ಅಮೃತಧಾರೆ: ಮೌಲ್ಯಗಳೇ ಉಸಿರಾದ ಮಿಡಲ್ ಕ್ಲಾಸ್ ಅಪೇಕ್ಷಾ ದಾರಿ ತಪ್ತಿದ್ದಾಳಾ?

By Suvarna News  |  First Published May 1, 2024, 12:36 PM IST

ರಾಜೇಶ್ ನಟರಂಗ ಗೌತಮ್ ದಿವಾನ್ ಆಗಿ, ಹಾಗೂ ಛಾಯಾ ಸಿಂಗ್ ಭೂಮಿಕಾ ನಟಿಸಿರೋ ಅಮೃತಧಾರೆ ಹಲವು ಕಾರಣಗಳಿಗೆ ನೋಡುಗರಿಗೆ ಇಷ್ಟುವಾಗುತ್ತಿದೆ. ಇದರಲ್ಲಿ ಇದೀಗ ಭೂಮಿ ತಂಗಿ ಅಪೇಕ್ಷಾಳ ನಡೆಗೆ ನೆಟ್ಟಿಗರು ಆಕ್ಷೇಪಿಸುತ್ತಿದ್ದಾರೆ. 


ಆರ್ಡಿನರಿ ಮಿಡಲ್ ಕ್ಲಾಸ್ ಹೆಣ್ಣು ಭೂಮಿಕಾ, ಸಿರಿವಂತ ಗೌತಮ್ ದಿವಾನ್ ಕೈ ಹಿಡಿದರೂ ತಮ್ಮ ತವರಿನ ಸಂಸ್ಕಾರ ಬಿಡಲು ಒಪ್ಪೋಲ್ಲ. ಅಪ್ಪ ಕಲಿಸಿದ ಜೀವನ ಮೌಲ್ಯಗಳಿಗೆ ಸ್ಟಿಕ್ ಆನ್ ಆದೋಳು. ಆದರೆ, ಅದೇ ಅವಳ ತಂಗಿ ದಾರಿ ತಪ್ತಾ ಇದಾಳಾ?

'ಬೆಳದಿಂಗಳಾಗಿ ಬಾ' ಅಂತ ನಟಿ ನಂದಿನಿ ನಟಿಸ್ತಾ ಇದ್ದ ಸೀರಿಯಲ್ ನೆನಪಿದ್ಯಾ? ಆರ್ಡಿನರಿ ಮಿಡಲ್ ಕಾಲ್ಸ್ ಹುಡುಗಿ. ಅತ್ತಿಗೆ ತಮ್ಮನ ಲವ್ವಲ್ಲಿ ಬಿದ್ದು, ಭಾವನ ತಂಗಿ, ಅತ್ತಿಗೆ ತಮ್ಮ...ಅಂತ ಇಬ್ಬರೂ ನವಿರಾದ ರೊಮ್ಯಾನ್ಸ್ ಮಾಡೋ ಆ ಹಳೇ ಸೀರಿಯಲ್ ಟ್ರ್ಯಾಕ್ ಸಾಂಗೇ ಸೂಪರ್ಬ್ ಆಗಿತ್ತು. ಅವತ್ತಿಂದ ಇವತ್ತಿನವರಿಗೂ ಅದೇ ಮಿಡಲ್ ಕ್ಲಾಸ್ ಭಾವನೆಗಳು, ಮೌಲ್ಯಗಳು ಇಂದಿನ ಸೀರಿಯಲ್ಸ್‌ನndnf ರಿಫ್ಲೆಕ್ಟ್ ಆಗುತ್ತಲೇ ಇವೆ. ಮೌಲ್ಯವೇ ಉಸಿರಾಗಿಸಿಕೊಳ್ಳುವ ಮಧ್ಯಮ ವರ್ಗದ ಜೀವನವನ್ನೇ ಪ್ರತಿಯೊಂದೂ ಸೀರಿಯಲ್ಸ್ ಸಹ ಟಾಪಿಕ್ ಆಗಿಸಿಕೊಂಡಿವೆ. ಅದೇ ಅತ್ತಿಗೆ ತಮ್ಮ, ಬಾವನ ತಂಗಿಯನ್ನು ನೆನಪಿಸುವಂತೆ ಇದೀಗ ಅಮೃತಧಾರೆಯಲ್ಲಿಯೂ ಅತ್ತಿಗೆ ತಂಗಿ, ಬಾವನ ತಮ್ಮ..ಅಂತ ಪಾರ್ಥ-ಅಪೇಕ್ಷಾ ಜೋಡಿ ರೊಮ್ಯಾನ್ಸ್ ಶುರುವಾಗಿದೆ.  

