Zee Power Channel Serials: ಜೀ ಪವರ್‌ ಚಾನೆಲ್‌ಗೆ ಚಾಲನೆ; ಪ್ರಸಾರ ಆಗಲಿರೋ ಸೀರಿಯಲ್‌ಗಳ ಕಥೆ ಏನು?

Published : Aug 19, 2025, 10:11 AM IST
zee power channel

ಸಾರಾಂಶ

Zee Power Channel: ಕನ್ನಡದಲ್ಲಿ ಜೀ ಪವರ್‌ ಎಂಬ ಹೊಸ ಮನರಂಜನಾ ಚಾನೆಲ್‌ ಶುರುವಾಗಲಿದೆ. ಈ ಧಾರಾವಾಹಿಯಲ್ಲಿ ನಾಲ್ಕು ಧಾರಾವಾಹಿಗಳು, ಒಂದು ರಿಯಾಲಿಟಿ ಶೋ ಕೂಡ ಪ್ರಸಾರ ಆಗಲಿದೆ. 

Zee ಎಂಟರ್‌ಟೇನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ (Zee), ಕಳೆದ ಮೂರು ದಶಕಗಳಿಂದ ಹಲವು ಭಾಷೆಗಳಲ್ಲಿ ಪ್ರೇಕ್ಷಕರನ್ನು ಮನರಂಜಿಸುತ್ತಾ ಬಂದಿದೆ. ಈಗ ಜೀ ಪವರ್ ( Zee Power Channel ) ಮೂಲಕ ಕನ್ನಡ ಮನರಂಜನೆ ಜಗತ್ತಿನಲ್ಲಿ ಮತ್ತೊಂದು ಅಲೆ ಸೃಷ್ಟಿಸಲು ಸಜ್ಜಾಗಿದೆ.

2025 ರ ಆಗಸ್ಟ್ 23 ರಂದು ಪ್ರಾರಂಭವಾಗಲಿರುವ ಜೀ ಪವರ್ ಮನರಂಜನೆಯಲ್ಲಿ ಹೊಸ ಯುಗವನ್ನು ಆರಂಭಿಸಲಿದೆ. ಇದು ಕೇವಲ ವಾಹಿನಿಯಲ್ಲ ಕಲ್ಪನೆ, ನಿಜಜೀವನ, ಕರುನಾಡಿನ ಸಂಸ್ಕೃತಿಯನ್ನು ಒಳಗೊಂಡ ವಾಹಿನಿಯಾಗಿರಲಿದೆ. ಪ್ರಬಲ ಹೀರೋಯಿನ್, ಹೀರೋ ಇರುವ ಧಾರಾವಾಹಿಗಳು, ಸಮಾಜವನ್ನು ತಲುಪುವ ವಾಸ್ತವ ಕರ‍್ಯಕ್ರಮಗಳು, ಮಹಿಳಾ ಪ್ರಧಾನ ಧಾರಾವಾಹಿಗಳು, ಬ್ಲಾಕ್‌ಬಸ್ಟರ್ ಸಿನಿಮಾಗಳು, ಹಬ್ಬದ, ವಿಶೇಷ ಕರ‍್ಯಕ್ರಮಗಳೊಂದಿಗೆ ಜೀ ಪವರ್ ಆಧುನಿಕ ಕನ್ನಡಿಗರ ನೆಚ್ಚಿನ ವಾಹಿನಿಯಾಗಲಿದೆ.

