ಅಬ್ಬಬ್ಬಾ! ಮೇಕಪ್ ಇಲ್ಲ ಅಂದ್ಕೊಂಡ್ರೆ ವೈಷ್ಣವಿ 'ಸೀತಾರಾಮಾ' ಸೀರಿಯಲ್‌ಗೆ ಇಷ್ಟೊಂದು ಬಳ್ಕೋತಾರಾ?

Published : Aug 10, 2023, 01:51 PM IST
ಅಬ್ಬಬ್ಬಾ! ಮೇಕಪ್ ಇಲ್ಲ ಅಂದ್ಕೊಂಡ್ರೆ ವೈಷ್ಣವಿ 'ಸೀತಾರಾಮಾ' ಸೀರಿಯಲ್‌ಗೆ ಇಷ್ಟೊಂದು ಬಳ್ಕೋತಾರಾ?

ಸಾರಾಂಶ

ವೈರಲ್ ಆಯ್ತು ನಟಿ ವೈಷ್ಣವಿ ಮೇಕಪ್ ಲುಕ್. ಸೀತಾರಾಮಾದಲ್ಲಿ ವೈಷ್ಣವಿ ಸ್ಟೈಲ್ ಯಾರಿಗೆಲ್ಲಾ ಇಷ್ಟ?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮಾ ಧಾರಾವಾಹಿಯಲ್ಲಿ ಸೀತಾ ಪಾತ್ರದಲ್ಲಿ ಮಿಂಚುತ್ತಿರುವ ಬಿಗ್ ಬಾಸ್ ವೈಷ್ಣವಿ ಪಾತ್ರವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಸೀರಿಯಲ್ ಪ್ರೋಮೋ ಬಿಡುಗಡೆಯಾದ ದಿನದಿಂದ ವೀಕ್ಷಕರ ಗಮನ ಸೆಳೆದಿದೆ. ಅಗ್ನಿಸಾಕ್ಷಿ ಧಾರಾವಾಹಿಯಿಂದಲೂ ತುಂಬಾ ಸಿಂಪಲ್ ಆಗಿರುವ ವೈಷ್ಣವಿ ಯಾವ ರೀತಿ ಮೇಕಪ್ ಮಾಡಿಕೊಳ್ಳುತ್ತಾರೆ ಅನ್ನೋ ಕ್ಯೂರಿಯಾಸಿಟಿ ಜನರಿಗೆ ಇತ್ತು. ಪದೇ ಪದೇ ಕೇಳುವ ಪ್ರಶ್ನೆಗೆ ಯುಟ್ಯೂಬ್ ಚಾನೆಲ್ ಮೂಲಕ ಉತ್ತರ ಕೊಟ್ಟಿದ್ದಾರೆ. 

'ನನ್ನ ಸೀತಾರಾಮಾ ಸೀರಿಯಲ್‌ಗೆ ಮೊದಲನೇ ವಾರನೇ 7.5 ರೇಟಿಂಗ್‌ ಬಂದು ಮೊದಲನೇ ಸ್ಥಾನ ಸ್ವೀಕರಿಸಿದ್ದೀನಿ. ಇಂದು ಶೂಟಿಂಗ್‌ಗೆ ಹೊರಟಿರುವೆ ಪಾತ್ರಕ್ಕೆ ಹೇಗೆ ರೆಡಿಯಾಗುತ್ತೀರಾ ಅಂತ ಅನೇಕರು ಪ್ರಶ್ನೆ ಮಾಡಿದ್ದೀರಿ ಅಲ್ಲದೆ ಬಟ್ಟೆ ಕೂಡ ತುಂಬಾ ಇಷ್ಟ ಪಡುತ್ತಿದ್ದೀರಿ  ಸಂಪೂರ್ಣ ಮಾಹಿತಿ ನಿಮ್ಮ ಜೊತೆ ಹಂಚಿಕೊಳ್ಳುವೆ' ಎಂದು ವೈಷ್ಣವಿ ವಿಡಿಯೋ ಆರಂಭಿಸಿದ್ದಾರೆ. 

