
ಜೀ ಕನ್ನಡ ವಾಹಿನಿಯಲ್ಲಿ ಸ್ವಪ್ನ ಕೃಷ್ಣ ನಿರ್ದೇಶನ ಮಾಡುತ್ತಿರುವ 'ಸತ್ಯ' ಧಾರಾವಾಹಿ ದಿನೇ ದಿನೇ ವೀಕ್ಷಕರ ಗಮನ ಸೆಳೆಯುತ್ತಿದೆ. ಸತ್ಯ ಪ್ರೀತಿ ಅಮೂಲ್ ಬೇಬಿಗೆ ಅರ್ಥ ಆಗುತ್ತೋ ಇಲ್ವೋ ಗೊತ್ತಿಲ್ಲ ಆದರೆ ಹೊಸ ಪಾತ್ರಧಾರಿ ರಾಹುಲ್ ಪ್ರೀತಿ ಅಂದರೆ ಏನೆಂದು ಅರ್ಥ ಮಾಡಿಸುತ್ತಿದ್ದಾನೆ....
ರಾಹುಲ್ ಮತ್ತು ಸತ್ಯ ಇಬ್ಬರೂ ಒಟ್ಟಿಗೆ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಅಲ್ಲಿ ಸತ್ಯ ತಾಯಿ ಹಾಗೂ ಅಜ್ಜಿ ಗಿರಿಜಮ್ಮರನ್ನು ಭೇಟಿ ಮಾಡುತ್ತಾನೆ. ರಾಹುಲ್‌ಗೆ ಸತ್ಯ ಅಂದ್ರೆ ತುಂಬಾ ಇಷ್ಟ, ಹೀಗಾಗಿ ಯಾರೇ ಸಿಕ್ಕರೂ ಸತ್ಯ ತನ್ನ ಪ್ರೇಯಸಿ ಎಂದು ಪರಿಚಯ ಮಾಡಿಕೊಡುತ್ತಾರೆ. ಗಿರಿಜಮ್ಮ ರಾಹುಲ್ ಮಾತಿನ ಶೈಲಿಗೆ ಫಿದಾ ಆಗಿದ್ದಾರೆ. ಸತ್ಯ ನೋಡಲು ಸೇಮ್ ಗಿರಜಮ್ಮನ ರೀತಿ ಇದ್ದಾರೆ, ಎಂದು ರಾಹುಲ್ ಹೊಗಳಿದ ತಕ್ಷಣ ಗಿರಿಜಮ್ಮ ಸತ್ಯಳ ಟಾಮ್ ಬಾಯ್ ಲುಕ್‌ನಲ್ಲಿಯೇ ಕಾಣಿಸಿಕೊಳ್ಳುತ್ತಾರೆ.
ಜೀನ್ಸ್ ಪ್ಯಾಂಟ್, ಟೀ ಶರ್ಟ್ ಮೇಲೆ ಶರ್ಟ್. ಅದಕ್ಕೂಂದು ಬಾಯ್ ಕಟ್‌ನಲ್ಲಿ ಗಿರಿಜಮ್ಮ ಕಾಣಿಸಿಕೊಂಡಿದ್ದಾರೆ. 70 ಆದರೂ ಎಲ್ಲ ಪಾತ್ರಕ್ಕೂ ಸೈ ಎನ್ನುವ ಗಿರಿಜಾ ಲೋಕೇಶ್ ಅವರು ನಿಜವಾದ ಕಲಾವಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಸ್ವಪ್ನ ಕೃಷ್ಣ ಅವರ ಈ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸತ್ಯ ಧಾರಾವಾಹಿಯಲ್ಲಿ ಮಾತ್ರವಲ್ಲದೇ ಪುತ್ರ ಸೃಜನ್ ಲೋಕೇಶ್ ಯುಟ್ಯೂಬ್ ಚಾನೆಲ್‌ನಲ್ಲಿಯೂ ಗಿರಿಜಾ ಲೋಕೇಶ್ ನಟಿಸುತ್ತಿದ್ದಾರೆ. ಡಿಫರೆಂಟ್ ಅಡುಗೆ ರೆಸಿಪಿ, ಮೊಮ್ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು ಎಂದೆಲ್ಲಾ ಸಣ್ಣ ಪುಟ್ಟ ಟಿಪ್ಸ್ ನೀಡುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.