ಸೆಲೆಬ್ರಿಟಿ ಜೋಡಿಗಳಾದ ಕವಿತಾ ಗೌಡ ಮತ್ತು ಚಂದನ್ ಕುಮಾರ್ ಇದೇ ಮೊದಲ ಬಾರಿ ತಮ್ಮ ಮೂರು ತಿಂಗಳ ಕಂದಮ್ಮನ ಜೊತೆ ಔಟಿಂಗ್ ಮಾಡಿದ್ದು, ಮುದ್ದಾದ ಫೋಟೊ ಶೇರ್ ಮಾಡಿದ್ದಾರೆ.
ಇತ್ತೀಚೆಗಷ್ಟೇ ಪೋಷಕರಾದ ಸಂಭ್ರಮದಲ್ಲಿರುವ ಕನ್ನಡ ಕಿರುತೆರೆಯ ಜನಪ್ರಿಯ ಜೋಡಿಗಳಾದ ಕವಿತಾ ಗೌಡ (Kavitha Gowda) ಮತ್ತು ಚಂದನ್ ಕುಮಾರ್ ಸದ್ಯಕ್ಕಂತೂ ಸಿನಿಮಾ, ಶೂಟಿಂಗ್ ಎಲ್ಲದರಿಂದಲೂ ದೂರ ಉಳಿದು, ತಮ್ಮ ಪುಟ್ಟ ಕಂದನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಮಗುವಿನ ಜೊತೆಗಿನ ಮುದ್ದು ಮುದ್ದಾದ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ ಈ ಜೋಡಿ.
ಮಗನಿಗೆ 2 ತಿಂಗಳು ತುಂಬಿದ ಸಂಭ್ರಮದಲ್ಲಿ ಸ್ಪೆಷಲ್ ಫೋಟೊ ಹಂಚಿಕೊಂಡ ಕವಿತಾ ಗೌಡ - ಚಂದನ್
undefined
ಕವಿತಾ ಮತ್ತು ಚಂದನ್ ಮಗು ಹುಟ್ಟಿದ ಕೆಲವೇ ದಿನಗಳಲ್ಲಿ ಮಗುವಿನ ಜೊತೆಗೆ ಮುದ್ದಾದ ಫೋಟೊ ಶೂಟ್ ಮಾಡಿಸಿ, ಫೋಟೊ ಶೇರ್ ಮಾಡುವ ಮಗುವಿನ ಮುಖ ರಿವೀಲ್ ಮಾಡಿದ್ದು, ಆದಾದ ಬಳಿಕ ಮಗುವಿಗೆ ಎರಡು ತಿಂಗಳು ತುಂಬಿದ ನಂತರವೂ ಮಗನಿಗೆ ಹ್ಯಾಪಿ 2 ತಿಂಗಳು ಮೈ ಲಿಟಲ್ ಸನ್ ಶೈನ್ ಎಂದು ಪೋಸ್ಟ್ ಹಾಕಿ , ಮತ್ತಷ್ಟು ಫೋಟೊಗಳನ್ನು ಶೇರ್ ಮಾಡಿದ್ದರು ಕವಿತಾ ಗೌಡ. ಇದೀಗ ಮಗುವಿಗೆ ಮೂರು ತಿಂಗಳು ತುಂಬಿದ್ದು, ಈ ಸಂದರ್ಭದಲ್ಲಿ ವಿಶೇಷ ವಿಡಿಯೋ ಶೇರ್ ಮಾಡಿದ್ದಾರೆ.
ಕೃಷ್ಣಾ-ಮಿಲನಾ ಬಳಿಕ ಕವಿತಾ-ಚಂದನ್.... ಹುಟ್ಟಿದ ಕೆಲವೇ ದಿನಗಳಲ್ಲಿ ಮಗುವಿನ ಫೇಸ್ ರಿವೀಲ್ ಮಾಡಿದ ಜೋಡಿ
ವಾವ್… ಸಮಯ ಎಷ್ಟು ಬೇಗ ಓಡುತ್ತೆ, ನಮ್ಮ ಪುಟ್ಟ ಪಾಪು ಎಷ್ಟು ಬೇಗ ದೊಡ್ಡವನಾಗುತ್ತಿದ್ದಾರೆ. ಇದನ್ನು ನಂಬೋದಕ್ಕೆ ಸಾಧ್ಯ ಆಗ್ತಿಲ್ಲ. ಮಗನಿಗೆ ಮೂರು ತಿಂಗಳು ತುಂಬಿದ ಬಳಿಕ ಇದೀಗ ಮೊದಲ ಬಾರಿಗೆ ಕ್ರಿಸ್ಮಸ್ ಈವ್ ಮಗನೊಂದಿಗೆ ಔಟಿಂಗ್ (Wow I can’t believe how fast this little fella is growing. After 3 months & few days his first outing be on a Christmas eve) ಎಂದು ಬರೆದುಕೊಂಡು, ಮಗುವಿನ ಫೋಟೋ ಶೂಟ್ ನಿಂದ ಹಿಡಿದು, ಔಟಿಂಗ್ ವರೆಗೂ ಮುದ್ದಾದ ಫೋಟೊಗಳನ್ನು ವಿಡಿಯೋ ಮಾಡಿ ಶೇರ್ ಮಾಡಿದ್ದಾರೆ.
ಚಂದನ್ ಮತ್ತು ಕವಿತಾ ಅವರ ಮುದ್ದಿನ ಮಗುವಿನ ಫೋಟೊ ವಿಡಿಯೋ ನೋಡಿ ಅಭಿಮಾನಿಗಳು ಪ್ರೀತಿಯಿಂದ ಹಾರೈಸಿದ್ದಾರೆ. ಜೊತೆಗೆ ಮಗು ಅಪ್ಪ ಚಂದನ್ ರೀತಿಯೇ ಇದ್ದಾನೆ, ಜ್ಯೂನಿಯರ್ ಚಂದನ್ (Junior Chandan) ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಮಗನ ಜೊತೆಗೆ ಕ್ರಿಸ್ಮಸ್ ಸಂಭ್ರಮದಲ್ಲಿ ಭಾಗಿಯಾಗಿರುವ ಮುದ್ದಾದ ಫೋಟೊ ವೈರಲ್ ಆಗುತ್ತಿದೆ.
ಕವಿತಾ ಗೌಡ ಮನೆ ತುಂಬಿದ ಕಂದಮ್ಮ: ಆಸ್ಪತ್ರೆಯಿಂದ ಮನೆವರೆಗಿನ ವಿಡಿಯೋ ಶೇರ್ ಮಾಡಿದ ನಟಿ
ಕವಿತಾ ಗೌಡ ಮತ್ತು ಚಂದನ್ (Chandan Kumar) ಇಬ್ಬರೂ ಕಿರುತೆರೆ ನಟರಾಗಿದ್ದರು, ಹಲವು ಸಮಯದಿಂದ ಪ್ರೀತಿಸುತ್ತಿದ್ದ ಜೋಡಿ, 2021ರ ಮೇ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿ ಇದೇ ಸೆಪ್ಟೆಂಬರ್ ತಿಂಗಳಲ್ಲಿ ತಮ್ಮ ಮೊದಲ ಮಗುವನ್ನು ಬರಮಾಡಿಕೊಂಡಿದ್ದರು. ಸದ್ಯ ಈ ಜೋಡಿ, ಅಮ್ಮ-ಅಪ್ಪನ ಜವಾಭ್ದಾರಿ ನಿರ್ವಹಿಸುತ್ತಾ ಹಾಯಾಗಿದ್ದಾರೆ.