Tap to resize

Latest Videos

ಜೀ ಕನ್ನಡದಲ್ಲಿ ಸಂಜೆ 7ಕ್ಕೆ ಪ್ರಸಾರವಾಗುವ ಅಮೃತಧಾರೆ ಸೀರಿಯಲ್ ಸಹ ಒಂದೆಡೆ ಸಿರಿವಂತ ಗೌತಮ್ ದಿವಾನ್ ಕುಟುಂಬದ ಲ್ಯಾವಿಷ್ ಜೀವನವನ್ನು ತೋರಿಸಿ, ಅದೇ ಕುಟುಂಬದಲ್ಲಿ ಹಣಕ್ಕಾಗಿ ಬಾಯಿ ಕಳೆಯೋ ಜೀವಗಳನ್ನು ತೋರಿಸಿದರೆ, ಮತ್ತೊಂದೆಡೆ ಭೂಮಿಯ ಮಿಡಲ್ ಕ್ಲಾಸ್ ಮೌಲ್ಯಗಳು ಹಾಗೂ ದಿನ ನಿತ್ಯದ ಬೇಡಿಕೆಗಳನ್ನೇ ಪೂರೈಸಿಕೊಳ್ಳಲು ಹೆಣಗಾಡುವ ಲೈಫನ್ನು ಹೈಲೈಟ್ ಮಾಡಲಾಗುತ್ತಿದೆ. ಎಲ್ಲ ಹೆಣ್ಣು ಮಕ್ಕಳಿಗೂ ಇರಬೇಕೆಂಬ ಭೂಮಿಯ ತೂಕದ ವ್ಯಕ್ತಿತ್ವ ಎಲ್ಲಾ ಮಿಡಲ್ ಕ್ಲಾಸ್ ಫ್ಯಾಮಿಲಿಗೂ ಮಾದರಿಯಾಗಿದೆ. ಆ ಅದ್ಭುತ ನಟನೆ, ಮೌಲ್ಯದ ಮಾತು, ಜೊತೆಗೆ ಎಂಥದ್ದೇ ಸಂಕಷ್ಟದ ಪರಿಸ್ಥಿತಿ ಎದುರಾದರೂ ಅಂಜದೇ, ಧೈರ್ಯದಿಂದ ತಪ್ಪನ್ನು ತಪ್ಪೆಂದು ಸಾಬೀತು ಪಡಿಸಿ, ನ್ಯಾಯಕ್ಕಾಗಿ ಹೋರಾಡುವ ಭೂಮಿಯ ಪಾತ್ರವನ್ನು ಎಂಥವರದಾರೂ ಮೆಚ್ಚಲೇ ಬೇಕು. 

ಪ್ರೀತಿ ಅಂದ್ರೆ ಕಟ್ಟಿ ಹಾಕೋದಲ್ಲ, ಫ್ರೀಯಾಗಿ ಬಿಡೋದು, ಬಾಂಡಿಂಗ್ ಪಾಠ ಹೇಳಿದ ಅಮೃತಧಾರೆ

ಅಷ್ಟೇ ಅಲ್ಲ ಬಿಲಿಯನೇರ್ ಫ್ಯಾಮಿಲಿಯಲ್ಲಿ ಹುಟ್ಟಿ, ಮಿಡಲ್ ಕ್ಲಾಸ್ ಫ್ಯಾಮಿಲಿಗೆ ಸೇರಿದ ಮಹಿಮಾ, ಇತ್ತೀಚಿನ ಸಂಚಿಕೆಯನ್ನು ತನ್ನ ಅತ್ತೆ ಹಾಗೂ ಗಂಡನ ಮನೆಯವರಿಗೆ ಅವಮಾನವನ್ನು ಆಗೋದನ್ನು ತಡೆದು, ಗಂಡನ ಮನೆಯವರ ಪರವಾಗಿ ನಿಂತಿದ್ದು ಎಲ್ಲರಿಗೂ ವಾವ್ ಎನ್ನುವಂತೆ ಮಾಡಿತ್ತು. ಒಟ್ಟಿನಲ್ಲಿ ಸೀರಿಯಲ್ ಪ್ರಿಯರಿಗೆ ಆರ್ಡಿನರಿ ಮಿಡಲ್ ಕ್ಲಾಸ್ ಮೌಲ್ಯಗಳು ಹೆಣ್ಣು ಮಕ್ಕಳಲ್ಲಿ ರಿಫ್ಲೆಕ್ಟ್ ಆದರೆ, ಮನಸ್ಸಿಗೆ ಖುಷಿ ಎನಿಸುತ್ತಿದೆ. 