ಜೀ ಪವರ್ ಪ್ರತಿ ಪೀಳಿಗೆಯನ್ನೂ ತಲುಪುವುದು. ಮಹಿಳಾಪ್ರಧಾನ ಕಥೆಗಳು ಇದ್ದರೂ ಯುವಕರು, ಪುರುಷರ ಭಾವನೆಗಳಿಗೂ ಒತ್ತುಕೊಟ್ಟಿರುವುದರಿಂದ ಎಲ್ಲ ಪೀಳಿಗೆಯವರನ್ನೂ ತನ್ನತ್ತ ಸೆಳೆಯುವಲ್ಲಿ ಜೀ ಪವರ್ ಯಶಸ್ವೀ ಆಗಲಿದೆ. ಪ್ರತಿಯೊಂದು ಧಾರಾವಾಹಿಯೂ ತನ್ನ ಸಂಭಾಷಣೆ, ವಿಭಿನ್ನ ಕಥಾಹಂದರದಿಂದ ಮೊದಲದಿನದಿಂದಲೇ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ ಎಂಬ ನಿರೀಕ್ಷೆ ವಾಹಿನಿಯವರಿಗೆ ಇದೆಯಂತೆ.

Zee ಚೀಫ್ ಕಂಟೆಂಟ್ ಆಫೀಸರ್ ಆದ ರಾಘವೇಂದ್ರ ಹುಣಸೂರ್ ಅವರು " ಜೀ಼ ಪವರ್ ಮನರಂಜನಾ ಕ್ಷೇತ್ರದಲ್ಲಿ ಒಂದು ದಿಟ್ಟ ಹೆಜ್ಜೆಯಾಗಿದೆ. ಈ ವಾಹಿನಿಯಲ್ಲಿನ ಪ್ರಸಾರ ಆಗುವ ಧಾರಾವಾಹಿಗಳು ತಮ್ಮ ವಿಭಿನ್ನ, ಅಮೋಘವಾದ ಕಥೆಗಳ ಮೂಲಕ ಯುವಜನತೆಯನ್ನೂ ತನ್ನತ್ತ ಸೆಳೆಯಲಿದೆ. ಅಷ್ಟೇ ಅಲ್ಲದೆ ನಮ್ಮ ಕಥೆಗಳು ಸಂಕ್ಷಿಪ್ತ, ವಾಸ್ತವ ಆಲೋಚನೆಯನ್ನು ಪ್ರೇರೇಪಿಸುವಂತೆ ಇರಲಿದೆ. ಜೀ ಪವರ್ ನ ಮೂಲಕ ಕರುನಾಡ ಜನರಿಗೆ ಹಿಂದೆದೂ ಕಾಣದ ರೀತಿಯಲ್ಲಿ ಮನರಂಜನೆ ನೀಡುವ ಮೂಲಕ ಜೀ ಸಂಸ್ಥೆಯು ಜನರಿಗೆ ಮತ್ತಷ್ಟು ಹತ್ತಿರವಾಗಲಿದೆ" ಎಂದರು.

ಸಿಜು ಪ್ರಭಾಕರನ್, ಸೌತ್ ಅಂಡ್ ವೆಸ್ಟ್ ಚೀಫ್ ಕ್ಲಸ್ಟರ್ ಹೆಡ್, Zee, ಮಾತನಾಡಿ "ಜೀ ಪವರ್ ನ ಪ್ರಾರಂಭ ಕರ್ನಾಕದಲ್ಲಿನ ನಮ್ಮ ಪಯಣಕ್ಕೆ ಒಂದು ಮಹತ್ವದ ಮೈಲುಗಲ್ಲಾಗಿರಲಿದೆ. ನಾವು ಪ್ರೇಕ್ಷಕರ ಅಭಿರುಚಿಯನ್ನು ಅರ್ಥಮಾಡಿಕೊಂಡಿದ್ದು, ಈ ವಾಹಿನಿಯ ಮೂಲಕ ಎಲ್ಲ ವಯಸ್ಕರಿಗೂ ತಲುಪುವಂತಹ ಕಥೆಯನ್ನು ನೀಡಲಿದ್ದೇವೆ" ಎಂದರು.

