ಜೈ ಜಗದೀಶ್‌ನ ನೋಡಿ ಓಡಿ ಹೋದ ವಿಜಯಲಕ್ಷ್ಮಿ; ಎರಡನೇ ಮದುವೆಗೆ ಒಪ್ಪಿದ್ಯಾಕೆ?

By Vaishnavi Chandrashekar  |  First Published May 31, 2023, 11:30 AM IST

ಮೊದಲ ಸಲ ಲವ್‌ ಸ್ಟೋರಿಯನ್ನು ರಿವೀಲ್ ಮಾಡಿದ ವಿಜಯ್‌ ಲಕ್ಷ್ಮಿ ಸಿಂಗ್. ಎಲ್ಲಿಂದ ಶುರುವಾಯ್ತು ಲವ್ ಸ್ಟೋರಿ?


ನಟ, ನಿರ್ದೇಶಕ, ನಿರ್ಮಾಪಕ ಹಾಗೂ ಕೊಡಗಿನ ಕುವರ ಜೈ ಜಗದೀಶ್. ಮೂರು ಜನ ಹೆಣ್ಣು ಮಕ್ಕಳ ನಂತರ ಹುಟ್ಟಿದ್ದು ನಟ ರಾಣಿ ಮಹಾರಾಣಿ ಸಿನಿಮಾ ರಿಲೀಸ್ ಸಮಯದಲ್ಲಿ ನಟಿ ವಿಜಯ್‌ಲಕ್ಷ್ಮಿ ಸಿಂಗ್‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.  

ಲವ್ ಸ್ಟೋರಿ:

Tap to resize

Latest Videos

ವಿಜಯ್ ಲಕ್ಷ್ಮಿಯಾಗಿ ನೀವು ನಮ್ಮ ಲವ್ ಸ್ಟೋರಿ ಕೇಳಿದರೆ ಜಗದೀಶ್ ಹೇಳುವ ಸ್ಟೋರಿ ಕರೆಕ್ಟ್‌ ಆಗಿದೆ. ಮುನ್ನಿಯಾಗಿ ನಮ್ಮ ಸ್ಟೋರಿ ಬೇರೆ ಇದೆ. ನಾನು 7ನೇ ಕ್ಲಾಸ್‌ನಲ್ಲಿದ್ದೆ ಜಗದೀಶ್ ಅವರು ಪಿಯುಸಿ ಓದುತ್ತಿದ್ದರು. ಮೈಸೂರಿನ ವುಡ್‌ಲ್ಯಾಂಡ್ ಥಿಯೇಟರ್‌ನಲ್ಲಿ ಸಿನಿಮಾ ನೋಡಲು ಹೋಗಿದ್ದೆ. ಜಗದೀಶ್ ಸ್ನೇಹಿತರ ಜೊತೆ ಬಂದಿದ್ದರು ನಾನು ನನ್ನ ಸ್ನೇಹಿತೆ ಜೊತೆ ಹೋಗಿದ್ದೆ...intervalನಲ್ಲಿ ಪಾಪ್ ಕಾರ್ನ್ ಮತ್ತು ಟಾಫಿ ತಂದು ನನ್ನ ಸ್ನೇಹಿತೆಗೆ ಕೊಟ್ಟರು ನಾನು ಬೇಡ ಅಂತ ತಿರುಗಿ ನೋಡಲಿಲ್ಲ ಆಕೆ ಇರಲಿ ಬಿಡಿ ಕೊಟ್ಟಿದ್ದಾರೆ ಅಂತ ಸುಮ್ಮನಾದೆವು. ಅದಾದ ಮೇಲೆ ಸಿನಿಮಾ ಮುಗಿಯುತ್ತಿದ್ದಂತೆ ಜಗದೀಶ್ ನಮ್ಮನ್ನು ಫಾಲೋ ಮಾಡಲು ಶುರು ಮಾಡಿದರು. ಇವರಿಂದ ತಪ್ಪಿಸಿಕೊಳ್ಳಲು ಓಡಿದಾಗ ಜೀಪ್ ಅಡ್ಡ ಬಂದಿತ್ತು ತಕ್ಷಣ ಜಗದೀಶ್ ಕೈ ಹಿಡಿದು ಬೇಬಿ ಸ್ಟಾಪ್ ಮಾಡು ಅಂದ್ರು. ಆ ಕಾಲದಲ್ಲಿ ಬೇಬಿ ಅನ್ನೋದು ಲವರ್ಸ್‌ ಹೆಚ್ಚಿಗೆ ಬಳಸುತ್ತಿದ್ದರು. ಅಲ್ಲಿಂದ ಎಕ್ಸೇಪ್ ಆಗಿ ಐಸ್‌ ಕ್ರೀಂ ತಿನ್ನಲು ಹೋಗಿದ್ದಾಗ ಅಲ್ಲಿಗೂ ಬಂದ್ದರು. ಬಿಲ್ ಕೊಡಲು ಹೋದಾಗ ಆ ಹುಡುಗರು ಕೊಟ್ರು ಅಂತ ಹೇಳಿದರು ಈಗ ನಾವು ಥ್ಯಾಂಕ್ಸ್ ಹೇಳುವ ಪರಿಸ್ಥಿತಿ ಬಂತು. ಮರದ ಬಳಿ ನಿಂತಿದ್ದರು ಅಲ್ಲಿ ಹೋಗಿ ಹೇಳಿದೆ...ಆಗ ಜಗದೀಶ್ ನಿಮ್ಮ ಮನೆಯಲ್ಲಿ ಎಲ್ಲಿದೆ ಎಂದು ಕೇಳಿದರು. ನಾನು ಏನೂ ಹೇಳಲಿಲ್ಲ. ಅವರ ಸ್ನೇಹಿತರಿಗೆ ಹೇಳಿ ಫಾಲೋ ಮಾಡಿಸಿದರು. ಸರಸ್ವತಿ ಪುರಂ ಮೊದಲ ಹಂತದಲ್ಲಿ ಮನೆ ಇತ್ತು ಮನೆ ಗೊತ್ತಾಗಬಾರದು ಎಂದು 9ನೇ ಹಂತದಲ್ಲಿ ಇಳಿದುಕೊಂಡೆ. ಅದು ನಮ್ಮ ಮೊದಲ ಭೇಟಿ. ಸಂಗ್ರಾಮ್ ಮತ್ತು ಜಗದೀಶ್ ಸ್ನೇಹಿತರು. ನಾನು ಸಂಗ್ರಾಮ ತಂಗಿ ಎಂದು ಗೊತ್ತಾಗುತ್ತಿದ್ದಂತೆ ಇದೆಲ್ಲಾ ಬಿಟ್ಟರು ಎಂದು ವಿಜಯ್‌ ಲಕ್ಷ್ಮಿ ಸಿಂಗ್ ಮಾತನಾಡಿದ್ದಾರೆ. 

