Zee ಸರಿಗಮಪ ಲಿಟಲ್ ಚಾಂಪ್ಸ್ : ವಾಟ್ಸ್​ಆ್ಯಪ್​, ಆನ್​ಲೈನ್​ನಲ್ಲೂ ಕಳಿಸ್ಬೋದು ಹಾಡು- ಡಿಟೇಲ್ಸ್​ ಇಲ್ಲಿದೆ

Published : Feb 18, 2026, 11:26 PM IST
Sarigamapa

ಸಾರಾಂಶ

ಜೀ ಕನ್ನಡದ ಜನಪ್ರಿಯ ಸಂಗೀತ ರಿಯಾಲಿಟಿ ಷೋ 'ಸರಿಗಮಪ ಲಿಟಲ್ ಚಾಂಪ್ಸ್' ಹೊಸ ಆವೃತ್ತಿ ಶೀಘ್ರದಲ್ಲೇ ಆರಂಭವಾಗಲಿದೆ.  ಆಡಿಷನ್‌ಗಳು ಇದೀಗ ಶುರುವಾಗಿದ್ದು, ಸ್ಥಳಕ್ಕೆ ಬರಲು ಸಾಧ್ಯವಾಗದ ಪ್ರತಿಭೆಗಳಿಗಾಗಿ ವಾಹಿನಿಯು ವಾಟ್ಸ್​ಆ್ಯಪ್​ ಹಾಗೂ ಆನ್‌ಲೈನ್‌ ಮೂಲಕ ಆಡಿಷನ್ ನೀಡುವ ವಿಶೇಷ ಅವಕಾಶವನ್ನು ಕಲ್ಪಿಸಿದೆ.

ಸರಿಗಮಪ ರಿಯಾಲಿಟಿ ಷೋ ಮೊದಲು ಜೀ ವಾಹಿನಿಯ ಹಿಂದಿಯಲ್ಲಿ ಆರಂಭವಾಗಿತ್ತು. ಕನ್ನಡದ ಖಾಸಗಿ ವಾಹಿನಿಗಳು ಇರದ ಸಮಯದಲ್ಲಿಯೇ ಸರಿಗಮಪ ಸಂಗೀತ ಷೋ ಭಾರಿ ಸದ್ದು ಮಾಡುತ್ತಿದ್ದ ಕಾಲವದು. ಈ ಷೋ ಮೂಲಕ ಅದೆಷ್ಟೋ ಪ್ರತಿಭೆಗಳು ಬಾಲಿವುಡ್​ನಲ್ಲಿಯೂ ಹಿನ್ನೆಲೆ ಗಾಯಕರಾಗಿ ಖ್ಯಾತಿ ಪಡೆದಿರುವುದು ಇದೆ. ಅದೇ ರೀತಿ ಹಲವು ವರ್ಷಗಳಿಂದ ಜೀ ಕನ್ನಡದಲ್ಲಿಯೂ ಈ ಷೋ ನಡೆಸಿಕೊಂಡು ಬರಲಾಗುತ್ತಿದ್ದು, ಇದು ಕೂಡ ಹಲವಾರು ಪ್ರತಿಭೆಗಳಿಗೆ ವೇದಿಕೆ ಒದಗಿಸಿಕೊಟ್ಟಿದೆ. ಹಲವರು ವಿವಿಧ ಕ್ಷೇತ್ರಗಳಲ್ಲಿ ಖ್ಯಾತಿಯನ್ನೂ ಗಳಿಸಿದ್ದಾರೆ. ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.

ಮಕ್ಕಳಲ್ಲಿನ ಪ್ರತಿಭೆ

ಮೊದಲಿಗೆ ದೊಡ್ಡವರಿಗಷ್ಟೇ ಸೀಮಿತವಾಗಿದ್ದ ಸರಿಗಮಪ ಸಂಗೀತ ರಿಯಾಲಿಟಿ ಷೋ, ಮಕ್ಕಳಲ್ಲಿನ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಒದಗಿಸಿ ಸರಿಗಮಪ ಲಿಟಲ್ ಚಾಂಪ್ಸ್ ಶುರು ಮಾಡಿತು. ಇದೀಗ ಇದರದ್ದೇ ಇನ್ನೊಂದು ಆವೃತ್ತಿ ಶೀಘ್ರದಲ್ಲಿ ಬರಲಿದೆ. ಇದರ ಪ್ರೊಮೋ ಅನ್ನು ಇದಾಗಲೇ ಜೀ ವಾಹಿನಿ ಬಿಡುಗಡೆ ಮಾಡಿದೆ. ಇದರಲ್ಲಿ, ಮಕ್ಕಳೆಲ್ಲಾ ಸಂಗೀತದ ನಾದವನ್ನು ಕೇಳುತ್ತಾ ಒಬ್ಬೊಬ್ಬರಾಗಿಯೇ ಸೇರುತ್ತಾ, ಹಾರಾಡುತ್ತಾ, ಓಡಾಡುತ್ತಾ ಸಂಗೀತ ಲೋಕದ ದೊಡ್ಡ ಆವರಣಕ್ಕೆ ಪ್ರವೇಶ ಮಾಡುತ್ತಾರೆ. ಸಂಗೀತ ಸಾಧನಗಳ ಜೊತೆ ಅವರ ಆಟ, ಫನ್‌ ವರ್ಲ್ಡ್‌ನಲ್ಲಿ ಮಕ್ಕಳೆಲ್ಲಾ ಮಜಾ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಈ ರಿಯಾಲಿಟಿ ಷೋಗೆ ಹೆಸರು ನೋಂದಾಯಿಸಿಕೊಳ್ಳಿ ಎಂದು ವಾಹಿನಿ ಕೇಳುತ್ತಿದೆ. ಈ ಬಾರಿಯೂ ಆ್ಯಂಕರ್​ ಅನುಶ್ರೀ ಅವರ ನಿರೂಪಣೆಯಲ್ಲಿ, ವಿಜಯ್ ಪ್ರಕಾಶ್‌, ಅರ್ಜುನ್‌ ಜನ್ಯಾ ಹಾಗೂ ರಾಜೇಶ್‌ ಕೃಷ್ಣನ್‌ ಅವರ ತೀರ್ಪುಗಾರಿಕೆಯಲ್ಲಿ ಷೋ ನಡೆಯಲಿದೆ.