ಭಾಸ್ಕರ್ ಅಯ್ಯರ್, ಬಿಸಿನೆಸ್ ಹೆಡ್, ಜೀ ಪವರ್, ಮಾತನಾಡಿ "ಜೀ ಪವರ್ ಹೈಬ್ರೀಡ್ ಚಾನೆಲ್ ಆಗಿದ್ದು ಇಲ್ಲಿ ಎಲ್ಲ ವರ್ಗದ ಜನರನ್ನು ತನ್ನತ್ತ ಸೆಳೆಯುವ ಕಂಟೆಂಟ್ ಇರೋದು ಈ ವಾಹಿನಿಯ ಒಂದು ವಿಶೇಷತೆ. ಅಷ್ಟೇ ಅಲ್ಲದೆ, ಈ ವಾಹಿನಿಯಲ್ಲಿ ಬರಲಿರುವ ೪ ಧಾರಾವಾಹಿಗಳು ಮಹಿಳಾ ಪ್ರಧಾನವಾಗಿದ್ದರೂ, ಅಲ್ಲಿ ಪುರುಷರು, ಯುವಜನತೆಯ ಭಾವನೆಗಳಿಗೂ ಬೆಲೆ ಕೊಟ್ಟಿರುವುದರಿಂದ ಇದು ಕನ್ನಡಿಗರನ್ನು ಮೊದಲ ದಿನದಿಂದಲೇ ತನ್ನತ್ತ ಆವರಿಸಲಿದೆ, ಅಷ್ಟೇ ಅಲ್ಲದೆ, ಇಲ್ಲಿ ಕರುನಾಡಿನ ಸಂಸ್ಕೃತಿ, ಕನ್ನಡಿಗರ ವಿಶಾಲ ಮನೋಭಾವ, ಶ್ರೀಮಂತ ಪರಂಪರೆ ಎಲ್ಲವೂ ತುಂಬಿ ತುಳುಕಲಿದೆ" ಎಂದರು.

ಜೀ ಪವರ್ ನಲ್ಲಿ, ರಾಜಕುಮಾರಿ, ಶುಭಸ್ಯ ಶೀಘ್ರಂ, ಜೋಡಿ ಹಕ್ಕಿ, ಗೌರಿ, ಒಂದು ರಿಯಾಲಿಟಿ ಶೋ ʼಹಳ್ಳಿ ಪವರ್ʼ ಸೇರಿದಂತೆ ಆರ‍್ಷಕ ಕರ‍್ಯಕ್ರಮಗಳು ಪ್ರಸಾರ ಆಗಲಿವೆ. ಈ ಎಲ್ಲ ಧಾರಾವಾಹಿಗಳು ಆಗಸ್ಟ್ 25ರಿಂದ ಶುರು ಆಗಲಿದ್ದು, ಗ್ರಾಂಡ್ ಲಾಂಚ್ ಇವೆಂಟ್ 23 ರಿಂದ ಪ್ರಸಾರ ಆಗಲಿದೆ.

ಜೀ ಪವರ್ ನ ಭವಿಷ್ಯ ರ‍್ಶನದೊಂದಿಗೆ ಪ್ರಾರಂಭಿಸಬಹುದು. ಪ್ರತಿದಿನ ಬೆಳಿಗ್ಗೆ 7.30 ರಿಂದ 9 ಗಂಟೆವರೆಗೆ ಪ್ರಸಾರವಾಗುವ ಈ ಕಾರ್ಯಕ್ರಮವು ಜ್ಯೋತಿಷ್ಯ, ದೈವಿಕ ಚಿಂತನೆಯನ್ನು ವೀಕ್ಷಕರ ಮುಂದಿಡುವುದು ಮಾತ್ರವಲ್ಲೇ ದಿನಭವಿಷ್ಯದ ಮುಖಾಂತರ ಅವರ ದಿನ ಹೇಗಿರಲಿದೆ ಎಂಬುದನ್ನು ತೋರಿಸಿಕೊಡಲಿದೆ. ಇನ್ನು ಈ ಕರ‍್ಯಕ್ರಮದಲ್ಲಿ ಪ್ರಖ್ಯಾತ ಜ್ಯೋತಿಷಿ ಗೋಪಾಲಕೃಷ್ಣ ಕಾಣಿಸಿಕೊಳ್ಳಲಿದ್ದಾರೆ.

