ಹಿರಿಯ ಸ್ಪರ್ಧಿ ಮಾತು ಕೇಳಿ ಅನುಶ್ರೀ ಕಣ್ಣೀರು ಸುರಿಸಿದರು, 'ವಿಪಿ' ಕೈ ಮುಗಿದು ಕಾಲಿಗೆ ಬಿದ್ದರು!

By Shriram Bhat  |  First Published Dec 27, 2024, 7:23 PM IST

ಸರಿಗಮಪ ಸ್ಪರ್ಧಿ ಜೆಕೆ ರಾಜು ಅದೇನು ಹೇಳಿದ್ದಾರೆ? ಇಲ್ಲಿದೆ ನೋಡಿ ಡೀಟೇಲ್ಸ್.. ನನ್ನ ಹೆಸರು ಜೆಕೆ ರಾಜು ಅಂತ, ನನಗೆ 72 ವರ್ಷ. ನನಗೆ ಅಷ್ಟೊಂದು ಸಂಗೀತ ಜ್ಞಾನ ಇಲ್ಲ, ಆದ್ರೆ ಮ್ಯೂಸಿಕ್‌ನ ನಾನು ಲವ್ ಮಾಡ್ತೀನಿ ಮನಸಾರೆ.. 40 ವರ್ಷದ ಹಿಂದೆ ಜೂನಿಯರ್ ..


ಜೀ ಕನ್ನಡ ವಾಹಿನಿಯ (Zee Kannada) 'ಸರಿಗಮಪ' ವೇದಿಕೆಯಲ್ಲಿ ಹಿರಿಯ ಸದಸ್ಯ ಎನಿಸಿಕೊಂಡಿರುವ ಜೆಕೆ ರಾಜು (JK Raju) ಎಂಬ ಸ್ಪರ್ಧಿಯೊಬ್ಬರು ಭಾಗಿಯಾಗಿ ಸೆಲೆಕ್ಟ್ ಆಗಿದ್ದಾರೆ. ಕಳೆದ ವಾರ ನಡೆದ ಆಡಿಷನ್‌ನಲ್ಲಿ ಆಯ್ಕೆಯಾಗಿ ಮುಂದೆ ಕಿರುತೆರೆ ವೀಕ್ಷಕರಿಗೆ 'ದರ್ಶನ' ನೀಡಲಿದ್ದಾರೆ ಈ ಜೆಕೆ ರಾಜು. 'ಮೆಲ್ಲಗೆ, ನಡೆ ಮೆಲ್ಲಗೆ ಈ ಕೋಪವೇಕೆ ಚಿನ್ನಾ? ಮಲ್ಲಿಗೆ ನನ್ನ ಮಲ್ಲಿಗೆ ಈ ತಾಪವೇನೋ ಚೆನ್ನಾ..' ಎಂಬ ಹಳೆಯ ಹಾಡೊಂದನ್ನು ಹಾಡಿ ಜಡ್ಜ್‌ಗಳ ಮೆಚ್ಚುಗೆ ಗಳಿಸಿ ಸರೆಗಮಪ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಆದರೆ, ಅದಕ್ಕಿಂತ ಹೆಚ್ಚಾಗಿ ಅವರು ಮಾಡಿರುವ ಜೀವನ ಪಾಠ ಕೇಳಿಒ ಅಲ್ಲಿದ್ದವರು ಕಣ್ಣೀರು ಸುರಿಸಿದ್ದಾರೆ. 

