ಬಿಗ್​ಬಾಸ್​ ನಮ್ರತಾ ಜೊತೆ ವಿನ್ನರ್​ ಕಾರ್ತಿಕ್ ರೊಮ್ಯಾನ್ಸ್​​: ಸ್ನೇಹಿತ್​ ಎಲ್ಲಿದ್ಯಪ್ಪಾ ಅಂತಿದ್ದಾರೆ ಫ್ಯಾನ್ಸ್​!

By Suchethana D  |  First Published Jun 1, 2024, 4:30 PM IST

ಬಿಗ್​ಬಾಸ್​ ವಿನ್ನರ್​ ಕಾರ್ತಿಕ್​  ಮತ್ತು ನಮ್ರತಾ ಗೌಡ ಅವರು ಸಖಿಯೇ ಸಖಿಯೇ ಹಾಡಿಗೆ ಭರ್ಜರಿ ಸ್ಟೆಪ್​ ಹಾಕಿದ್ದಾರೆ. ಫ್ಯಾನ್ಸ್​ ಹೇಳ್ತಿರೋದೇನು?
 


ಬಿಗ್​ಬಾಸ್​ 10 ವಿನ್ನರ್​ ಕಾರ್ತಿಕ್​ ಮತ್ತು ನಮ್ರತಾ ಗೌಡ ರೊಮ್ಯಾನ್ಸ್​ ಮಾಡಿದ್ದಾರೆ. ಸಖಿಯೇ ಸಖಿಯೇ ಹಾಡಿಗೆ ಇಬ್ಬರೂ ಸಕತ್​ ಸ್ಟೆಪ್​ ಹಾಕಿದ್ದಾರೆ. ನಾಳೆ (ಜೂನ್​ 2) ಕಲರ್ಸ್​ ಕನ್ನಡದಲ್ಲಿ ನಡೆಯುತ್ತಿರುವ ಕೋಟಿ ಮನರಂಜನೆಯಲ್ಲಿ ಈ ಜೋಡಿ ಸಕತ್​ ಡ್ಯಾನ್ಸ್​ ಮಾಡಿದ್ದಾರೆ. ಇದರ ಪ್ರೊಮೋ ಅನ್ನು ವಾಹಿನಿ ಬಿಡುಗಡೆ ಮಾಡಿದೆ. ನಮ್ರತಾಗೆ ‘ಸಖಿಯೇ... ಸಖಿಯೇ...’ ಅಂತಿದ್ದಾರೆ ಕಾರ್ತಿಕ್! ಎನ್ನುವ ಶೀರ್ಷಿಕೆಯಡಿಯಲ್ಲಿ ಈ ಪ್ರೊಮೋ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಥಹರೇವಾರಿ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. ಹಲವರು ಸ್ನೇಹಿತ್​ ಎಲ್ಲಿದ್ದಿಯಪ್ಪಾ ಎಂದು ಪ್ರಶ್ನಿಸುತ್ತಿದ್ದಾರೆ. 

ಅಷ್ಟಕ್ಕೂ ಇದು ಧನಂಜಯ್‌ ನಾಯಕನಾಗಿ ನಟಿಸಿರುವ ಕೋಟಿ ಸಿನಿಮಾದ ಪ್ರೊಮೋಷನ್​ಗಾಗಿ ಇರುವ ಕಾರ್ಯಕ್ರಮ. ಈ ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿದೆ. ಈ ನಡುವೆ ಕಲರ್ಸ್‌ ಕನ್ನಡದಲ್ಲಿ ಕೋಟಿ ಮನರಂಜನೆ ಹೆಸರಿನ ವಿಶೇಷ ಕಾರ್ಯಕ್ರಮ ನಡೆಸಿದೆ.  ಇದಾಗಲೇ, ಕೋಟಿ ಸಿನಿಮಾದ ಪ್ರೀರಿಲೀಸ್ ಕಾರ್ಯಕ್ರಮ ನಡೆದಿದೆ. ಇದಕ್ಕೆ  'ಕೋಟಿ ಮನರಂಜನೆ' ಎಂದು ಹೆಸರು ಇಡಲಾಗಿದೆ. ಈ ಫಂಕ್ಷನ್​ನಲ್ಲಿ  ಕೋಟಿಯ ನಾಯಕ ಡಾಲಿ ಧನಂಜಯ ಸೇರಿದಂತೆ ನಾಯಕಿ ಮೋಕ್ಷಾ‌ ಕುಶಾಲ್ ಮತ್ತು ಹಿರಿಯ ತಾರೆಗಳಾದ ತಾರಾ ಅನುರಾಧ, ರಂಗಾಯಣ ರಘು, ರಮೇಶ್ ಇಂದಿರಾ, ಸರ್ದಾರ್ ಸತ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

Tap to resize

Latest Videos

ಪುಟ್ಟಗೌರಿ ಮದುವೆ ಸೀರಿಯಲ್​ಗೆ ನಮ್ರತಾ ಗೌಡ ದಿನವೊಂದಕ್ಕೆ ಪಡೆದ ಸಂಭಾವನೆ ರಿವೀಲ್​...