ರಾಜಕುಮಾರಿ

ಸಿಟಿ ಜೀವನಕ್ಕೆ ಹೊಂದಿಕೊಳ್ಳುವ ಧೈರ್ಯಶಾಲಿ ಹಳ್ಳಿ ಹುಡುಗಿಯ ಕಥೆ. ಶಾಲೆಯ ಮೆಟ್ಟಿಲೇರದಿದ್ದರೂ ಈ ಹಳ್ಳಿ ಹುಡುಗಿ ಹೇಗೆ ತನ್ನ ಆಸೆ, ಕನಸಿನಂತೆ ಚಾಣಾಕ್ಷತನದಿಂದ ಯಶಸ್ವೀ ಮಹಿಳಾ ಉದ್ಯಮಿ ಆಗುವ ಕನಸನ್ನು ಮಿಠಾಯಿ ಅಂಗಡಿ ಇಡುವ ಮೂಲಕ ಸಾಧಿಸುತ್ತಾಳೆ ಎಂಬುದರ ಕುರಿತಾಗಿದೆ. ಈ ಧಾರಾವಾಹಿ ಪ್ರತಿದಿನ ಸಂಜೆ 7 ಗಂಟೆಗೆ, ಇದೇ ಆಗಸ್ಟ್ 25 ರಿಂದ ಪ್ರಸಾರ ಆಗಲಿದೆ.

'ಗೌರಿ' ಧಾರಾವಾಹಿ

ಇದೇ ಆಗಸ್ಟ್ 25 ರಿಂದ ಪ್ರಸಾರ ಆಗಲಿರುವ 'ಗೌರಿ' ಧಾರಾವಾಹಿ ಸಂಬಂಧಗಳನ್ನೇ ರ‍್ವಸ್ವ ಅಂದುಕೊಂಡಿರುವ ತಂಗಿ ಮತ್ತು ಸಂಬಂಧಕ್ಕೆ ಬೆಲೆಯೇ ಕೊಡದ ಅಕ್ಕ. ಅಷ್ಟೇ ತಂಗಿ ಹೇಗೆ ಎಲ್ಲಾ ಕಷ್ಟಗಳನ್ನು ನಗುನಗುತ್ತಲೇ ಎದುರಿಸುತ್ತಾಳೆ ಎಂಬುದನ್ನು ತೋರಿಸುತ್ತದೆ.

'ಜೋಡಿಹಕ್ಕಿ ಧಾರಾವಾಹಿ

ಶಿಕ್ಷಣವೇ ಸರ್ವಸ್ವ ಎಂಬ ಅಕ್ಷರಾ ಮತ್ತು ಹಣವೇ ರ‍್ವಸ್ವ ಎಂದು ನಂಬುವ ಗ್ರಾಮದ ಮುಖ್ಯಸ್ಥೆ ಭುವನೇಶ್ವರಿ ನಡುವಿನ ಸೈದ್ಧಾಂತಿಕ ರ‍್ಷಣೆಯ ಬಗೆಗಿನ ಧಾರಾವಾಹಿಯೇ 'ಜೋಡಿಹಕ್ಕಿ'. ಹಾಗೆಯೇ ಭುವನೇಶ್ವರಿ ಗೆ ವಿದ್ಯೆಯ ಮಹತ್ವದ ಬಗ್ಗೆ ಅರಿವು ಮೂಡಿಸುವಲ್ಲಿ ಯಶಸ್ವೀ ಆಗ್ತಾಳಾ ಅಕ್ಷರ ಎಂದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಈ ಧಾರಾವಾಹಿ ಪ್ರತಿದಿನ ರಾತ್ರಿ 8 ಗಂಟೆಗೆ ಪ್ರಸಾರ ಆಗಲಿದೆ.

