ಹಲವು ವರ್ಷಗಳ ನಂತರ ಕಿರುತೆರೆ ಲೋಕಕ್ಕೆ ಮತ್ತೆ ಎಂಟ್ರಿ ಕೊಡುತ್ತಿರುವ ನಟ ವಿಶ್ವಾಸ್. ಕಾವ್ಯಾಂಜಲಿ ಧಾರಾವಾಹಿಯಲ್ಲಿ ಕಾರ್ತಿಕ್ ಪಾತ್ರ.
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಕಾವ್ಯಾಂಜಲಿ' ಧಾರಾವಾಹಿ ವೀಕ್ಷಕರ ಗಮನ ಸೆಳೆದಿದೆ. ಅತಿ ಹೆಚ್ಚು ಟಿಆರ್‌ಪಿ ಪಡೆಯುತ್ತಿರುವ ಈ ಧಾರಾವಾಹಿ ಮೂಲಕ ನಟ ವಿಶ್ವಾಸ್ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಈಗಾಗಲೇ ವಿಶ್ವಾಸ್ ಈ ಧಾರಾವಾಹಿ ತಂಡಕ್ಕೆ ಸೇರಿಕೊಂಡಿದ್ದು, ಕಾರ್ತಿಕ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕಾರ್ತಿಕ್ ಪಾತ್ರಕ್ಕೆ ವಿಶ್ವಾಸ್ ಚಿತ್ರೀಕರಣ ಆರಂಭಿಸಿದ್ದಾರೆ. ಮುಂಬರುವ ದಿನಗಳಲ್ಲಿ ಕಾರ್ತಿಕ್ ಪಾತ್ರವನ್ನು ಜನರಿಗೆ ಪರಿಚಯ ಮಾಡಿ ಕೊಡಲಾಗುತ್ತದೆ. ಕಾರ್ತಿಕ್ ಪಾತ್ರ ಇಡೀ ಕಾವ್ಯಾಂಜಲಿ ಧಾರಾವಾಹಿಗೆ ಹೊಸ ಟ್ವಿಸ್ಟ್ ನೀಡಲಿದ್ದು, ಕಥೆಯ ಬಗ್ಗೆ ಈ ತಂಡ ಯಾವುದೇ ಸುಳಿವು ಬಿಟ್ಟು ಕೊಡುತ್ತಿಲ್ಲ.
ತೆಲುಗು ಧಾರಾವಾಹಿಗೆ ಮತ್ತೊಬ್ಬ ಕನ್ನಡದ ನಟ ಪವನ್ ರವೀಂದ್ರ ಎಂಟ್ರಿ!20ರ ದಶಕದಲ್ಲಿ ಅತಿ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿದ ನಟ ವಿಶ್ವಾಸ್ ಭಾರದ್ವಾಜ್ ಕಾವ್ಯಾಂಜಲಿ ತಂಡವನ್ನು ತಮ್ಮ ಕಮ್‌ಬ್ಯಾಕ್‌ಗೆ ಆಯ್ಕೆ ಮಾಡಿಕೊಂಡಿರುವುದಕ್ಕೆ ಇಡೀ ತಂಡ ಸಂತಸ ವ್ಯಕ್ತ ಪಡಿಸಿದೆ. ಕಾದಂಬರಿ, ರಥಸಪ್ತಮಿ, ಕಲ್ಯಾಣರೇಖೆ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ವಿಶ್ವಾಸ್ ನಟಿಸಿದ್ದಾರೆ.
ಇಬ್ಬರು ಹುಡುಗಿಯರ ಕಾವ್ಯ ಹಾಗೂ ಅಂಜಲಿ ಕಥೆಯೇ ಕಾವ್ಯಾಂಜಲಿ. ಈ ಹಿಂದೆಯೂ ಕಾವ್ಯಾಂಜಲಿ ಧಾರಾವಾಹಿ ಪ್ರಸಾರವಾಗುತ್ತಿತ್ತು, ವೀಕ್ಷಕರು ಇದನ್ನು ಸೀಕ್ವೆಲ್ ಅಂದು ಕೊಂಡಿದ್ದಾರೆ. ಆದರೆ ಮೊದಲು ಬಂದ ಧಾರಾವಾಹಿಗೂ, ಇದಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ತಂಡ ತಿಳಿಸಿದೆ. 'ಮಂದಿನ ದಿನಗಳಲ್ಲಿ ಬರುತ್ತಿರುವ ಕಾವ್ಯಾಂಜಲಿ ಹಾಗೂ ಈ ಹಿಂದೆ ಪ್ರಸಾರವಾಗುವ ಕ್ಯಾವ್ಯಾಂಜಲಿಗೆ ಯಾವುದೇ ಸಂಬಂಧವಿಲ್ಲ. ಎರಡೂ ವಿಭಿನ್ನ ಕಥೆಗಳು. ಹೊಸ ಕಥೆಯಲ್ಲಿ ರೋಚಕ ವಿಚಾರಗಳಿರುತ್ತವೆ,' ಎಂದು ತಂಡ ತಿಳಿಸಿದೆ. ಕಾವ್ಯಾಂಚಲಿ ಕನ್ನಡದಲ್ಲಿ ಮಾತ್ರವಲ್ಲದೇ ತಮಿಳು, ಬೆಂಗಾಲಿ ಹಾಗೂ ಮಲಯಾಳಂನಲ್ಲಿಯೂ ರಿಮೇಕ್ ಆಗುತ್ತಿದೆ.