ಮನುಷ್ಯ ಎರಡು ಟೈಮಲ್ಲಿ ಕನ್‌ಫ್ಯೂಸ್ ಆಗ್ತಾನೆ, ಪ್ರೀತಿ ಆರಂಭಿಸುವಾಗ, ಕಳೆದುಕೊಳ್ಳುವಾಗ!

By Shriram Bhat  |  First Published Nov 17, 2023, 3:09 PM IST

ಸೀತಾ ರಾಮ ಸೀರಿಯಲ್‌ನಲ್ಲಿ ನಾಯಕ ರಾಮ ಫುಲ್ ಗೊಂದಲದಲ್ಲಿದ್ದಾನೆ. ಕಾರಣ, ಅವನಿಗೆ ತಾನು ಬಿಸನೆಸ್‌ನಲ್ಲಿ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತಿಲ್ಲ. ಆದರೆ, ಇತ್ತ ತನ್ನನ್ನು ಹುಡಕಿ ಬಂದ ಪ್ರೀತಿಯನ್ನು ದೂರಕ್ಕೆ ತಳ್ಳಲೂ ಆಗುತ್ತಿಲ್ಲ. ಇಂತಹ ವೇಳೆಯಲ್ಲಿ ಆತ ಅಳೆದೂ ತೂಗಿ ಎನ್ನುವಂತೆ ತಾತ ಹಿಂದೊಮ್ಮ ಹೇಳಿದ್ದ ಮಾತನ್ನು ನೆನಪಿಸಿಕೊಂಡು ತಾತನನ್ನು ಹುಡುಕಿಕೊಂಡು ಬಂದು ಪಕ್ಕದಲ್ಲಿ ಕುಳಿತುಕೊಳ್ಳುತ್ತಾನೆ. 


'ತಾತಾ, ನಿಮ್ಮತ್ರ ಏನೋ ಮಾತಾಡ್ಬೇಕು'ಎನ್ನುತ್ತಾನೆ ರಾಮ. ತನ್ನ ಬಳಿ ಬಂದು ಕುಳಿತ ರಾಮನಿಗೆ ತಾತ 'ಯಾಕೊ ರಾಮು ಏನು ವಿಷ್ಯ? ನಾನು ಕಗ್ಗ ಓದುತ್ತಿರುವಾಗ ಮಧ್ಯೆ ನೀನು ಬಂದು ಡಿಸ್ಟರ್ಬ್ ಮಾಡಿದ್ದೇ ಇಲ್ಲ. ಇವತ್ತು ಏನು ರಾಮ, ಮುಖದಲ್ಲಿ ಎನೋ ಆತಂಕ ಕಾಣಿಸುತ್ತಿದೆ' ಎನ್ನಲು ರಾಮ 'ತಾತಾ, ಬಿಸನೆಸ್‌ನಲ್ಲಿ ಇಮೋಶನ್ಸ್ ಬರಬಾರ್ದು ಅಂತ ನೀವ್ ತಾನೇ ಹೇಳಿದ್ರಿ.. ಆದ್ರೆ ಒಂದ್‌ ಪಕ್ಷ ಬಿಸಿನೆಸ್ ಮಾಡ್ತಾ ಇರುವಾಗ ಇಮೋಶನ್ಸ್ ಮಿಕ್ಸ್‌ಅಪ್ ಆದ್ರೆ ಅದು ತಪ್ಪಾ? ಎಂದು ಸೀತಾರಾಮ ಸೀರಿಯಲ್ ನಾಯಕ ರಾಮ ತನ್ನ ತಾತನನ್ನು ಕೇಳುತ್ತಾನೆ. ಅದಕ್ಕೆ ತಾತ ಕೊಡುವ ಉತ್ತರ ಅಮೋಘವಾಗಿದೆ ಎನ್ನಬಹುದು. 

ಮನುಷ್ಯ ಎರಡು ಟೈಮ್‌ನಲ್ಲಿ ಕನ್‌ಫ್ಯೂಶನ್ ಆಗ್ತಾನೆ. ಒಂದು ಪ್ರೀತಿಯನ್ನು ಪ್ರಾರಂಭ ಮಾಡುವಾಗ. ಎರಡು, ಪ್ರೀತಿಯನ್ನು ಕಳೆದುಕೊಳ್ತೀನಿ ಅನ್ನುವಾಗ. ಎರಡೂ ಒಟ್ಟಿಗೇ ಆದ್ರಂತೂ ದೇವ್ರೇ ಗತಿ! ಈಗ ನಿನ್ನನ್ನ ನೋಡಿದ್ರೆ ಪ್ರೀತಿಗೋಸ್ಕರ ಹೋರಾಟ ಮಾಡ್ತಾ ಇರೋ ತರ ಕಾಣಿಸ್ತೀಯಾ. ಆದ್ರೆ, ನೀನು ಅದ್ರಲ್ಲಿ ಜಯಶಾಲಿ ಆಗ್ತೀಯಾ' ಎನ್ನುತ್ತಾರೆ. ಈ ಮಾತು ಕೇಳಿದ ರಾಮನ ಮನಸ್ಸು ಅರಳುತ್ತದೆ. ತನ್ನ ಕನಸಿನ ಪ್ರೀತಿಯ ಬಗ್ಗೆ, ಅದನ್ನು ತಾನು ಪಡೆದೇ ತೀರುತ್ತೇನೆ ಎಂಬ ಬಗ್ಗೆ ಧೈರ್ಯ ಮೂಡುತ್ತದೆ. ತಾತನ ಮಾತು ಅವನಿಗೆ ಸಖತ್ ಧೈರ್ಯ ನೀಡುತ್ತದೆ. 

