ಜೀ ಕನ್ನಡ ಸರಿಗಮಪದಿಂದ ಹೊಸ ಸಾಹಸ, ಮ್ಯೂಸಿಕಲ್ ಜರ್ನಿ ಅಂದ್ರೆ ಇದೆ ತಾನೆ!

By Suvarna News  |  First Published Feb 9, 2020, 6:02 PM IST

ಜೀ ಕನ್ನಡದ ಸರಿಗಮಪದಿಂದ ಹೊಸ ಸಾಹಸ/ ಉಚಿತ ಬಸ್ ಸವಾರಿ ಮೂಲಕ ಮ್ಯೂಜಿಕಲ್ ಜರ್ನಿ/ ಮಲೆಮಹದೇಶ್ವರ ಬೆಟ್ಟಕ್ಕೆ ಬಸ್/ ಮೈಸೂರಿಗೆ ಮ್ಯೂಸಿಕಲ್ ಜರ್ನಿ


ಜೀ ಕನ್ನಡದ ಸರಿಗಮಪ ರಿಯಾಲಿಟಿ ಶೋ  ಯಾರಿಗೆ  ತಾನೆ ಗೊತ್ತಿಲ್ಲ. ಕನ್ನಡದ ಸಂಗೀತದ ಲೋಕದಲ್ಲಿಯೇ ಹೊಸ ಅಧ್ಯಾಯಗಳನ್ನು ಬರೆದುಕೊಂಡು ಮುಂದೆ ಸಾಗುತ್ತಿದೆ.

ಗಾನ ಗಾರುಡಿಗ, ನಾದಬ್ರಹ್ಮ ಹಂಸಲೇಖ, ಮೆಲೋಡಿ ಮಾಸ್ಟರ್ ರಾಜೇಶ್ ಕೃಷ್ಣನ್, ಚರಿತ್ರೆ ಸೃಷ್ಟಿಸಿದ ಗಾಯಕ ವಿಜಯ್ ಪ್ರಕಾಶ್, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ..ಇವರೊಂದಿಗೆ ಅನುಶ್ರೀ.. ಹೌದು ಸರಿಗಮಪ ಸೀಸನ್ 17ರ ಮೆಗಾ ಆಡಿಶನ್ ಮೂಲಕ ಆರಂಭವಾಗಿದೆ. ಜೀವನದ ಜ್ಞಾನ ಸಂಪಾದನೆ ಮಾಡಿರುವ ಹಿರಿಯ 70 ವರ್ಷದ ಗೋವರ್ಧನ್ ಈ ಬಾರಿಯ ಪ್ರಮುಖ ಆಕರ್ಷಣೆ.

Tap to resize

Latest Videos

ಕನ್ನಡದ ಗಡಿ ದಾಟಿ ಹವಾ ಎಬ್ಬಿಸಿದ ಜೊತೆಜೊತೆಯಲಿ

ಸರಿಗಮಪ ಸಾಧನೆಗಳು ಇಲ್ಲಿಗೆ ನಿಲ್ಲುವುದಿಲ್ಲ. ಹೊಸದೊಂದು ಆಯಾಮಕ್ಕೂ ಸರಿಗಮಪ ಮುನ್ನುಡಿ ಬರೆದಿದೆ. ಬೆಂಗಳೂರಿನಿಂದ ಮಲೆಮಹದೇಶ್ವರ ಬೆಟ್ಟ, ಸಾಂಸ್ಕೃತಿಕ ನಗರಿ ಮೈಸೂರು ಮತ್ತು ಹುಬ್ಬಳ್ಳಿಗೆ ಉಚಿತವಾಗಿ ಬಸ್ ಪ್ರಯಾಣ ಏರ್ಪಡಿಸಲಾಗಿತ್ತು. ಜನರು ಸಿಕ್ಕ ಅವಕಾಶದಲ್ಲಿ ಸರಿಗಮಪ ಸವಿ ಸವಿದರು. ಇದು ಪಕ್ಕಾ ಒಂದು ಮ್ಯೂಸಿಕಲ್ ಜರ್ನಿ...ಹಾಂ.. ಕಾಯ್ತಾ ಇರಿ ಈ ಬಸ್ ಮುಂದಿನ ಸಾರಿ ನಿಮ್ಮ ಊರಿಗೂ ಬರಬಹುದು 

 

click me!