ಬಂಟಿ ವಿಚಿತ್ರ ಮೂಡ್‌ಗಳು; ನಾಯಿ ಜೊತೆ ಸೆಲ್ಫಿ ಹಂಚಿಕೊಂಡ ಬಿಗ್ ಬಾಸ್ ವೈಷ್ಣವಿ

'ಯಾವ ಮೇಕಪ್ ಮಾಡಿಕೊಳ್ಳುವ ಮುನ್ನ ನಾವು ಮೊದಲು ತ್ವಚೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. Olay ಕ್ರೀಮ್‌ ಮೊದಲು ಬಳಸುವೆ ಆನಂತರ ಸನ್‌ಸ್ಕ್ರೀನ್‌ ಬಳಸಬೇಕು ಆಗ ನ್ಯೂಟ್ರಿಜೀನಾ ಬಳಸುವೆ' ಎಂದು ಆರಂಭಿಸಿದ ವೈಷ್ಣವಿ ಮುಖಕ್ಕೆ ಮೊದಲು ಸ್ಕ್ರೋಕ್‌ ಕ್ರೀಮ್ ಬಳಸುತ್ತಾರೆ ಇದಾದ ಮೇಲೆ ಕನ್‌ಸೀಲರ್‌ನ ಕಣ್ಣು ಕೆಳಗೆ ಹಾಕಿಕೊಳ್ಳುವೆ. ಸೀತಾ ಪಾತ್ರ ಹೆಚ್ಚಿಗೆ ಮೇಕಪ್ ಮಾಡಿಕೊಳ್ಳಲ್ಲ ಹೀಗಾಗಿ ಕಡಿಮೆ ಮೇಕಪ್ ಮಾಡಿಕೊಂಡು ಪಿಂಪಲ್ ಕವರ್ ಮಾಡಿಕೊಳ್ಳುವುದು. ಅಂದು ಪಾತ್ರಕ್ಕೆ ಯಾವ ರೀತಿ ಮೇಕಪ್ ಬೇಕು ಹಾಗೆ ಮೇಕಪ್ ಮಾಡಿಕೊಳ್ಳುವೆ. ನಾನು ಹೆಚ್ಚಿಗೆ ಮೇಕಪ್‌ನ ಕೈಯಲ್ಲಿ ಮಾಡಿಕೊಳ್ಳುವುದು. ಲೈಟ್‌ ಬ್ರೌನ್‌ ಅಥವಾ ಗ್ಲಿಟರ್‌ ಇರುವ  ಐ ಶ್ಯಾಡೋ ಹಾಕಿಕೊಳ್ಳುವೆ. ಉಬ್ಬು ಬರೆದುಕೊಂಡು ಸ್ವಲ್ಪ ಲಿಪ್‌ಸ್ಟಿಕ್ ಹಾಕಿಕೊಳ್ಳುವೆ' ಹೀಗೆ ಒಂದಾದ ಮೇಲೊಂದು ಹಾಕಿಕೊಂಡು ಮೇಕಪ್ ಮುಗಿಸಿದ್ದಾರೆ.

ಸೀತಾ ಸಖತ್ ಸಿಂಪಲ್ ಹುಡುಗಿ ಅಂದುಕೊಂಡರೆ ನೀವು ಯಾಕೆ ಇಷ್ಟೊಂದು ಮೇಕಪ್ ಬಳಿದುಕೊಂಡಿದ್ದೀರಾ? ನೀವು ನ್ಯಾಚುರಲ್ ಆಗಿ ಇರುವುದೇ ಬಿಳಿ ಚಿರಳೆ ರೀತಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಸೀರೆಯುಟ್ಟ ನವಿಲು ನೀನು, ದೃಷ್ಟಿಯಾಗಬಹುದು ಏನೋ; ವೈಷ್ಣವಿ ಗೌಡ ಫೋಟೋ ವೈರಲ್!

ತಾಯಿ ಲಾಯರ್:

ವೈಷ್ಣವಿ ಅವರ ತಾಯಿ ಭಾನು ರವಿಕುಮಾರ್ ಈಗ ಲಾ ಪದವಿ ಮುಗಿಸಿ ಕಪ್ಪು ಕೋಟ್‌ ಧರಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಫೋಟೋ ಕೂಡ ಹಂಚಿಕೊಂಡಿದ್ದಾರೆ.'ಮನೆಯಲ್ಲೀಗ ವಕೀಲರು ಇದ್ದಾರೆ. ನೀವು ಯಾವಾಗಲೂ ವಯಸ್ಸು ಕೇವಲ ನಂಬರ್‌ ಎಂದು ಕಲಿಸಿದ್ದೀರಿ. ಈ ವಯಸ್ಸಿನಲ್ಲಿ ನೀವು ಏನು ಸಾಧನೆ ಮಾಡಿದ್ದೀರ ಅದನ್ನು ನೋಡಿ ಹೆಮ್ಮೆ ಪಡುವೆ' ಎಂದು ವೈಷ್ಣವಿ ಬರೆದುಕೊಂಡಿದ್ದಾರೆ.ವೈಷ್ಣವಿ ಕೆಲಸದ ವಿಚಾರದಲ್ಲಿ ಅವರ ತಾಯಿ ಭಾನು ರವಿಕುಮಾರ್ ತುಂಬಾನೇ ಸಪೋರ್ಟ್ ಮಾಡುತ್ತಾರೆ. ಬೋಲ್ಡ್‌ ಆಗಿ ಯೊಚನೆ ಮಾಡುವ ಭಾನು ಅವರು ಮಗಳ ಪರವಾಗಿ ಹಲವಾರು ಸಲ ಮಾಧ್ಯಮಗಳಲ್ಲಿ ಮಾತನಾಡಿದ್ದಾರೆ.ಕೆಲವು ದಿನಗಳ ಹಿಂದೆ ವೈಷ್ಣವಿ ತಾಯಿ ಇದ್ದಕ್ಕಿದ್ದಂತೆ ತೂಕ ಇಳಿಸಿಕೊಂಡ ವಿಚಾರ ದೊಡ್ಡ ಸುದ್ದಿ ಆಗಿತ್ತು. ನನ್ನ ತಾಯಿ ಯೋಗ ಮಾಡಿ ತೂಕ ಇಳಿಸಿಕೊಂಡಿದ್ದಾರೆ ಎಂದು ಈ ಹಿಂದೆ ವೈಷ್ಣವಿ ಹೇಳಿದ್ದರು. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare: ಅಜ್ಜಿ-ಮೊಮ್ಮಕ್ಕಳ ಮಿಲನದ ಅಪೂರ್ವ ಮಿಲನ; ವೀಕ್ಷಕರು ನಿರೀಕ್ಷಿಸುತ್ತಿದ್ದ ಘಳಿಗೆ ಬಂತು, ಆದ್ರೆ...
ಬಿಗ್ ಬಾಸ್ 19 ವಿನ್ನರ್ ಹೆಸರು ಆನ್‌ಲೈನ್‌ನಲ್ಲಿ ಲೀಕ್? ಹರಿದಾಡುತ್ತಿದೆ ಸ್ಕ್ರೀನ್‌ಶಾಟ್