Vastu Tips: ಮನೆ ನಿರ್ಮಾಣಕ್ಕೆ ಶುಭ ಮುಹೂರ್ತ ಯಾವುದು ಗೊತ್ತಾ?

By Suvarna News  |  First Published Apr 13, 2022, 10:09 AM IST

Vastu Shastra Tips for Home construction: ಮನೆ ನಿರ್ಮಾಣದ ಸಂದರ್ಭದಲ್ಲಿ ಸರಿಯಾದ ಮುಹೂರ್ತವನ್ನು ನೋಡಿ ಆರಂಭಿಸಬೇಕಾಗುತ್ತದೆ. ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ಮುಹೂರ್ತಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ನಕ್ಷತ್ರ, ಕಾಲ ಮುಂತಾದವುಗಳನ್ನು ನೋಡಿ ಮುಹೂರ್ತ ಶುಭವಾದದ್ದು ಎಂದು ಪರಿಗಣಿಸುತ್ತಾರೆ.ಹಾಗಾದರೆ ಶುಭ ಮುಹೂರ್ತದ ಬಗ್ಗೆ ಇನ್ನಷ್ಟು ತಿಳಿಯೋಣ...


ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದಕ್ಕೂ ಮುಹೂರ್ತವನ್ನು (muhurta) ನೋಡಲಾಗುತ್ತದೆ. ಶುಭ (Good) ಕಾರ್ಯಗಳಿಗೆ, ಮಂಗಳವಾದದ್ದನ್ನು ಮಾಡುವ ಮೊದಲು ಒಂದು ಒಳ್ಳೆಯ ಮುಹೂರ್ತವನ್ನು ನೋಡಿ ಅದೇ ಸಮಯದಲ್ಲಿ ಕಾರ್ಯಕ್ಕೆ ಶುಭಾರಂಭವನ್ನು ಮಾಡಲಾಗುತ್ತದೆ. ನಕ್ಷತ್ರ (Star), ಕಾಲ (Time) ಮುಂತಾದವುಗಳನ್ನು ನೋಡಿ ಮುಹೂರ್ತ ಶುಭವಾದದ್ದು ಎಂದು ಪರಿಗಣಿಸುತ್ತಾರೆ.  ಮುಹೂರ್ತದ ಬಗ್ಗೆ ಹೆಚ್ಚಿನ ಗಮನ ನೀಡದೇ ಕೆಲಸ ಆರಂಭಿಸಿದ್ದೇ ಆದಲ್ಲಿ ಶುಭಫಲಗಳು ಪೂರ್ಣ ಪ್ರಮಾಣದಲ್ಲಿ ಪ್ರಾಪ್ತವಾಗುವುದಿಲ್ಲ. ಹಾಗಾಗಿ ಮನೆ (Home) ನಿರ್ಮಾಣದ (Construction) ಸಂದರ್ಭದಲ್ಲಿ ವಾಸ್ತು ಶಾಸ್ತ್ರದ (Vastu Shastra) ಪ್ರಕಾರ ಪಾಲಿಸಬೇಕಾದ ಶುಭ ಮುಹೂರ್ತದ ಬಗ್ಗೆ ತಿಳಿಯೋಣ....

ವಾಸ್ತು ಶಾಸ್ತ್ರದಲ್ಲಿ ಗೃಹ ನಿರ್ಮಾಣಕ್ಕೆ ಸಂಬಂಧಿಸಿದ ಮುಹೂರ್ತಗಳ ಬಗ್ಗೆ ವಿವರಿಸಲಾಗಿದೆ. ಇದರಲ್ಲಿ ಹೇಳುವ ಪ್ರಕಾರ ಮನೆಯನ್ನು ನಿರ್ಮಾಣ ಮಾಡುವ ಮೊದಲು ಶುಭ ಮುಹೂರ್ತದ ಬಗ್ಗೆ ವಾಸ್ತು ತಜ್ಞರನ್ನು ಅಥವಾ ಜ್ಯೋತಿಷಿಗಳನ್ನು (Astrologer) ಕೇಳಿ ತಿಳಿದುಕೊಳ್ಳಬೇಕು.  ಶುಭ ಮುಹೂರ್ತದಲ್ಲಿ ಆರಂಭಿಸದಿದ್ದಲ್ಲಿ ಮುಂದೆ ಅನೇಕ ತೊಂದರೆ ತಾಪತ್ರಯಗಳನ್ನು (Problem) ಎದುರಿಸಬೇಕಾಗುತ್ತದೆ. ಹಾಗಾಗಿ ಶುಭ ಮುಹೂರ್ತವನ್ನೇ ಕಾದು ಮನೆ ನಿರ್ಮಾಣದ ಕೆಲಸವನ್ನು ಆರಂಭಿಸುವ ರೂಢಿ ಇದೆ.