Tap to resize

Latest Videos

ಶಾರುಖ್ ಖಾನ್, ಸಲ್ಮಾನ್ ಖಾನ್ ಹಾಗೂ ಅಮೀರ್ ಖಾನ್; ಅನುಪಮ್ ಖೇರ್ ನಿರ್ದೇಶನದ ಚಿತ್ರದಲ್ಲಿ ನಟಿಸಲೇ ಇಲ್ಲ ಯಾಕೆ?

ಸೀತಾ ರಾಮ ಸೀರಿಯಲ್‌ನಲ್ಲಿ ನಾಯಕ ರಾಮ ಫುಲ್ ಗೊಂದಲದಲ್ಲಿದ್ದಾನೆ. ಕಾರಣ, ಅವನಿಗೆ ತಾನು ಬಿಸನೆಸ್‌ನಲ್ಲಿ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತಿಲ್ಲ. ಆದರೆ, ಇತ್ತ ತನ್ನನ್ನು ಹುಡಕಿ ಬಂದ ಪ್ರೀತಿಯನ್ನು ದೂರಕ್ಕೆ ತಳ್ಳಲೂ ಆಗುತ್ತಿಲ್ಲ. ಇಂತಹ ವೇಳೆಯಲ್ಲಿ ಆತ ಅಳೆದೂ ತೂಗಿ ಎನ್ನುವಂತೆ ತಾತ ಹಿಂದೊಮ್ಮ ಹೇಳಿದ್ದ ಮಾತನ್ನು ನೆನಪಿಸಿಕೊಂಡು ತಾತನನ್ನು ಹುಡುಕಿಕೊಂಡು ಬಂದು ಪಕ್ಕದಲ್ಲಿ ಕುಳಿತುಕೊಳ್ಳುತ್ತಾನೆ. ತಾತನಿಗೆ ಅಚ್ಚರಿಯಾಗುತ್ತದೆ. ಕಾರಣ, ತಾನು ಕಗ್ಗ ಓದುವಾಗ ಯಾವತ್ತೂ ಹೀಗೆ ರಾಮ ಬಂದು ಮಧ್ಯದಲ್ಲಿ ಡಿಸ್ಟರ್ಬ್‌ ಮಾಡಿದ್ದೇ ಇಲ್ಲ. ಆದ್ರೆ, ಈಗ ನೋಡಿದ್ರೆ ಬಾಡಿದ ಮುಖ ಹೊತ್ತು ರಾಮ ಪಕ್ಕದಲ್ಲಿ ಬಂದು ಕುಳಿತಿದ್ದಾನೆ. 

ಕಿಚ್ಚ ಸುದೀಪ್ ಜತೆ ರಿತ್ವಿಕ್ ಫೋಟೋ; ರಾಮಾಚಾರಿ ಹೀರೋ ಪೋಸ್ಟ್‌ಗೆ ನೆಟ್ಟಿಗರು ಫುಲ್ ಫಿದಾ!

ಸೀತಾರಾಮ ಸೀರಿಯಲ್ ಚಿತ್ರಕಥೆ ದಿನದಿಂದ ದಿನಕ್ಕೆ ಭಾರೀ ಕುತೂಹಲ ಕೆರಳಿಸುತ್ತಿದೆ. ಸಿಹಿ ಹಾಗೂ ಸೀತಾ ಸುತ್ತಲೇ ಸದ್ಯ ರಾಮನ ಮನಸ್ಸು ಸುತ್ತುತ್ತಿದ್ದು, ರಾಮ ಪುಲ್ ಕನ್‌ಫ್ಯೂಶನ್ ಮೆಂಟಾಲಿಟಿಗೆ ಹೋಗಿದ್ದಾನೆ. ಆದರೆ, ಅತ್ತ ಸೀತಾಗೆ ಟ್ರಾನ್ಸ್‌ಫರ್ ಆಗಿ ಆಕೆ ಸಿಹಿಯನ್ನು ಕರೆದುಕೊಂಡು ಊರು ಬಿಟ್ಟು ಹೊರಟಿದ್ದಾಳೆ. ಸಿಹಿಗೆ ಊರು ಬಿಟ್ಟು ಹೊಸ ಊರಿಗೆ ಹೋಗಲು ಮನಸ್ಸಿಲ್ಲ. ಕಾರಣ, ಅವಳ ಫ್ರೆಂಡ್ಸ್. ಸಿಹಿಗೆ ತನ್ನ ಸ್ನೇಹಿತರ ಬಳಗವನ್ನು ಬಿಟ್ಟು ಹೋಗಲು ಮನಸ್ಸೇ ಇಲ್ಲ. ಆಕೆ ಬಾಡಿದ ಮುಖ ಹೊತ್ತು ಸೀತಾ ಜತೆ ಹೊರಟಿದ್ದಾಳೆ. 

click me!