ಬಿಗ್‌ಬಾಸ್ ಸದ್ಯ ಅತ್ಯಂತ ದೊಡ್ಡ ರಿಯಾಲಿಟಿ ಷೋ ಎಂದೇ ಹೇಳಲಾಗುತ್ತಿದೆ. ಇದಕ್ಕೆ ಸೆಡ್ಡು ಹೊಡೆಯಲು ಜೀ ಕನ್ನಡ ವಾಹಿನಿ ಸಜ್ಜಾಗಿದ್ಯಾ? ಹೊಸ ಪ್ರೊಮೋ ರಿಲೀಸ್
ಹತ್ತು ಸೀಸನ್ಗಳನ್ನು ಪೂರೈಸಿ 11ನೇ ಸೀಸನ್ಗೆ ಕಾಲಿಟ್ಟಿರುವ ಕಲರ್ಸ್ ಕನ್ನಡದ ಬಿಗ್ಬಾಸ್ನಲ್ಲಿ ಸದ್ಯ ಕೋಲಾಹಲದ ವಾತಾವರಣ. ಎಲ್ಲಾ ರಿಯಾಲಿಟಿ ಷೋ, ಸೀರಿಯಲ್ಗಳನ್ನು ಹಿಂದಿಕ್ಕಿ ನಂಬರ್ 1 ಸ್ಥಾನ ಪಡೆಯುವ ಬಿಗ್ಬಾಸ್ನಿಂದ ಸುದೀಪ್ ಅವರು ಹೊರಕ್ಕೆ ಹೋಗಲಿದ್ದಾರೆ ಎನ್ನುವ ವಿಷಯ ಅಭಿಮಾನಿಗಳನ್ನು ಬರಸಿಡಿಲಿನಂತೆ ಬಡಿದಿದೆ. ಇದರ ಗೊಂದಲದ ನಡುವೆಯೇ ಇತ್ತ ಜೀ ಕನ್ನಡ ವಾಹಿನಿ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಷೋ ಎನ್ನುವ ಇನ್ನೊಂದು ಪ್ರೊಮೋ ಬಿಡುಗಡೆ ಮಾಡಿದೆ. ಬಿಗ್ಬಾಸ್ಗೆ ಪ್ರತಿಯಾಗಿ ಯಾವ ರಿಯಾಲಿಟಿ ಷೋಗಳು, ಯಾವ ಭಾಷೆಯಲ್ಲಿಯೂ ಮೇಲೆ ಬರಲು ಸಾಧ್ಯವಿಲ್ಲ ಎನ್ನುವ ಮಾತಿದೆ. ಆದರೆ ಇದೀಗ ಕನ್ನಡದ ಬಿಗ್ಬಾಸ್ಗೆ ಪೈಪೋಟಿ ಕೊಡಲೋ ಎಂಬಂತೆ ಜೀ ಕನ್ನಡ ವಾಹಿನಿಯ ಪ್ರೊಮೋ ಒಂದು ಎಲ್ಲರನ್ನೂ ಅಚ್ಚರಿಗೆ ತಳ್ಳಿದೆ. ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಷೋ ಶೀಘ್ರದಲ್ಲಿ ಎನ್ನುವ ಪ್ರೊಮೋ ಒಂದನ್ನು ಜೀ ಕನ್ನಡ ವಾಹಿನಿ ಈಚೆಗೆ ಶೇರ್ ಮಾಡಿಕೊಂಡಿತ್ತು. ಇದು ಮನರಂಜನೆಯ ಹೊಸ ಚಾಪ್ಟರ್ ಎಂದು ಶೀರ್ಷಿಕೆ ಕೊಡಲಾಗಿತ್ತು.