ಜೈ ಜಗದೀಶ್‌ಗೆ ನಾನು 2ನೇ ಪತ್ನಿ, ನನ್ನ ದೃಷ್ಠಿಯಲ್ಲಿ ನಾನೇ ಮೊದಲು: ಗೊಂದಲ ಬಿಚ್ಚಿಟ್ಟ ವಿಜಯಲಕ್ಷ್ಮಿ ಸಿಂಗ್

ಸಿನಿಮಾ ಅವಕಾಶಗಳು ಹೆಚ್ಚಿಗೆ ಬರುತ್ತಿದ್ದ ಕಾರಣ ಬೆಂಗಳೂರಿಗೆ ಹೋಗುವುದಾಗಿ ಹೇಳಿದರು. ಬೇಸರ ಆಗಿದ್ದು ನಿಜ ಆದರೆ ಸುಮ್ಮನೆ ಆದೆ. ಕೆಲವು ದಿನಗಳ ನಂತರ ವಿಚಾರ ಕಿವಿ ಬಿತ್ತು ಜಗದೀಶ್ ಮದುವೆ ಆಗಿದ್ದಾರೆ ಎಂದು. ರೂಪಾ ಅನ್ನೋ ಸುಂದರವಾಗಿರುವ ಹುಡುಗಿಯರನ್ನು ಜಗದೀಶ್ ಮದುವೆಯಾಗಿದ್ದಾರೆ ಅಂತ ಅಂಬರೀಶ್ ಬಂದು ಹೇಳಿದರು. ಹನಿಮೂನ್‌ಗೆ ಹೋಗುವಾಗ ಮೈಸೂರಿಗೆ ಬಂದು ನಮ್ಮ ಮನೆಯಲ್ಲಿ ಊಟ ಮಾಡಿದ್ದರು ..ಅವರ ಲೈಫ್ ನಡೆಯುತ್ತಿತ್ತು. ಅದಾದ ಮೇಲೆ ನಾನು ಇಂಡಸ್ಟ್ರಿಗೆ ಬಂದೆ ನಾವೆಲ್ಲ ವುಡ್‌ಲ್ಯಾಂಡ್‌ ಹೋಟೆಲ್‌ನಲ್ಲಿ ಉಳಿದುಕೊಂಡಿದ್ವಿ. ಮದ್ವೆ ಆದ್ಮೇಲೆ ಯಾಕೆ ಜಗದೀಶ್ ಹೋಟೆಲ್‌ನಲ್ಲಿ ಉಳಿದುಕೊಳ್ಳುತ್ತಿದ್ದರು ಯಾಕೆ ಎಂದು ತಿಳಿದುಕೊಂಡಾಗ ಫ್ಯಾಮಿಲಿಯಿಂದ ದೂರ ಉಳಿದುಬಿಟ್ಟಿದ್ದಾರೆ ಎಂದು ತಿಳಿಯಿತ್ತು. ಬಂಧನ ಸಿನಿಮಾ ಮೂಲಕ ನಮ್ಮಿಬ್ಬರ ಬಂಧನ ಶುರುವಾಯ್ತು. 8 ವರ್ಷಗಳ ಕಾಲ ನಡೆಯಿತ್ತು ಅವರ ಡಿವೋರ್ಸ್‌ ಎಲ್ಲಾ ಅವರಿಗೆ ಅರ್ಪಿತಾ ಅನ್ನೋ ಮಗಳು ಇದ್ದಾಳೆ ನನ್ನ ಜೊತೆ ಚೆನ್ನಾಗಿದ್ದಾಳೆ. ರಾಣಿ ಮಾಹರಾಣಿ ಸಿನಿಮಾ ಸಮಯದಲ್ಲಿ ನಾವು ಮದುವೆ ಮಾಡಿಕೊಂಡೆವು ಈಗ 33 ವರ್ಷಗಳ ದಾಂಪತ್ಯ ಜೀವನ ಎಂದು ವಿಜಯ್ ಲಕ್ಷ್ಮಿ ಹೇಳಿದ್ದಾರೆ. 

