
ಬೆಂಗಳೂರು (ಜೂ.1): ಜೀ ಕನ್ನಡವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಟಾಪ್ ಸೀರಿಯಲ್ ಗಳಲ್ಲಿ ಸೀತಾ ರಾಮ ಕೂಡ ಒಂದು. ಸದ್ಯ ಒಂದು ಮಗುವಿನ ತಾಯಿಯಾಗಿರುವ ಸೀತಾ ಮತ್ತು ರಾಮನ ಎಂಗೇಜ್‌ಮೆಂಟ್ ಆಗಿದೆ. ಇವರಿಬ್ಬರೂ ಪ್ರೀತಿಸಿ ಮದುವೆಯಾಗುತ್ತಿದ್ದಾರೆ. ಮದುವೆ ತಯಾರಿಗಳು ನಡೆಯುತ್ತಿರುವ ಬೆನ್ನಲ್ಲೇ ಸಿಹಿ ಯಾರು? ಎಂಬುದೇ ಸೀರಿಯಲ್ ಪ್ರೀಯರಿಗೆ ಕುತೂಹಲ ಹೆಚ್ಚಿಸಿದೆ. ಅದಲ್ಲದೆ ಈ ಸೀರಿಯಲ್ ನಲ್ಲಿ ಮಗುವೇ ಹೆಚ್ಚು ಹೈಲೆಟ್ಸ್. ಹೀಗಾಗಿ ಎಲ್ಲಿ ನೋಡಿದರೂ ಸಿಹಿ ಯಾರು? ಸೀತಾಳ ಮೊದಲನೇ ಗಂಡ ಯಾರು? ಸಿಹಿ ದತ್ತು ಪುತ್ರೀನಾ? ಸಿಹಿ ರಹಸ್ಯವೇನು? ಎಂಬುದೇ ಕುತೂಹಲ ಇದಕ್ಕೀಗ ಸ್ಪಷ್ಟ ಉತ್ತರ ಸಿಕ್ಕಿದೆ.
ಆದರೆ ಇದೀಗ ಹಲವು ಆಯಾಮಗಳಲ್ಲಿ ಸಿಹಿ ಯಾರು ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ವರದಿಗಳ ಪ್ರಕಾರ 'ಸೀತಾ ರಾಮ' ಧಾರಾವಾಹಿ ಮರಾಠಿಯ 'ಮಜಿ ತುಜಿ ರೆಶಿಮಗತ್' ಧಾರಾವಾಹಿಯ ಕಥೆಯನ್ನು ಆಧರಿಸಿದೆ. ಹೀಗಾಗಿ ಇದು ಸ್ವಮೇಕ್ ಅಲ್ಲ ರಿಮೇಕ್ ಕಥೆ. ಮರಾಠಿ ಕಥೆಯ ಪ್ರಕಾರ ಹೋದರೆ ಸಿಹಿ ಜನ್ಮ ರಹಸ್ಯವೇನು? ಸೀತಾ ಸಿಹಿಗೆ ಏನಾಗಬೇಕು? ಎಂಬುದನ್ನು ಇಲ್ಲಿ ವಿವರವಾಗಿ ಹೇಳುತ್ತೇವೆ ಮುಂದೆ ಓದಿ.
ಸೀತಾ ರಾಮ ಜೋಡಿಯ ರಿಯಲ್ ಲೈಫ್ ಮದುವೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಗುಸುಗುಸು
ಸೀರಿಯಲ್ ನಲ್ಲಿ ಸೀತಾ ಹೇಳಿರುವ ಹಾಗೆ, ಆಕೆಯ ಜೀವನಲ್ಲಿ ರಾಮ್ ಮೊದಲ ಪ್ರೀತಿ. ಹೀಗಾಗಿ ಸೀತೆಗೆ ಮದುವೆ ಆಗಿಲ್ಲ ಎಂಬುದು ಸ್ಪಷ್ಟ. ಹಾಗಾದ್ರೆ ಸೀತಾಳ ಜೊತೆಯಲ್ಲಿರುವ ಸಿಹಿ ಯಾರು? ಎಂಬ ಪ್ರಶ್ನೆಗೆ ಹಲವರು ಚಾಂದಿನಿಯ ಮಗಳಾಗಿರಬಹುದು ಎಂದು ಊಹಿಸುತ್ತಿದ್ದಾರೆ. ಇನ್ನೂ ಕೆಲವರು ಭಾರ್ಗವಿಯ ಗಂಡನ ಮಗುವಾಗಿರಬಹುದು ಎನ್ನುತ್ತಿದ್ದಾರೆ. ಇನ್ನೂ ಕೆಲವರು ಮಕ್ಕಳಿಲ್ಲದ ನೋವಿನಲ್ಲಿರುವ ರಾಮ್ ಚಿಕ್ಕಪ್ಪ ಸತ್ಯ ಮತ್ತು ಸಾಧನಾ ಮಗಳೆಂದೂ ಹೇಳುತ್ತಿದ್ದು, ಸಿಹಿ ದೇಸಾಯಿ ಕುಟುಂಬದ ಕುಡಿ ಎಂದು ವೀಕ್ಷಕರ ಅಭಿಪ್ರಾಯವಾಗಿದೆ. ಆದರೆ ಇದಲ್ಲ ಸತ್ಯ.
