್ಲ. 

ವಾರಕ್ಕೆ 6 ಮೊಟ್ಟೆ ತಿಂದರೆ ಹೃದಯಕ್ಕೆ ಒಳ್ಳೆಯದಾ? ಕೆಟ್ಟದ್ದಾ? ರೆಗ್ಯುಲರ್ ತಿನ್ನೋರು ಇದನ್ನ

ಯಾವುದೇ ಕಾರಣಕ್ಕೂ ಅಡುಗೆ ಮನೆಯ ಆಗ್ನೇಯ ದಿಕ್ಕಿಗೆ ವಾಟರ್ ಫಿಲ್ಟರ್ ಅಳವಡಿಸಬೇಡಿ. ಅಗ್ನಿ ಅಂಶದ ಮೇಲೆ ಇದು ಋಣಾತ್ಮಕ ಪರಿಣಾಮ ಬೀರುತ್ತದೆ. ಹಾಗೆಯೇ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಾಗುತ್ತದೆ. ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದಲ್ಲದೆ, ಮನೆಯಲ್ಲಿ ಆರ್ಥಿಕ ನಷ್ಟವೂ ಪ್ರಾರಂಭವಾಗುತ್ತದೆ. ನೀರಿನ ಮೂಲ ಯಾವಾಗ್ಲೂ ಈಶಾನ್ಯ, ಉತ್ತರ ಅಥವಾ ಪೂರ್ವದ ಮೂಲೆಯಲ್ಲಿ ಇರಬೇಕು ಎನ್ನಲಾಗುತ್ತದೆ. ಪಶ್ಚಿಮದ ಮೂಲೆ ನೀರಿಗೆ ಉತ್ತಮವಲ್ಲ. ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಪಶ್ಚಿಮ ಮತ್ತು ಆಗ್ನೇಯ ದಿಕ್ಕಿನಲ್ಲಿ ವಾಟರ್ ಫಿಲ್ಟರ್ ಇಡಬೇಡಿ. ವಾಸ್ತು ಪ್ರಕಾರ, ನೀರಿನ ಅಂಶ ಬಲವಾಗಿರುವ ವ್ಯಕ್ತಿಯು ಜೀವನದಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸುತ್ತಾರೆ.  ನೀರಿನಂತೆಯೇ ಜನರು ಯಾವುದೇ ಪರಿಸರಕ್ಕೆ ತಕ್ಷಣವೇ ಹೊಂದಿಕೊಳ್ತಾರೆ, ಸಂತೋಷದಿಂದಿರುತ್ತಾರೆ. 

PREV
click me!

Recommended Stories

Vastu for Wealth: ಈ 5 ವಸ್ತು ನಿಮ್ಮ ಮನೆಯಲ್ಲಿದ್ದರೆ ಸದಾ ತಿಜೋರಿ ತುಂಬಿರುತ್ತೆ
Vastu Tips: ಇವನ್ನೆಲ್ಲಾ ಫ್ರಿಡ್ಜ್ ಮೇಲಿಟ್ಟರೆ ನಿಮ್ಮ ಪರ್ಸ್ ಖಾಲಿಯಾಗೋದು ಗ್ಯಾರಂಟಿ, ಹುಷಾರು