ಆದರೆ, ಅದೇ ಸೀರಿಯಲ್‌ನಲ್ಲಿ ಖುದ್ದು ಭೂಮಿಕಾ ತಂಗಿ ಅಪೇಕ್ಷಾ ಕದ್ದು ಮುಚ್ಚಿ, ಗೌತಮ್ ತಮ್ಮ ಪಾರ್ಥನ ಜೊತೆ ಮನೆಯಲ್ಲಿ ಸುಳ್ಳು ಹೇಳಿ ಹೊರ ಹೋಗಿದ್ದೂ ಅಲ್ಲದೇ, ಇದೀಗ ಅಕ್ಕನ ಮನೆಗೇ ಬಂದು ರೂಮಲ್ಲಿ ಸ್ವಲ್ಪ ಓವರ್ ಆಗಿಯೇ ಕ್ಲೋಸ್ ಆಗಿದ್ದ ಅಕ್ಕನ ಕೈಗೆ ಸಕ್ಹಾಕಿಕೊಂಡಿದ್ದಾಳೆ. ಯಾಕೋ ಬಾವನ ತಮ್ಮ, ಅತ್ತಿಗೆ ತಂಗಿ ಮನೆಯಲ್ಲಿ ಸುಳ್ಳು ಹೇಳಿ ಗೋವಾಗೆ ಹೋಗಿ, ಜೊತೆ ಜೊತೆಯಲ್ಲಿ ಕ್ಲೋಸ್ ಆಗಿ ಸುತ್ತಾಡಿಕೊಂಡಿದ್ದು ಮಧ್ಯಮ ವರ್ಗದ ಕುಟುಂಬದವರ ಮೆಂಟಾಲಿಟಿ ಇಷ್ಟ ಪಡೋ ಸೀರಿಯಲ್ ಪ್ರಿಯರಿಗೆ ನುಂಗಲಾರದ ತುತ್ತಾಗಿದೆ. ಒಂದೆಡೆ ಸಿಕ್ಕಾಪಟ್ಟೆ ಸ್ಟ್ರಾಂಗ್ ಪರ್ಸನಾಲಿಟಿ ಇರೋ ಭೂಮಿಕಾ ಇದ್ದರೆ, ಮತ್ತೊಂದೆಡೆ ಇಲ್ಲ ಬರೋಲ್ಲ ಅಂದರೂ ಮತ್ತೆ ಮನೆಯಲ್ಲಿ ಸುಳ್ಳು ಹೇಳಿ ಗೋವಾಗೆ ಪಾರ್ಥನ ಜೊತೆ ಹೋಗಲು ಸುಲಭವಾಗಿ ಕನ್ವೀನ್ಸ್ ಆದ ಆಪೇಕ್ಷಾ ವಿರುದ್ಧ ನೆಟ್ಟಿಗರು ರೊಚ್ಚಿಗೆದ್ದಿದ್ದಾರೆ. 

ರೋಲ್ಡ್ ಗೋಲ್ಡ್ ಕೊಟ್ಟ ಅತ್ತೆಯ ಮರ್ಯಾದೆ ಉಳಿಸಲು ನಿಂತ ಮಹಿ; ಕೊಡ್ರೀ ಬೆಸ್ಟ್ ಸೊಸೆ ಅವಾರ್ಡು ಎಂದ ಪ್ರೇಕ್ಷಕರು!

ಅಪ್ಪ ಕಲಿಸಿದ ಮೌಲ್ಯಗಳು, ಸಂಸ್ಕಾರ ಅಂತೆಲ್ಲ ಹೇಳುವ ಭೂಮಿಕಾ, ಅಪ್ಪನ ಹೆಸರನ್ನೂ ತೆಗೆಯದಂತೆ ಕಾಪಾಡಿಕೊಂಡಿರುತ್ತಾಳೆ. ಅಂತ ಅಪ್ಪನಿಂದ ಹೆಚ್ಚು ಮೌಲ್ಯವುಳ್ಳ ಬಾಲ್ಯ ಸಿಕ್ಕಿರುತ್ತೆ ಅಂತ ಹೇಳೋ ಭೂಮಿಕಾ ತಂಗಿಯೇ ಇದೀಗ ದಾರಿ ತಪ್ಪಿದಂತೆ ತೋರಿಸಲಾಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕದ್ದು ಮುಚ್ಚಿ ಅಪ್ಪ-ಅಮ್ಮನಿಗೂ ಮೋಸ ಮಾಡುತ್ತಿರುವ ಅಪೇಕ್ಷಾ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿದೆ. ಶ್ರೀಮಂತರ ಮನೆಯಲ್ಲಿ ಬೆಳೆದ ಮಕ್ಕಳಿಗೆ ಮೌಲ್ಯಗಳು ಕಡಿಮೆ ಅನ್ನೋ ಜನರಲ್ ಕಮೆಂಟ್‌ಗೆ ವಿರುದ್ಧವಾಗಿ ಇದೀಗ ಅಪೇಕ್ಷಾ ಪಾತ್ರವನ್ನು ಸೃಷ್ಟಿಸಲಾಗುತ್ತಿದ್ದು, ತುಸು ಹದ್ದುಬಸ್ತಿನಲ್ಲಿಟ್ಟರೆ ಒಳ್ಳೇದು ಅಂತಿದ್ದಾರೆ ಸೋಷಿಯಲ್ ಮೀಡಿಯಾ ಬಳಕೆದಾರರು. 

click me!