ನ್ಯೂ ಇಯರ್ ಲಕ್ಕಿ ಪರ್ಸನ್‌ ನೀವಾಗ್ಬೇಕಂದ್ರೆ ಈ ವಾಸ್ತು ಟಿಪ್ಸ್‌ ಪಾಲಿಸಿ!

By Suvarna NewsFirst Published Dec 31, 2019, 3:37 PM IST
Highlights

ಹೊಸ ವರ್ಷವನ್ನು ವೆಲ್ಕಂ ಮಾಡುವ ಸಮಯ. ಹೊಸ ಎನರ್ಜಿ ಹಾಗೂ ಉತ್ಸಾಹದಿಂದ ಇದನ್ನು ಬರ ಮಾಡಿಕೊಳ್ಳುವ ಜೊತೆಗೆ, ಹೊಸ ವರ್ಷ ಹರ್ಷ, ಅದೃಷ್ಟ, ಸಂತೋಷ ತರಲಿ ಎಂದು ಪ್ರತಿಯೊಬ್ಬರೂ ಪ್ರಾರ್ಥಿಸುತ್ತಾರೆ. ಇದಕ್ಕಾಗಿ ವಾಸ್ತು ಕೆಲ ಸಲಹೆಗಳನ್ನು ನೀಡುತ್ತದೆ. 

ಹೊಸ ವರ್ಷಾರಂಭಕ್ಕಾಗಿ ಮನೆ ಜೋಡಿಸುತ್ತಿದ್ದೀರಿ ಎಂದಾದಲ್ಲಿ ಈ ಸರಳ ಡೆಕೋರೇಟಿವ್ ಐಟಂ ಬಳಸಿ ವಾಸ್ತುಶಾಸ್ತ್ರದ ಪ್ರಕಾರ ಮನೆಗೆ ಅದೃಷ್ಟ, ಸಂತೋಷ ಎಳೆತನ್ನಿ. ವಾಸ್ತು ಬಗ್ಗೆ ನಿಮಗೆ ನಂಬಿಕೆ ಇರಲಿ, ಇಲ್ಲದಿರಲಿ, ಈ ವಸ್ತುಗಳು ಮನೆಯನ್ನು ಸುಂದರವಾಗಿಸುತ್ತವೆ ಎಂದಾದರೂ ಒಂದು ಕೈ ನೋಡಬಹುದು. ಏಕೆಂದರೆ ಪಾಸಿಟಿವ್ ಎನರ್ಜಿ ಹೆಚ್ಚಿಸುತ್ತವೆ ಇವು. 

1. ಎಂಟ್ರೆನ್ಸ್‌ನಲ್ಲಿ ಬುದ್ಧ

ಮನೆಯ ಬಾಗಿಲನ್ನು ದಾಟಿ ಒಳ ಹೋಗುವಾಗ ಅಲ್ಲೊಬ್ಬ ಬುದ್ಧ ಧ್ಯಾನಸ್ಥನಾಗಿ ಶಾಂತತೆಯ ಮೂರ್ತರೂಪವಾಗಿ ಕುಳಿತಿದ್ದರೆ ಅದನ್ನು ನೋಡಿದರೇ ಮನಸ್ಸಿಗೆಷ್ಟು ಆನಂದ ನಿಲುಕುವುದಲ್ಲವೇ? ಅದಕ್ಕಾಗಿ ಎದುರು ಬಾಗಿಲಿಗೆ ಮುಖ ಮಾಡಿ ಧ್ಯಾನಸ್ಥನಾಗಿರುವ ಬುದ್ಧನನ್ನು ಕೂರಿಸಿ. ಇದರ ಮುಂದೆ ದೀಪ ಹಚ್ಚುವ ಅಭ್ಯಾಸ ಮಾಡಿಕೊಳ್ಳಿ. ಟೈಲ್ಸ್‌ಗಳಲ್ಲಿ ಕೂಡಾ ದೊಡ್ಡ ಬುದ್ಧನನ್ನು ಕೂರಿಸಬಹುದು. ಇದನ್ನು ಸದಾ ಸ್ವಚ್ಛವಾಗಿಟ್ಟುಕೊಳ್ಳಿ. ಇದು ಮನೆಯ ಪಾಸಿಟಿವ್ ಎನರ್ಜಿ ಹೆಚ್ಚಿಸುತ್ತದೆ. ಜೊತೆಗೆ, ಸಖತ್ ಲುಕ್ ಆಗಿಯೂ ಕಾಣಿಸುತ್ತದೆ. 