ಹಾಗಿದ್ದರೆ ಸರಿಗಮಪ ಸ್ಪರ್ಧಿ ಜೆಕೆ ರಾಜು ಅದೇನು ಹೇಳಿದ್ದಾರೆ? ಇಲ್ಲಿದೆ ನೋಡಿ ಡೀಟೇಲ್ಸ್.. ನನ್ನ ಹೆಸರು ಜೆಕೆ ರಾಜು ಅಂತ, ನನಗೆ 72 ವರ್ಷ. ನನಗೆ ಅಷ್ಟೊಂದು ಸಂಗೀತ ಜ್ಞಾನ ಇಲ್ಲ, ಆದ್ರೆ ಮ್ಯೂಸಿಕ್‌ನ ನಾನು ಲವ್ ಮಾಡ್ತೀನಿ ಮನಸಾರೆ.. 40 ವರ್ಷದ ಹಿಂದೆ ಜೂನಿಯರ್ ಎಕ್ಸಾಂ ಪಾಸ್ ಮಾಡಿದೀನಿ, ನಂತ್ರ ಬಿಟ್ಟುಬಿಟ್ಟೆ.. ಚಿಕ್ಕ ವಯಸ್ಸಿಂದ್ಲೂ ಹೀಗೇನೇ, ಹಾಡ್ತಾ ಇದೀನಿ ಆದ್ರೆ ಡಿಸ್‌ಕಂಟೀನ್ಯೂ.. ಈಗ ವಯಸ್ಸಾದ್ಮೇಲೆ ಕಂಟಿನ್ಯೂ ಆಗಿದೆ, ಆದ್ರೆ ವಯಸ್ಸಾಗಿದೆ. 

Tap to resize

Latest Videos

undefined

ಸುದೀಪ್ ಮ್ಯಾಕ್ಸ್ ಸಿನಿಮಾ ಹೊಗಳಿ 'ಜೈ ಕಿಚ್ಚ ಬಾಸ್' ಎಂದ ಯಶ್ ಫ್ಯಾನ್ಸ್!

ಮನೆನಲ್ಲಿ ನಾನೊಬ್ಬನೇ ಇರೋದು, ಮದ್ವೆಯನ್ನು ಕಾರಣಾಂತರದಿಂದ ಮಾಡ್ಕೊಂಡಿಲ್ಲ.. 'ಆಂಕರ್ ಅನುಶ್ರೀ (Anchor Anushree) ಅವರು 'ಯಾಕೆ ಸರ್ ಮದ್ವೆಯಾಗಿಲ್ಲ' ಅಂತ ಪ್ರಶ್ನೆ ಕೇಳಿದಾರೆ. ಅದಕ್ಕೆ ಅವ್ರು 'ನಾನು ಒಂದ್ ಕಡೆ ಕೆಲಸದಲ್ಲಿದ್ದೆ, ಆದ್ರೆ ಬಿಟ್ಬಿಟ್ಟೆ.. ಸರ್ಕಾರಿ ಕೆಲಸ ಇಲ್ಲ, ಸರಿಯಾಗಿ ಸಂಪಾದನೆ ಇಲ್ಲ, ಯಾರ್ ಕೊಡ್ತಾರೆ ಹೆಣ್ಣು? ಅದಕ್ಕೇ ಮಾಡ್ಕೊಂಡಿಲ್ಲ.. ಆ ಯೋಚ್ನೆನೇ ಬಿಟ್ಟೆ.. ಈಗ ಈ ಹಾಡು ಗೀಡು ಹಾಡ್ಕೊಂಡು, ಜೀವನ ಮಾಡ್ಕೊಂಡು ಇದೀನಿ... 