ಇದೀಗ ಅದರ ಅಪ್ಡೇಟ್ ಹೊರಬಂದಿದೆ. ಈ ಹೊಸ ಪ್ರೊಮೋದಲ್ಲಿ ಎಂಟರ್ಟೇನ್ಮೆಂಟ್ನ ಸೈರನ್ ಕೊಡೋಕೆ ಬರ್ತಿದ್ದಾರೆ ಜೀ ಎಂಟರ್‌ಟ್ರೈನರ್ಸ್. ನೋಡೋಕೆ ರೆಡಿನಾ? ಎಂದು ಆರಂಭದಲ್ಲಿ ಹಿನ್ನೆಲೆಯ ದನಿಯ ಮೂಲಕ ಪ್ರೊಮೋ ರಿಲೀಸ್ ಮಅಡಲಾಗಿದೆ. ಈ ಪ್ರೊಮೋದಲ್ಲಿ ಸೀರಿಯಲ್ ತಾರೆಯರ ದಮಡನ್ನೇ ನೋಡಬಹುದು. ಸೀತಾ ರಾಮ ಧಾರಾವಾಹಿಯ ಸೀತಾ ಮತ್ತು ರಾಮ, ಜೊತೆಗೆ ಇದೇ ಸೀರಿಯಲ್ನ ಪ್ರಿಯಾ, ಅಶೋಕ ಮತ್ತು ಸಿಹಿಯನ್ನು ನೋಡಬಹುದಾಗಿದೆ. ಅಷ್ಟೇ ಅಲ್ಲದೇ ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ಜಾನು- ಜಯಂತ್,ಯ ಸಿದ್ಧೇಗೌಡ- ಭಾವನಾ ಅವರೂ ಈ ಪ್ರೊಮೋದಲ್ಲಿ ಇದ್ದಾರೆ. ಇವರ ಜೊತೆಗೆ, ಅಮೃತಧಾರೆಯ ಪಾರ್ಥ ಮತ್ತು ಅಪ್ಪಿ ಜೋಡಿ, ಪುಟ್ಟಕ್ಕನ ಮಕ್ಕಳುವಿನಿಂದ ಕಂಠಿ ಸ್ನೇಹಾ ಅವರನ್ನು ನೋಡಬಹುದು. ಕಂಠಿ ಬೈಕ್ ಸ್ಟಂಟ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಜೊತೆಗೆ ಅಣ್ಣಯ್ಯ ಮತ್ತು ಬ್ರಹ್ಮಗಂಟು ಸೀರಿಯಲ್ ಕಲಾವಿದರನ್ನೂ ಇದರಲ್ಲಿ ನೋಡಬಹುದಾಗಿದೆ.
ಬಿಗ್‌ಬಾಸ್ ಫ್ಯಾನ್ಸ್ಗೆ ಮತ್ತೊಂದು ಆಘಾತ: ಸುದೀಪ್ ಬಳಿಕ ಮನೆಯಿಂದ ಖುದ್ದು ಬಿಗ್ಬಾಸೇ ಹೊರಕ್ಕೆ! ಏನಾಗ್ತಿದೆ ಇಲ್ಲಿ?
ಇದು ಯಾವ ರೀತಿಯ ರಿಯಾಲಿಟಿ ಷೋ ಎನ್ನುವ ಬಗ್ಗೆ ಸಸ್ಪೆನ್ಸ್ ಇಡಲಾಗಿದೆ. ಯಾವಾಗ ಶುರುವಾಗಲಿ ಎಂಬ ಬಗ್ಗೆಯೂ ಮಾಹಿತಿ ಇಲ್ಲ. ಆದ್ರೆ ಸದ್ಯ ಇನ್ನೇನು ಶೀಘ್ರದಲ್ಲಿಯೇ ಶುರುವಾಗಲಿದೆ ಎಂಬ ಸುಳಿವು ನೀಡಲಾಗಿದೆ. ಅಂದಹಾಗೆ ಹಾಗೆ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ನಡೆಯುತ್ತಿದ್ದು, ಅದು ಮುಗಿಯುವ ಹಂತಕ್ಕೆ ಬಂದಿರುವ ಹಿನ್ನೆಲೆಯಲ್ಲಿ, ಅದು ಮುಗಿದ ಮೇಲೆ ಈ ಷೋ ಆರಂಭವಾಗಬಹುದು ಎಂದು ಅಂದುಕೊಳ್ಳಲಾಗಿದೆ.
undefined
ಈ ಹಿಂದೆ ಇದರ ಪ್ರೊಮೋ ರಿಲೀಸ್ ಆದಾಗ ಕ್ಷಣ ಮಾತ್ರದಲ್ಲಿ ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗಿತ್ತು. ಬಿಗ್ಬಾಸ್ಗಿಂತಲೂ ಇದ್ಯಾವ ರಿಯಾಲಿಟಿ ಷೋ ಎಂದು ಪ್ರಶ್ನಿಸಿದ್ದರು. ಈ ಪ್ರೊಮೋ ಅಭಿಮಾನಿಗಳ ತಲೆಗೆ ಹುಳುಬಿಟ್ಟಂತಾಗಿತ್ತು. ಈಗ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಷೋ ಎಂದು ಹೇಳಿಕೊಂಡಿರುವ ಕಾರಣ, ಬಿಗ್ಬಾಸ್ಗೆ ಠಕ್ಕರ್ ಕೊಡತ್ತಾ ಕಾದು ನೋಡಬೇಕಿದೆ.