
ಬೃಂದಾವನ ಧಾರಾವಾಹಿ ನಟ ವರುಣ್ ಆರಾಧ್ಯ ( Brindavana Serial Actor And Youtuber Varun Aradya ) ಹಾಗೂ ಸ್ಯಾಮ್ ಸಮೀರ್ ಅವರು ಅಡುಗೆ ಚಾಲೆಂಜ್‌ನಲ್ಲಿ ಭಾಗವಹಿಸಿದ್ದಾರೆ. ಇವರಿಬ್ಬರು ಬೇರೆ ಬೇರೆ ಪಾಸ್ತಾ ರೆಡಿ ಮಾಡಬೇಕು, ಅದನ್ನು ಎರಡೂ ಮನೆಯವರು ಟೇಸ್ಟ್ ಮಾಡಿ ಯಾರ ಅಡುಗೆ ಚೆನ್ನಾಗಿದೆ ಎಂದು ಹೇಳಬೇಕಿತ್ತು. ಅಡುಗೆ ಮನೆಯಲ್ಲಿ ಕೂತು ಹೀಗೆ ಹರಟೆ ಹೊಡೆಯುವಾಗ ಮದುವೆ ಮಾತುಕತೆ ಬಂದಿದೆ.
ವರುಣ್ ಆರಾಧ್ಯ: ನಿಮ್ಮ ಮದುವೆ ಯಾವಾಗ?
ಸ್ಯಾಮ್ ಸಮೀರ್: ಈಗ ನನಗೆ 26, ಮುಂದಿನ ವರ್ಷ ಮದುವೆ ಆಗ್ತೀನಿ. ನಿಮ್ಮ ಮದುವೆ ಯಾವಾಗ?
ವರುಣ್ ಆರಾಧ್ಯ: ಈಗ ನನಗೆ 24, ಇನ್ನು ಎರಡು ವರ್ಷ ಬಿಟ್ಟು ಮದುವೆ ಆಗ್ತೀನಿ. ಮನೆಯಲ್ಲಿ ಅಮ್ಮ ಒಬ್ಬರೇ ಇರ್ತಾರೆ, ಅವರಿಗೆ ಬೇಸರ ಆಗತ್ತೆ
ಸಮೀರ್: ವರುಣ್ ಸ್ಪೀಡ್‌ಗೆ ಇಪ್ಪತ್ತಾರೂವರೆ ವರ್ಷಕ್ಕೆ ಅಪ್ಪ ಆಗಿರ್ತಾರೆ. ಜೀವನದಲ್ಲಿ ಮೂವ್ ಆನ್ ಆಗ್ತಿರಬೇಕು, ಮದುವೆ ಆಗ್ತಿರಬೇಕು. ಯಾವುದಕ್ಕೂ ಸ್ಟಿಕ್ ಆನ್ ಆಗಬಾರದು, ಮತ್ತೆ ಲವ್ ಮ್ಯಾರೇಜ್ ಆಗಬೇಕು ಅಂತಿದೀನಿ.
ಸ್ಯಾಮ್ ಸಮೀರ್: ಮತ್ತೆ ಲವ್ ಯಾಕೆ?
ವರುಣ್ ಆರಾಧ್ಯ: ಲವ್ ಮ್ಯಾರೇಜ್ ಆದರೆ ಅವರು ಹೇಗೆ ಅಂತ ಅರ್ಥ ಆಗುತ್ತದೆ. ಅರೇಂಜ್ ಮ್ಯಾರೇಜ್‌ನಲ್ಲಿ ಅರ್ಥ ಮಾಡಿಕೊಳ್ಳೋದು ಸ್ವಲ್ಪ ತಡವಾಗುತ್ತದೆ. ಲವ್ ಮ್ಯಾರೇಜ್ ಆಗುವಾಗ ಎರಡೂ ಮನೆಯವರು ಒಪ್ಪಬೇಕು.
