Asianet Suvarna News Asianet Suvarna News

ಜೈ ಜಗದೀಶ್‌ಗೆ ನಾನು 2ನೇ ಪತ್ನಿ, ನನ್ನ ದೃಷ್ಠಿಯಲ್ಲಿ ನಾನೇ ಮೊದಲು: ಗೊಂದಲ ಬಿಚ್ಚಿಟ್ಟ ವಿಜಯಲಕ್ಷ್ಮಿ ಸಿಂಗ್

ಇಸ್ಮಾರ್ಟ್‌ ರಿಯಾಲಿಟಿ ಶೋನಲ್ಲಿ ಮೊದಲ ಬಾರಿಗೆ ಎರಡನೇ ಮದುವೆ ಬಗ್ಗೆ ಮಾತನಾಡಿದ ಜೈ ಜಗದೀಶ್. ಮೊದಲ ಮಗುವಿನ ನೋವು ಅರ್ಥ ಆಗುವುದಿಲ್ಲ....
 

Jai Jagadish clarifies about second marriage and vijayalakshmi perspective of life vcs
Author
Bangalore, First Published Aug 8, 2022, 4:07 PM IST

ಕನ್ನಡ ಚಿತ್ರರಂಗದ ಸ್ಟಾರ್ ಕಪಲ್ ಜೈ ಜಗದೀಶ್ ಮತ್ತು ವಿಜಯಲಕ್ಷ್ಮಿ ಸಿಂಗ್ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ವಾರ ಪ್ರಸಾರವಾದ ಮನಸ್ಸು ಬಿಚ್ಚಿ ಮಾತನಾಡುವ ಎಪಿಸೋಡ್‌ನಲ್ಲಿ ಇಬ್ಬರೂ ಮೊದಲ ಬಾರಿಗೆ ಎರಡನೇ ಮದುವೆ ಬಗ್ಗೆ ಮಾತನಾಡಿದ್ದಾರೆ. ಮೊದಲ ಮಗುವಿಗೆ ಅಗಿರುವ ತಂದೆ ಪ್ರೀತಿ ಕೊರತೆ, ಪ್ರೀತಿ ಕೊರತೆ ಮಗಳನ್ನು ವಿಜಯಲಕ್ಷ್ಮಿ ಹೇಗೆ ನೋಡಿಕೊಳ್ಳುತ್ತಿದ್ದಾರೆ ಎಂದು ಹಂಚಿಕೊಂಡಿದ್ದಾರೆ.

ವಿಜಯಲಕ್ಷ್ಮಿ ಸಿಂಗ್ ಮಾತು:

