ಈ ವಾರ ವೀಕೆಂಡ್ ವಿತ್ ರಮೇಶ್ ಸಾಧಕರ ಖುರ್ಚಿಯಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿಶೇಷ ಅತಿಥಿ ಎನ್ನಲಾಗಿದೆ.
ಪ್ರತಿ ವಾರ ವೀಕೆಂಡ್ ವಿತ್ ರಮೇಶ್‌ನ ಮುಂದಿನ ಅತಿಥಿ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿರುತ್ತೆ. ಕಳೆದ ವಾರ ವೀಕೆಂಡ್ ಖುರ್ಚಿಯಲ್ಲಿ ಖ್ಯಾತ ಚಿತ್ರ ಸಾಹಿತಿ ದೊಡ್ಡರಂಗೇಗೌಡ ಹಾಗೂ ಹಿರಿಯ ನಟ ಜೈ ಜಗದೀಶ್ ಕಾಣಿಸಿಕೊಂಡಿದ್ದರು. ಈ ಬಾರಿ ಯಾರು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಇದೀಗ ಪ್ರೇಕ್ಷಕರ ಕುತೂಹಕ್ಕೆ ತೆರೆ ಬಿದ್ದಿದೆ. ಈ ಬಾರಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವೀಕೆಂಡ್ ಕುರ್ಚಿ ಏರುತ್ತಿದ್ದಾರೆ ಎನ್ನಲಾಗಿದೆ. ಪ್ರತಿಬಾರಿಯೂ ಸಿನಿಮಾದವವರನ್ನು ಮಾತ್ರ ಕರೆಸುತ್ತಿದ್ದೀರಿ ಎಂದು ಪ್ರೇಕ್ಷಕರು ಅಸಮಧಾನ ಹೊರ ಹಾಕುತ್ತಿದ್ದರು. ಈ ಬಾರಿ ರಾಜಕೀಯ ವ್ಯಕ್ತಿ ವೀಕೆಂಡ್ ಖುರ್ಚಿ ಏರುತ್ತಿರುವುದು ಕುತೂಹಲ ಹೆಚ್ಚಾಗಿದೆ.
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿರುವ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದೆ. ಕಾಂಗ್ರೆಸ್ ಗೆಲುವಿನ ಪ್ರಮುಖ ರುವಾರಿ ಡಿಕೆ ಶಿವಕುಮಾರ್ ಈಗ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಕಾಂಗ್ರೆಸ್ನ ಜಯಭೇರಿ ಬಳಿಕ ರಾಷ್ಟ್ರ ರಾಜಕೀಯದಲ್ಲಿಯೂ ಡಿಕೆ ಶಿವಕುಮಾರ್ ಪ್ರಮುಖ ವ್ಯಕ್ತಿಯಾಗಿ ಬಿಂಬಿತವಾಗುತ್ತಿದ್ದಾರೆ. ಈ ನಡುವೆ ಡಿಕೆ ಶಿವಕುಮಾರ್ ವೀಕೆಂಡ್ ವಿತ್ ರಮೇಶ್‌ನ ಸಾಧಕರ ಖುರ್ಚಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಟ್ರಬಲ್ ಶೂಟರ್, ಕನಕಪುರದ ಬಂಡೆ ಎಂದೇ ಖ್ಯಾತಿಗಳಿಸಿರುವ ಡಿಕೆ ಶಿವಕುಮಾರ್ ಎಪಿಸೋಡ್‌ಗೆ ಪ್ರೇಕ್ಷಕರು ಕಾಯುತ್ತಿದ್ದಾರೆ.
