ಸೈಲೆಂಟ್‌ ಹುಡುಗ ಗಿಣಿರಾಮದ ರಿತ್ವಿಕ್‌ಗೆ ಇದೆಂಥಾ ಹವ್ಯಾಸ!

By Suvarna News  |  First Published Aug 30, 2021, 3:47 PM IST

'ಗಿಣಿರಾಮ' ಸೀರಿಯಲ್‌ನ ಶಿವರಾಮ್‌ ಅಂತಲೇ ಫೇಮಸ್‌ ಆಗಿರೋ ರಿತ್ವಿಕ್‌ ಮಠದ್‌ ರಿಯಲ್‌ ಲೈಫ್‌ನಲ್ಲಿ ಹೇಗಿರ್ತಾರೆ ಅನ್ನೋದರ ಜೊತೆಗೆ ಅವರಿಗಿರೋ ಒಂದು ಅಪರೂಪದ ಹವ್ಯಾಸದ ಬಗ್ಗೆ ತಿಳ್ಕೊಳೋಣ ಬನ್ನಿ.


ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗ್ತಿರೋ ಸೀರಿಯಲ್‌ ಗಿಣಿರಾಮ. ಇದರ ಹೀರೋ ರಿತ್ವಿಕ್‌ ಮಠದ್‌, ನಾಯಕಿ ನಯನಾ. ಉತ್ತರ ಕರ್ನಾಟಕ ಭಾಷೆಯಲ್ಲಿ ಬರ್ತಿರೋ ಈ ಸೀರಿಯಲ್‌ ಶುರುವಿನಿಂದಲೂ ವಿಭಿನ್ನ ಕತೆ ಹಾಗೂ ಭಾಷೆಯ ಮೂಲಕ ಗಮನ ಸೆಳೆಯುತ್ತಿದೆ. ಈ ಸೀರಿಯಲ್‌ನ ಶಿವರಾಮ ಎಲ್ಲರಿಗೂ ಅಚ್ಚುಮೆಚ್ಚು. ರಫ್‌ ಆಂಡ್‌ ಟಫ್‌ ಸ್ವಭಾವದ ಹೆಚ್ಚು ಓದಿಲ್ಲದ ಆದರೆ ಮನಸ್ಸು ತುಂಬ ಮಾನವೀಯತೆ ತುಂಬಿಕೊಂಡಿರುವ ಪಾತ್ರ ಅದು. ರೌಡಿ ಪಡೆ ಜೊತೆಗಿದ್ದರೂ ನ್ಯಾಯ, ಪ್ರೀತಿಗೆ ಹಂಬಲಿಸೋ ಈ ಹುಡುಗನ ಪಾತ್ರದಲ್ಲಿ ರಿತ್ವಿಕ್‌ ಅದೆಷ್ಟು ಚೆನ್ನಾಗಿ ಕಾಣಿಸಿಕೊಂಡಿದ್ದಾರೆ ಅಂದರೆ ಇದು ನಟನೆ ಅನ್ನೋದನ್ನೂ ಮರೆತು ಪ್ರೇಕ್ಷಕರು ಸೀರಿಯಲ್‌ನೊಳಗೆ ಇನ್‌ವಾಲ್ವ್‌ ಆಗ್ತಾರೆ. ಇದೀಗ ಬಿಗ್‌ಬಾಸ್‌ ಮಿನಿ ಸೀಸನ್‌ನಲ್ಲೂ ಗಿಣಿರಾಮದ ಈ ಜೋಡಿ ಇನ್‌ವಾಲ್ವ್ ಆಗಿದೆ. ಅಲ್ಲಿ ರಿತ್ವಿಕ್‌ ಅವರ ಸ್ವಭಾವ ಸಹ ಸ್ಪರ್ಧಿಗಳಿಗೆಲ್ಲರಿಗೂ ಇಷ್ಟ ಆದ ಹಾಗಿದೆ. ಯಾವತ್ತೂ ತನ್ನ ಬಗ್ಗೆ ವೈಭವೀಕರಿಸಿಕೊಳ್ಳದೇ, ತನ್ನನ್ನ ಡೌನ್‌ ಮಾಡದೇ ಇರುವ ಅವರ ಸ್ವಭಾವಕ್ಕೆ ಸಹ ಸ್ಪರ್ಧಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಆದರೆ ಅವರ ಒಂದು ಹವ್ಯಾಸ ಮಾತ್ರ ಎಲ್ಲರಲ್ಲೂ ಆಶ್ಚರ್ಯ ತರಿಸಿದೆ. 