'ನಮ್ಮ ಲವ್ ಸ್ಟೋರಿಯಲ್ಲಿ ನನ್ನ ಕಡೆಯಿಂದ ಹೇಳಬೇಕೆಂದರೆ ಒಂದು ಗೊಂದಲ ಯಾವಾಗಲೂ ಇತ್ತು. Will i be ever looked as second women? ಈಗ ನನ್ನ ಕಥೆಯಿಂದ ತೆಗೆದುಕೊಂಡು ಹೋಗಿ ನೋಡಿದರೆ ನಾನು ಫಸ್ಟ್‌ ವುಮೆನ್ ಆಗುವೆ. ಆ ಕಡೆಯಿಂದ ನೋಡಿದರೆ ನಾನು ಸೆಕೆಂಡ್ ವುಮೆನ್ ಆಗ್ತೀನಿ. ಜಗದೀಶ್ ಅವರಿಗೆ ಡಿವೂರ್ಸ್‌ ಸಿಗ್ತು, ರೂಪ ಕೂಡ ಇನ್ನೊಂದು ಮದ್ವೆಯಾಗಿ ಅಕೆ ಕೂಡ ಲೈಫಲ್ಲಿ ಸೆಟಲ್ ಆಗಿದ್ದಾರೆ. ನನ್ನ ಮೂರು ಮಕ್ಕಳು ಮತ್ತು ಅರ್ಪಿತಾ, ನಾಲ್ಕು ಮಕ್ಕಳು ಚೆನ್ನಾಗಿ ಖುಷಿ ಖುಷಿಯಾಗಿದ್ದಾರೆ. ಇದೆಲ್ಲಾ ನೋಡಿದಾಗ ಒಂದು ರೀತಿ ಸಮಾಧಾನ ಆಗುತ್ತೆ. ದೊಡ್ಡ ಮಗಳನ್ನು ನೋಡಿದರೆ ಒಂದು ಕಾಡುತ್ತೆ ಅವಳಿಗೆ ನಾನು ಫುಲ್‌ ಫ್ಲೆಜ್ಡ್‌ ತಾಯಿಯಾಗಿ ಇರಲಿಲ್ಲ ಎರಡು ಮೂರು ವರ್ಷ ಅವಳಿಗೆ ಅಂತ ಇಡಬೇಕಿತ್ತು ಅನಂತರ ಮಕ್ಕಳು ಹುಟ್ಟಬೇಕಿತ್ತು. ಇದರ ಜೊತೆಗೆ ಅರ್ಪಿತಾ ಹೊಂದಿಕೊಳ್ಳುತ್ತಿದ್ದರು. ರೂಪಾ ಚೆನ್ನಾಗಿ ಹೊಂದಿಕೊಂಡು ನನ್ನ ಮಕ್ಕಳನ್ನು ನೋಡಿಕೊಂಡಿದ್ದಾಳೆ. ನಾನು ಪತಿ ಜಗದೀಶ್‌ಗೆ ಕ್ಷಮೆ ಕೇಳುವುದಾದರೆ ಅದು ನಾನು ತೆಗೆದುಕೊಂಡಿರುವ ನಿರ್ಧಾರಗಳಿಗೆ ಕೇಳಬೇಕು ಅದರಿಂದ ಆದ ನಷ್ಟ ಇದಕ್ಕೆಲ್ಲಾ ಸಾರಿ' ಎಂದು ವಿಜಯಲಕ್ಷ್ಮಿ ಸಿಂಗ್ ಮಾತನಾಡಿದ್ದಾರೆ.

Jai Jagadish clarifies about second marriage and vijayalakshmi perspective of life vcs

'ಸಮಾಜಕ್ಕೆ ಉತ್ತರ ಕೊಡುವ ಸಮಯದಲ್ಲಿ ನಾನು ಮದ್ವೆ ಆಗಿದ್ದು. ಇದು ತುಂಬಾನೇ ಕಷ್ಟ ಏಕೆಂದರೆ ಹೃದಯದ ಮಾತು ಕೇಳೋದು ಮನಸ್ಸಿನ ಮಾತು ಕೇಳೋದಾ ಅನ್ನೋ ಗೊಂದಲವಿತ್ತು. ಜೊತೆಗೆ ನಾವು ಎದುರಿಸಬೇಕಿದ್ದ ಪೋಷಕರು, ಅಣ್ಣಂದಿರು, ಜಗದೀಶ್ ಕುಟುಂಬ ರೂಪಾ ಕುಟುಂಬ ನೋಡಿದರೆ ಇದೆಲ್ಲಾ ಬೇಕಿತ್ತಾ ಅನಿಸುತ್ತಿತ್ತು. ಆದರೆ ಪ್ರತಿ ಸಲ ಜಗದೀಶ್‌ನ ಭೇಟಿ ಮಾಡಿದಾಗ ಸೋತೆ. ಹೃದಯ ಮಾತುಗಳನ್ನು ಕೇಳಿದೆ. ನಾನು ಜನರಿಂದ ಜಾಸ್ತಿ ಮಾತುಗಳು ಕೇಳಬೇಕಿತ್ತು, ಇವತ್ತು ಎಲ್ಲಾನೂ ಚೆನ್ನಾಗಿ ಕಾಣಿಸುತ್ತಿದೆ ಏಕೆಂದರೆ ನಾವು ಗೊಂದಲ ಮಾಡಿಕೊಂಡಿಲ್ಲ. ಜಗದೀಶ್ ದೊಡ್ಡ ಮಗಳ ಅವಳ ಫ್ಯಾಮಿಲಿ ಎಲ್ಲರ ಜೊತೆ ಪ್ರೀತಿ ಚೆನ್ನಾಗಿ ಹಂಚಿಕೊಂಡಿರುವೆ' ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ.

