
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಧಾರಾವಾಹಿಯಲ್ಲಿ 'ರೌಡಿ ಬೇಬಿ ಅಮೂಲ್ಯ' ಎಂದೇ ಹೆಸರು ಪಡೆದಿರುವ ನಿಶಾ ರವಿಕೃಷ್ಣನ್ ಈಗ ತೆಲುಗು ಕಿರುತೆರೆ ಲೋಕಕ್ಕೆ ಹಾರುತ್ತಿದ್ದಾರೆ. ಗಟ್ಟಿಮೇಳ ಧಾರಾವಾಹಿ ಹಾಗೂ ತೆಲುಗು ಧಾರಾವಾಹಿ ಎರಡನ್ನೂ ನಿಭಾಯಿಸುವುದಾಗಿ ಹೇಳಿದ್ದಾರೆ.
ಗಟ್ಟಿಮೇಳ ಧಾರಾವಾಹಿ ಅತಿ ಹೆಚ್ಚು ಟಿಆರ್‌ಪಿ ಪಡೆಯುತ್ತಿದ್ದರೂ, ತೆಲುಗು ಧಾರಾವಾಹಿ ಒಪ್ಪಿ ಕೊಂಡಿರುವ ಕಾರಣ ನಿಶಾ ಧಾರಾವಾಹಿ ಕೈ ಬಿಡುತ್ತಿದ್ದಾರೆ ಎನ್ನುವ ಗಾಸಿಪ್ ಹರಿದಾಡುತ್ತಿದೆ. ನಾನು ಧಾರಾವಾಹಿ ಬಿಡುವುದಿಲ್ಲ. ಆ ರೀತಿ ನಿರ್ಧಾರ ತೆಗದುಕೊಳ್ಳುವುದಿಲ್ಲ. ಕನ್ನಡ ಧಾರಾವಾಹಿ ನನ್ನ ಮೊದಲ ಆದ್ಯತೆ ಹಾಗೂ ನಾನು ತೆಲುಗು ಕಲಿಯುತ್ತಿರುವೆ. ಅದಲ್ಲದೇ ಅಲ್ಲಿನ ಕಲಾವಿದರಿಗೆ ನಾನು ಕನ್ನಡ ಕಲಿಸುತ್ತಿರುವೆ, ಎಂದು ನಿಶಾ ಹೇಳಿದ್ದಾರೆ.
ವಿನಯ್ ರಾಜ್‌ಕುಮಾರ್ ಹಾಗೂ ಅದಿತಿ ಪ್ರಭುದೇವ ಅವರೊಂದಿಗೆ 'ಅಂದೊಂದಿತ್ತು ಕಾಲ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿರುವ ನಟಿ ನಿಶಾ, ಎರಡೂ ಭಾಷೆಯ ಧಾರಾವಾಹಿಗಳ ಚಿತ್ರೀಕರಣದಲ್ಲಿ ಸದ್ಯಕ್ಕೆ ಬ್ಯುಸಿಯಾಗಿದ್ದಾರೆ. ಗಟ್ಟಿಮೇಳದಲ್ಲಿ ಕಾಣಿಸಿಕೊಂಡಿರುವ ಅಮೂಲ್ಯ ಪಾತ್ರವೇ ತೆಲಗು ಸೀರಿಯಲ್‌ನಲ್ಲಿ ಮಾಡುತ್ತಿರುವ ಪಾತ್ರಕ್ಕೆ ಹೋಲುತ್ತದೆ ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.