
ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಮನೆ ಮಾತಾದ ನಟಿ ವೈಷ್ಣವಿ ಗೌಡ ಬಿಗ್ ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಸಿದ ನಂತರ ಇನ್ನೂ ಹೆಚ್ಚು ಜನರ ಪ್ರೀತಿ ಸಂಪಾದಿಸಿದ್ದಾರೆ. ಬಿಬಿ ಮನೆಯೊಳಗಿದ್ದರೂ, ತಮ್ಮ ಟೀಂ ಸೋಷಿಯಲ್ ಮೀಡಿಯಾ ಖಾತೆ ಮ್ಯಾನೇಜ್ ಮಾಡುತ್ತಿದ್ದರು. ಮೊದಲ ಇನ್ನಿಂಗ್ಸ್ ನಂತರ ಸಿಕ್ಕ ಸಣ್ಣ ಬ್ರೇಕ್‌ನಲ್ಲಿ ತಮ್ಮದೇ ಯುಟ್ಯೂಬ್ ಚಾನೆಲ್ ಆರಂಭಿಸಿದ್ದರು. ಈ ಸಣ್ಣ ಅವಧಿಯಲ್ಲಿ ಸಾಕಷ್ಟು ವಿಡಿಯೋಗಳನ್ನು ಶೂಟ್ ಮಾಡಿದ್ದಾರೆ, ತಮ್ಮ ಟೀಂನವರು ವಾರಕ್ಕೊಂದು ಅಪ್ಲೋಡ್ ಮಾಡುತ್ತಿದ್ದರು.
ಇದೀಗ ಇನ್‌ಸ್ಟಾಗ್ರಾಂನಲ್ಲಿ 1 ಮಿಲಿಯನ್ ಫಾಲೋವರ್ಸ್ ಮುಟ್ಟಿರುವುದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಬರ್ಗ್ಯಾಂಡಿ ಬಣ್ಣದ ಮ್ಯಾಕ್ಸಿ ಧರಿಸಿ 1 ಹಾಗೂ M ಬೋರ್ಡ್ ಹಿಡಿದು ನಿಂತಿದ್ದಾರೆ. 'Yaaaay! One million it is. ಸದಾ ನನ್ನ ಪಕ್ಕದಲ್ಲಿರುವ ಒಂದು ಮಿಲಿಯನ್ ಹೃದಯಗಳಿಗೆ ಧನ್ಯವಾದಗಳು. #vaishnavians ನೀವುಗಳು, ನನ್ನ ಗ್ರೇಟ್ ಸಪೋರ್ಟ್ ಆಗಿದ್ದೀರಿ. ಲವ್ ಯು,' ಎಂದು ವೈಷ್ಣವಿ ಬರೆದುಕೊಂಡಿದ್ದಾರೆ.
ಸುಮಾರು 6 ವರ್ಷಗಳ ಕಾಲ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿಯಲ್ಲಿ ಸನ್ನಿಧಿ ಪಾತ್ರದಲ್ಲಿ ಕಾಣಿಸಿಕೊಂಡ ವೈಷ್ಣವಿ ಬಿಗ್ ಬಾಸ್ ನಂತರ ಯಾವ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ. ಕೆಲವೊಂದು ಮೇಕಪ್ ಬ್ರ್ಯಾಂಡ್, ವಾಚ್ ಬ್ರ್ಯಾಂಡ್ ಹಾಗೂ ಫ್ಯಾಷನ್ ಡಿಸೈನರ್ ಜೊತೆ ಕೊಲಾಬೋರೇಟ್ ಮಾಡಿಕೊಂಡಿದ್ದಾರೆ. ಬಿಡುವಿನ ಸಮಯದಲ್ಲಿ ಸಿಕ್ಕಾಪಟ್ಟೆ ಬುಕ್ ಓದುವ ವೈಷ್ಣವಿ, ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ವಾಚ್ ಕಲೆಕ್ಷನ್, ಬ್ಯಾಗ್‌ನಲ್ಲಿ ಏನಿದೆ, ಮೈಂಡ್ ರೀಡಿಂಗ್, ಫೇಶಿಯಲ್ ಯೋಗ, ಹೇರ್ ಕೇರ್ ಸೇರಿದಂತೆ ಅನೇಕ ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.