ಹಣ ಉಳಿಸಬೇಕಾ, ಹಾಗಿದ್ರೆ ಜನವರಿ ಒಂದರ ಮೊದಲು ನೀವಿದನ್ನು ಮಾಡ್ಲೇಬೇಕು!

2. ಎದುರು ಬಾಗಿಲಿನಲ್ಲಿ ಪವಿತ್ರ ಚಿಹ್ನೆ

ಮನೆ ಎದುರಿನ ಬಾಗಿಲಿನ ಮೇಲೆ ಸ್ವಸ್ತಿಕ್ ಅಥವಾ ಓಂನಂಥ ಪವಿತ್ರ ಚಿಹ್ನೆ ಇರುವುದು ಯಾವಾಗಲೂ ಒಳ್ಳೆಯದು. ಪೇಂಟ್‌ನಲ್ಲಿ ಬರೆಯುವುದು ಉತ್ತಮ. ಆದರೆ ದೇವರ ವಿಗ್ರಹ ಅಥವಾ ಗಣೇಶನ ಫೋಟೋವನ್ನು ಮಾತ್ರ ಇಲ್ಲಿಡಬೇಡಿ. ಇದು ಮನೆಗೆ ಒಳಿತಲ್ಲ. ಬದಲಿಗೆ ಸಂತೋಷ, ಸಂಪತ್ತು, ಯಶಸ್ಸಿಗೆ ತಡೆಯಾಗುವಂಥವನ್ನು ತಡೆಯಬೇಕೆಂದರೆ, ಮೇನ್ ಡೋರ್ ದಾಟಿದ ತಕ್ಷಣ ಒಳಬದಿಯಿಂದ ಮೇಲಕ್ಕೆ ಗಣೇಶನ ಫೋಟೋ ಹಾಕಿ. ಈ ದೇವರ ಫೋಟೋ ಮನೆಯೊಳಗೆಯೇ ಇರಬೇಕು. 

3. ಮನೆಗೊಂದು ಪಿಗ್ಗೀ ಬ್ಯಾಂಕ್ ತನ್ನಿ

ನಂಬಿದ್ರೆ ನಂಬಿ, ಬಿಟ್ರೆ ಬಿಡಿ, ಪಿಗ್ಗೀ ಬ್ಯಾಂಕ್ ಮನೆಗೆ ಗುಡ್ ಲಕ್ ಹಾಗೂ ಅದೃಷ್ಟ ತರುತ್ತದೆ. ಮಕ್ಕಳಿಗೆ ಹಣ ಉಳಿತಾಯ ಮಾಡಲು ಕಲಿಸುವ ಈ ಪಿಗ್ಗೀ ಬ್ಯಾಂಕ್ ಸಂಪತ್ತಿನ ಪ್ರತೀಕ. ಈ ಹೊಸ ವರ್ಷದಲ್ಲಿ ನಿಮ್ಮ ಮಗುವಿಗೆ ಪಿಗ್ಗೀ ಬ್ಯಾಂಕ್ ನೀಡಿ ಅದೃಷ್ಟವನ್ನು ಬರ ಮಾಡಿಕೊಳ್ಳಿ. 

4.  ತಾಜಾ ಹೂವುಗಳು

ಹೂವುಗಳ ತಾಜಾತನ ಪಾಸಿಟಿವ್ ಎನರ್ಜಿ ಹಾಗೂ ಶ್ರೀಮಂತಿಕೆಯನ್ನು ಆಕರ್ಷಿಸುತ್ತದೆ. ಹೂಕುಂಡದಲ್ಲಿ ಪ್ರತಿದಿನ ತಾಜಾ ಹೂವೂಗಳನ್ನಿಡುವ ಅಭ್ಯಾಸ ಮಾಡಿಕೊಳ್ಳಿ. ಇದನ್ನು ಟೇಬಲ್ ಮಧ್ಯೆ ಅಥವಾ ಹೆಚ್ಚು  ಕಣ್ಣಿಗೆ ಬೀಳುವ ಸ್ಥಳದಲ್ಲಿ ಇಡಿ. ಸಂಖ್ಯೆ ಏಳು ಉತ್ತಮ ಸಂಪತ್ತನ್ನು ಪ್ರತಿನಿಧಿಸುತ್ತದೆ. ಹಾಗಾಗಿ, ಹೂಕುಂಡದಲ್ಲಿ ಏಳು ಹೂವುಗಳನ್ನಿಡುವ ಅಭ್ಯಾಸ ಮಾಡಿಕೊಳ್ಳಬಹುದು. 