ಶುಭಸ್ಯ ಶೀಘ್ರಂ ಧಾರಾವಾಹಿ

ರಾತ್ರಿ 8.30 ಕ್ಕೆ ಪ್ರಸಾರವಾಗುವ ಶುಭಸ್ಯ ಶೀಘ್ರಂ, ತನ್ನ ನಾಲ್ವರು ಹೆಣ್ಣುಮಕ್ಕಳು ಉತ್ತಮವಾದ ಮನೆಗೆ ಸೊಸೆಯಾಗಿ ಹೋಗಲಿ ಎಂದು ಬಯಸುವ ತಾಯಿಯ ಕುರಿತಾದ ಕೌಟುಂಬಿಕ ಧಾರಾವಾಹಿಯಾಗಿದೆ. ತನ್ನ ಕಿವಿ ಕೇಳದೆ ಇರುವ ಅಕ್ಕನ ಮದುವೆ ಜವಾಬ್ದಾರಿಯನ್ನು ಹೊತ್ತ ಶುಭ ಮದುವೆ ಬಗ್ಗೆ ಅಪಾರ ನಂಬಿಕೆ ಹೊತ್ತಿರುತ್ತಾಳೆ ಮತ್ತು ಆಕೆ ಹೇಗೆ ಮದುವೆ ಬಗ್ಗೆ ನಂಬಿಕೆಯೇ ಇಲ್ಲದ ಯುವರಾಜ್ ಅರಸು ನ ಯಾಕ್ ಆಗ್ತಾಳೆ ಎನ್ನುವುದು ಈ ಧಾರಾವಾಹಿಯಲ್ಲಿ ಕಾಣಿಸಲಿರುವ ಕುತೂಹಲ ಅಂಶ. ಇನ್ನು ಈ ಧಾರಾವಾಹಿಯಲ್ಲಿ ವಿಕಲಚೇತನರನ್ನು ಸಮಾಜ ಯಾವ ದೃಷ್ಟಿಯಲ್ಲಿ ನೋಡುತ್ತದೆ, ಮಧ್ಯಮ ರ‍್ಗದ ಜನರು ಎದುರಿಸುವ ತೊಂದರೆಗಳನ್ನು ಬಹಳಾ ಚಂದವಾಗಿ ತೋರಿಸಿದ್ದಾರೆ.

'ಹಳ್ಳಿ ಪವರ್'

ಪ್ರತಿದಿನ ರಾತ್ರಿ 9 ಗಂಟೆಯಿಂದ 10 ಗಂಟೆಗೆ ಪ್ರಸಾರ ಆಗಲಿರುವ 'ಹಳ್ಳಿ ಪವರ್' ರಿಯಾಲಿಟಿ ಶೋವನ್ನು ಅಕುಲ್ ಬಾಲಾಜಿ ನಿರೂಪಣೆ ಮಾಡಲಿದ್ದು, ಇದರಲ್ಲಿ ಸಿಟಿ ಹುಡುಗಿಯರು ಹಳ್ಳಿ ಜೀವನವನ್ನು ಹೇಗೆ ನಡೆಸಲಿದ್ದಾರೆ ಹಾಗೂ ಅವರು ಫೇಸ್ ಮಾಡುವ ಸವಾಲುಗಳು ಏನೆಂದು ತೋರಿಸಲಿದೆ. ಅಷ್ಟೇ ಅಲ್ಲದೇ ನಮಗೆ ಒಂದು ವಸ್ತುವನ್ನು ಕಳೆದುಕೊಂಡಾಗಲೇ ಅದರ ಮಹತ್ವ ಅರಿವಾಗೋದು ಎಂಬ ಅಂಶ ಈ ರಿಯಾಲಿಟಿ ಶೋ ನಲ್ಲಿ ಕಾಣಸಿಗುವುದರಿಂದ ಇದು ಎಮೋಷನಲಿ ವೀಕ್ಷಕರಿಗೆ ಹತ್ತಿರವಾಗಲಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!