Latest Videos

undefined

ಆ ಹವ್ಯಾಸ ಏನು ಅನ್ನುವ ಕುತೂಹಲ ನಿಮಗೂ ಇರಬಹುದು. ಸೀರಿಯಲ್‌, ಸಿನಿಮಾಗಳ ಥಳಕು ಬಳುಕು ಲೋಕದಲ್ಲಿ ಕಳೆದುಹೋದವರು ಪ್ರಕೃತಿ, ಹಸಿರು ಇವುಗಳ ಬಗ್ಗೆ ಹೆಚ್ಚು ಗಮನ ಕೊಡೋದು ಕಡಿಮೆ. ವೃತ್ತಿಯ ಕಾರಣಕ್ಕೋ ಏನೋ ಅವರ ಗಮನವೆಲ್ಲ ಯಾವ ಥರ ಡ್ರೆಸ್‌ ಮಾಡಬೇಕು, ಎಲ್ಲಿ ಫೊಟೋ ಶೂಟ್‌ ಮಾಡಬೇಕು, ಹೊಸ ಅವಕಾಶಗಳು ಮನೆ ಬಾಗಿಲಿಗೆ ಬರೋ ಹಾಗೆ ಹೇಗೆ ಮಾಡೋದು ಅನ್ನೋದರ ಕುರಿತೇ ಇರುತ್ತದೆ. ಲಕ್ಸುರಿ ರೆಸಾರ್ಟ್‌ನಲ್ಲಿ ಉಳಿದು ಅಲ್ಲಿ ಕಾಣುವ ರೆಡಿಮೇಡ್‌ ಹಸಿರನ್ನೇ ಕಂಡು ಖುಷಿ ಪಡೋದನ್ನಷ್ಟೇ ಅವರು ಮಾಡ್ತಾರೆ. ಆದರೆ ರಿತ್ವಿಕ್‌ ಹಾಗಲ್ಲ. ಅವರಿಗೆ ಪರಿಸರ ಅದರಲ್ಲೂ ಹಕ್ಕಿಗಳು ಅಂದರೆ ಬಹಳ ಇಷ್ಟ. ಬಿಗ್‌ಬಾಸ್‌ ಮಿನಿ ಶೋನಲ್ಲಿ ಅವರು ನಿರೂಪಕ ಅಕುಲ್‌ ಬಾಲಾಜಿ ಅವರು ರಿತ್ವಿಕ್‌ ಜೊತೆಗೆ ಮಾತನಾಡುವಾಗ ರಿತ್ವಿಕ್‌ ಅವರ ಒಂದು ಹವ್ಯಾಸದ ವಿಚಾರ ಹೊರಬಿದ್ದಿದೆ. ಅದು ಬರ್ಡ್ ವಾಚಿಂಗ್‌. ಇದರಲ್ಲೇನಿದೆ, ವಿಶೇಷ, ಬಹಳ ಜನಕ್ಕೆ ಈ ಅಭ್ಯಾಸ ಇದೆ ಅಂತ ನೀವು ಅಂದುಕೊಳ್ಳಬಹುದು. ಆದರೆ ರಿತ್ವಿಕ್‌ ಈ ಹವ್ಯಾಸವನ್ನು ಪೋಷಿಸಿಕೊಂಡು ಹೋದ ಬಗೆ ವಿಶಿಷ್ಟ. ಅವರು ಈ ಹವ್ಯಾಸದಲ್ಲಿ ಹೇಗೆ ಕಳೆದು ಹೋಗ್ತಾರೆ ಅಂದರೆ ಅದು ಬಹುಶಃ ಬರ್ಡ್ ವಾಚಿಂಗ್‌ ಹವ್ಯಾಸ ಇರುವ ಹೆಚ್ಚಿನವರಿಗೆ ಸಾಧ್ಯವಿಲ್ಲದ ಮಾತು. 'ನೀವು ಕಾಡಿನಲ್ಲೋ, ಗುಡ್ಡದಲ್ಲೋ ಓಡಾಡ್ತಾ ಒಂದು ಹಕ್ಕಿಯನ್ನು ಸರಿಯಾಗಿ ಗುರುತಿಸಿ, ಅವುಗಳ ಕೂಗನ್ನು ಗಮನಿಸಿ. ಅದು ಯಾವ ಪರಿ ಖುಷಿ ಕೊಡುತ್ತೆ ಅನ್ನೋದನ್ನು ಹೇಳೋದು ಕಷ್ಟ' ಅಂತ ಅಕುಲ್‌ ಬಾಲಾಜಿ ಅವರಿಗೆ ರಿತ್ವಿಕ್ ಹೇಳುತ್ತಾರೆ. 
 