5. ಸಸ್ಯಗಳಿಂದ ಗುಡ್ ಲಕ್

ಪಾಮ್ ಟ್ರೀ, ಮನಿ ಪ್ಲ್ಯಾಂಟ್, ಲಕ್ಕಿ ಬ್ಯಾಂಬೂ, ಸ್ನೇಕ್ ಪ್ಲ್ಯಾಂಟ್, ಜೇಡ್, ಪಾಟೆಡ್ ಆರ್ಕಿಡ್ಸ್, ತುಳಸಿ, ಪೀಸ್ ಲಿಲ್ಲಿ ಹಾಗೂ ರಬ್ಬರ್ ಪ್ಲ್ಯಾಂಟ್ ಮುಂತಾದ ಸಸ್ಯಗಳು ಮನೆಯೊಳಗಿದ್ದರೆ ಅವು ಮನೆಗೆ ಅದೃಷ್ಟ ಹಾಗೂ ನೆಮ್ಮದಿ ತರುತ್ತವೆ. ಈ ಹೊಸ ವರ್ಷಕ್ಕೆ ಮನೆಗೆ ಸಸ್ಯಗಳನ್ನು ಬರ ಮಾಡಿಕೊಂಡು ಹಸಿರು ಟಚ್ ನೀಡಿ. ಮನೆಯನ್ನು ಹೆಚ್ಚು ಜೀವಂತವಾಗಿಸಿ. 

ಹೊಸ ವರ್ಷ ಸ್ವಾಗತಕ್ಕೂ ಮೊದಲು ಕನ್‌ಫೆಶನ್‌ ಮಾಡೋದು ಮರೀಬೇಡಿ!

6. ಕಾಮನಬಿಲ್ಲಿನ ಬಣ್ಣಗಳು

ಬಣ್ಣಗಳು ಮನೆಯನ್ನು ಯಾವಾಗಲೂ ವೈಬ್ರೆಂಟ್ ಆಗಿರಿಸುತ್ತವೆ. ಹಾಗಾಗಿ ಅವು ಪಾಸಿಟಿವ್ ಎನರ್ಜಿಯನ್ನು ಆಕರ್ಷಿಸುತ್ತವೆ. ಮನೆಗೆ ಬಣ್ಣ ಸೇರಿಸಲು ಕಾರಣ ಹುಡುಕಿ. ಪೇಂಟಿಂಗ್, ಫರ್ನಿಚರ್ಸ್, ಆರ್ಟಿಫ್ಯಾಕ್ಟ್ಸ್‌ಗಳ ಮೂಲಕ ಮನೆಯನ್ನು ವರ್ಣರಂಜಿತವಾಗಿಸಿ. 

7. ಕಿಟಕಿಗಳನ್ನು ತೆರೆದಿಡಿ

ಮನೆಯ ಕಿಟಕಿಗಳನ್ನು ತೆರೆದಿಟ್ಟು, ಸೂರ್ಯನ ಬೆಳಕನ್ನು ಆಹ್ವಾನಿಸಿ. ನ್ಯಾಚುರಲ್ ಸನ್‌ಲೈಟ್ ದೇಹದಲ್ಲಿ ವಿಟಮಿನ್ ಡಿ ಉತ್ಪಾದಿಸಿ, ಮೂಡ್ ಚೆನ್ನಾಗಾಗಿಸುತ್ತದೆ. ಜೊತೆಗೆ, ಹಿತವಾದ ಗಾಳಿಯೂ ತೆರೆದ ಕಿಟಕಿ ಮೂಲಕ ಮನೆಗೆ ನುಗ್ಗಿ ಮನೆಯನ್ನು ಫ್ರೆಶ್ ಆಗಿರಿಸುತ್ತದೆ. ಕಿಟಕಿಗಳ ಗಾಜನ್ನು ಆಗಾಗ ಸ್ವಚ್ಛಗೊಳಿಸುವುದನ್ನು ಮರೆಯಬೇಡಿ. 

ಹೊಸ ವರ್ಷದ ಬೆಸ್ಟ್‌ ರೆಸಲ್ಯೂಶನ್‌ಗಳು ಏನ್‌ ಗೊತ್ತಾ?

click me!