Puttakkana Makkalu: IAS ಅಧಿಕಾರಿ ಪಾತ್ರದಲ್ಲಿ ಸಂಜನಾ ಬುರ್ಲಿ, ಕಥೆ ಒಪ್ಪಿಕೊಂಡಿದ್ದು ಹೀಗೆ...

By Suvarna NewsFirst Published Dec 1, 2021, 3:48 PM IST
Highlights

ವಿದ್ಯಾಭ್ಯಾಸದ ಜೊತೆಗೆ ಧಾರಾವಾಹಿ ಮ್ಯಾನೇಜ್ ಮಾಡುತ್ತಿರುವ ನಟಿ ಸಂಜನಾ ಬುರ್ಲಿ ಪುಟ್ಟಕ್ಕನ ಮಕ್ಕಳು ಒಪ್ಪಿಕೊಂಡಿದ್ದು ಏಕೆ ಎಂಬ ವಿಷಯವನ್ನು ಶೇರ್ ಮಾಡಿಕೊಂಡಿದ್ದಾರೆ. 
 

ಜೀ ಕನ್ನಡ (Zee Kannada) ವಾಹಿನಿಯಲ್ಲಿ ಶೀಘ್ರವೇ ಪ್ರಸಾರವಾಗಲಿರುವ ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿಯಲ್ಲಿ ಉಮಾಶ್ರೀ (Umashree) ಪುತ್ರಿಯಾಗಿ ನಟಿ ಸಂಜನಾ ಬುರ್ಲಿ (Sanjana Burli) ಅಭಿನಯಿಸುತ್ತಿದ್ದಾರೆ. ವಿಭಿನ್ನ ಪಾತ್ರದಲ್ಲಿ ಸಂಜನಾ ಕಾಣಿಸಿಕೊಳ್ಳುತ್ತಿದ್ದು, ಪಾತ್ರಕ್ಕೆ ತಯಾರಿ ಮಾಡಿಕೊಂಡಿದ್ದು ಹೇಗೆ, ವಿದ್ಯಾಭ್ಯಾಸ ಮ್ಯಾನೇಜ್ ಮಾಡುತ್ತಿರುವುದು ಹೇಗೆ? ಪಾತ್ರ ಏನು ಡಿಮ್ಯಾಂಡ್ ಮಾಡುತ್ತದೆ ಎಂಬ ವಿಷಯವನ್ನು ಹಂಚಿಕೊಂಡಿದ್ದಾರೆ. 

'ಲಗ್ನ ಪತ್ರಿಕೆ (Lagna Patrike) ಧಾರಾವಾಹಿ ಒಂದು ಸಣ್ಣ ಅನುಭವ ನೀಡಿದೆ. ಆಗಷ್ಟೇ ನಾನು ಕೊಂಚ ಫೇಮ್ (Fame) ಪಡೆದುಕೊಳ್ಳುತ್ತಿದ್ದೆ. ಅಷ್ಟರಲ್ಲಿಯೇ ಧಾರಾವಾಹಿ ಮುಕ್ತಾಯವಾಗಿದ್ದು, ಬೇಸರವಾಗಿತ್ತು. ವೀಕ್ಷಕರು ಪಾಸಿಟಿವ್ ಪ್ರತಿಕ್ರಿಯೆ ನೀಡುವ ಸಮಯದಲ್ಲಿ ಸ್ಟಾಪ್ ಆಗಿದ್ದು, ಇಡೀ ತಂಡಕ್ಕೇ ಶಾಕ್ ಆಗಿತ್ತು. ಈ ಧಾರಾವಾಹಿ ನಂತರ ತುಂಬಾನೇ ಆಫರ್ಸ್ ಬಂದಿದ್ದವು. ನಾನು ಓದುತ್ತಿದ್ದ ಕಾರಣ ಸಣ್ಣ ಬ್ರೇಕ್ ತೆಗೆದುಕೊಳ್ಳಲು ನಿರ್ಧರಿಸಿದೆ,' ಎಂದು ಸಂಜನಾ ಇಟೈಮ್ಸ್‌ಗೆ ನೀಡಿರುವ ಸಂದರ್ಶನದಲ್ಲಿ ಹೇಳಿ ಕೊಂಡಿದ್ದಾರೆ. 

