
'ಗೀತಾಂಜಲಿ', 'ಪಾರು', ಮತ್ತು 'ನಿಗೂಢ ರಾತ್ರಿ' ಧಾರಾವಾಹಿಗಳ ಮೂಲಕ ಕಿರುತೆರೆ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿರುವ ಶಾಂಭವಿ ವೆಂಕಟೇಶ್ ತಮ್ಮ ಕುಟುಂಬಕ್ಕೆ ಅವಳಿ ಮಕ್ಕಳನ್ನು ಬರ ಮಾಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.
ಶಾಂಭವಿ ಪೋಸ್ಟ್:
' ಗಂಡಾ? ಹೆಣ್ಣಾ? ಯಾವ ಮಗು? ಏನ್ ಆಯ್ತು? ಅಬ್ಬಾ ಎಷ್ಟೊಂದು ಮೆಸೇಜ್‌ಗಳು. ಹೌದು ಆಯ್ತು. ತಡವಾಗಿ ತಿಳಿಸುತ್ತಾ ಇದೀನಿ ಕ್ಷಮೆ ಇರಲಿ. ನಿಮ್ಮೆಲ್ಲರ ಹಾರೈಕೆಯಂತೆ ನಮ್ಮ ಕನಸು ಸಾಕಾರವಾಯ್ತು. ಜೂನ್ 4ಕ್ಕೆ ಅವಳಿ-ಜವಳಿ 'ಗಂಡು ಮತ್ತು ಹೆಣ್ಣು' ಮಗುವಿಗೆ ಜನ್ಮ ನೀಡುವುದರೊಂದಿಗೆ ಅಪ್ಪ- ಅಮ್ಮನಾಗಿ ಬಡ್ತಿ ಪಡೆದಿದ್ದೇವೆ. ನಿಮ್ಮೆಲ್ಲರ ಪ್ರೀತಿ-ಆಶೀರ್ವಾದ ಸದಾ ಇರಲಿ,' ಎಂದು ಶಾಂಭವಿ ಬರೆದುಕೊಂಡಿದ್ದಾರೆ.
'ಪಾರು' ಖ್ಯಾತಿಯ ಶಾಂಭವಿ ವೆಂಕಟೇಶ್ ಪ್ರೆಗ್ನೆಂಸಿ ಫೋಟೋಶೂಟ್; Twins ಬರ್ತಿದ್ದಾರೆ!
ಇಬ್ಬರೂ ಮಕ್ಕಳು ಕೈ ಹಿಡಿದಿರುವ ಫೋಟೋ ಹಂಚಿಕೊಂಡ ಶಾಂಭವಿ, ಪ್ರೆಗ್ನೆಂಸಿ ರಿವೀಲ್ ಮಾಡುವ ಸಮಯದಲ್ಲಿಯೇ ಅವಳಿ ಮಕ್ಕಳಿವೆ ಎಂಬುದನ್ನು -ರಿವೀಲ್ ಮಾಡಿದ್ದರು. ಎರಡು ರೀತಿಯ ಸೀಮಂತ ಹಾಗೂ ಪ್ರೆಗ್ನೆಂಸಿ ಫೋಟೋಶೂಟ್ ಕೂಡ ಮಾಡಿಸಿದ್ದರು. ಫೋಟೋ ಶೋಟ್‌ಗೆ ಇದೇ ರೀತಿ ಬಟ್ಟೆ ಧಿರಿಸಬೇಕು ಎಂದೆಲ್ಲಾ ಪ್ಲಾನ್ ಮಾಡಿಕೊಂಡಿದ್ದರಂತೆ. ಶಾಂಭವಿಗೆ ಎರಡು ಹೆಣ್ಣು ಮಗು ಅಥವಾ ಒಂದು ಹೆಣ್ಣು ಒಂದು ಗಂಡು ಆದರೂ ಸಂತೋಷವೇ ಎಂದಿದ್ದರು. ಅದರಲ್ಲೂ ಮಗಳು ತಮ್ಮಂತೆ ಬಣ್ಣದ ಲೋಕ ವೃತ್ತಿಯಾಗಿ ಆಯ್ಕೆ ಮಾಡಿ ಕೊಳ್ಳಬೇಕು ಎಂಬ ಆಸೆ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.