ಶುಭ ಮುಹೂರ್ತದ ಬಗ್ಗೆ ತಿಳಿಯೋಣ... (Good time)
ಮನೆಯ ನಿರ್ಮಾಣ ಅಥವಾ ಜಾಗವನ್ನು ಖರೀದಿಸಿ (Purchase) ಅದರಲ್ಲಿ ಏನನ್ನಾದರೂ ನಿರ್ಮಾಣ ಮಾಡಬೇಕೆಂದು ಕೊಂಡಿದ್ದರೆ ಅದಕ್ಕೆ ಮೊದಲನೆಯದಾಗಿ ಶುಭ ಮಾಸ, ಪಕ್ಷ, ವಾರ, ತಿಥಿ, ನಕ್ಷತ್ರ ಮತ್ತು ಲಗ್ನಗಳ (Lagna) ಬಗ್ಗೆ ಗಮನಹರಿಸಬೇಕಾಗುತ್ತದೆ.
ಶುಭ ಮಾಸ (Auspicious month)– ಹಿಂದೂ ಧರ್ಮದಲ್ಲಿ ಈ ರೀತಿಯ ಕೆಲಸಗಳನ್ನು ಆರಂಭಿಸಲು ವೈಶಾಖ, ಜ್ಯೇಷ್ಠ, ಮಾರ್ಗಶೀರ್ಷ, ಮಾಘ ಮತ್ತು ಪಾಲ್ಗುಣ ಮಾಸಗಳನ್ನು ಶುಭ ಮಾಸವೆಂದು ಕರೆಯಲಾಗುತ್ತದೆ.

ಇದನ್ನು ಓದಿ: Vastu tips: ಮನೆಯಲ್ಲಿ ಪಾಸಿಟಿವ್ ಎನರ್ಜಿಗೆ ದಾಸವಾಳ ಸೂತ್ರ

ಶುಭ ಪಕ್ಷ – ಕೆಲವು ಪಂಚಾಂಗಗಳ ಪ್ರಕಾರ ಎರಡೂ ಅಂದರೆ ಕೃಷ್ಣ ಮತ್ತು ಶುಕ್ಲ ಪಕ್ಷಗಳು ಶುಭವೆಂದು ಹೇಳುತ್ತಾರೆ. ಉಳಿದ ವಿವರಗಳನ್ನು ಗಮನಿಸಿ ಪಕ್ಷದ ಬಗ್ಗೆ ಶುಭಾಶುಭವೆಂದು ನಿರ್ಧರಿಸುತ್ತಾರೆ.
ಶುಭ ವಾರ (Good day) – ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರಗಳ ಪ್ರಕಾರ ಗುರುವಾರ ಮತ್ತು ಶುಕ್ರವಾರವನ್ನು ಶುಭವಾರವೆಂದು ಪರಿಗಣಿಸಲಾಗುತ್ತದೆ.
ಶುಭ ತಿಥಿ – ಶುಭ ತಿಥಿ ಯಾವುವು ಎಂದು ಹೇಳುವುದಾದರೆ ದ್ವೀತಿಯಾ, ಪಂಚಮಿ, ಷಷ್ಠಿ, ದಶಮಿ, ಏಕಾದಶಿ ಮತ್ತು ಪೂರ್ಣಿಮಾ ತಿಥಿಗಳು ಅತ್ಯಂತ ಶುಭ ತಿಥಿಗಳೆಂದು ಪರಿಗಣಿಸಲಾಗುತ್ತದೆ.
ಶುಭ ನಕ್ಷತ್ರ – ಜ್ಯೋತಿಷ್ಯ ಶಾಸ್ತ್ರದಲ್ಲಿ ಒಟ್ಟು 27 ನಕ್ಷತ್ರಗಳಿವೆ. ಅದರಲ್ಲಿ ಮೃಗಶಿರ, ಪುರ್ನವಸು, ಆಶ್ಲೇಷಾ, ಮಘಾ, ವಿಶಾಖಾ, ಅನುರಾಧಾ, ಮೂಲಾ ಮತ್ತು ರೇವತಿ ನಕ್ಷತ್ರಗಳನ್ನು ಅತ್ಯಂತ ಶುಭವೆಂದು ಹೇಳಲಾಗುತ್ತದೆ.
ಶುಭ ಲಗ್ನ – ಒಟ್ಟು ಹನ್ನೆರಡು (Twelve) ಲಗ್ನಗಳಿರುತ್ತವೆ. ಅದರಲ್ಲಿ ವೃಷಭ, ಸಿಂಹ ಮತ್ತು ವೃಶ್ಚಿಕ ಲಗ್ನಗಳು  ಅತ್ಯಂತ ಶುಭವೆಂದು ಹೇಳಲಾಗುತ್ತದೆ.

