'ಗಟ್ಟಿಮೇಳ'ದಲ್ಲಿ ವಿಜಯ್ ರಾಘವೇಂದ್ರ; valentine's day ಸ್ಪೆಷಲ್!

Published : Feb 09, 2020, 03:06 PM IST
'ಗಟ್ಟಿಮೇಳ'ದಲ್ಲಿ ವಿಜಯ್ ರಾಘವೇಂದ್ರ; valentine's day ಸ್ಪೆಷಲ್!

ಸಾರಾಂಶ

'ಗಟ್ಟಿಮೇಳ' ಧಾರಾವಾಹಿಯಲ್ಲಿ ಅಮೂಲ್ಯಗೆ ಸರ್ಪ್ರೈಸ್‌ ಕೊಟ್ಟ ವಿಜಯ್ ರಾಘವೇಂದ್ರ, ಅಮೂಲ್ಯ ರಿಯಾಕ್ಷನ್ ಹೇಗಿತ್ತು ನೋಡಿ!  

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ಧಾರಾವಾಹಿ 'ಗಟ್ಟಿಮೇಳ' ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದೆ.  ವೇದಾಂತ್‌- ಅಮೂಲ್ಯ ಕಾಂಬಿನೇಷನ್‌ ಪ್ರೇಕ್ಷಕರ ಪ್ರೀತಿ ಗಿಟ್ಟಿಸಿಕೊಂಡಿದೆ. 

ಬಾಸ್‌- ಅಮೂಲ್ಯ ಸ್ಟೋರಿಗೆ ಹೊಸ ತಿರುವು ಕೊಡಲು ಚಿನ್ನಾರಿ ಮುತ್ತ ಬರ್ತಿದ್ದಾರೆ. ಸೋಮವಾರದಿಂದ ಶುಕ್ರವಾರ ರಾತ್ರಿ 8ಕ್ಕೆ ಪ್ರಸಾರವಾಗುತ್ತಿರುವ ಸಂಚಿಕೆಯಲ್ಲಿ ವಿಜಯ್‌ ರಾಘವೇಂದ್ರ ಮಿಂಚಲಿದ್ದಾರೆ. ಗುಲಾಬ್ ಜಾಮೂನ್‌ ಮತ್ತು ಚಾಕಲೇಟ್‌ ಬಾಯ್‌ ಎಂದು ಕರೆಸಿಕೊಂಡಿರುವ ವಿಜಯ್ ಧಾರಾವಾಹಿಗೆ ಹೊಸ ತಿರುವು ಕೊಡಲಿದ್ದಾರಾ ಎಂದು ಕಾದು ನೋಡಬೇಕಿದೆ. 

'ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌', 'ಡ್ರಾಮಾ ಜೂನಿಯರ್ಸ್‌' ಹಾಗೂ ಅವಾರ್ಡ್‌ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡಿಕೊಂಡು ಪ್ರೇಕ್ಷಕರ ಮನಸ್ಸು ಗೆದ್ದಿರುವ ವಿಜಯ್ ಅವರನ್ನು ಕಿರುತೆರೆ ಮೇಲೆ ಕಾಣಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. 

ಇತ್ತೀಚಿಗೆ ವಿಜಯ್ ರಾಘವೇಂದ್ರ ಅಭಿನಯದ 'ಮಾಲ್ಗುಡಿ ಡೇಸ್‌' ರಾಜ್ಯದಾದ್ಯಂತ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ.

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

‘ಗಿಚ್ಚಿ ಗಿಲಿಗಿಲಿ’ ಪ್ರಶಾಂತ್-ಕೃತಿ ಗೌಡ ಹನಿಮೂನ್ ಟ್ರಿಪ್: ವಿಯೆಟ್ನಾಂ ರೊಮ್ಯಾಂಟಿಕ್ ಫೋಟೋಸ್ ವೈರಲ್
ಸಮುದ್ರಕ್ಕೆ ಹಾರಿದ Puttakkana Makkalu ಸ್ನೇಹಾ! ನಟಿ ಸಂಜನಾ ಬುರ್ಲಿ ಆ ಕ್ಷಣದ ವಿಡಿಯೋ ವೈರಲ್​