
ಕನ್ನಡ ಕಿರುತೆರೆ ಲೋಕದಲ್ಲಿ ಡಿಫರೆಂಟ್ ಕಥೆ ಹೊಂದಿದ್ದ ಧಾರಾವಾಹಿ ಪುನರ್ ವಿವಾಹ ಇದೀಗ ಮತ್ತೆ ಪ್ರಸಾರವಾಗುತ್ತಿದೆ. ಆದರೀಗ ಪ್ರಸಾರವಾಗುತ್ತಿರುವುದು ತಮಿಳು ಡಬ್ ಧಾರಾವಾಹಿಯಲ್ಲಿ ನಟ ಅಕುಲ್ ಬಾಲಾಜಿ ಹಾಗೂ ಕನ್ನಡದ ನಟಿ ರೂಪಾ ಕಾಣಿಸಿಕೊಳ್ಳಲಿದ್ದಾರೆ. ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೋ ವೈರಲ್ ಆಗುತ್ತಿದೆ. ಆದರೆ ಪ್ರಸಾರದ ದಿನಾಂಕವಿನ್ನೂ ಅನೌನ್ಸ್ ಮಾಡಿಲ್ಲ.
ತಮಿಳಿನಲ್ಲಿ ಸುಮಾರು 6 ವರ್ಷಗಳ ಕಾಲ ಈ ಧಾರಾವಾಹಿ ಪ್ರಸಾರವಾಗಿತ್ತು. 2021 ಮೇ ತಿಂಗಳಲ್ಲಿ ಕೊನೆ ಸಂಚಿಕೆ ಪ್ರಸಾರವಾಗಿತ್ತು. ಪುನರ್ ವಿವಾಹ ಧಾರಾವಾಹಿಯಲ್ಲಿ ಅಭಿನಯಿಸಿರುವುದರ ಬಗ್ಗೆ ನಟ ಅಕುಲ್ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ್ದಾರೆ. 'ನಾನು ಅಭಿರಾಮ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವೆ.ಅಭಿರಾಮ್ ತುಂಬಾ ಜೋವಿಯಲ್ ಹುಡುಗ. ಆದರೆ ಆತನಿಗೆ ಎರಡು ಮಕ್ಕಳು ಇರುತ್ತಾರೆ. ಪತ್ನಿ ಇಲ್ಲದೆ ಮಕ್ಕಳನ್ನು ಸಾಕುವುದು ಅಭಿರಾಮ್‌ಗೆ ದೊಡ್ಡ ಚಾಲೆಂಜ್ ಆಗಿರುತ್ತದೆ. ಅಭಿರಾಮ್‌ಗೆ ಡಿವೋರ್ಸ್ ಆಗಿರುವ ಮಹಿಳೆಯೊಬ್ಬಳ ಪರಿಚಯವಾಗುತ್ತದೆ. ಆಕೆಗೂ ಒಬ್ಬ ಮಗನಿರುತ್ತಾನೆ. ಇಬ್ಬರೂ ಒಂದಾಗಿ ಹೇಗೆ ಎರಡು ಕುಟುಂಬನ್ನು ಸಮವಾಗಿ ನಿಭಾಯಿಸುತ್ತಾರೆ ಎಂಬುದು ಧಾರಾವಾಹಿಯ ಕಥೆ,' ಎಂದು ಅಕುಲ್ ಮಾತನಾಡಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕುಕ್ಕು ವಿತ್ ಕಿರಿಕ್ ಶೋ ಮುಗಿಸಿದ ಅಕುಲ್ ಬಾಲಾಜಿ ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಮಿನಿ ಸೀಸನ್ ನಿರೂಪಣೆ ಮಾಡುತ್ತಿದ್ದಾರೆ. ಈ ಮಿನಿ ಸೀಸನ್‌ನ ಮತ್ತೊಂದು ವಿಶೇಷತೆ ಏನೆಂದರೆ ಅಕುಲ್ ಬಿಗ್ ಬಾಸ್ ಮನೆಯಲ್ಲಿದ್ದುಕೊಂಡು ನಿರೂಪಣೆ ಮಾಡುತ್ತಿರುವುದು. ಮನೆಯಲ್ಲಿರುವ ಪ್ರತಿ ಸ್ಪರ್ಧಿ ಜೊತೆಗೆ ಎರಡು ವಾರ ಕಳೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.