'ಮಾರ್ಚ್ (March) ತಿಂಗಳಲ್ಲಿ ನನಗೆ ಖ್ಯಾತ ನಿರ್ದೇಶಕರಾದ ಆರೂರು ಜಗದೀಶ್ (Aarooru Jagadish) ಅವರು ಕರೆ ಮಾಡಿ, ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಟಿಸುವುದಕ್ಕೆ ಕೇಳಿದ್ದರು. ನಾನು ಆರಂಭದಲ್ಲಿ ಬೇಡ ಎಂದು ನಿರಾಕರಿಸಿದೆ. ಆದರೆ ನಿರ್ದೇಶಕ ಇದನ್ನು ಪರಿಗಣಿಸಲು ಹೇಳಿದ್ದರು. ನಾನು ಪ್ರಾಜೆಕ್ಟ್ ನಿರಾಕರಿಸುತ್ತಿದ್ದಂತೆ, ಎರಡನೇ ಅಲೆ ಎಂದು ರಾಜ್ಯದಲ್ಲಿ ಲಾಕ್‌ಡೌನ್ (Lockdown) ಘೋಷಣೆ ಮಾಡಿದ್ದರು. ಆರೂರು ಜಗದೀಶ್ ಸರ್‌ಗೆ, ಕರೆ ಮಾಡಿ ನನ್ನ ನಿರ್ಧಾರದ ಬಗ್ಗೆ ತಿಳಿಸಿದೆ.  ವಿದ್ಯಾಭ್ಯಾಸ (Education) ಮತ್ತು ಧಾರಾವಾಹಿಯನ್ನು ಸಮಾವಾಗಿ ನಿಭಾಯಿಸಬೇಕು ಎಂದು ಪ್ಲಾನ್ ಮಾಡಿದೆ,' ಎಂದು ಸಂಜನಾ ಮಾತನಾಡಿದ್ದಾರೆ.

'ಮೊದಲು ನಾನು ಲುಕ್ ಟೆಸ್ಟ್ (Look test) ಮಾಡಿಸಿಕೊಂಡೆ. ಆನಂತರ ಮಾಕ್ ಶೂಟಿಂಗ್ ಆರಂಭವಾಗಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರೀಕರಣ ಆರಂಭಿಸಿದೆವು. ಪುಟ್ಟಕ್ಕನ ಎರಡನೇ ಪುತ್ರಿಯಾದ ಸ್ನೇಹಾ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುತ್ತಿರುವೆ. ಬಾಲ್ಯದಿಂದಲೂ ಆಕೆಗೆ IAS ಅಧಿಕಾರಿ ಆಗಬೇಕು ಎನ್ನುವ ಆಸೆ ಇರುತ್ತದೆ. ಹಳ್ಳಿ ಹುಡುಗಿ ರೀತಿ ಕಾಣಿಸಬೇಕು, ಎಂದು ನಾನು ಲುಕ್ ಬದಲಾಯಿಸಿಕೊಂಡೆ. ಆ್ಯಕ್ಟಿಂಗ್ ಕ್ಲಾಸ್‌ನಲ್ಲಿ (Acting Class) ಭಾಗಿಯಾಗಿ ಪಾತ್ರಕ್ಕೆ ರೆಡಿಯಾದೆ.  ಉಮಾಶ್ರೀ ಅಮ್ಮ ಅವರ ಜತೆ ತೆರೆ ಹಂಚಿಕೊಳ್ಳುವುದಕ್ಕೆ ತುಂಬಾನೇ ಸಂತೋಷವಾಗುತ್ತದೆ. ಮೊದಲ ದಿನದ ಚಿತ್ರೀಕರಣ ವೇಳೆ ಅಮ್ಮ ಅವರು ನನಗೆ ಹಾಯ್ ಹೇಳಿದ ಕ್ಷಣ ನಾನು ಮರೆಯುವುದಿಲ್ಲ.  ಒಂದು ದಿನ ದೊಡ್ಡ ಸನ್ನಿವೇಶ ಚಿತ್ರೀಕರಣ ಮಾಡಬೇಕಿತ್ತು. ಆಗ ಸೆಟ್‌ನಲ್ಲಿ ಒಂದು ಸಣ್ಣ ಶಬ್ದವೂ ಇರಲಿಲ್ಲ. ಪಿನ್ ಡ್ರಾಪ್ ಸೈಲೆನ್ಸ್‌ (Pin-Drop silence) ಇತ್ತು. ನಾನು ನಟಿಸಿದ ನಂತರ ಉಮಾಶ್ರೀ ಅಮ್ಮ ಅವರು ಎದ್ದು ಚಪ್ಪಾಳೆ (clap) ತಟ್ಟಿ ಹೊಗಳಿದರು. ಆ ಕ್ಷಣ ಅವರು ಹೇಳಿದ ಮಾತು ನನಗೆ ಸ್ಫೂರ್ತಿಯಾಗಿತ್ತು,' ಎಂದಿದ್ದಾರೆ ಸಂಜನಾ. 