ಜಗದೀಶ್ ಮಾತು: 

' ನನ್ನ ದೊಡ್ಡ ಮಗಳು ಅರ್ಪಿತಾ ತುಂಬಾ ಕಷ್ಟ ಪಟ್ಟಿದ್ದಾಳೆ. ಯಾವುದೇ ಹೆಣ್ಣು ಮಗುವಿರಲ್ಲಿ ಅವರ ಜೀವನದಲ್ಲಿ ತಂದೆ ಮೇಜರ್‌ ಪಾತ್ರ ವಹಿಸುತ್ತಾರೆ. ಆಕೆ ಮನಸ್ಸು ಹೃದಯಕ್ಕೆ ಎಷ್ಟು ಗಾಸಿಯಾಗಿದೆ ಅಂತ ನಾನು ಈಗಲೂ ಫೀಲ್ ಆಗುತ್ತದೆ. ನೆನಪಿಸಿಕೊಂಡೆ ಬೇಸರವಾಗುತ್ತದೆ. ಇದನ್ನು ಹೇಗೆ ಸರಿ ಮಾಡಬೇಕು ಗೊತ್ತಿಲ್ಲ ಹೇಗೆ ಮಾಡುತ್ತೀನಿ ಗೊತ್ತಿಲ್ಲ ಈ ಗೊಂದಲದಲ್ಲಿ ಜೀವನ ಪೂರ್ತಿ ಇರ್ತೀನಿ. ಇವೆಲ್ಲಾ ತುಂಬಾ ಕಷ್ಟದ ಕೆಲಸಗಳು' ಎಂದಿದ್ದಾರೆ ಜೈ ಜಗದೀಶ್.

ತಮ್ಮದೇ ಮದುವೆ ಎಂದು ಗೊತ್ತಿಲ್ಲದೆ ವಿಜಯ್‌ಲಕ್ಷ್ಮಿ ಸಿಂಗ್‌ಗೆ ತಾಳಿ ಕಟ್ಟಿದ ಜೈ ಜಗದೀಶ್; ಏನಿದು ಕಥೆ?

ಅರ್ಪಿತಾ ಭೇಟಿ:

'ಜಗದೀಶ್ ಮೊದಲ ಪತ್ನಿ ಮಗಳು ಅರ್ಪಿತಾ ಮೊದಲಿನಿಂದಲ್ಲೂ ನನಗೆ ಚೆನ್ನಾಗಿ ಗೊತ್ತು. ಅವಳಲ್ಲಿ ಒಂದು ಒಳ್ಳೆಯ ಗುಣ ಏನೆಂದರೆ ನನ್ನನ್ನು ತುಂಬಾ ಚೆನ್ನಾಗಿ ಅಪ್ಪಿಕೊಂಡಳು ಏಕೆಂದರೆ ನಾನು ಪ್ರಾಮಾಣಿಕಳಾಗಿದ್ದೆ ಅಂತ. ನಮ್ಮ ಜೊತೆ ಪ್ರತಿ ವೀಕೆಂಡ್ ಜೊತೆಗಿದ್ದಳು ಎಲ್ಲಾ ಶೂಟಿಂಗ್‌ಗೂ ಕರೆದುಕೊಂಡು ಹೋಗುತ್ತೀವಿ. ರೂಪಾ ಮತ್ತು ಅರ್ಪಿತಾ ಅವರಿಗೆ ನಾನು ಏನು ಹೇಳಬೇಕು ಅಂದ್ರೆ ಜಗ್ಗ ನನ್ನವನೇ ಮುಂಚೆ. ನಾನು ಅವನನ್ನು ನೋಡಿ ಮೆಚ್ಚಿದು ಅವನು ನನ್ನ ಮೆಚ್ಚಿದ್ದು ಡೆಸ್ಟಿನಿ ಎಲ್ಲೋ ಕರೆದುಕೊಂಡು ಹೋಗಿ ಅವರು ಸಿಕ್ಕಿದ್ದು. ಮದುವೆ ಅಂತ ಆದ್ಮೇಲೆ ಸೊಸೈಟಿಯಲ್ಲಿ ಮೊದಲು ಅವರಾದರೂ ಆಮೇಲೆ ನಾನು ಬಂದೆ. ನಾನು ಹಾಗೆ ನಿಂತಿದ್ದೆ ಜಗದೀಶ್ ಸುತ್ತಿಕೊಂಡು ಬಂದೆ' ಎಂದು ವಿಜಯ ಲಕ್ಷ್ಮಿ ಸಿಂಗ್ ಮಾತನಾಡಿದ್ದಾರೆ.

Follow Us:
Download App:
  • android
  • ios