ಮನೆಯಲ್ಲಿ ನೆಗೆಟಿವ್ ಎನರ್ಜಿ ದೂರ ಮಾಡೋ ಸಿಂಪಲ್ ವಾಸ್ತು ಟಿಪ್ಸ್ ಇಲ್ಲಿವೆ. ಮನಸ್ಸಿಗೆ ಶಾಂತಿ, ಒಳ್ಳೆಯ ಅನುಭವ ತರೋ ಈ ಟಿಪ್ಸ್ ಫಾಲೋ ಮಾಡಿ.
ಮನೆಯಲ್ಲಿ ಋಣಾತ್ಮಕ ಶಕ್ತಿ ಇದ್ದರೆ ಮನಸ್ಸಿಗೆ ನೆಮ್ಮದಿಯೇ ಇರುವುದಿಲ್ಲ. ಆರೋಗ್ಯ, ಮನೆಯವರ ನಡುವಿನ ದಂಬಂಧಗಳು, ಹಣಕಾಸಿನ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ವಾಸ್ತು ಪ್ರಕಾರ ಈ ಸರಳ ಉಪಾಯಗಳಿಂದ ಮನೆಯಿಂದ ನೆಗೆಟಿವ್ ಎನರ್ಜಿ ದೂರ ಮಾಡಬಹುದು. ಆಗ ಮನೆಯ ವಾತಾವರಣ ಚೆನ್ನಾಗಿ ಆಗುತ್ತದೆ. ಜೊತೆಗೆ, ಮನಸ್ಸಿಗೆ ಶಾಂತಿ, ಹಣಕಾಸಿನಲ್ಲೂ ಒಳ್ಳೆಯದಾಗುತ್ತೆ. ಈ 5 ವಾಸ್ತು ಟಿಪ್ಸ್ ಫಾಲೋ ಮಾಡಿ ನೆಗೆಟಿವ್ ಎನರ್ಜಿ ದೂರ ಮಾಡಿ. ಮನಸ್ಸು, ದೇಹಕ್ಕೆ ಒಳ್ಳೆಯದಲ್ಲದೆ, ಮನೆಯವರ ನಡುವಿನ ಸಂಬಂಧಗಳೂ ಗಟ್ಟಿಯಾಗುತ್ತವೆ. ಈ ಸಣ್ಣ ಬದಲಾವಣೆಗಳಿಂದ ಮನೆಯಲ್ಲಿ ಸಂತೋಷ, ಶಾಂತಿ ನೆಲೆಸುತ್ತದೆ.
ನೆಗೆಟಿವಿಟಿ ದೂರ ಮಾಡಲು ಈ ಉಪಾಯಗಳನ್ನು ಮಾಡಿ
1. ಮುಖ್ಯ ದ್ವಾರದಲ್ಲಿ ಶುಭ ಸಂಕೇತ ಇಡಿ
ಮುಖ್ಯ ದ್ವಾರದಿಂದಲೇ ಪಾಸಿಟಿವ್, ನೆಗೆಟಿವ್ ಎನರ್ಜಿ ಒಳಗೆ ಬರುತ್ತದೆ.
ದ್ವಾರದ ಮೇಲೆ ಸ್ವಸ್ತಿಕ್, ಓಂ, ಅಥವಾ ಶುಭ-ಲಾಭ ಚಿಹ್ನೆ ಇಡಿ.
ದ್ವಾರದ ಎರಡೂ ಬದಿಗಳಲ್ಲಿ ಗೋಧಿ ಅಥವಾ ಅರಿಶಿನದಿಂದ ಬಣ್ಣ ಬಳಿದ ತೋರಣ ಕಟ್ಟಿ. ಇದು ನೆಗೆಟಿವಿಟಿ ದೂರ ಮಾಡಿ ಪಾಸಿಟಿವಿಟಿ ತರುತ್ತದೆ.
ಗಮನಿಸಿ: ದ್ವಾರದ ಹತ್ತಿರ ಕಸ ಇಡಬೇಡಿ, ಸ್ವಚ್ಛತೆ ಕಾಪಾಡಿ.
2. ಉಪ್ಪು ನೀರಿನಿಂದ ಸ್ವಚ್ಛ ಮಾಡಿ
ಉಪ್ಪು ನೆಗೆಟಿವ್ ಎನರ್ಜಿ ಹೀರಿಕೊಳ್ಳುತ್ತದೆ.
ವಾರಕ್ಕೊಮ್ಮೆ ಮನೆ ಒರೆಸೋ ನೀರಿಗೆ ಸೈಂಧವ ಅಥವಾ ಸಮುದ್ರದ ಉಪ್ಪು ಹಾಕಿ.