ಕೋಟಿಯ ನಾಯಕಿ 'ಮೋಕ್ಷಾ' ಅವರ ಡಾನ್ಸ್ ಕಾರ್ಯಕ್ರಮ ಕೂಡ ಇತ್ತು. ಗಿಚ್ಚಿ ಗಿಲಿಗಿಲಿ ತಂಡದಿಂದ ಹೊಟ್ಟೆ ಹುಣ್ಣಾಗಿಸುವ ಹಾಸ್ಯ ಕಾರ್ಯಕ್ರಮ ನಡೆದವು. ಧನಂಜಯ ಅವರಿಗಾಗಿ ಮಕ್ಕಳು ಮಾಡಿದ ವಿಶೇಷ ಡಾನ್ಸ್ ಕಾರ್ಯಕ್ರಮ 'ಕೋಟಿ ಮನರಂಜನೆ'ಯ ಪ್ರಮುಖ ಆಕರ್ಷಣೆಗಳಲ್ಲೊಂದಾಗಿತ್ತು. ಇದರ ನಡುವೆಯೇ ಇದೀಗ ಬಿಗ್​ಬಾಸ್​ ಖ್ಯಾತಿಯ ಕಾರ್ತಿಕ್​ ಮತ್ತು ನಮ್ರತಾ ಗೌಡ ಅವರ ಸಖಿಯೇ ಸಖಿಯೇ ಹಾಡಿಗೆ ಮಾಡಿರುವ ಡ್ಯಾನ್ಸ್​ ಪ್ರೊಮೋ ರಿಲೀಸ್​  ಮಾಡಲಾಗಿದೆ.
 
ಬಿಗ್​ಬಾಸ್​ನಲ್ಲಿ ಇದ್ದಾಗ  ಸ್ನೇಹಿತ್ ಹಾಗೂ ನಮ್ರತಾ ನಡುವೆ ಆತ್ಮೀಯತೆ ಗಾಢವಾಗಿತ್ತು. ಅದಕ್ಕಾಗಿ ಇವರಿಬ್ಬರೂ ಲವ್​ ಮಾಡುತ್ತಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಇದು ಬರೀ ಸ್ನೇಹಾನಾ ಅಥವಾ  ಪ್ರೀತಿನಾ ಎಂದು ಪ್ರೇಕ್ಷಕರು ಕೇಳಿದ್ದುಂಟು. ಅದೂ ಸಾಲು ಎಂಬುದಕ್ಕೆ ಬಿಗ್​ಬಾಸ್​ ಮನೆಯಿಂದ  ಸ್ನೇಹಿತ್ ಹೊರಕ್ಕೆ ಬಂದಾಗ  ನಮ್ರತಾ ಸಿಕ್ಕಾಪಟ್ಟೆ ಕಣ್ಣೀರು ಹಾಕಿದ್ದನ್ನು ನೋಡಿ ಇವರಿಬ್ಬರ ಬಗ್ಗೆ ಮತ್ತಷ್ಟು ಸುದ್ದಿಯಾಗಿತ್ತು. ಆದರೆ ಬರಬರುತ್ತಾ ಇವರಿಬ್ಬರ ನಡುವೆ,  ಸಂಬಂಧ ಹಳಸಿದೆ ಎಂದೇ ಸೋಷಿಯಲ್​  ಮೀಡಿಯಾದಲ್ಲಿ ಸದ್ದು ಮಾಡಿತ್ತು. ಇದನ್ನೇ ಹಿಡಿದುಕೊಂಡು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಅಷ್ಟಕ್ಕೂ ನಮ್ರತಾ ಅವರು, ಈಚೆಗೆ ಸಂದರ್ಶನವೊಂದರಲ್ಲಿ ಮದುವೆ, ಸಂಬಂಧಗಳ ಕುರಿತು ಓಪನ್ನಾಗಿ ಹೇಳಿಕೊಂಡಿದ್ದರು. ನಮಗೆ ಏನೆನೋ ಕನಸುಗಳು ಇರುತ್ತವೆ, ಅಂದುಕೊಂಡಿದ್ದನ್ನು ಸಾಧಿಸುವ ಛಲವಿರುತ್ತದೆ. ಇಂಥ ಸಂದರ್ಭದಲ್ಲಿ ಮದುವೆ ಈಗಲೇ ಬೇಕಾ ಎಂದು ಪ್ರಶ್ನಿಸಿದ್ದಾರೆ. ಮೊದಲಿಗೆ  ಮ್ಯಾರೆಜ್​ ಸಿಸ್ಟಮ್​ ಅರ್ಥ ಮಾಡಿಕೊಳ್ಳಬೇಕು. ಏನೇನೋ ಅಡ್ಜಸ್ಟ್​ಮೆಂಟ್​ಗಳು ಇರುತ್ತವೆ. ಅದಕ್ಕಾಗಿಯೇ ಮದು ನನ್ನ ಲೈಫ್​ನಲ್ಲಿ ಬೇಕಾ ಎನ್ನುವುದೇ ಅರ್ಥವಾಗುತ್ತಿಲ್ಲ ಎಂದಿದ್ದರು. ಆದರೂ ಟ್ರೋಲಿಗರು ಟ್ರೋಲ್​ ಮಾಡುವುದನ್ನು ಬಿಡುವುದಿಲ್ಲ. 

ಮದುವೆ, ಸಂಬಂಧದ ಕುರಿತು ಬಿಗ್​ಬಾಸ್​ ಖ್ಯಾತಿಯ ನಮ್ರತಾ ಗೌಡ ಓಪನ್​ ಮಾತಿದು...

click me!