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಿಂದ ಹೊರ ನಡೆದ ನಟಿ ಅಮೀತಾ ಕುಲಾಲ್ ತೆಲುಗಿಗೆ ಎಂಟ್ರಿ!

'ಈ ಧಾರಾವಾಹಿಯಲ್ಲಿ ತುಂಬಾನೇ ಪಾಸಿಟವ್ ವಿಚಾರಗಳಿವೆ. ಒಂದು ಸನ್ನಿವೇಶದಲ್ಲಿ ನಾನು ಟ್ರ್ಯಾಕ್ಟರ್ (Tractor) ಓಡಿಸುವೆ. ಪ್ರೋಮೋ ಸೂಪರ್ ಆಗಿ ಬಂದಿದೆ. ಲೋಕೇಶನ್‌ನಿಂದ ಹಿಡಿದು, ಪ್ರತಿಯೊಂದೂ ವಿಚಾರದವರೆಗೂ ತಂಡ ಸಂಪೂರ್ಣವಾಗಿ ಪ್ಲಾನ್ ಮಾಡಿದೆ. ಬಹುತೇಕ ಸನ್ನಿವೇಶಗಳನ್ನು ನಾನು ಬುಲೆಟ್ (Bullet) ಓಡಿಸುತ್ತಿರುವುದನ್ನು ತೋರಿಸುತ್ತಾರೆ. ಪ್ರಸಾರಕ್ಕೂ ಮುನ್ನವೇ ದೊಡ್ಡ ನಿರೀಕ್ಷೆ ಹುಟ್ಟಿಸಿದೆ. ನನ್ನ ದಾರಿಗೆ ಬಂದಿದ್ದನ್ನು ನಾನು ಒಪ್ಪಿಕೊಳ್ಳುವೆ. ಶೂಟಿಂಗ್ ಶೆಡ್ಯುಲ್‌ ಇಲ್ಲದ ಸಮಯದಲ್ಲಿ ನಾನು ಕಾಲೇಜ್‌ಗೆ ಹೋಗುವೆ. ನನ್ನ ಶಿಕ್ಷಕರು ತುಂಬಾನೇ ಸಪೋರ್ಟ್ ಮಾಡುತ್ತಾರೆ. ನಾನು ಆಯ್ಕೆ ಮಾಡಿಕೊಳ್ಳುವ ಪ್ರತಿಯೊಂದೂ ಕೆಲಸಗಳ ಬಗ್ಗೆ ಹೆಮ್ಮೆ ಪಡುತ್ತಾರೆ. ಚಿತ್ರೀಕರಣ ಮತ್ತು ವಿದ್ಯಾಭ್ಯಾಸಕ್ಕೆ ಸಮಯವಿದೆ ಆದರೆ ನನಗೆ ಅಂತ ಸಮಯ ಸಿಗುತ್ತಿಲ್ಲ,' ಎಂದು ಸಂಜನಾ ಹೇಳಿದ್ದಾರೆ.

click me!