ಆಡಿಷನ್​ ಶುರು

ಇದರ ಆಡಿಷನ್ಸ್‌ ಶುರುವಾಗಲಿದ್ದು, ಮಕ್ಕಳು ರೆಡಿಯಾಗಿ ಎಂದು ಇದಾಗಲೇ ಪ್ರೊಮೋ ರಿಲೀಸ್​ ಮಾಡಲಾಗಿದೆ. ರಾಜ್ಯದ ವಿವಿಧ ಊರುಗಳಲ್ಲಿ ಮಕ್ಕಳಿಗೆ ಆಡಿಷನ್​ ನಡೆಯುತ್ತಿದ್ದರೂ ಎಷ್ಟೋ ಪ್ರತಿಭಾನ್ವಿತ ಮಕ್ಕಳಿಗೆ ಆ ದಿನ ಹೋಗಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಆಡಿಷನ್​ ನಡೆಯುವ ಜಾಗ ದೂರ ಇರುವ ಕಾರಣ, ಅವರಿಗೆ ಹೋಗಲು ಆಗುವುದಿಲ್ಲ. ಇಂಥವರಿಗಾಗಿಯೇ ಜೀ ವಾಹಿನಿ ಇದೀಗ ಗುಡ್​ನ್ಯೂಸ್​ ಕೊಟ್ಟಿದೆ.

ವಾಟ್ಸ್​ಆ್ಯಪ್​, ಆನ್​ಲೈನ್​

ಒಂದು ವೇಳೆ ಆಡಿಷನ್​ ನಡೆಯುತ್ತಿರುವ ಜಾಗಕ್ಕೆ ಮಕ್ಕಳನ್ನು ಕರೆದುಕೊಂಡು ಬರಲು ಸಾಧ್ಯವಾಗದೇ ಇದ್ದರೆ ಆನ್​ಲೈನ್​ನಲ್ಲಿ ಆಡಿಷನ್​ ಕೊಡಬಹುದು ಅಥವಾ ವಾಟ್ಸ್​ಆ್ಯಪ್​ ಮೂಲಕವೂ ಕಳುಹಿಸಬಹುದು ಎಂದು ಜೀ ವಾಹಿನಿ ಹೇಳಿದೆ. ಕೆಳಗೆ ಇರುವ ಕ್ಯೂಆರ್​ಕೋಡ್​ ಸ್ಕ್ಯಾನ್ ಮಾಡಿಯೂ ಡಿಟೇಲ್ಸ್​ ಪಡೆಯಬಹುದು.

ಇದಕ್ಕೆ ಇರುವ ಷರತ್ತುಗಳು ಎಂದರೆ,

- ವಯಸ್ಸು 3 ರಿಂದ 15 ವರ್ಷ.

- ಮೂರು ವಿಭಿನ್ನ ಶೈಲಿಯ ಹಾಡುಗಳನ್ನು ಕರೋಕೆ ಬಳಸದೇ ಹಾಡಬೇಕು. ಒಂದೂವರೆ ನಿಮಿಷಗಳ ಒಳಗೆ ಹಾಡು ಇರಬೇಕು.

- ವಾಹಿನಿಯ ಆಡಿಷನ್​ಗೆ ಯಾವುದೇ ಹಣ ಇರುವುದಿಲ್ಲ. ಒಂದು ವೇಳೆ ವಾಹಿನಿಯ ಹೆಸರು ಹೇಳಿಕೊಂಡು ಯಾರೇ ಆದರೂ ಹಣ ಕೇಳಿದರೆ ಅದನ್ನು ಕೊಡಬೇಡಿ ಎಂದೂ ವಾಹಿನಿ ಹೇಳಿದೆ.

- ನಿಮ್ಮ ಹಾಡು ಕಳುಹಿಸುವ ವಾಟ್ಸ್​ಆ್ಯಪ್​ ನಂಬರ್​ 9513133724

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Karna Serial: ಕರ್ಣನ ನೋಡಿ ನಿತ್ಯಾ ಹಾರ್ಟ್​ಬೀಟ್​ ಜೋರಾಯ್ತು: ಮನಸ್ಸು ತಾಳತಪ್ಪೋಯ್ತು! ನಿಧಿ ಕಥೆ?
Bigg Boss ದುಡ್ಡು ನಿರ್ಮಲಾ ಸೀತಾರಾಮನ್‌ಗೆ! ಶಾಸಕ ಪ್ರದೀಪ್‌ ಮಾತಿಗೆ ಗಿಲ್ಲಿ ನಟ ಹೇಳಿದ್ದೇನು? ದುಡ್ಡು ಬಂತಾ?