ಲಕ್ಷ್ಮಿ ಅಂದ್ರೆ ಭಯ:

ಸಿನಿಮಾ ಚಿತ್ರೀಕರಣದ ಆರಂಭದಲ್ಲಿ ಲಕ್ಷ್ಮಿ ಅಂದ್ರೆ ಭಯ ಇತ್ತು. ನಿಮ್ಮ ಜೊತೆ ಆಕ್ಟ್‌ ಮಾಡುವುದಕ್ಕೆ ನನಗೆ ತುಂಬಾ ಭಯ ಇದೆ ಸ್ವಲ್ಪ ಸುಲಭ ಮಾಡಿ ಎಂದು ನಾನು ನೇರವಾಗಿ ಹೋಗಿ ಹೇಳಿಬಿಟ್ಟೆ. ಯಾಕೆ ಭಯ ಮಾಡಿಕೊಳ್ಳುತ್ತಿರಾ? ನಾನು ಆ ರೀತಿ ಇಲ್ಲ ಎಂದರು. ಮೊದಲು ಒಂದು ವಾರ ಸ್ವಲ್ಪ ಕಷ್ಟ ಇತ್ತು ನಾನು ಮನವಿ ಮಾಡಿಕೊಂಡ ಮೇಲೆ ಗತ್ತು ಬಿಟ್ಟರು ಆಮೇಲೆ ನನಗೆ ಒಳ್ಳೆ ಸ್ನೇಹಿತರಾದು. ಈಗ ತುಂಬಾ ಕೂಲ್ ಆಗಿದ್ದಾರೆ ಎಂದಿದ್ದಾರೆ ಜಗದೀಶ್. 

ತಮ್ಮದೇ ಮದುವೆ ಎಂದು ಗೊತ್ತಿಲ್ಲದೆ ವಿಜಯ್‌ಲಕ್ಷ್ಮಿ ಸಿಂಗ್‌ಗೆ ತಾಳಿ ಕಟ್ಟಿದ ಜೈ ಜಗದೀಶ್; ಏನಿದು ಕಥೆ?

'ಜಕ್ಕೂರ್ ಫ್ಲೈಯಿಂಗ್ ಸ್ಕೂಲ್‌ನಲ್ಲಿ ನಾನು ಟ್ರೈನಿಂಗ್ ತೆಗೆದುಕೊಳ್ಳುತ್ತಿದ್ದೆ. ಸ್ನೇಹಿತನೊಬ್ಬನಿಗೆ ಕೊಬ್ಬ ಜಾಸ್ತಿ ಇದೆ ಏನಾದರೂ ಮಾಡಿ ಇಳಿಸಬೇಕು ಎಂದು ಹೇಳಿದಾಗ ಸರಿ ಏನಾದರೂ ಮಾಡು ಎಂದರು. ತಕ್ಷಣ ನಾನು ಅವನನ್ನು ಕರೆದುಕೊಂಡು ಎರಡು ಸಾವಿರ ಫೀಟ್ ಮೇಲೆ ಕರೆದುಕೊಂಡು ಕೆಳಗೆ ಡ್ರಾಪ್ ಮಾಡಿದೆ. ನಾನು ಪದಗಳಲ್ಲಿ ಆ ಅನುಭವ ಹೇಳಿದರೆ ನಿಮಗೆ ಗೊತ್ತಾಗಲ್ಲ ಫೀಲ್ ಮಾಡಬೇಕು. ನಮ್ಮ ಸರ್ ಕೇಳಿದರು ಯಾಕೆ ಎಂದು...ಆಗ ಹೇಳಿದೆ ಕೊಬ್ಬು ಮಾಡುತ್ತಾನೆ ಅದಿಕ್ಕೆ ಫ್ಲೈಟ್ ಡ್ರಾಪ್ ಮಾಡಿದೆ ಎಂದೆ. 

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!