ನಿರೂಪಕಿ ಅನುಶ್ರೀ ಅವರು 'ಈಗ ಏನ್ ಮಾಡ್ಕೊಂಡು ಇದೀರಾ"' ಅಂತ ಕೇಳಲು 'ಏನೂ ಇಲ್ಲ.. ಅಪರೂಪಕ್ಕೆ ಅವ್ರು ಇವ್ರು ಹಾಡೋಕೆ ಕರಿತಾರೆ.. ಕಲಾವಿದರ ಪೆನ್ಶನ್ ಎರಡು ಸಾವಿರ ಬರುತ್ತೆ.. ಪಿಎಫ್‌ದು 750 ಏನೋ ಬರುತ್ತೆ.. ಒಟ್ಟೂ ಹೆಚ್ಚುಕಡಿಮೆ ಮೂರು ಸಾವಿರ ರೂಪಾಯಿ ಬರುತ್ತೆ.. ಆಗ ಅನುಶ್ರೀ ಅವರು 'ಅಂದ್ರೆ ಸರಿಸುಮಾರು ತಿಂಗಳಿಗೆ 3000 ಹತ್ರ ಬರುತ್ತೆ.. ' ಎನ್ನಲು 'ಹೌದು' ಎಂದಿದ್ದಾರೆ ಜೆಕೆ ರಾಜು. ಮನೆ ಬಾಡಿಗೆ ಮನೆ, ಇಷ್ಟೇ ದುಡ್ಡು ಸಾಕು ಮಾಡ್ಕೊಂಡಿದೀನಿ ನಾನು.. 

ಕಂಗಾಲಾಗಿ ಉಪ್ಪಿ ಕಾಲಿಗೆ ಬಿದ್ದ ಅಕುಲ್ ಬಾಲಾಜಿ; ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ!

ನಾನು ತುಂಬಾ ವರ್ಷಗಳಿಂದ ಇದೇ ತರಹ ಜೀವನ ಮಾಡ್ತಾ ಇದೀನಿ, ಈಗಿಂದೇನೂ ಅಲ್ಲ.. ಆಗೀಗ ಯಾರೋ ಹಾಡೋಕೆ ಕರೆದ್ರೆ ಅದು ಸ್ವಲ್ಪ ಸಿಗುತ್ತೆ.. ನನ್ ತಂಗಿ ಮಗ ಅಲ್ಪಸ್ವಲ್ಪ ಹಣದ ಸಹಾಯ ಮಾಡ್ತಾನೆ.. ನಾನು ದಿನಕ್ಕೆ ಎರಡೇ ಹೊತ್ತು, ಬೆಳಿಗ್ಗೆ ಹಾಗು ಸಂಜೆ ಊಟ ಮಾಡೋದು.. ಜಾಸ್ತಿ ತಂದ್ರೆ ನಂಗೆ ಅರಗೋದೂ ಇಲ್ಲ..  ಮದ್ಯಾನ್ಹ ಅರ್ಧ ಲೋಟ ಹಾಲು, ಒಂದೆರಡು ಬಿಸ್ಕೆಟ್ ತಿಂತೀನಿ ಅಷ್ಟೇ. ನೀವು ಕೇಳಿದ್ರಿ ಅದಕ್ಕೇ ಸತ್ಯ ಹೇಳಿದೆ.'. ಅಂದಿದ್ದಾರೆ ಜೆಕೆ ರಾಜು. 

ಅನುಶ್ರೀ ಅವರು 'ನಿಮಗೆ ಯಾವತ್ತೂ ಒಬ್ಬಂಟಿ ಅಂತ ಅನ್ಸಲ್ವಾ ಸರ್?' ಅಂತ ಕೇಳಿದ್ದಕ್ಕೆ 'ಕೆಲವೊಮ್ಮೆ ಅನ್ಸುತ್ತೆ, ಆದ್ರೆ ಅದು ಕೆಲವೇ ಕ್ಷಣ.. ಆದ್ರೆ ಅದನ್ನ ಬದಿಗೊತ್ತಿ ಹೋಗ್ತಾ ಇರೋದು.. ಯಾಕೆ ಅಂದ್ರೆ, ಮದ್ವೆ ಆದ್ರೆ ಮುಕ್ತಿ ಸಿಗುತ್ತೆ ಅಂತ ಏನೂ ಅಲ್ಲ.. ಅಲ್ವಾ ಸರ್ ಅಂತ ಗಾಯಕ ವಿಜಯ್ ಪ್ರಕಾಶ್ ಅವ್ರನ್ನ ಕೇಳಿದಾರೆ ಜೆಕೆ ರಾಜು.. ಅದಕ್ಕೆ 'ಗ್ರೇಟ್' ಅನ್ನೋ ರೀತಿ ಅವರದೇ ಆದ ಸ್ಟೈಲಿನಲ್ಲಿ ರಿಪ್ಲೈ ಕೊಟ್ಟಿದಾರೆ 'ವಿಪಿ' ಅವರು. 