Weekend With Ramesh: ವರಮಹಾಲಕ್ಷ್ಮಿ ಹಬ್ಬದಂದೇ ಪತ್ನಿಯ ತಾಳಿ ಮಾರಿದ್ದ ಪ್ರೇಮ್! ಕಣ್ಣೀರಾದ ನಟ
ಅಂದಹಾಗೆ ಈ ಬಗ್ಗೆ ಜೀ ಕನ್ನಡ ವಾಹಿನಿ ಇನ್ನೂ ಬಹಿರಂಗ ಪಡಿಸಿಲ್ಲ. ಸಾಮಾನ್ಯವಾಗಿ ಭಾನುವಾರದ ಎಪಿಸೋಡ್ ಮುಗಿದ ಎರಡೇ ದಿನಕ್ಕೆ ಅಂದರೆ ಮಂಗಳವಾರದಂದು ಮುಂದಿನ ವೀಕೆಂಡ್ನ ಅತಿಥಿ ಯಾರೆಂಬ ಪ್ರೋಮೋ ಬಿಡುಗಡೆ ಮಾಡಲಾಗುತ್ತದೆ. ಆದರೆ ಈ ಬಾರಿ ಯಾವುದೇ ಪ್ರೋಮೋ ಆಗಲಿ, ಸುಳಿವು ಬಿಟ್ಟು ಕೊಡುವ ಫೋಟೊಗಳನ್ನಾಗಲಿ ಜೀ ವಾಹಿನಿ ಹಂಚಿಕೊಂಡಿಲ್ಲ. ಆದರೆ ಕೆಲವು ಮೂಲಗಳ ಪ್ರಕಾರ, ಡಿಕೆ ಶಿವಕುಮಾರ್ ಈ ಬಾರಿ ವೀಕೆಂಡ್ ವಿತ್ ರಮೇಶ್‌ನ ಅತಿಥಿ ಆಗುವ ಬಗ್ಗೆ ಬಹಿರಂಗ ಪಡಿಸಿವೆ. ಈಗಾಗಲೇ ಡಿಕೆಶಿ ಎಪಿಸೋಡ್ನ ಚಿತ್ರೀಕರಣ ಮುಗಿದಿದೆಯಂತೆ. ಮುಂದಿನ ವಾರ ಎರಡು ದಿನಗಳ ಕಾಲ ಡಿ.ಕೆ.ಶಿವಕುಮಾರ್ ಎಪಿಸೋಡ್ ಪ್ರಸಾರವಾಗಲಿದೆ ಎನ್ನಲಾಗುತ್ತಿದೆ.
ಕನ್ನಡಿಗರ ಮನ ಗೆದ್ದ ಡಾಲಿ ಧನಂಜಯ್ 'ವೀಕೆಂಡ್ ವಿತ್ ರಮೇಶ್' ಎಪಿಸೋಡ್‌ಗೆ ಸಿಕ್ಕ ಟಿವಿಆರ್ ಎಷ್ಟು?
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ರಾಜಕೀಯ ವ್ಯಕ್ತಿಗಳು ಭಾಗಿಯಾಗುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ಸಿದ್ದರಾಮಯ್ಯ, ಯಡಿಯೂರಪ್ಪ, ದೇವೇಗೌಡ ಭಾಗಿಯಾಗಿದ್ದರು. ಇದೀಗ ಡಿಕೆಶಿ ಕೆಂಪು ಖುರ್ಚಿ ಏರುತ್ತಿದ್ದಾರೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಡಿಕೆ. ಶಿವಕುಮಾರ್ ಅವರ ಬಾಲ್ಯ, ಶಿಕ್ಷಣ, ರಾಜಕೀಯ ಎಂಟ್ರಿ, ಗೆಲುವು, ಜೊತೆಗೆ ಸಿಬಿಐ, ಇಡಿ, ಐಟಿ ಪ್ರಕರಣಗಳ ಬಗ್ಗೆಯೂ ಅನಾವರಣವಾಗಲಿದೆ. ಇನ್ನೂ ಯಾರೆಲ್ಲ ಭಾಗಿಯಾಗುತ್ತಾರೆ ಎಂದು ಕಾದುನೋಡಬೇಕಿದೆ.