ನಾವೇನು ಪೆದ್ದರಲ್ಲ, ಧಾರವಾಹಿಗಳನ್ನು ಉಲ್ಲೇಖಿಸಿ ವಾಹಿನಿಗೆ ವೀಕ್ಷಕರ ಕ್ಲಾಸ್!
ಆದರೆ ಅಸಲಿಗೆ ಕಥೆಯೇ ಬೇರೆ ಮರಾಠಿಯ 'ಮಜಿ ತುಜಿ ರೆಶಿಮಗತ್' ಧಾರಾವಾಹಿ ಕಥೆಯ ಪ್ರಕಾರ ಸಿಹಿಯ ತಾಯಿ ಸೀತಾನೇ ಆಗಿರುತ್ತಾಳೆ. ಆದರೆ ಅವಳೇ ಅಲ್ಲ ಸೀತಾ ರೀತಿಯಲ್ಲೇ ಇರುವಂತಹ ಮತ್ತೊಬ್ಬಳು. ಆಕೆ ಯಾರೆಂದರೆ ಸೀತಾ ಮತ್ತು ಸಿಹಿಯ ತಾಯಿ ಅವಳಿ-ಜವಳಿ ಸಹೋದರಿಯರಾಗಿದ್ದು, ಸೀತಾಳ ತಾಯಿ ಮೃತಪಟ್ಟಿರುತ್ತಾಳೆ ಅಥವಾ ಕಾಣೆಯಾಗಿದ್ದಾಳೆ. ಹೀಗಾಗಿ ಸಿಹಿಯನ್ನು ಸಾಕುವ ಸಂಪೂರ್ಣ ಜವಾಬ್ದಾರಿ ಸೀತಾಳ ಹೆಗಲಿಗೆ ಬೀಳುತ್ತೆ. ಸಿಹಿಯ ತಾಯಿ ಮತ್ತು ಸೀತಾಳಿಗೆ ಹೋಲಿಕೆ ಒಂದೇ ರೀತಿ ಇರುವುದರಿಂದ ಇಲ್ಲಿ ಸೀತಾಳನ್ನು ಸಿಹಿ ಸೀತಮ್ಮ ಎಂದೇ ಕರೆಯುತ್ತಾಳೆ. ಇದು ಈ ಸೀರಿಯಲ್ ನಲ್ಲಿ ಬರುವ ದೊಡ್ಡ ತಿರುವಾಗಿದೆ.
ಸೀತಾರಾಮ ಧಾರಾವಾಹಿಯ ಮೂಲ ಕಥೆ ಮರಾಠಿಯಲ್ಲಿ ಇದೇ ರೀತಿಯ ಕಥೆ ಇದೆ. ಆದರೆ ಕನ್ನಡಕ್ಕೆ ಯಾವ ರೀತಿಯಲ್ಲಿ ಕಥೆಯನ್ನು ಡೈರೆಕ್ಟರ್ ಹೆಣೆಯುತ್ತಾರೆ. ಮತ್ತು ಸೀತಾ ಯಾವಾಗ ಸಿಹಿಯ ಜನ್ಮ ರಹಸ್ಯವನ್ನು ಬಹಿರಂಗ ಪಡಿಸುತ್ತಾಳೆ ಎಂಬುದು ಸದ್ಯದ ಕುತೂಹಲವಾಗಿದೆ. ಆದರೆ ಭಾರ್ಗವಿ ಮಾತ್ರ ಸಿಹಿ ಸೀತಾಳ ಮಗಳು ಎಂದೇ ನಂಬಿದ್ದು, ಸೀತಾಳ ಗಂಡನ ಹುಟುಕಾಟದಲ್ಲಿದ್ದಾಳೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.