ಯಶ್ ನಡತೆ ಬಗ್ಗೆ ಆಕ್ಷೇಪ ಎತ್ತಿದ ಸುದೀಪ್ ಫ್ಯಾನ್ಸ್‌, ರಾಕಿಂಗ್ ಸ್ಟಾರ್‌ಗೆ ಬುದ್ಧಿ ಹೇಳಿದ್ದ ಕನ್ನಡದ ಕಿಚ್ಚ!

ಈಗ್ಲೇ ನಂಗೆ ಎಪ್ಪತ್ತೆರಡಾಗಿದೆ.. ಇನ್ನು ...ಅಂತ ಹೇಳಿ ಮೇಲಕ್ಕೆ ಕೈ ತೋರಿಸಿ ನಕ್ಕು ತಮ್ಮ ಜೀವನೋತ್ಸಾಹವನ್ನು ಅಲ್ಲಿದ್ದವರಿಗೆ ಪ್ರದರ್ಶಿಸಿದ್ದಾರೆ ಹಿರಿಯ ನಾಗರೀಕರಾದ ಜೆಕೆ ರಾಜು. ಮೊದಲು ಫುಟ್‌ಪಾತ್‌ ಮೇಲೆ ಫಾಸ್ಟ್‌ ಆಗಿ ನಡಿತಾ ಇದ್ದೆ, ಈಗ ನಿಧಾನವಾಗಿ ನಡಿತೀನಿ..  ಯಾಕೆ ಅಂದ್ರೆ, ಅಕಸ್ಮಾತ್‌ ಆಗಿ ಬಿದ್ರೂ ಕೂಡ ಕಡಿಮೆ ಪೆಟ್ಟು ಆಗ್ಲಿ ಅಂತ.. ಜಾಸ್ತಿ ಪೆಟ್ಟು ಆದ್ರೆ ಆಸ್ಪತ್ರೆ ಸೇರ್ಕೋಬೇಕಾಗುತ್ತೆ.. 'ಎಂದಿದ್ದಾರೆ ಜೆಕೆ ರಾಜು. 

'ನಂಗೆ ಜಾಸ್ತಿ ವರ್ಷ ಬದುಕಬೇಕು ಅನ್ನೋ ಆಸೆಯೇನೂ ಇಲ್ಲ. ಆದ್ರೆ ಇದ್ದಷ್ಟು ದಿನ ಬೇರೆ ಯಾರದೋ ಮೇಲೆ ಡಿಪೆಂಡ್ ಆಗ್ಬಾರ್ದು ಅನ್ನೋ ಆಸೆ ಇದೆ ಅಷ್ಟೇ.. ಅದ್ಕೇ ಹಾಡೋದು, ಪ್ರಾಣಾಯಾಮ ಮಾಡೋದು.. ತಂದೆ-ತಾಯಿ ಬಿಟ್ಬಿಟ್ಟು ಬೇರೆ ಯಾರ್ ಮೇಲೂ ಡಿಪೆಂಡ್ 'ಎಂದಿದ್ದಾರೆ ಜೆಕೆ ರಾಜು. ಅವರ ಮಾತಿಗೆ ತಲೆದೂಗಿದ ಅಲ್ಲಿದ್ದ ಎಲ್ಲರೂ ಅದೇನು ಹೇಳಿದ್ದಾರೆ ಎಂಬ ಕುತೂಹಲ ನಿಮಗಿದ್ದರೆ ವಿಡಿಯೋ ನೋಡಬಹುದು..

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

 

click me!