
ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ 'ಅಮೃತಧಾರೆ' ಸೀರಿಯಲ್ ಒಂದು ನಿರ್ಣಾಯಕ ಘಟ್ಟಕ್ಕೆ ತಲುಪುತ್ತಿದೆ ಎನ್ನಬಹುದು. ಕಾರಣ, ಜೀ ಕನ್ನಡದಲ್ಲಿ ಬಿಡುಗಡೆಯಾಗಿರುವ ಪ್ರೊಮೋದಲ್ಲಿ 'ಹಿರಿಕರು ಬರೆದ ಆಸ್ತಿ ಪತ್ರದಲ್ಲಿ ಏನಿದೆ?'ಎಂಬ ಸಂಗತಿ ರಿವೀಲ್ ಆಗಿದೆ. ಶಕುಂತಲಾ ಮನೆಗೆ ಬಂದಿರುವ ಲಾಯರ್ "ಗೌತಮನ ಹೆಸರಲ್ಲಿ ತಾತ ಗೌತಮ ದಿವಾನ ಅವರು ಒಂದು ವಿಲ್ ಬರೆದಿಟ್ಟಿದ್ದಾರೆ. ಅದನ್ನ ಗೌತಮ್ ಮದುವೆ ಆದ್ಮೇಲೆನೇ ಓಪನ್ ಮಾಡ್ಬೆಕು. ಅಂದ್ರೆ ಅದು ಗೌತಮ್ ಹೆಂಡತಿಗೆ ಸಿಗಲಿದೆ" ಎನ್ನುತ್ತಾರೆ. ಈ ಮಾತು ಕೇಲಿ ಶಕುಂತಲಾ ಶಾಕ್ ಆಗಿದ್ದಾಳೆ.
ಗೌತಮ್ ಹೆಂಡತಿಯಾಗಿ ಬರುವವಳಿಗೆ ಈ ಮನೆಯ ಆಸ್ತಿ ಸಿಗಲಿದೆ ಎಂಬ ಮಾತು ಕೇಳಿ ಶಕುಂತಲಾ ದೇವಿ ಮನಸ್ಸು ಮುದುಡಿದೆ. ಏಕೆಂದರೆ, ಗೌತಮ್ ಹೆಂಡತಿಯಾಗಿ ಯಾರು ಬರಲಿದ್ದಾರೆ ಎಂಬುದು ಶಕುಂತಲಾಗೆ ತಿಳಿಯದಿರುವ ಸಂಗತಿಯೇನೂ ಅಲ್ಲ. ಈ ಮಾತು ಶಕುಂತಲಾ ಹೊಟ್ಟೆಯೊಳಗೆ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಆದರೆ, ಶಕುಂತಲಾ ಮುಂದೆ ಏನು ಮಾಡಬಹುದು, ಯಾವ ಟ್ರಿಕ್ ಉಪಯೋಗಿಸಿ ಅದನ್ನು ತಡೆಯಲು ಯತ್ನ ಮಾಡಬಹುದು ಎಂಬುದೀಗ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿರುವ ಸಂಗತಿ.
ನಾಯಿಗೆ ರಾಶಾ ಕಿಸ್ಸೋ, ರಾಶಾಗೆ ನಾಯಿ ಕಿಸ್ಸೋ.., ಒಗಟು ಬಿಡಿಸ್ತೀರಾ ನೋಡಿ..!
ಜೀ ಕನ್ನಡದಲ್ಲಿ ಸೋಮವಾರದಿಂದ ಶನಿವಾರ ಸಂಜೆ 7.00ಕ್ಕೆ ಈ 'ಅಮೃತಧಾರೆ' ಧಾರಾವಾಹಿ ಪ್ರಸಾರ ಕಾಣುತ್ತಿದೆ. ಈ ಸೀರಿಯಲ್ ಟಿಆರ್‌ಪಿ ರೇಸ್‌ನಲ್ಲಿ ಕೂಡ ಟಾಪ್ 10ರೊಳಗೆ ಸ್ಥಾನ ಪಡೆದಿದ್ದು, ಇನ್ನೂ ಜನಮೆಚ್ಚುಗೆ ಗಳಿಸಿ ಮುನ್ನುಗ್ಗುತ್ತಿದೆ. ಈ ಧಾರಾವಾಹಿಯಲ್ಲಿ ರಾಜೇಶ್ ನಟರಂಗ ಹಾಗೂ ವನಿತಾ ವಾಸು ಅವರಂಥ ಹಿರಿಯ ಕಲಾವಿದರು ನಟಿಸುತ್ತಿದ್ದು, ಈ ಸೀರಿಯಲ್ ಗ್ರಾಮೀಣ ಭಾಗ ಮತ್ತು ಸಿಟಿ ಪ್ರದೇಶದಲ್ಲೂ ಚೆನ್ನಾಗಿ ಟಿಆರ್‌ಪಿ ಗಳಿಸುತ್ತಿದೆ. ಒಟ್ಟಿನಲ್ಲಿ, ಅಮೃತಧಾರೆ ಸೀರಿಯಲ್‌ನಲ್ಲಿ ಇದೀಗ 'ವಿಲ್' ವಿಷಯ ಬಂದಿರುವುದು ತೀವ್ರ ಕುತೂಹಲದ ಘಟ್ಟ ತಲುಪಿದಂತಾಗಿದೆ.
'ನಾನು ಊಟ ಬೇಡ ಅಂತೀನಿ.. ಮುದ್ದು ಮಾಡಿಯೇ ತಿನ್ನಿಸ್ಬೇಕು..' ಸಂಗೀತಾಗೆ ಲಾರ್ಡ್ ಪ್ರಥಮ್ ಆರ್ಡರ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.