ವಾಸ್ತು ಮತ್ತು ಜ್ಯೋತಿಷ್ಯ ಶಾಸ್ತ್ರಗಳಲ್ಲಿ (Astrology) ಮನೆ ನಿರ್ಮಾಣ ಮಾಡುವ ಯಜಮಾನನ ಜಾತಕದಲ್ಲಿ (Horoscope)  ಸೂರ್ಯ, ಚಂದ್ರ, ಗುರು ಮತ್ತು ಶುಕ್ರ ಗ್ರಹಗಳ ಸ್ಥಿತಿ ಬಲವಾಗಿರಬೇಕು. ಸೂರ್ಯ (Sun) ಗ್ರಹವು ಬಲವಾಗಿಲ್ಲದಿದ್ದರೆ ಮನೆಯಲ್ಲಿ ಸುಖ ನಾಶವಾಗುತ್ತದೆ. ಅಷ್ಟೇಅಲ್ಲದೇ ಶುಕ್ರ ಗ್ರಹವು (Venus) ಬಲವಾಗಿಲ್ಲದಿದ್ದರೆ ದ್ರವ್ಯ ನಾಶವಾಗುತ್ತದೆ ಎಂದು ಹೇಳಲಾಗುತ್ತದೆ. ಗೃಹ ಸ್ವಾಮಿ ಅಂದರೆ ಮನೆ ನಿರ್ಮಾಣ ಮಾಡುವವ ಬ್ರಾಹ್ಮಣನಾಗಿದ್ದರೆ ಜಾತಕದಲ್ಲಿ ಗುರು (Jupiter) ಮತ್ತು ಶುಕ್ರ, ವೈಶ್ಯನಾಗಿದ್ದರೆ ಚಂದ್ರ (Moon) ಮತ್ತು ಬುಧ (Moon), ಅದೇ ಶೂದ್ರನಾಗಿದ್ದರೆ ವಿಶೇಷವಾಗಿ ಶನಿ (Saturn) ಗ್ರಹವು ಬಲವಾಗಿರಬೇಕು. ಅಷ್ಟೇ ಅಲ್ಲದೇ, ಗೃಹಾರಂಭದ ಸಮಯದಲ್ಲಿ ಪಂಚಕ ಮತ್ತು ವೃಷ ವಾಸ್ತುವಿನ ಬಗ್ಗೆ ಗಮನಹರಿಸುವುದು ಅವಶ್ಯಕವಾಗಿರುತ್ತದೆ.

ಇದನ್ನು ಓದಿ: ಈ ಸಂಕೇತಗಳು ಸಿಕ್ಕಿದ್ರೆ ಶುಭದ ಸೂಚನೆ ಎಂದು ತಿಳಿಯಿರಿ!

ಒಟ್ಟಾರೆಯಾಗಿ ವಾಸ್ತು ಶಾಸ್ತ್ರದಲ್ಲಿ ಶುಭ ಮುಹೂರ್ತಕ್ಕೆ ವಿಶೇಷವಾದ ಪ್ರಾಮುಖ್ಯತೆ (Importance) ನೀಡಬೇಕಾಗುತ್ತದೆ. ಶುಭ ಮುಹೂರ್ತದಲ್ಲಿ ಆರಂಭಿಸಿದರೆ ಮನೆ ನಿರ್ಮಾಣಕ್ಕೆ ಮತ್ತು ಅದರ ನಂತರ ಯಾವುದೇ ಅಡೆ-ತಡೆಗಳು ಬರುವುದಿಲ್ಲ. ಈ ಬಗ್ಗೆ ಗಮನಹರಿಸದಿದ್ದಲ್ಲಿ ಮನೆ ನಿರ್ಮಾಣದ ಸಮಯದಲ್ಲಿ ಮತ್ತು ಅದರ ನಂತರ ಆರ್ಥಿಕ ಸಮಸ್ಯೆಗಳು (Economic problems) ಎದುರಾಗುವ ಸಂಭವ ಹೆಚ್ಚಿರುತ್ತದೆ.

click me!