ನಂಬಬೇಡಿ, ಈ ತಾರೆಯರ ಆಕರ್ಷಕ ಸ್ತನಗಳು ನಿಜವಲ್ಲ!

ತ್ವಿಕ್‌ಗೆ ಹಕ್ಕಿಗಳ ವೀಕ್ಷಣೆ ಮಾಡುವ ರೀತಿ ಇಂಟರೆಸ್ಟಿಂಗ್‌. ಅವರು ಬರೀ ಹಕ್ಕಿಗಳನ್ನು ನೋಡುವುದು, ಗುರುತಿಸುವುದು, ಅದರ ಫೋಟೋ ತೆಗೆಯೋದು ಅಷ್ಟೇ ಮಾಡಲ್ಲ. ಟೆಲಿಸ್ಕೋಪ್‌ನಲ್ಲಿ ಪ್ರತೀ ಹಕ್ಕಿಯನ್ನೂ ಡೀಟೇಲ್‌ ಆಗಿ ನೋಡ್ತಾರೆ. ಮತ್ತೊಮ್ಮೆ ಆ ಹಕ್ಕಿ ಕಂಡರೆ ಸ್ನೇಹಿತನನ್ನು ಕಂಡಷ್ಟೇ ಸಂಭ್ರಮಿಸುತ್ತಾರೆ. ಇದರ ಜೊತೆಗೆ ಹಕ್ಕಿಗಳ ಕೂಗನ್ನು ಅವರನ್ನು ಗ್ರಹಿಸೋ ರೀತಿಯೂ ಅದ್ಭುತ. ಸುಮಾರು ನಾಲ್ಕೈದು ಗಂಟೆ ಇದಕ್ಕಾಗಿ ಅವರು ವ್ಯಯಿಸೋದೂ ಇದೆಯಂತೆ. ಹಕ್ಕಿಗಳ ಕೂಗನ್ನು ಗಮನವಿಟ್ಟು ಗಮನಿಸಿದರೆ ಅವುಗಳು ಪರಸ್ಪರ ಸಂಭಾಷಣೆ ಮಾಡೋದು ಗೊತ್ತಾಗುತ್ತದೆ. ಈ ಮೂಲೆಯಲ್ಲಿ ಹಕ್ಕಿಯೊಂದು ಕೂಗಿದರೆ, ಮತ್ಯಾವುದೋ ಮೂಲೆಯಲ್ಲಿ ಮತ್ತೊಂದು ಹಕ್ಕಿ ಅದಕ್ಕೆ ರಿಯಾಕ್ಟ್ ಮಾಡೋದು, ಸುಮಾರು ಹೊತ್ತು ಸಾಗುವ ಅವರ ಸಂಭಾಷಣೆ ,,, ಇವೆಲ್ಲ ರಿತ್ವಿಕ್‌ ಅವರಿಗೆ ಬಹಳ ಮುದ ನೀಡುವ ಸಂಗತಿಗಳು. ಇಂಥಾ ಸುಖವನ್ನು ಯಾವ ಲಕ್ಸುರಿಗಳೂ ಕೊಡಲಾರವು ಎಂಬುದು ಅವರ ಮನಸ್ಸಿನ ಮಾತು. ಪ್ರೇಮಂ ಚೆಲುವೆ ರೊಮ್ಯಾಂಟಿಕ್ ಕಿಸ್ಸಿಂಗ್ ಸೀನ್ ಮಾಡಲ್ಲ ಯಾಕೆ ?

 

click me!