ಸಮೀರ್: ವೀಕ್ಷಕರು ನೀವು ಲವ್ ಕೂಡ ಮದುವೆ ಆಗುವಾಗ ಎರಡೀ ಮನೆಯವರು ಒಪ್ಪಬೇಕು, ಒಪ್ಪಿಸಿ ಮದುವೆ ಆಗಿ. ನಿಮ್ಮ ಮದುವೆ ವ್ಲಾಗ್ ಬರಲಿದೆ.
ವರುಣ್: ನಿಮ್ಮ ಮದುವೆ ವ್ಲಾಗ್ ಮೊದಲು ಆಗಬೇಕು
ಸಮೀರ್: ನನ್ನ ಮದುವೆಗೆ ಬರೀ 5 ಜನರು ಇರ್ತಾರೆ, ದೂರ ಹೋಗಿ ಮದುವೆ ಆಗ್ತೀನಿ.
ವರುಣ್: ನಾನು ಕೂಡ ಇರ್ತೀನಿ. ಕರ್ನಾಟಕದ ಕಾಸ್ಟ್‌ಲೀ ಯುಟ್ಯೂಬರ್ ನೀವು
ಸಮೀರ್: ಕಾಸ್ಟ್‌ಲೀ ಯುಟ್ಯೂಬರ್ಸ್ ಬೇಜಾನ್ ಜನರು ಇದ್ದಾರೆ
ಅಂದಹಾಗೆ ಟಿಕ್ ಟಾಕ್ ಸ್ಟಾರ್, ಯುಟ್ಯೂಬರ್ ವರುಣ್ ಆರಾಧ್ಯ ಅವರು ಈ ಹಿಂದೆ ವರ್ಷಾ ಕಾವೇರಿ ಎನ್ನುವವರ ಜೊತೆ ಲವ್‌ನಲ್ಲಿದ್ದರು. ಇವರಿಬ್ಬರು ಮದುವೆ ಆಗ್ತಾರೆ ಎನ್ನಲಾಗಿತ್ತು. ಆ ಬಳಿಕ ಬ್ರೇಕಪ್ ಆಗಿತ್ತು. ವರುಣ್ ಬೇರೆ ಹುಡುಗಿಯನ್ನು ಮದುವೆ ಆಗ್ತೀನಿ ಅಂತ ಹೇಳಿದ್ದಕ್ಕೆ ಬ್ರೇಕಪ್ ಆಗಿದೆ ಎಂದು ವರ್ಷಾ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿದ್ದರು. ಈ ವಿಚಾರ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು.
ಕೆಲ ದಿನಗಳ ಹಿಂದೆ ವರುಣ್ ಆರಾಧ್ಯ ಇನ್ನೊಂದು ಹುಡುಗಿಯನ್ನು ಪ್ರೀತಿಸುತ್ತಿದ್ದಾರೆ ಎಂಬ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಆ ಹುಡುಗಿಯ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ವರುಣ್ ಅವರು ಹಾರ್ಟ್ ಸಿಂಬಲ್ ಇಮೊಜಿಯನ್ನು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಆ ಹುಡುಗಿ ಕೂಡ ಹಾರ್ಟ್ ಸಿಂಬಲ್ ಇಮೊಜಿ ಹಾಕಿದ್ದಾರೆ. ಇದರ ಸ್ಕ್ರೀನ್‌ಶಾಟ್ ತೆಗೆದು ವೈರಲ್ ಮಾಡಲಾಗ್ತಿದೆ. ಇವರಿಬ್ಬರು ಸ್ನೇಹಿತರಾ? ಪ್ರೇಮಿಗಳಾ ಎನ್ನೋದನ್ನು ಇವರೇ ಹೇಳಬೇಕಿದೆ.
ಅಂದಹಾಗೆ ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ವರುಣ್ ಆರಾಧ್ಯ ಅವರು ಭಾಗವಹಿಸಲಿದ್ದಾರೆ ಎಂದು ಹೇಳಲಾಗ್ತಿದೆ. ಸೆಪ್ಟೆಂಬರ್ ಅಂತ್ಯದಲ್ಲಿ ಈ ಪ್ರಶ್ನೆಗೆ ಉತ್ತರ ಸಿಗಲಿದೆ. ನೀವು ಏನು ಹೇಳ್ತೀರಾ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.